ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೊಂದಣಿ ಮತ್ತು ಖಾಸಗೀ ಸ್ಲಂಗಳಿಗೆ ಭೂ ಸುಧಾರಣೆ ಕಾಯಿದೆ ಅನ್ವಯ ಹಕ್ಕುಪತ್ರಕ್ಕೆ ಕ್ರಮ – ಜಿಲ್ಲಾಧಿಕಾರಿ ಶುಭಕಲ್ಯಾಣ್.* ಇಂದು ತುಮಕೂರು ನಗರಪಾಲಿಕೆ ವ್ಯಾಪ್ತಿಯ ಸ್ಲಂ ಜನರ ಕುಂದುಕೊರತೆ ಸಭೆಯನ್ನು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಗಿತ್ತು ಸಭೆಯ ಅಧ್ಯಕ್ಷತೆ ವಹಿಸಿ ಕುಂದು ಕೊರತೆಗಳಿಗೆ ಸಂಬಂಧಪಟ್ಟಂತೆ ವಿವಿಧ ಇಲಾಖೆಗಳಿಗೆ ಸೂಚನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್

ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೊಂದಣಿ ಮತ್ತು ಖಾಸಗೀ ಸ್ಲಂಗಳಿಗೆ ಭೂ ಸುಧಾರಣೆ ಕಾಯಿದೆ ಅನ್ವಯ ಹಕ್ಕುಪತ್ರಕ್ಕೆ ಕ್ರಮ – ಜಿಲ್ಲಾಧಿಕಾರಿ ಶುಭಕಲ್ಯಾಣ್.* ಇಂದು ತುಮಕೂರು ನಗರಪಾಲಿಕೆ ವ್ಯಾಪ್ತಿಯ ಸ್ಲಂ ಜನರ ಕುಂದುಕೊರತೆ ಸಭೆಯನ್ನು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಗಿತ್ತು ಸಭೆಯ ಅಧ್ಯಕ್ಷತೆ ವಹಿಸಿ ಕುಂದು ಕೊರತೆಗಳಿಗೆ ಸಂಬಂಧಪಟ್ಟಂತೆ ವಿವಿಧ ಇಲಾಖೆಗಳಿಗೆ ಸೂಚನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ದಿನಾಂಕ:14-8-2026 ರಂದು ಸ್ಲಂ ಸಮಿತಿ 11 ಬೇಡಿಕೆಗಳ ಕುಂದು ಕೊರತೆಯನ್ನು ನನ್ನ ಗಮನಕ್ಕೆ ಸಲ್ಲಿಸಿದ್ದು ಅದರಂತೆ ಇದುವರೆಗೂ 36 ಸ್ಲಂಗಳಲ್ಲಿ ಹಕ್ಕುಪತ್ರ ಸಂಬಂಧ ಸಮೀಕ್ಷೆ ಕೈಗೊಂಡಿದ್ದು ಸ್ಥಳೀಯ ಸಂಸ್ಥೆಗಳ ಸ್ವಾಧೀನದಲ್ಲಿರುವ ಕೊಳಚೆ ಪ್ರದೇಶಗಳಲ್ಲಿ 1250 ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದ್ದು 140 ಫಲಾನುಭವಿಗಳಿಗೆ ಇದುವೆರೆಗೂ ಹಕ್ಕುಪತ್ರ ವಿತರಿಸಲಾಗಿದೆ. ಬಾಕಿ ಉಳಿದಿರುವ 110 ಪಲಾನುಭವಿಗಳಿಗೆ ಡಿಸೆಂಬರ್ ಮೊದಲ ವಾರದಲ್ಲಿ ಹಕ್ಕುಪತ್ರ ನೀಡಲು ಅಗತ್ಯವಾದ ಕ್ರಮವಹಿಸಲು ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್. ADLR ಹಾಗೂ ಸ್ಲಂ ಬೋರ್ಡ್ ಇಂಜಿನಿಯರ್ ಕ್ರಮವಹಿಸಬೇಕು. ಅದೇ ರೀತಿ ಖಾಸಗೀ ಮಾಲೀಕತ್ವದಲ್ಲಿರುವ ಸ್ಲಂಗಳ ಜನರು 40 ವರ್ಷಗಳಿಂದ ವಾಸಿಸುತ್ತಿದ್ದು ಕರ್ನಾಟಕ ಭೂ ಸುಧಾರಣಾ ಕಾಯಿದೆ-2ಎ ಮತ್ತು 38ಎ ಅನ್ವಯ ದಾಖಲಾತಿ ನೀಡಲು ಅಗತ್ಯವಾದ ಕ್ರಮವನ್ನು ವಹಿಸಲಾಗುವುದು, 360 ನಿವೇಶನ ರಹಿತ ಕುಟುಂಬಗಳಿಗೆ ಸರ್ಕಾರದ ಭೂ ಗ್ಯಾರಂಟಿ ಮತ್ತು ಉಪಮುಖ್ಯಮಂತ್ರಿಗಳ ನಿರ್ದೇಶನದ ಮರಳೇನಹಳ್ಳಿ ನಗರಪಾಲಿಕೆ ಜಾಗದಲ್ಲಿ ವಸತಿ ಸಮುಚ್ಛಯಗಳ ನಿರ್ಮಾಣಕ್ಕೆ ಪಿಎಂಎವೈ 2.0 ನಲ್ಲಿ ಡಿ.ಪಿ.ಆರ್ ಮಾಡಲು ಸ್ಲಂ ಬೋರ್ಡ್ ಇಂಜಿನಿಯರ್ಗೆ ಜವಾಬ್ದಾರಿ ನೀಡಲಾಗಿದೆ. ಸ್ಲಂ ನಿವಾಸಿಗಳಿಗೆ ವಿತರಣೆಯಾದ ಹಕ್ಕುಪತ್ರಗಳನ್ನು ನೊಂದಣಿ ಮಾಡಿಸಿ ಇ-ಸ್ವತ್ತು ನೀಡಲು ಆಯುಕ್ತರು ತುಮಕೂರು ಮಹಾನಗರ ಪಾಲಿಕೆ ಮತ್ತು ಉಪನೊಂದಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಅದೇ ರೀತಿ ದಿಬ್ಬೂರು ದೇವರಾಜ್ ಅರಸು ಬಡಾವಾಣೆಯ ವಸತಿ ಸಮುಚ್ಚಯ ಕಳಪೆ ಕಾಮಗಾರಿ ಅಗತ್ಯ ಮೂಲಭೂತ ಸೌಕರ್ಯ ನೀಡದ ಗುತ್ತಿಗೆದಾರನ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚಿಸಲಾಯಿತು.ಇಸ್ಮಾಯಿಲ್ ನಗರ ಹಂದಿಜೋಗಿ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮತ್ತು ಜಾತಿ ಪ್ರಮಾಣ ಪತ್ರದ ಬಗ್ಗೆ ಸೃಷ್ಠಿಯಾಗಿರುವ ಗೊಂದಲ ನಿವಾರಣೆಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಂಟಿನಿಧರ್ೇಶಕರು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಘೋಷಣೆಯಾಗಬೇಕಿರುವ ಕೊಳಚೆ ಪ್ರದೇಶಗಳ ಘೋಷಣಾ ಪ್ರಸ್ತಾವನೆಯನ್ನು ಯೋಜನಾ ನಿರ್ದೇಶಕರು ಸಲ್ಲಿಸಲು ನಿರ್ದೇಶನ ನೀಡಲಾಗಿದ್ದು. ಮಾರಿಯಮ್ಮ ನಗರದ ದೇವಸ್ಥಾನ ಜಾಗವನ್ನು ಆರ್.ಟಿ.ಸಿ ಯಲ್ಲಿ ದಾಖಲಿಸಲು ತಹಶೀಲ್ದಾರ್ ರವರಿಗೆ ಆದೇಶಿಸಲಾಗಿದೆ. ಈ ಕೊಳಚೆ ಪ್ರದೇಶಗಳ ಸಂಬಂಧ ಕುಂದು ಕೊರತೆಗಳನ್ನು ಸರಿಪಡಿಸಲು ಪ್ರತೀ ಮಂಗಳವಾರ ಅಧಿಕಾರಿಗಳೊಂದಿಗೆ ಪ್ರಗತಿ ಅವಲೋಖನ ಸಭೆಯನ್ನು ಮಾಡಲಾಗುವುದು ಎಂದರು.ಸಭೆಯಲ್ಲಿ ಸ್ಲಂ ಜನರಿಗೆ ಹೊನ್ನೇನಹಳ್ಳಿ ಸರ್ವೆ ನಂ,44 ರಲ್ಲಿ ನಿರ್ಮಾಣವಾಗುತ್ತಿರುವ 192 ವಸತಿ ಸಮುಚ್ಛಯಗಳಿಗೆ ಪಿಎಂಎವೈ ನಗರ ಯೋಜನೆಯ ಗೈಡ್ ಲೈನ್ ನಂತೆ ಆಯ್ಕೆ6 ಮಾಡಬೇಕು. ಭಾರತಿ ನಗರ ಎಸ್.ಎನ್ ಪಾಳ್ಯ ಸ್ಲಂಗಳಿಗೆ ಮಳೆ ಹಾನಿಯಿಂದ ರಕ್ಷಿಸಲು ತಡೆಗೋಡೆ ನಿರ್ಮಿಸಲು ಪಾಲಿಕೆ ಮುಂದಾಗಬೇಕು. ಉಳಿದಂತೆ 35 ವಾರ್ಡ್ ಗಳಲ್ಲಿ ದಾಖಲಾತಿಗಳಿಲ್ಲದ ಏರಿಯಗಳನ್ನು ಕಂದಾಯ ಗ್ರಾಮದಲ್ಲಿ ಪ್ರಸ್ತಾವನೆ ಸಲ್ಲಿಸಲು ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಪೂರ್ಣಗೊಳ್ಳದ ಮನೆಗಳನ್ನು ಸೆಪ್ಟೆಂಬರ್ ಒಳಗಾಗಿ ಭಾರತ ಸರ್ಕಾರದ ಗಡುವಿನಂತೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಬೇಕೆಂದು, ತುಮಕೂರು ಕೊಳಗೇರಿ ಸಮಿತಿಯ ಅಧ್ಯಕ್ಷರಾದ ಎ.ನರಸಿಂಹಮೂರ್ತಿ ಸಭೆಯಲ್ಲಿ ಒತ್ತಾಯಿಸಿದರು.ಈ ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಯೋಗಾನಂದ್, ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶುಭ, ಉಪ ಕಂದಾಯ ಅಧಿಕಾರಿಗಳಾದ ನಾಗರಾಜು, ಸಾರ್ವಜನಿಕ ಸಂಪರ್ಕ ಅಧಿಕಾರಿ ತಬ್ಸುಮ್, ಕೌನ್ಸಿಲ್ ಕಾರ್ಯದರ್ಶಿ ನಜ್ಮಾ, ಇಂಜಿನಿಯರ್ ವಿನಯ್, ತುಮಕೂರು ತಹಶೀಲ್ದಾರ್ ಪಿ.ಎಸ್ ರಾಜೇಶ್ವರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಸೋನಿಯ ವರ್ಣೇಕರ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಭಾನುಪ್ರತಾಪ್, ಜಗದೀಶ್, ರಕ್ಷಿತ್, ಬೆಸ್ಕಾಂ ಇಂಜಿನಿಯರ್, ನಿರಾಶ್ರಿತರ ಕೇಂದ್ರದ ಮಾರಪ್ಪ, ಉಪಸ್ಥಿತರಿದ್ದರು.ತುಮಕೂರು ಕೊಳಗೇರಿ ಸಮಿತಿಯ ಪದಾಧಿಕಾರಿಗಳಾದ ಕಾರ್ಯದರ್ಶಿ ಅರುಣ್, ಉಪಾಧ್ಯಕ್ಷರಾದ ಶಂಕ್ರಯ್ಯ, ಜಾಬೀರ್ಖಾನ್, ಶಾರದಮ್ಮ, ಗುಲ್ನಾಜ್, ಕೆಂಪಣ್ಣ, ಕೃಷ್ಣಮೂರ್ತಿ , ದನಂಜಯ್, ಕಣ್ಣನ್, ಕೃಷ್ಣ, ಮುಬಾರಕ್, ಮಂಜುನಾಥ್, ನಿವೇಶನ ರಹಿತರ ಹೋರಾಟ ಸಮಿತಿಯ ಪೂರ್ಣಿಮಾ, ಮಂಗಳಮ್ಮ. ಹನುಮಕ್ಕ, ಗಂಗಾ, ಸಲ್ಮಾ, ದಿಬ್ಬೂರು ನಾಗರೀಕ ಸಮಿತಿಯ ಇಮ್ತಿಯಾಜ್ ಖಾನ್,ಸೈಯದ್ ಅಲ್ತಾಫ್ ಮುಂತಾದವರು ಪಾಲ್ಗೊಂಡಿದ್ದರು.


