ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೊಂದಣಿ ಮತ್ತು ಖಾಸಗೀ ಸ್ಲಂಗಳಿಗೆ ಭೂ ಸುಧಾರಣೆ ಕಾಯಿದೆ ಅನ್ವಯ ಹಕ್ಕುಪತ್ರಕ್ಕೆ ಕ್ರಮ – ಜಿಲ್ಲಾಧಿಕಾರಿ ಶುಭಕಲ್ಯಾಣ್.* ಇಂದು ತುಮಕೂರು ನಗರಪಾಲಿಕೆ ವ್ಯಾಪ್ತಿಯ ಸ್ಲಂ ಜನರ ಕುಂದುಕೊರತೆ ಸಭೆಯನ್ನು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಗಿತ್ತು ಸಭೆಯ ಅಧ್ಯಕ್ಷತೆ ವಹಿಸಿ ಕುಂದು ಕೊರತೆಗಳಿಗೆ ಸಂಬಂಧಪಟ್ಟಂತೆ ವಿವಿಧ ಇಲಾಖೆಗಳಿಗೆ ಸೂಚನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್

ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೊಂದಣಿ ಮತ್ತು ಖಾಸಗೀ ಸ್ಲಂಗಳಿಗೆ ಭೂ ಸುಧಾರಣೆ ಕಾಯಿದೆ ಅನ್ವಯ ಹಕ್ಕುಪತ್ರಕ್ಕೆ ಕ್ರಮ – ಜಿಲ್ಲಾಧಿಕಾರಿ ಶುಭಕಲ್ಯಾಣ್.* ಇಂದು ತುಮಕೂರು ನಗರಪಾಲಿಕೆ ವ್ಯಾಪ್ತಿಯ ಸ್ಲಂ ಜನರ ಕುಂದುಕೊರತೆ ಸಭೆಯನ್ನು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಗಿತ್ತು ಸಭೆಯ ಅಧ್ಯಕ್ಷತೆ ವಹಿಸಿ ಕುಂದು ಕೊರತೆಗಳಿಗೆ ಸಂಬಂಧಪಟ್ಟಂತೆ ವಿವಿಧ ಇಲಾಖೆಗಳಿಗೆ ಸೂಚನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ದಿನಾಂಕ:14-8-2026 ರಂದು ಸ್ಲಂ ಸಮಿತಿ 11 ಬೇಡಿಕೆಗಳ ಕುಂದು ಕೊರತೆಯನ್ನು ನನ್ನ ಗಮನಕ್ಕೆ ಸಲ್ಲಿಸಿದ್ದು ಅದರಂತೆ ಇದುವರೆಗೂ 36 ಸ್ಲಂಗಳಲ್ಲಿ ಹಕ್ಕುಪತ್ರ ಸಂಬಂಧ ಸಮೀಕ್ಷೆ ಕೈಗೊಂಡಿದ್ದು ಸ್ಥಳೀಯ ಸಂಸ್ಥೆಗಳ ಸ್ವಾಧೀನದಲ್ಲಿರುವ ಕೊಳಚೆ ಪ್ರದೇಶಗಳಲ್ಲಿ 1250 ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದ್ದು 140 ಫಲಾನುಭವಿಗಳಿಗೆ ಇದುವೆರೆಗೂ ಹಕ್ಕುಪತ್ರ ವಿತರಿಸಲಾಗಿದೆ. ಬಾಕಿ ಉಳಿದಿರುವ 110 ಪಲಾನುಭವಿಗಳಿಗೆ ಡಿಸೆಂಬರ್ ಮೊದಲ ವಾರದಲ್ಲಿ ಹಕ್ಕುಪತ್ರ ನೀಡಲು ಅಗತ್ಯವಾದ ಕ್ರಮವಹಿಸಲು ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್. ADLR ಹಾಗೂ ಸ್ಲಂ ಬೋರ್ಡ್ ಇಂಜಿನಿಯರ್ ಕ್ರಮವಹಿಸಬೇಕು. ಅದೇ ರೀತಿ ಖಾಸಗೀ ಮಾಲೀಕತ್ವದಲ್ಲಿರುವ ಸ್ಲಂಗಳ ಜನರು 40 ವರ್ಷಗಳಿಂದ ವಾಸಿಸುತ್ತಿದ್ದು ಕರ್ನಾಟಕ ಭೂ ಸುಧಾರಣಾ ಕಾಯಿದೆ-2ಎ ಮತ್ತು 38ಎ ಅನ್ವಯ ದಾಖಲಾತಿ ನೀಡಲು ಅಗತ್ಯವಾದ ಕ್ರಮವನ್ನು ವಹಿಸಲಾಗುವುದು, 360 ನಿವೇಶನ ರಹಿತ ಕುಟುಂಬಗಳಿಗೆ ಸರ್ಕಾರದ ಭೂ ಗ್ಯಾರಂಟಿ ಮತ್ತು ಉಪಮುಖ್ಯಮಂತ್ರಿಗಳ ನಿರ್ದೇಶನದ ಮರಳೇನಹಳ್ಳಿ ನಗರಪಾಲಿಕೆ ಜಾಗದಲ್ಲಿ ವಸತಿ ಸಮುಚ್ಛಯಗಳ ನಿರ್ಮಾಣಕ್ಕೆ ಪಿಎಂಎವೈ 2.0 ನಲ್ಲಿ ಡಿ.ಪಿ.ಆರ್ ಮಾಡಲು ಸ್ಲಂ ಬೋರ್ಡ್ ಇಂಜಿನಿಯರ್ಗೆ ಜವಾಬ್ದಾರಿ ನೀಡಲಾಗಿದೆ. ಸ್ಲಂ ನಿವಾಸಿಗಳಿಗೆ ವಿತರಣೆಯಾದ ಹಕ್ಕುಪತ್ರಗಳನ್ನು ನೊಂದಣಿ ಮಾಡಿಸಿ ಇ-ಸ್ವತ್ತು ನೀಡಲು ಆಯುಕ್ತರು ತುಮಕೂರು ಮಹಾನಗರ ಪಾಲಿಕೆ ಮತ್ತು ಉಪನೊಂದಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಅದೇ ರೀತಿ ದಿಬ್ಬೂರು ದೇವರಾಜ್ ಅರಸು ಬಡಾವಾಣೆಯ ವಸತಿ ಸಮುಚ್ಚಯ ಕಳಪೆ ಕಾಮಗಾರಿ ಅಗತ್ಯ ಮೂಲಭೂತ ಸೌಕರ್ಯ ನೀಡದ ಗುತ್ತಿಗೆದಾರನ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚಿಸಲಾಯಿತು.ಇಸ್ಮಾಯಿಲ್ ನಗರ ಹಂದಿಜೋಗಿ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮತ್ತು ಜಾತಿ ಪ್ರಮಾಣ ಪತ್ರದ ಬಗ್ಗೆ ಸೃಷ್ಠಿಯಾಗಿರುವ ಗೊಂದಲ ನಿವಾರಣೆಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಂಟಿನಿಧರ್ೇಶಕರು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಘೋಷಣೆಯಾಗಬೇಕಿರುವ ಕೊಳಚೆ ಪ್ರದೇಶಗಳ ಘೋಷಣಾ ಪ್ರಸ್ತಾವನೆಯನ್ನು ಯೋಜನಾ ನಿರ್ದೇಶಕರು ಸಲ್ಲಿಸಲು ನಿರ್ದೇಶನ ನೀಡಲಾಗಿದ್ದು. ಮಾರಿಯಮ್ಮ ನಗರದ ದೇವಸ್ಥಾನ ಜಾಗವನ್ನು ಆರ್.ಟಿ.ಸಿ ಯಲ್ಲಿ ದಾಖಲಿಸಲು ತಹಶೀಲ್ದಾರ್ ರವರಿಗೆ ಆದೇಶಿಸಲಾಗಿದೆ. ಈ ಕೊಳಚೆ ಪ್ರದೇಶಗಳ ಸಂಬಂಧ ಕುಂದು ಕೊರತೆಗಳನ್ನು ಸರಿಪಡಿಸಲು ಪ್ರತೀ ಮಂಗಳವಾರ ಅಧಿಕಾರಿಗಳೊಂದಿಗೆ ಪ್ರಗತಿ ಅವಲೋಖನ ಸಭೆಯನ್ನು ಮಾಡಲಾಗುವುದು ಎಂದರು.ಸಭೆಯಲ್ಲಿ ಸ್ಲಂ ಜನರಿಗೆ ಹೊನ್ನೇನಹಳ್ಳಿ ಸರ್ವೆ ನಂ,44 ರಲ್ಲಿ ನಿರ್ಮಾಣವಾಗುತ್ತಿರುವ 192 ವಸತಿ ಸಮುಚ್ಛಯಗಳಿಗೆ ಪಿಎಂಎವೈ ನಗರ ಯೋಜನೆಯ ಗೈಡ್ ಲೈನ್ ನಂತೆ ಆಯ್ಕೆ6 ಮಾಡಬೇಕು. ಭಾರತಿ ನಗರ ಎಸ್.ಎನ್ ಪಾಳ್ಯ ಸ್ಲಂಗಳಿಗೆ ಮಳೆ ಹಾನಿಯಿಂದ ರಕ್ಷಿಸಲು ತಡೆಗೋಡೆ ನಿರ್ಮಿಸಲು ಪಾಲಿಕೆ ಮುಂದಾಗಬೇಕು. ಉಳಿದಂತೆ 35 ವಾರ್ಡ್ ಗಳಲ್ಲಿ ದಾಖಲಾತಿಗಳಿಲ್ಲದ ಏರಿಯಗಳನ್ನು ಕಂದಾಯ ಗ್ರಾಮದಲ್ಲಿ ಪ್ರಸ್ತಾವನೆ ಸಲ್ಲಿಸಲು ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಪೂರ್ಣಗೊಳ್ಳದ ಮನೆಗಳನ್ನು ಸೆಪ್ಟೆಂಬರ್ ಒಳಗಾಗಿ ಭಾರತ ಸರ್ಕಾರದ ಗಡುವಿನಂತೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಬೇಕೆಂದು, ತುಮಕೂರು ಕೊಳಗೇರಿ ಸಮಿತಿಯ ಅಧ್ಯಕ್ಷರಾದ ಎ.ನರಸಿಂಹಮೂರ್ತಿ ಸಭೆಯಲ್ಲಿ ಒತ್ತಾಯಿಸಿದರು.ಈ ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಯೋಗಾನಂದ್, ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶುಭ, ಉಪ ಕಂದಾಯ ಅಧಿಕಾರಿಗಳಾದ ನಾಗರಾಜು, ಸಾರ್ವಜನಿಕ ಸಂಪರ್ಕ ಅಧಿಕಾರಿ ತಬ್ಸುಮ್, ಕೌನ್ಸಿಲ್ ಕಾರ್ಯದರ್ಶಿ ನಜ್ಮಾ, ಇಂಜಿನಿಯರ್ ವಿನಯ್, ತುಮಕೂರು ತಹಶೀಲ್ದಾರ್ ಪಿ.ಎಸ್ ರಾಜೇಶ್ವರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಸೋನಿಯ ವರ್ಣೇಕರ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಭಾನುಪ್ರತಾಪ್, ಜಗದೀಶ್, ರಕ್ಷಿತ್, ಬೆಸ್ಕಾಂ ಇಂಜಿನಿಯರ್, ನಿರಾಶ್ರಿತರ ಕೇಂದ್ರದ ಮಾರಪ್ಪ, ಉಪಸ್ಥಿತರಿದ್ದರು.ತುಮಕೂರು ಕೊಳಗೇರಿ ಸಮಿತಿಯ ಪದಾಧಿಕಾರಿಗಳಾದ ಕಾರ್ಯದರ್ಶಿ ಅರುಣ್, ಉಪಾಧ್ಯಕ್ಷರಾದ ಶಂಕ್ರಯ್ಯ, ಜಾಬೀರ್ಖಾನ್, ಶಾರದಮ್ಮ, ಗುಲ್ನಾಜ್, ಕೆಂಪಣ್ಣ, ಕೃಷ್ಣಮೂರ್ತಿ , ದನಂಜಯ್, ಕಣ್ಣನ್, ಕೃಷ್ಣ, ಮುಬಾರಕ್, ಮಂಜುನಾಥ್, ನಿವೇಶನ ರಹಿತರ ಹೋರಾಟ ಸಮಿತಿಯ ಪೂರ್ಣಿಮಾ, ಮಂಗಳಮ್ಮ. ಹನುಮಕ್ಕ, ಗಂಗಾ, ಸಲ್ಮಾ, ದಿಬ್ಬೂರು ನಾಗರೀಕ ಸಮಿತಿಯ ಇಮ್ತಿಯಾಜ್ ಖಾನ್,ಸೈಯದ್ ಅಲ್ತಾಫ್ ಮುಂತಾದವರು ಪಾಲ್ಗೊಂಡಿದ್ದರು.

ಅಭಿಮನ್ಯು ಆನೆಯನ್ನ ದಸರಾ ಗೆ ಕರೆತರಲು ಕನ್ನಡಪರ ಸಂಘಟನೆಗಳ ಮನವಿಮೈಸೂರು: ಅಭಿಮನ್ಯು ಆನೆ ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಹಾಗೂ ಶಕ್ತಿಶಾಲಿ ಆನೆಗಳಲ್ಲಿ ಒಂದಾಗಿದ್ದು,ಅದನ್ನು ಈ‌ ಬಾರಿಯ‌‌ ದಸರಾಗೆ ಕರೆತರುವಂತೆ ಮನವಿ ಮಾಡಲಾಗಿದೆ

ಅಭಿಮನ್ಯು ಆನೆಯನ್ನ ದಸರಾ ಗೆ ಕರೆತರಲು ಕನ್ನಡಪರ ಸಂಘಟನೆಗಳ ಮನವಿಮೈಸೂರು: ಅಭಿಮನ್ಯು ಆನೆ ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಹಾಗೂ ಶಕ್ತಿಶಾಲಿ ಆನೆಗಳಲ್ಲಿ ಒಂದಾಗಿದ್ದು,ಅದನ್ನು ಈ‌ ಬಾರಿಯ‌‌ ದಸರಾಗೆ ಕರೆತರುವಂತೆ ಮನವಿ ಮಾಡಲಾಗಿದೆ.ಅಭಿಮನ್ಯು ಆನೆಯನ್ನು ದಸರಾ ಗೆ ಕರೆತರುವಂತೆ ಇಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಳು‌ ಮೈಸೂರು ವನ್ಯಜೀವಿ ವಿಭಾಗ ಡಾ. ಪ್ರಭು ಗೌಡ ಅವರಿಗೆ ಇಂದು ಮೈಸೂರಿನ ಅರಣ್ಯ ಭವನಕ್ಕೆ ತೆರಳಿ ಕನ್ನಡ ಕ್ರಾಂತಿದಳ ಮತ್ತು ವಿವಿಧ ಕನ್ನಡಪರ ಸಂಘಟನೆಗಳಿಂದ ಮನವಿ ಪತ್ರ ಸಲ್ಲಿಸಲಾಯಿತು.2020 ರಿಂದ 2025 ರವರೆಗೆ ಸತತವಾಗಿ ಆರು ಬಾರಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತ ಹೆಗ್ಗಳಿಕೆ ಈ ಗಜರಾಜನಿಗೆ ಸಲ್ಲುತ್ತದೆ.ಆದರೆ, ಸರ್ಕಾರಿ ನಿಯಮಾವಳಿಗಳ ಪ್ರಕಾರ ಆನೆಗೆ 60 ವರ್ಷ ತುಂಬಿರುವುದರಿಂದ ದೈಹಿಕ ಶ್ರಮದ ಕೆಲಸಗಳಿಂದ ಮುಕ್ತಿ ನೀಡುವ ಸಲುವಾಗಿ, ಪ್ರಸಕ್ತ 2026ರ ಮೈಸೂರು ದಸರಾ ಜಂಬೂ ಸವಾರಿಯ ಕರ್ತವ್ಯದಿಂದ ಅಭಿಮನ್ಯುವನ್ನು ಅಧಿಕೃತವಾಗಿ ನಿವೃತ್ತಿಗೊಳಿಸಿರುವುದು ಬೇಸರ ತಂದಿದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.ಮೈಸೂರಿನ ಜನತೆಯ ಅಚ್ಚು ಮೆಚ್ಚಿನ ಆನೆ ಯಾಗಿದ್ದ ಅಭಿಮನ್ಯು ವನ್ನು ಈಬಾರಿಯ ದಸರಾ ಮಹೋತ್ಸವ ಕಾರ್ಯಕ್ರಮಕ್ಕೆ ಕರೆತರುವಂತೆ ಒತ್ತಾಯಿಸಿ ಅರಣ್ಯಾಧಿಕಾರಿಗಳಿಗೆ ತೇಜಸ್ವಿ ನಾಗಲಿಂಗ ಸ್ವಾಮಿ‌ ನೇತೃತ್ವದ ತಂಡ ಮನವಿ ಸಲ್ಲಿಸಿದೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಸಾಲ/ಸಹಾಯಧನ ಸೌಲಭ್ಯಕ್ಕಾಗಿ ಅಲ್ಪಸಂಖ್ಯಾತರ ಸಮುದಾಯದವರಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರಿವು ವಿದ್ಯಾಭ್ಯಾಸ ಸಾಲ, ಸ್ವಾವಲಂಭಿ ಸಾರಥಿ, ಶ್ರಮಶಕ್ತಿ, ವೃತ್ತಿ ಪ್ರೋತ್ಸಾಹ, ರೇಷ್ಮೇ ನೂಲು ಬಿಚ್ಚಾಣಿಕ್ ಉದ್ಯಮಕ್ಕೆ ಪ್ರೋತ್ಸಾಹ, ಗಂಗಾ ಕಲ್ಯಾಣ, ನವೋದಯ, ಫಾಸ್ಟ್ ಫುಡ್‌ಟ್ರಕ್/ಟೈಲರ್ ಕಿಚನ್ ಫುಡ್ (ಕಿಯೋಸ್ಟ್), ಅಲ್ಪಸಂಖ್ಯಾತರ ಸಮುದಾಯದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗ

ಆಗಸ್ಟ್ ೨೦೨೬ವಿವಿಧ ಯೋಜನೆಯಡಿ ಸಾಲ/ಸಹಾಯಧನ : ಅಲ್ಪಸಂಖ್ಯಾತರಿAದ ಅರ್ಜಿ ಆಹ್ವಾನ ತುಮಕೂರು(ಕ.ವಾ.)ಆ.೨೫: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಸಾಲ/ಸಹಾಯಧನ ಸೌಲಭ್ಯಕ್ಕಾಗಿ ಅಲ್ಪಸಂಖ್ಯಾತರ ಸಮುದಾಯದವರಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರಿವು ವಿದ್ಯಾಭ್ಯಾಸ ಸಾಲ, ಸ್ವಾವಲಂಭಿ ಸಾರಥಿ, ಶ್ರಮಶಕ್ತಿ, ವೃತ್ತಿ ಪ್ರೋತ್ಸಾಹ, ರೇಷ್ಮೇ ನೂಲು ಬಿಚ್ಚಾಣಿಕ್ ಉದ್ಯಮಕ್ಕೆ ಪ್ರೋತ್ಸಾಹ, ಗಂಗಾ ಕಲ್ಯಾಣ, ನವೋದಯ, ಫಾಸ್ಟ್ ಫುಡ್‌ಟ್ರಕ್/ಟೈಲರ್ ಕಿಚನ್ ಫುಡ್ (ಕಿಯೋಸ್ಟ್), ಅಲ್ಪಸಂಖ್ಯಾತರ ಸಮುದಾಯದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗ ಪ್ರೋತ್ಸಾಹ, ಸಿಖ್ಖ್ಲಿಗಾರ ಸಮುದಾಯದ ಜನರ ಆರ್ಥಿಕ ಸಬಲೀಕರಣಕ್ಕೆ ಪ್ರೋತ್ಸಾಹ, ಸಮುದಾಯದ ಆಧಾರಿತ ತರಬೇತಿ, ವಿದೇಶಿ ವಿದ್ಯಾಭ್ಯಾಸ ಸಾಲ, ವ್ಯಾಪಾರ / ಉದ್ದಿಮೆ ನೇರ ಸಾಲ ಹಾಗೂ ಸಾಂತ್ವನ ಯೋಜನೆಯಡಿ ಸಾಲ/ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ವೆಬ್‌ಸೈಟ್ ಞmಜಛಿoಟಿಟiಟಿe.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಸೆಪ್ಟೆಂಬರ್ ೧೭ರೊಳಗಾಗಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನಾ ಆಜಾದ್ ಭವನ, ಇಂದಿರಾ ಕಾಲೇಜು ಮುಂಭಾಗ, ಉಪ್ಪಾರಹಳ್ಳಿ, ತುಮಕೂರು-೫೭೨೧೦೨ ಈ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. *-*-*-*-*-*೨ ಅಪರಿಚಿತ ಶವ ಪತ್ತೆ : ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು ತುಮಕೂರು(ಕ.ವಾ.)ಆ.೨೫: ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಅಪರಿಚಿತ ಶವಗಳು ಪತ್ತೆಯಾಗಿದ್ದು, ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. ಪ್ರಕರಣ-೧ : ಕೊತ್ತಿಪುರ ಗ್ರಾಮದ ಬಳಿ ಕುಣಿಗಲ್ ಚಿಕ್ಕಕೆರೆಯಲ್ಲಿ ಜುಲೈ ೧೬ರಂದು ಸುಮಾರು ೪೫ ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಮೃತನು ೫.೫ ಅಡಿ ಎತ್ತರ, ದೃಢಕಾಯ ಶರೀರ ಹೊಂದಿದ್ದು, ದೇಹವು ಅರ್ಧಂಬರ್ಧ ಕೊಳೆತ ಸ್ಥಿತಿಯಲ್ಲಿರುತ್ತದೆ. ಮೃತನ ಮೈಮೇಲೆ ಕಪ್ಪು ಬಣ್ಣದ ರೆಡಿಮೇಡ್ ಪ್ಯಾಂಟ್, ತುಂಬು ತೋಳಿನ ಅಂಗಿ ಇರುತ್ತದೆ. ಪ್ರಕರಣ-೨ : ಕುಣಿಗಲ್ ಪಟ್ಟಣದ ಹುಚ್ಚ ಮಾಸ್ತಿಗೌಡ ಸರ್ಕಲ್‌ನ ಕಲ್ಲು ಬಿಲ್ಡಿಂಗ್ ಬಳಿ ಆಗಸ್ಟ್ ೮ರಂದು ಸುಮಾರು ೨೩ ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಮೃತನು ೫.೪ ಅಡಿ ಎತ್ತರ, ಸಾಧಾರಣ ಶರೀರ ಹೊಂದಿದ್ದು, ಎಡಭಾಗದ ಕುತ್ತಿಗೆಯಲ್ಲಿ Sಉ ಎಂದು ಹಚ್ಚೆ ಇರುತ್ತದೆ. ಮೃತನ ಮೈಮೇಲೆ ಬಿಳಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು, ನೀಲಿ ಮಿಶ್ರಿತ ಅರ್ಧ ತೋಳಿನ ಅಂಗಿ ಇರುತ್ತದೆ.

ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಕೂಡಲೇ ದೂ.ವಾ.ಸಂ. ೦೮೧೩೨-೨೨೦೨೨೯, ೦೮೧೬-೨೨೭೨೪೫೧ನ್ನು ಸಂಪರ್ಕಿಸಬೇಕೆAದು ಅವರು ಮನವಿ ಮಾಡಿದ್ದಾರೆ. *-*-*-*-*-*-*ಆ.೨೮ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನತುಮಕೂರು(ಕ.ವಾ.)ಆ.೨೫: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ದಾಬಸ್‌ಪೇಟೆಯ ಪ್ರೆಸಿಮೆಷರ್ ಕಂಟ್ರೋಲ್ಸ್ ಪ್ರೆöÊ. ಲಿ., ಸಂಸ್ಥೆಯ ಸಹಭಾಗಿತ್ವದಲ್ಲಿ ಆಗಸ್ಟ್ ೨೮ರಂದು ಮೆಕ್ಯಾನಿಕಲ್ ಡಿಸೈನ್ ಇಂಜಿನಿಯರ್, ಎಲೆಕ್ಟಿçಕಲ್ ಡಿಸೈನ್ ಇಂಜಿನಿಯರ್, ಮೆಕ್ಯಾನಿಕಲ್ ಡಿಸೈನ್ ಇಂಜಿನಿಯರ್(ಎಸ್.ಪಿ.ಎA.), ಸರ್ವಿಸ್ ಇಂಜಿನಿಯರ್, ಪ್ರೊಡಕ್ಷನ್ ಮ್ಯಾನೇಜರ್(ಇನ್ಸ್ಟ್ರುಮೆಂಟ್ಸ್ ಪ್ರೊಡಕ್ಷನ್), ಪರ್ಚೇಸ್ ಇಂಜಿನಿಯರ್(ಮೆಟೀರಿಯಲ್ ಸರ‍್ಸಿಂಗ್), ಜಿ.ಇ.ಟಿ. ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ಐ.ಟಿ.ಐ, ಡಿಪ್ಲೊಮಾ ಹಾಗೂ ಬಿ.ಇ.(ಮೆಕ್ಯಾನಿಕಲ್, ಎಲೆಕ್ಟಿçಕಲ್, ಎಲೆಕ್ಟಿçಕಲ್ & ಎಲೆಕ್ಟಾçನಿಕ್ಸ್)ನಲ್ಲಿ ಪಾಸಾದ ಮತ್ತು ೭ ವರ್ಷಗಳ ಅನುಭವವಿರುವ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅನುಭವದ ಆಧಾರದ ಮೇಲೆ ಕಂಪನಿ ನಿಗದಿಪಡಿಸಿದ ವೇತನ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಆಗಸ್ಟ್ ೨೮ರಂದು ಬೆಳಗ್ಗೆ ೧೦ ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಡಿ.ಡಿ.ಪಿ.ಐ. ಬಸ್ ನಿಲ್ದಾಣ, ವಾಸನ್ ಕಣ್ಣಿನ ಆಸ್ಪತ್ರೆ ಹತ್ತಿರ, ಮೂಲೆಮನೆ ಹೋಟಲ್ ಪಕ್ಕ, ಸೋಮೇಶ್ವರಪುರಂ, ೧೪ನೇ ಕ್ರಾಸ್, ತುಮಕೂರು-೫೭೨೧೦೨ ಇಲ್ಲಿ ಬಯೋಡೇಟಾದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೧೬-೨೨೭೮೪೮೮, ಮೊ.ಸಂ. ೮೭೯೨೬೬೯೪೧೦, ೭೭೬೦೧೭೪೫೫೪ನ್ನು ಸಂಪರ್ಕಿಸಬೇಕೆAದು ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. *-*-*-*-*-*-*-*-*ವಿಬಿ ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕಾರ್ಡ್ ವಿತರಣೆ ಅಭಿಯಾನಕ್ಕೆ ಚಾಲನೆತುಮಕೂರು(ಕ.ವಾ.)ಆ.೨೫: ತಾಲ್ಲೂಕಿನ ಹೊನ್ನುಡಿಕೆ ಮತ್ತು ಮಸ್ಕಲ್ ಗ್ರಾಮ ಪಂಚಾಯಿತಿಗಳಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಜಾಬ್ ಕಾರ್ಡ್ ಮೇಳ ಹಾಗೂ ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕಾರ್ಡ್ ವಿತರಣೆ ಅಭಿಯಾನಕ್ಕೆ ಸಹಾಯಕ ನಿರ್ದೇಶಕ(ಗ್ರಾ.ಉ.) ಎಸ್.ಎಸ್. ಮಂಜುನಾಥ್ ಚಾಲನೆ ನೀಡಿದರು.ಗ್ರಾಮೀಣ ಪ್ರದೇಶದ ಅರ್ಹ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಆಯೋಜಿಸಿದ್ದ ಜಾಬ್ ಕಾರ್ಡ್ ಮೇಳದಲ್ಲಿ ಗ್ರಾಮಸ್ಥರಿಗೆ ಯೋಜನೆಯ ಕುರಿತು ಮಾಹಿತಿ ನೀಡಲಾಯಿತು. ಅರ್ಹ ಕುಟುಂಬಗಳ ನೋಂದಣಿ, ಜಾಬ್ ಕಾರ್ಡ್ ವಿತರಣೆ ಹಾಗೂ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವ ಪ್ರಕ್ರಿಯೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ(ಗ್ರಾ.ಉ.) ಎಸ್.ಎಸ್. ಮಂಜುನಾಥ್ ಮಾತನಾಡಿ, ಅಭಿಯಾನದ ಅಂಗವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಹ ಕುಟುಂಬಗಳನ್ನು ಗುರುತಿಸಿ, ಪ್ರತಿಯೊಂದು ಕುಟುಂಬಕ್ಕೂ ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕಾರ್ಡ್ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಉದ್ಯೋಗದ ಅಗತ್ಯವಿರುವ ಕುಟುಂಬಗಳು ಗ್ರಾಮ ಪಂಚಾಯಿತಿಯಲ್ಲಿ ತಮ್ಮ ಬೇಡಿಕೆಯನ್ನು ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಜಾಬ್ ಕಾರ್ಡ್ ಮೇಳವು ಗ್ರಾಮೀಣ ಕುಟುಂಬಗಳಿಗೆ ಉದ್ಯೋಗದ ಅವಕಾಶ ಕಲ್ಪಿಸುವ ಜೊತೆಗೆ, ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಪ್ರಮುಖ ವೇದಿಕೆಯಾಗಿದೆ ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರು ಎಚ್.ಎನ್., ವಿಬಿ ಜಿ ರಾಮ್ ಜಿ ಯೋಜನೆಯ ತಾಂತ್ರಿಕ ಸಂಯೋಜಕರಾದ ಜೀವನ್ ಪ್ರಸಾದ್, ಅನ್ನಪೂರ್ಣ, ತಾಂತ್ರಿಕ ಸಹಾಯಕ ಬೋಮ್ಮೆಗೌಡ, ಬೃಂದಾ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.*-*-*-*-*-*ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ಸಾವುತುಮಕೂರು(ಕ.ವಾ.)ಆ.೨೫: ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿ ಕಸಬಾ ಹೋಬಳಿ ಕೆಂಕೆರೆ ಬಳಿ ಅಸ್ವಸ್ಥನಾಗಿದ್ದ ಸುಮಾರು ೪೫ ವರ್ಷದ ವೆಂಕಟೇಶ್ ಎಂಬ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಜೂನ್ ೧೮ರಂದು ಮೃತಪಟ್ಟಿರುತ್ತಾನೆ. ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ. ಮೃತನು ೧೬೮ ಸೆಂ.ಮೀ. ಎತ್ತರ, ಸಾಧಾರಣ ಶರೀರ ಹೊಂದಿದ್ದು, ಕಪ್ಪು ಮೈಬಣ್ಣ ಹೊಂದಿದ್ದು, ಮೃತನ ಮೈಮೇಲೆ ಅರ್ಧ ತೋಳಿನ ಅಂಗಿ ಇರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಕೂಡಲೇ ದೂ.ವಾ.ಸಂ. ೦೮೧೩೨-೨೨೦೨೨೯, ೦೮೧೬-೨೨೭೨೪೫೧ನ್ನು ಸಂಪರ್ಕಿಸಬೇಕೆAದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ

ಶಿರಾ ಸುದ್ದಿ; ಶಿರಾ ನಗರಸಭೆಯಲ್ಲಿ ಪೌರಕಾರ್ಮಿಕರಿಗೆ ಮೀಸಲಿಟ್ಟ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ ಎಂಬ ಆರೋಪ, ಅಕ್ರಮ ಲೇಔಟ್‌ಗಳಿಗೆ ಅನುಮೋದನೆ, ವಾರ್ಡ್‌ಗಳಿಗೆ ಮುನ್ಸಿಪಲ್ ಹಣಕಾಸು ನಿಧಿಗಳ ಅಸಮಾನ ಹಂಚಿಕೆ, ಸಮರ್ಪಕ ಕಸ ವಿಲೇವಾರಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳು ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸ್ಫೋಟಗೊಂಡವು. ಸದಸ್ಯರ ತೀವ್ರ ವಿರೋಧ ಹಾಗೂ ಪ್ರತಿಭಟನೆ

ಶಿರಾ ಸುದ್ದಿ; ಶಿರಾ ನಗರಸಭೆಯಲ್ಲಿ ಪೌರಕಾರ್ಮಿಕರಿಗೆ ಮೀಸಲಿಟ್ಟ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ ಎಂಬ ಆರೋಪ, ಅಕ್ರಮ ಲೇಔಟ್‌ಗಳಿಗೆ ಅನುಮೋದನೆ, ವಾರ್ಡ್‌ಗಳಿಗೆ ಮುನ್ಸಿಪಲ್ ಹಣಕಾಸು ನಿಧಿಗಳ ಅಸಮಾನ ಹಂಚಿಕೆ, ಸಮರ್ಪಕ ಕಸ ವಿಲೇವಾರಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳು ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸ್ಫೋಟಗೊಂಡವು. ಸದಸ್ಯರ ತೀವ್ರ ವಿರೋಧ ಹಾಗೂ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆಯನ್ನೇ ಮುಂದೂಡಲಾಯಿತು.ನಗರಸಭೆ ಅಧ್ಯಕ್ಷ ಜಿಶಾನ್ ಮಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಹಲವು ಸದಸ್ಯರು ನಗರಸಭೆಯ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಶನಿವಾರ ಆಶ್ರಯ ಕಮಿಟಿಯ ಸಭೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಅಲ್ಲಿ ಸಮಸ್ಯೆ ಬಗೆಹರಿಸುತ್ತೇವೆಂದು ಆಯುಕ್ತ ರುದ್ರೇಶ್ ಹೇಳಿದರೂ ಕೇಳದೆ ಪ್ರತಿಭಟನೆ ಮುಂದುವರಿಸಿದ ಸದಸ್ಯರು. *ಪೌರಕಾರ್ಮಿಕರಿಗೆ ಮೀಸಲಿಟ್ಟ ಜಾಗದಲ್ಲಿ ಅಕ್ರಮ ಕಟ್ಟಡ?** ಪೌರಕಾರ್ಮಿಕರಿಗೆ ಮೀಸಲಿಟ್ಟಿರುವ ಜಾಗದಲ್ಲೇ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಅವಕಾಶ ನೀಡಲಾಗಿದೆ ಎಂದು ಸದಸ್ಯರು ಆರೋಪಿಸಿದರು. ಮೀಸಲಿಟ್ಟ ಜಾಗವನ್ನೇ ನಗರಸಭೆ ರಕ್ಷಿಸಲು ಸಾಧ್ಯವಾಗದಿದ್ದರೆ ಆಡಳಿತದ ಹೊಣೆಗಾರಿಕೆ ಏನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.ಅಕ್ರಮ ಕಟ್ಟಡ ನಿರ್ಮಾಣದ ಕುರಿತು ತಕ್ಷಣ ಸೂಕ್ತ ಕ್ರಮ ಕೈಗೊಂಡು, ಅಕ್ರಮವನ್ನು ತೆರವುಗೊಳಿಸಬೇಕು. ಸಮಸ್ಯೆ ಬಗೆಹರಿಯುವವರೆಗೆ ಸಾಮಾನ್ಯ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸದಸ್ಯರು ಪಟ್ಟು ಹಿಡಿದರು. *ಅಕ್ರಮ ಲೇಔಟ್‌ಗಳಿಗೆ ಅನುಮೋದನೆ ಆರೋಪ* ನಗರದ ಅಭಿವೃದ್ಧಿಯ ಹೆಸರಿನಲ್ಲಿ ನಿಯಮಗಳನ್ನು ಬದಿಗೊತ್ತಿ ಅಕ್ರಮ ಲೇಔಟ್‌ಗಳಿಗೆ ಅನುಮೋದನೆ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪವೂ ಸಭೆಯಲ್ಲಿ ಕೇಳಿಬಂತು. ನಿಯಮಬಾಹಿರ ಲೇಔಟ್‌ಗಳಿಗೆ ಅನುಮತಿ ನೀಡುವುದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗಲಿದೆ. ಹೀಗಾಗಿ ನಿಯಮಾನುಸಾರವೇ ಲೇಔಟ್‌ಗಳಿಗೆ ಅನುಮೋದನೆ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು. *ನ್ಯಾಯ ಸಮ್ಮತವಾಗಿ ಹಂಚಿಕೆಯಾಗದ ಹಣಕಾಸು ನಿಧಿಗಳು* ನಗರಸಭೆಯ ವಿವಿಧ ಹಣಕಾಸು ನಿಧಿಗಳನ್ನು ವಾರ್ಡ್‌ಗಳಿಗೆ ನ್ಯಾಯಸಮ್ಮತವಾಗಿ ಹಂಚಿಕೆ ಮಾಡುತ್ತಿಲ್ಲ ಎಂಬ ಆರೋಪವೂ ತೀವ್ರವಾಗಿ ಕೇಳಿಬಂತು. ಕೆಲವು ವಾರ್ಡ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಇನ್ನು ಕೆಲವು ವಾರ್ಡ್‌ಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಸದಸ್ಯರು ದೂರಿದರು.ಜನಸಂಖ್ಯೆ, ಅಗತ್ಯ ಹಾಗೂ ಸಮಸ್ಯೆಗಳ ಆಧಾರದ ಮೇಲೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಹಂಚಿಕೆ ಮಾಡಬೇಕು. ನಗರಸಭೆಯ ಹಣ ಎಲ್ಲ ವಾರ್ಡ್‌ಗಳ ಜನರ ತೆರಿಗೆ ಹಣವಾಗಿದ್ದು, ಯಾವುದೇ ವಾರ್ಡ್‌ಗೆ ತಾರತಮ್ಯ ಮಾಡಬಾರದು ಎಂದು ಸದಸ್ಯರು ಆಗ್ರಹಿಸಿದರು. *ಕಸ, ಚರಂಡಿ ಸಮಸ್ಯೆ; ದುರ್ವಾಸನೆಯಿಂದ ಜನರ ಪರದಾಟ* ನಗರದ ಹಲವು ವಾರ್ಡ್‌ಗಳಲ್ಲಿ ಸಮರ್ಪಕ ಕಸ ವಿಲೇವಾರಿ ನಡೆಯುತ್ತಿಲ್ಲ. ಮನೆಮನೆಗೆ ಕಸ ಸಂಗ್ರಹಿಸುವ ವ್ಯವಸ್ಥೆ ಇದ್ದರೂ ಹಲವೆಡೆ ಕಸದ ರಾಶಿಗಳು ಕಂಡುಬರುತ್ತಿವೆ. ಇದರಿಂದ ದುರ್ವಾಸನೆ ಹಾಗೂ ಸೊಳ್ಳೆಗಳ ಕಾಟದಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸದಸ್ಯರು ಹೇಳಿದರು.ಚರಂಡಿಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದ ಪರಿಣಾಮ ತ್ಯಾಜ್ಯ ಹಾಗೂ ಕೊಳಚೆ ನೀರು ನಿಂತುಕೊಂಡಿದ್ದು, ಯುಜಿಡಿ ಮ್ಯಾನ್‌ಹೋಲ್‌ಗಳಿಂದ ಕೊಳಚೆ ನೀರು ರಸ್ತೆಗೆ ಹರಿಯುತ್ತಿರುವ ಸಮಸ್ಯೆಯೂ ಇದೆ. ಈ ಬಗ್ಗೆ ನಗರಸಭೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. *ಕುಡಿಯುವ ನೀರಿಗೂ ಸಮಸ್ಯೆ* ನಗರದ ಹಲವು ಪ್ರದೇಶಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬ ವಿಚಾರವೂ ಸಭೆಯಲ್ಲಿ ಪ್ರತಿಧ್ವನಿಸಿತು. ತೆರಿಗೆ ಪಾವತಿಸುವ ನಾಗರಿಕರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರು, ಸ್ವಚ್ಛತೆ ಹಾಗೂ ಸಮರ್ಪಕ ಕಸ ವಿಲೇವಾರಿ ಒದಗಿಸಲು ನಗರಸಭೆಗೆ ಸಾಧ್ಯವಾಗುತ್ತಿಲ್ಲವೇ ಎಂದು ಸದಸ್ಯರು ಪ್ರಶ್ನಿಸಿದರು.ಪೌರಕಾರ್ಮಿಕರ ಜಾಗದ ಅಕ್ರಮ ಕಟ್ಟಡ, ಅಕ್ರಮ ಲೇಔಟ್‌ಗಳ ಅನುಮೋದನೆ, ಹಣಕಾಸು ನಿಧಿಗಳ ಹಂಚಿಕೆ, ಕಸ ವಿಲೇವಾರಿ, ಚರಂಡಿ, ಯುಜಿಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.ಈ ಕುರಿತು ನಗರಸಭೆ ಅಧ್ಯಕ್ಷ ಜಿಶಾನ್ ಮಹಮ್ಮದ್ ಹಾಗೂ ಆಯುಕ್ತ ರುದ್ರೇಶ್ ಅವರಿಗೆ ಸದಸ್ಯರು ಪತ್ರ ಸಲ್ಲಿಸಿದರು. ಸಮಸ್ಯೆಗಳಿಗೆ ಸ್ಪಷ್ಟ ಪರಿಹಾರ ದೊರೆಯುವವರೆಗೆ ಸಾಮಾನ್ಯ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಯಿತು.ನಗರಸಭೆ ಆಡಳಿತದ ವಿರುದ್ಧ ಪಕ್ಷಭೇದ ಮರೆತು ಸದಸ್ಯರು ಒಗ್ಗಟ್ಟಾಗಿ ಧ್ವನಿ ಎತ್ತಿ, ಸಾಮಾನ್ಯ ಸಭೆಯನ್ನೇ ಮುಂದೂಡಿಸಿರುವುದು ಶಿರಾ ನಗರಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. *ಜಿಲ್ಲಾಧಿಕಾರಿ ಬರುವವರೆಗೆ ಉಪವಾಸ ಸತ್ಯಾಗ್ರಹ* ನಗರದ ಜ್ವಲಂತ ಸಮಸ್ಯೆಗಳಿಗೆ ಅಧಿಕಾರಿಗಳಿಂದ ಸ್ಪಷ್ಟ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಅವರು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಮಸ್ಯೆಗಳನ್ನು ಚರ್ಚಿಸಿ ಇತ್ಯರ್ಥಪಡಿಸುವವರೆಗೆ ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿ ಪಟ್ಟು ಹಿಡಿದರು.ಕೃಷ್ಣಪ್ಪ ಅವರ ಉಪವಾಸ ಸತ್ಯಾಗ್ರಹಕ್ಕೆ ಪಕ್ಷಭೇದ ಮರೆತು 12 ನಗರಸಭೆ ಸದಸ್ಯರು ಬೆಂಬಲವಾಗಿ ನಿಂತರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಲಕ್ಷ್ಮಿಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ನಗರಸಭೆ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಫೋಟೋ ನಗರ ಸಭೆಯ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯನ್ನು ನಡೆಯುವುದಕ್ಕೆ ಬಿಡುವುದಿಲ್ಲ ಎಂದು ಪ್ರತಿಭಟಿಸಿದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ 13 ಸದಸ್ಯರುಗಳು. ಫೋಟೋ 2ನಗರ ಸಭೆ ಆಯುಕ್ತರು ಹಾಗೂ ಅಧ್ಯಕ್ಷರಿಗೆ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಸಮಸ್ಯೆ ಬಗೆಹರಿಸುವವರೆಗೂ ಸಭೆ ಮುಂದೂಡಲು ಮನವಿ ಸಲ್ಲಿಸಿದರು.

ಜಿಲ್ಲಾ ಆಡಳಿತದಿಂದ ಡಿ. ದೇವರಾಜ ಅರಸು ರವರ 111ನೇ ಜನ್ಮ ದಿನಾಚರಣೆ*ತುಮಕೂರು ಜಿಲ್ಲಾ ಆಡಳಿತದ ವತಿಯಿಂದ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಿಂದುಳಿದ ವರ್ಗಗಳ ಪರಿವರ್ತನೆಯ ಹರಿಕಾರರಾದ ಶ್ರೀ ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಗ್ರಂಥಾಲಯ ಸಭಾಂಗಣದಲ್ಲಿ ಗೌರವಪೂರ್ವಕವಾಗಿ ಆಚರಿಸಲಾಯಿತು

ಜಿಲ್ಲಾ ಆಡಳಿತದಿಂದ ಡಿ. ದೇವರಾಜ ಅರಸು ರವರ 111ನೇ ಜನ್ಮ ದಿನಾಚರಣೆ*ತುಮಕೂರು ಜಿಲ್ಲಾ ಆಡಳಿತದ ವತಿಯಿಂದ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಿಂದುಳಿದ ವರ್ಗಗಳ ಪರಿವರ್ತನೆಯ ಹರಿಕಾರರಾದ ಶ್ರೀ ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಗ್ರಂಥಾಲಯ ಸಭಾಂಗಣದಲ್ಲಿ ಗೌರವಪೂರ್ವಕವಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀ ಡಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನೀಡಿದ ಮಹತ್ವದ ಕೊಡುಗೆಗಳನ್ನು ಸ್ಮರಿಸಲಾಯಿತು. ಅವರ ಜನಪರ ಆಡಳಿತ ಮತ್ತು ಸಾಮಾಜಿಕ ಪರಿವರ್ತನೆಯ ದೃಷ್ಟಿಕೋನವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಯಿತು.ಶ್ರೀ ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಹಿಂದುಳಿದ ವರ್ಗಗಳು, ದೀನದಲಿತರು ಹಾಗೂ ದುರ್ಬಲ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ಭೂ ಸುಧಾರಣೆ, ಸಾಮಾಜಿಕ ನ್ಯಾಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅವರು ಕೈಗೊಂಡ ಕ್ರಮಗಳು ಕರ್ನಾಟಕದ ಸಾಮಾಜಿಕ ಪರಿವರ್ತನೆಗೆ ಪ್ರಮುಖ ಕಾರಣವಾಗಿವೆ ಎಂದು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.ಜಿಲ್ಲಾಧಿಕಾರಿ ಶ್ರೀಮತಿ ಶುಭ ಕಲ್ಯಾಣ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ಡಿ. ದೇವರಾಜ ಅರಸು ಅವರ ಸಾಮಾಜಿಕ ನ್ಯಾಯದ ಆಶಯಗಳು ಹಾಗೂ ಜನಪರ ಆಡಳಿತದ ಕೊಡುಗೆಗಳನ್ನು ಸ್ಮರಿಸಿದರು. ಸಮಾಜದ ಹಿಂದುಳಿದ ಹಾಗೂ ದುರ್ಬಲ ವರ್ಗಗಳ ಸಬಲೀಕರಣಕ್ಕೆ ಅವರು ನೀಡಿದ ಮಹತ್ವದ ಕೊಡುಗೆಗಳನ್ನು ನೆನಪಿಸಿಕೊಂಡರು.ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಸಾನಿಯಾ ವರ್ಣಿಕರ್, ಜಿಲ್ಲಾ ಆಡಳಿತದ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಶಾಲಾ ಆವರಣದಲ್ಲಿ ಕಸ, ಮದ್ಯದ ಬಾಟಲಿ, ಧೂಳಿನ ಸಮಸ್ಯೆ: ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶಶಿರಾ: ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲೆಯ ಆವರಣದಲ್ಲಿ ಕಸದರಾಶಿ, ಮದ್ಯದ ಬಾಟಲಿಗಳು, ಎಣ್ಣೆ ಪಾಕೆಟ್‌ಗಳು ಹಾಗೂ ಜಲ್ಲಿ–ಡಸ್ಟ್‌ ಸಂಗ್ರಹವಾಗಿರುವುದರಿಂದ ಶಾಲಾ ಪರಿಸರ ಅಸ್ವಚ್ಛವಾಗಿದ್ದು, ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ ಕುರಿತು ಪೋಷಕರು ಹಾಗೂ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ

ಶಾಲಾ ಆವರಣದಲ್ಲಿ ಕಸ, ಮದ್ಯದ ಬಾಟಲಿ, ಧೂಳಿನ ಸಮಸ್ಯೆ: ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶಶಿರಾ: ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲೆಯ ಆವರಣದಲ್ಲಿ ಕಸದರಾಶಿ, ಮದ್ಯದ ಬಾಟಲಿಗಳು, ಎಣ್ಣೆ ಪಾಕೆಟ್‌ಗಳು ಹಾಗೂ ಜಲ್ಲಿ–ಡಸ್ಟ್‌ ಸಂಗ್ರಹವಾಗಿರುವುದರಿಂದ ಶಾಲಾ ಪರಿಸರ ಅಸ್ವಚ್ಛವಾಗಿದ್ದು, ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ ಕುರಿತು ಪೋಷಕರು ಹಾಗೂ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಶಾಲಾ ಆವರಣದಲ್ಲಿ ರಾತ್ರಿ ವೇಳೆ ಅನಧಿಕೃತ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದು, ಮದ್ಯ ಸೇವಿಸಿದ ಬಳಿಕ ಬಾಟಲಿಗಳು ಹಾಗೂ ಇತರೆ ತ್ಯಾಜ್ಯವನ್ನು ಶಾಲಾ ಆವರಣದಲ್ಲಿಯೇ ಬಿಸಾಡಲಾಗುತ್ತಿದೆ ಎನ್ನಲಾಗಿದೆ. ಬೆಳಗ್ಗೆ ಶಾಲೆಗೆ ಆಗಮಿಸುವ ಶಿಕ್ಷಕರು ಹಾಗೂ ಸಿಬ್ಬಂದಿ ತ್ಯಾಜ್ಯ ತೆರವುಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಲಾಗಿದೆ. ಕೆಲವರು ಶಾಲಾ ಆವರಣದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಇದರ ನಡುವೆ ಜೆಜೆಎಂ ಕಾಮಗಾರಿಗೆ ಸಂಬಂಧಿಸಿದಂತೆ ಶಾಲಾ ಆವರಣದಲ್ಲಿ ಜಲ್ಲಿ ಮತ್ತು ಡಸ್ಟ್‌ ಸಂಗ್ರಹಿಸಲಾಗಿದ್ದು, ಧೂಳಿನಿಂದ ಶಾಲಾ ಪರಿಸರದಲ್ಲಿ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಕೆಮ್ಮು, ನೆಗಡಿ ಹಾಗೂ ಧೂಳಿನ ಅಲರ್ಜಿಯಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.ಶಾಲೆಯ ಮುಂಭಾಗದಲ್ಲಿರುವ ಕೆಲ ಅಂಗಡಿಗಳವರು ಕೂಡ ಕಸವನ್ನು ಶಾಲಾ ಕಾಂಪೌಂಡ್ ಒಳಗೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಪರಿಸರ ಮತ್ತಷ್ಟು ಅಸ್ವಚ್ಛವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅನುಮತಿ ಇಲ್ಲದೆ ಸಾರ್ವಜನಿಕ ಶೌಚಾಲಯ ಕಾಮಗಾರಿ ಆರೋಪಶಾಲಾ ಆವರಣದ ಒಂದು ಮೂಲೆಯಲ್ಲಿ ನಗರಸಭೆ ವತಿಯಿಂದ ಶಿಕ್ಷಣ ಇಲಾಖೆಯ ಅನುಮತಿ ಪಡೆಯದೆ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಲಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶೌಚಾಲಯಕ್ಕಾಗಿ ಶಾಲಾ ಆವರಣದಲ್ಲಿಯೇ ಫಿಟ್ ಗುಂಡಿ ತೆಗೆಯುವ ಕಾಮಗಾರಿ ನಡೆಯುತ್ತಿದ್ದ ವೇಳೆ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಅಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಕಾಮಗಾರಿಯನ್ನು ತಡೆದಿದ್ದಾರೆ ಎನ್ನಲಾಗಿದೆ.ಈ ಕುರಿತು ಪ್ರತಿಕ್ರಿಯಿಸಿರುವ ಶಿರಾ ಶಿಕ್ಷಣಾಧಿಕಾರಿ (ಬಿಇಒ) ಕೃಷ್ಣಪ್ಪ, ಶಾಲೆಯ ಮುಖ್ಯಸ್ಥರು ಹಾಗೂ ಶಿಕ್ಷಣ ಇಲಾಖೆಯ ವತಿಯಿಂದ ಶಾಲಾ ಆವರಣದ ಸಮಸ್ಯೆಗಳ ಕುರಿತು ಹಲವು ಬಾರಿ ನಗರಸಭೆಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೂ ಶಿಕ್ಷಣ ಇಲಾಖೆಯಿಂದ ಯಾವುದೇ ಅನುಮತಿ ನೀಡಿಲ್ಲ ಎಂದು ತಿಳಿಸಿದ್ದಾರೆ.ಶಾಲೆಯ ಸುತ್ತಲೂ ಸರ್ವೆ ನಡೆಸಿ, ಸೂಕ್ತ ಕಾಂಪೌಂಡ್ ನಿರ್ಮಿಸಬೇಕು ಎಂದು ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ.ಶಾಲಾ ಆವರಣವನ್ನು ತಕ್ಷಣ ಸ್ವಚ್ಛಗೊಳಿಸಿ, ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಜೆಜೆಎಂ ಕಾಮಗಾರಿಯಿಂದ ಉಂಟಾಗುತ್ತಿರುವ ಧೂಳಿನ ಸಮಸ್ಯೆ ಪರಿಹರಿಸಬೇಕು. ಶಾಲೆಯ ಸುರಕ್ಷತೆಗಾಗಿ ಸಮರ್ಪಕ ಕಾಂಪೌಂಡ್ ನಿರ್ಮಿಸಬೇಕು ಎಂದು ಸಮಾಜಸೇವಕ ಸಾಧಿ, ಎಸ್‌ಡಿಎಂಸಿ ಸದಸ್ಯರಾದ ಆರ್. ರಹಮತ್, ಮಜೀದ್, ಎ. ರಿಹಾನಿ, ಮುತ್ತುವಲ್ಲಿ ಮುರಾದ್ ಭಾಷಾ, ಎಸ್‌ಡಿಎಂಸಿ ಅಧ್ಯಕ್ಷೆ ರಾಜಿಕಾ ಬಾನು, ಶಬುದ್ದೀನ್ ಸೇರಿದಂತೆ ಹಲವು ಮುಖಂಡರು, ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕೂಡಲೇ ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹರಿಜನರ ಸ್ಮಶಾನ ಭೂಮಿ ಅಕ್ರಮ ಪರಭಾರೆ ಖಂಡಿಸಿ ಬೃಹತ್ ಪ್ರತಿಭಟನೆತುಮಕೂರು: ನಗರದ ಎನ್.ಆರ್. ಕಾಲೋನಿ, ಅಂಬೇಡ್ಕರ್ ನಗರ ಹಾಗೂ ನಿರ್ವಾಣಿ ಲೇಔಟ್ ನಿವಾಸಿಗಳು, ಸ.ನಂ. 299/1ರ ಹರಿಜನ ಸ್ಮಶಾನ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದೆ ಎಂದು ಆರೋಪಿಸಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.ಸ್ಮಶಾನಕ್ಕೆ ಮೀಸಲಾದ ಜಮೀನಿನಲ್ಲಿ ಅಕ್ರಮವಾಗಿ ಲೇಔಟ್ ನಿರ್ಮಿಸಲಾಗಿದ್ದು

ಹರಿಜನರ ಸ್ಮಶಾನ ಭೂಮಿ ಅಕ್ರಮ ಪರಭಾರೆ ಖಂಡಿಸಿ ಬೃಹತ್ ಪ್ರತಿಭಟನೆತುಮಕೂರು: ನಗರದ ಎನ್.ಆರ್. ಕಾಲೋನಿ, ಅಂಬೇಡ್ಕರ್ ನಗರ ಹಾಗೂ ನಿರ್ವಾಣಿ ಲೇಔಟ್ ನಿವಾಸಿಗಳು, ಸ.ನಂ. 299/1ರ ಹರಿಜನ ಸ್ಮಶಾನ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದೆ ಎಂದು ಆರೋಪಿಸಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.ಸ್ಮಶಾನಕ್ಕೆ ಮೀಸಲಾದ ಜಮೀನಿನಲ್ಲಿ ಅಕ್ರಮವಾಗಿ ಲೇಔಟ್ ನಿರ್ಮಿಸಲಾಗಿದ್ದು, ತಮ್ಮ ಪೂರ್ವಜರ ಸಮಾಧಿಗಳನ್ನು ನೆಲಸಮಗೊಳಿಸಿ ಅಸ್ಥಿಪಂಜರಗಳನ್ನು ಸ್ಥಳಾಂತರಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಕ್ರಮವಾಗಿ ಸೃಷ್ಟಿಸಿರುವ ಮ್ಯೂಟೇಷನ್ ದಾಖಲೆ ಹಾಗೂ ಆರ್‌ಟಿಸಿ ಸೇರಿದಂತೆ ದಾಖಲೆಗಳನ್ನು ರದ್ದುಪಡಿಸಿ, ಸ್ಮಶಾನಕ್ಕೆ ಜಮೀನು ಉಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಎನ್.ಆರ್. ಕಾಲೋನಿ, ದೊಡ್ಡಟ್ಟಿ, ಪಿ.ಕೆ.ಎಸ್. ಕಾಲೋನಿ ಹಾಗೂ ಅಂಬೇಡ್ಕರ್ ನಗರದಲ್ಲಿ ಸುಮಾರು 2 ಸಾವಿರ ಮಾದಿಗ ಕುಟುಂಬಗಳು ವಾಸಿಸುತ್ತಿದ್ದು, ಹಲವು ವರ್ಷಗಳಿಂದ ಈ ಪ್ರದೇಶದ ಸ್ಮಶಾನವನ್ನು ಶವಸಂಸ್ಕಾರಕ್ಕೆ ಬಳಸಲಾಗುತ್ತಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.ವಿವಾದಿತ ಸ್ಥಳಕ್ಕೆ ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಭೇಟಿ ನೀಡಿ ನಿವಾಸಿಗಳ ಅಹವಾಲು ಆಲಿಸಿದರು. ಬಳಿಕ ಸಾವಿರಾರು ನಿವಾಸಿಗಳು ಪಾದಯಾತ್ರೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು.ಸ್ಮಶಾನ ಭೂಮಿ ಒತ್ತುವರಿ, ಸಮಾಧಿಗಳ ಧ್ವಂಸ ಹಾಗೂ ಅಕ್ರಮ ದಾಖಲೆ ಸೃಷ್ಟಿಸಿರುವವರ ವಿರುದ್ಧ ಈಗಾಗಲೇ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಪ್ರಗತಿಪರ ಚಿಂತಕ ಕೆ. ದೊರೈರಾಜ್, ವಾಲೆ ಚಂದ್ರಯ್ಯ, ರೂಪಶ್ರೀ ಶೆಟ್ಟಳ್ಳಯ್ಯ, ಹೆಚ್.ಆರ್. ಹನುಮಂತರಾಯಪ್ಪ, ನಾರಾಯಣಮೂರ್ತಿ, ಎ. ನರಸಿಂಹಮೂರ್ತಿ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ವರದಿ: ಉದಯ್ ಕುಮಾರ್, ಕಲ್ಪತರು ನ್ಯೂಸ್, ತುಮಕೂರು

_ಶೂಟ್ ಔಟ್ ಪ್ರಕರಣ ಚಾಮರಾಜನಗರ‌ ಬಂದ್ ಗೆ ಚಿಂತನೆ ತೇಜಸ್ವಿ ನಾಗಲಿಂಗಸ್ವಾಮಿ__ಚಾಮರಾಜನಗರ ಜಿಲ್ಲೆಯಲ್ಲಿ ಮೂರು ಜನರನ್ನು ಅರಣ್ಯಾಧಿಕಾರಿ ಗೋಳನ್ನು ಶೂಟೌಟ್ ಖಂಡಿಸಿ ಚಾಮರಾಜನಗರ ಬಂದ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ

_ಶೂಟ್ ಔಟ್ ಪ್ರಕರಣ ಚಾಮರಾಜನಗರ‌ ಬಂದ್ ಗೆ ಚಿಂತನೆ ತೇಜಸ್ವಿ ನಾಗಲಿಂಗಸ್ವಾಮಿ__ಚಾಮರಾಜನಗರ ಜಿಲ್ಲೆಯಲ್ಲಿ ಮೂರು ಜನರನ್ನು ಅರಣ್ಯಾಧಿಕಾರಿ ಗೋಳನ್ನು ಶೂಟೌಟ್ ಖಂಡಿಸಿ ಚಾಮರಾಜನಗರ ಬಂದ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ__ಅರಣ್ಯ ಇಲಾಖೆ ಅಧಿಕಾರಿಗಳ ಬಂಧನ ಮತ್ತು ಸೇವೆ ಇಂದ ವಜಾಗೊಳಿಸ ಬೇಕು ಮತ್ತು ಸತ್ತವರ ಕುಟುಂಬಕ್ಕೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಹಾಗೂ ಸರ್ಕಾರಿ ಕೆಲಸ ಕೊಡಬೇಕು ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ರಾಜ್ಯ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ ಇಲ್ಲದಿದ್ದರೆ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ__ಕೆಲವೇ ದಿನಗಳಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರುಗಳ ಜೊತೆ ಸಭೆ ಕರೆದು ಚರ್ಚಿಸಿ ಚಾಮರಾಜನಗರ ಬಂದ್ ಮಾಡಲು ದಿನಾಂಕ ನಿಗದಿ ಪಡಿಸಲಾಗುವುದು ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಪತ್ರಿಕ ಹೇಳಿಕೆಯನ್ನು ನೀಡಿದ್ದಾರೆ,_

80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಮಾನುಜ ರಸ್ತೆಯಲ್ಲಿನ ಶ್ರೀ ಶಿವರಾತ್ರೀಶ್ವರ ಅಟೋ ಮಾಲಿಕರ ಮತ್ತು ಚಾಲಕರ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮೈಸೂರಿನ ರಾಮಾನುಜ ರಸ್ತಯ ನಿವಾಸಿ ಪ್ರವೀಣ್ ಶೆಟ್ಟಿ ಅವರ ಪುತ್ರಿ ಖ್ಯಾತ ಯುವ ಕ್ರೀಡಾಪಟು ಪೃಥ್ವಿ ಶೆಟ್ಟಿ ಅವರು ತ್ರೋಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಚಾಂಪಿಯನ್ ಶಿಪ್ ನಲ್ಲಿ ವಿಜೇತರು ಗಿದ್ದಾರೆ

80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಮಾನುಜ ರಸ್ತೆಯಲ್ಲಿನ ಶ್ರೀ ಶಿವರಾತ್ರೀಶ್ವರ ಅಟೋ ಮಾಲಿಕರ ಮತ್ತು ಚಾಲಕರ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮೈಸೂರಿನ ರಾಮಾನುಜ ರಸ್ತಯ ನಿವಾಸಿ ಪ್ರವೀಣ್ ಶೆಟ್ಟಿ ಅವರ ಪುತ್ರಿ ಖ್ಯಾತ ಯುವ ಕ್ರೀಡಾಪಟು ಪೃಥ್ವಿ ಶೆಟ್ಟಿ ಅವರು ತ್ರೋಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಚಾಂಪಿಯನ್ ಶಿಪ್ ನಲ್ಲಿ ವಿಜೇತರು ಗಿದ್ದಾರೆ ಇವರಿಗೆ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಅವರು ಗೌರವಿಸಿ ಸನ್ಮಾನಿಸಿದರುಈ ಸಂದರ್ಭದಲ್ಲಿ ಜನರಿಗಾಗಿ ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಕುಮಾರ್,. ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ, ಮಾಜಿ ನಗರಪಾಲಿಕೆ ಸದಸ್ಯರಾದ ಪಾರ್ಥಸಾರಥಿ, ಸಮಾಜ ಸೇವಕರಾದ ಪ್ರವೀಣ್ ಶೆಟ್ಟಿ, ಗೋಲ್ಡ್ ಸುರೇಶ್, ಗುಣಶೇಖರ್, ಇನ್ನಿತರರು ಉಪಸ್ಥಿತರಿದ್ದರು

80 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಮಾನುಜ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯರಾದ ಸುನೀಲ್ ಕುಮಾರ್ ಅವರ ಪತ್ನಿ ರಂಜಿತಾ ಸುನೀಲ್ ಕುಮಾರ್ ಅವರಿಗೆ ಜನರಿಗಾಗಿ ಸೇವಾ ಸಮಿತಿ ಅಧ್ಯಕ್ಷರಾದ ಮಹೇಶ್ ಕುಮಾರ್ ಮತ್ತು ಯುವ ಮುಖಂಡರಾದ ತೇಜಸ್ವಿ ನಾಗಲಿಂಗಸ್ವಾಮಿ ಅವರು ಗೌರವಿಸಿ ಸನ್ಮಾನಿಸಿದರು

80 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಮಾನುಜ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯರಾದ ಸುನೀಲ್ ಕುಮಾರ್ ಅವರ ಪತ್ನಿ ರಂಜಿತಾ ಸುನೀಲ್ ಕುಮಾರ್ ಅವರಿಗೆ ಜನರಿಗಾಗಿ ಸೇವಾ ಸಮಿತಿ ಅಧ್ಯಕ್ಷರಾದ ಮಹೇಶ್ ಕುಮಾರ್ ಮತ್ತು ಯುವ ಮುಖಂಡರಾದ ತೇಜಸ್ವಿ ನಾಗಲಿಂಗಸ್ವಾಮಿ ಅವರು ಗೌರವಿಸಿ ಸನ್ಮಾನಿಸಿದರು

Call Us Now
WhatsApp