ಎಸ್.ಎಂ. ಕೃಷ್ಣ ದತ್ತಿ ನಿಧಿಗೆ ಯುವ ಮುಖಂಡ ರಘುವೀರ್ ಎಸ್ ಗೌಡ 3 ಲಕ್ಷ ದೇಣಿಗೆ ಕರ್ನಾಟಕ ಸಂಘದಲ್ಲಿ ಸ್ಥಾಪಿತ ದತ್ತಿ ನಿಧಿ ಮೊತ್ತ 10ಲಕ್ಷ ರೂ.ಗೇರಿಕೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಎಸ್.ಎಂ.ಕೃಷ್ಣ ಹೆಸರಿನಲ್ಲಿ ಪ್ರಶಸ್ತಿ : ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಿರಿಯ ಮುತ್ಸುದ್ದಿ ಎಸ್.ಎಂ.ಕೃಷ್ಣ ಅವರ ಸ್ಮರಣಾರ್ಥವಾಗಿ ಕರ್ನಾಟಕ ಸಂಘದಲ್ಲಿ ಸ್ಥಾಪಿಸಿರುವ “ಎಸ್.ಎಂ. ಕೃಷ್ಣ ದತ್ತಿ ನಿಧಿ”ಗೆ ಕಾಂಗ್ರೆಸ್ ಯುವ ಮುಖಂಡ ರಘುವೀರ್ ಎಸ್.ಗೌಡ ಅವರು, 3 ಲಕ್ಷ ರೂ. ನೀಡಿದ್ದಾರೆ.ಎಸ್.ಎಂ.ಕೃಷ್ಣ ಅವರ ಅಭಿಮಾನಿಗಳು ಕರ್ನಾಟಕ ಸಂಘದಲ್ಲಿ ಕಳೆದ ವರ್ಷ 7 ಲಕ್ಷ ರೂ. ಮೊತ್ತದಲ್ಲಿ ಎಸ್.ಎಂ.ಕೃಷ್ಣ ದತ್ತಿ ನಿಧಿ ಸ್ಥಾಪಿಸಿದ್ದರು. ಈಗ ರಘುವೀರ್ ಅವರು ಈ ದತ್ತಿ ನಿಧಿಗೆ 3 ಲಕ್ಷ ರೂ. ದೇಣಿಗೆ ನೀಡಿದ್ದು, ದತ್ತಿ ನಿಧಿ ಮೊತ್ತ 10 ರೂ.ಗೆ ಏರಿಕೆಯಾಗಿದೆ.ಎಸ್.ಎಂ.ಕೃಷ್ಣ ಅವರ ಅಭಿಮಾನಿ ಆಗಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ರಘುವೀರ್ ಎಸ್. ಗೌಡ ಅವರು ಕೆಪಿಸಿಸಿ ಬೆಂಗಳೂರು ಕೇಂದ್ರ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಎಸ್.ಎಂ.ಕೃಷ್ಣ ಅವರು ಈ ನಾಡಿಗೆ ನೀಡಿರುವ ಕೊಡುಗೆಗಳು ಅವಿಸ್ಮರಣೀಯ. ಅವರ ಸಾಧನೆ ನಮಗೆ ದಾರಿದೀಪವಾಗಬೇಕು. ಅವರ ಹೆಸರು, ಸಾಧನೆಯನ್ನು ನೆನೆಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಕರ್ನಾಟಕ ಸಂಘದಲ್ಲಿ ಸ್ಥಾಪಿಸಿರುವ ಎಸ್.ಎಂ.ಕೃಷ್ಣ ದತ್ತಿ ನಿಧಿಗೆ 3 ಲಕ್ಷ ರೂ. ನೀಡಲಾಗಿದೆ ಎಂದು ಹೇಳಿದರು.ಶಿಕ್ಷಣ, ಆರೋಗ್ಯ, ಸಂಶೋಧನೆ, ಸಾಹಿತ್ಯ, ಕೃಷಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಸಾಧನೆ ಮಾಡಿದವರಿಗೆ ಎಸ್.ಎಂ.ಕೃಷ್ಣ ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಎಸ್.ಎಂ.ಕೃಷ್ಣ ದತ್ತಿ ನಿಧಿಯಿಂದ ಪ್ರಶಸ್ತಿ ನೀಡಲಾಗುತ್ತದೆ. ಎಸ್.ಎಂ.ಕೃಷ್ಣ ದತ್ತಿ ನಿಧಿಯ ಪ್ರಥಮ ವರ್ಷದ ಪ್ರಶಸ್ತಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಪಾತ್ರರಾಗಿದ್ದು ಮೇ 5 ರಂದು “ಎಸ್.ಎಂ.ಕೃಷ್ಣ” ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ.
*ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (KMF) ಮಹಿಳಾ ಹಾಲು ಉತ್ಪಾದಕರನ್ನುಸಬಲೀಕರಣಗೊಳಿಸಲು ಮತ್ತು ವೈಜ್ಞಾನಿಕವಾಗಿ ಹೈನುಗಾರಿಕೆ ನಡೆಸಲು ವಿವಿಧ ತರಬೇತಿ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳುವ ಬಗ್ಗೆ ಸಿ,ಎನ್,ಬಿಂದುಮಾಧವ ರಾವ್ ತಿಳಿಸಿದರು,
ಪಾವಗಡ: ವಿ ಎಸ್ ಎಸ್ ಎನ್ ಸದಸ್ಯರಾದ ಬಿಂದುಮಾಧವ ರಾವ್ ರವರು ಮಾತನಾಡುತ್ತಾ ನಿಡಗಲ್ ಹೋಬಳಿ ಸಿಕೆಪುರ ಗ್ರಾಮದ ಸೊಸೈಟಿ ವತಿಯಿಂದ ಸಿಕೆಪುರ ಹಾಲು ಉತ್ಪಾದಕರ ಮಹಿಳಾ ಸಂಘ ಸಿ ಕೆ ಪುರ ಸಂಘದಿಂದ ತುಮುಲು ಹಾಲು ಉತ್ಪಾದಕರ ಸಂಘ, ತುಮಕೂರು ಹಾಲು ಉತ್ಪಾದಕರ ಸಂಘ ಕೆಎಂಎಫ್ ಇವರ ವತಿಯಿಂದ ನಮಗೆ ಜನಪ್ರಿಯ ಮಾನ್ಯ ಶಾಸಕರು ಹಾಗೂ ತುಮುಲು ಅಧ್ಯಕ್ಷರಾದ ಹೆಚ್ ವಿ ವೆಂಕಟೇಶ್ ಹಾಗೂ ತುಮಕೂರು ಹಾಲು ಉತ್ಪಾದಕರ ಕೆಎಂಎಫ್ ಅಧ್ಯಕರಾದ ಶಾಸಕರು ನಮ್ಮ ಸಿಕೆಪುರ ಹಾಲು ಉತ್ಪಾದಕರ ಮಹಿಳಾ ಸಂಘಕ್ಕೆ ಕ್ಷೀರ ಸಂಜೀವಿನಿ ಅಡಿಯಲ್ಲಿ ಬಡ್ಡಿ ರಹಿತ ಸಾಲವನ್ನು ಸಿ ಕೆ ಪುರ ಸಂಘಕ್ಕೆ ಶಾಸಕರು 7 ಲಕ್ಷ ರೂಪಾಯಿಗಳು ಮಂಜೂರು ಮಾಡಿದ್ದಾರೆ ಸ್ಟೆಪ್ ಲೋನ್ ಅಧಿಕಾರಿಯದ ಮಧು ಮೇಡಂ ರವರು ಸಹ ಸಹಕಾರ ನೀಡಿದ್ದಾರೆ, ಹಾಗಾಗಿ ಈ ಒಂದು ಕ್ಷೀರ ಸಂಜೀವಿನಿ ಅಡಿಯಲ್ಲಿ ಸಾಲ ನೀಡುತ್ತಾರೆ ಮೊದಲನೇ ಬಾರಿಗೆ ಹೆಣ್ಣು ಮಕ್ಕಳಿಗೆ ಕೆಎಂಎಫ್ ಕಟ್ಟಡದಲ್ಲಿ ತರಬೇತಿ ಕೊಡುತ್ತಾರೆ ಮಹಿಳೆಯರಿಗೆ ತರಬೇತಿ ನೀಡಿ ಯಾವ ರೀತಿಯ ಹಸುಗಳು ಸಾಕಬೇಕು ಯಾವರೀತಿ ಸಾಲ ಪಡೆದು ಸಾಲದ ವ್ಯವಹಾರದ ಬಗ್ಗೆ ಎಲ್ಲಾ ಮಾಹಿತಿಗಳನ್ನು ಕೊಡುತ್ತಾರೆ, ಆದ್ದರಿಂದ ನಮ್ಮ ಸಿಕೆಪುರ ಗ್ರಾಮದಿಂದ 30 ಜನ ಮಹಿಳೆಯರನ್ನು ಕಳಿಸುತ್ತೇವೆ, ಈ ಗ್ರಾಮದ ಸೊಸೈಟಿ ವ್ಯಾಪ್ತಿಯಲ್ಲಿ ಸಿ ಕೆ ಪುರ, ಚನ್ನಸಾಗರದ ಹಟ್ಟಿ, ಉದ್ದಂಡಪ್ಪನ ಪಾಳ್ಯ, ದೇವರಹಟ್ಟಿ, ಈ ನಾಲ್ಕು ಹಳ್ಳಿಗಳಿಗೆ ಸೊಸೈಟಿ ಬರುತ್ತದೆ
ಎಲ್ಲಾ ರೈತರಿಗೂ ಕೂಡ ಬಡ್ಡಿ ರಹಿತವಾಗಿ 50,000 ಸಾಲ ಕೊಡುತ್ತೇವೆ, ಸಾಲ ಮರುಪಾವತಿ ಯಾವ ರೀತಿ ಪಡೆಯುತ್ತಾರೆ ಎಂದರೆ ತಿಂಗಳ ತಿಂಗಳು ನಾವು ಕಟ್ಟಿಕೊಂಡು ಹೋಗುಬೇಕು
ರೈತರಿಗೆ ಹೊಸ ಹಸುಗಳು ತರುವವರಿಗೆ ಮಾತ್ರ ಸಾಲ ಮಂಜೂರು ಮಾಡಿಕೊಡುತ್ತಾರೆ ಕ್ಷೀರ ಸಂಜೀವಿನಿ ಹಾಲು ಹೆಚ್ಚಿನದಾಗಿ ನಮ್ಮ ಸೊಸೈಟಿಗೆ ಜಾಸ್ತಿ ಬರಬೇಕು ಸ್ಟೆಪ್ ಲೋನ್ ಕ್ಷೀರ ಸಂಜೀವಿನಿ ಅಡಿಯಲ್ಲಿ 7 ಲಕ್ಷ ರೂಪಾಯಿಗಳು ಸಹಾಯ ಮಾಡುತ್ತಾರೆ, ಕೌಶಲ್ಯ ಅಭಿವೃದ್ಧಿ: ಹಸುಗಳ ನಿರ್ವಹಣೆ, ಆಧುನಿಕ ಹೈನುಗಾರಿಕೆ ತಂತ್ರಜ್ಞಾನ ಮತ್ತು ಹಾಲಿನ ಗುಣಮಟ್ಟ ಕಾಪಾಡುವ ಬಗ್ಗೆ ಕೆಎಂಎಫ್ ತರಬೇತಿ ನೀಡುತ್ತದೆ. ವಿಶೇಷವಾಗಿ ಎಚ್ ವಿ ವೆಂಕಟೇಶ್ ರವರು ತುಮುಲ್ ಅಧಿಕಾರಿಗಳ ಮಧು ಮೇಡಂ ರವರಿಗೆ ಹಾಗೂ ಪಾವಗಡ ಕೆ ಎಂ ಎಫ್ ತುಮುಲ್ ನಿರ್ದೇಶಕರಿಗೆ ಧನ್ಯವಾದಗಳು ತಿಳಿಸಿದರು,
ತುಮಕೂರು.ಮೇ.04:ಐದು ರಾಜ್ಯಗಳ ಚುನಾವಣೆ ಇರುವ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಒಕ್ಕೂಟ ಲೋಕಸಭಾ ವಿಶೇಷ ಅಧಿವೇಶದಲ್ಲಿ ಮಂಡಿಸಿದ ಮಹಿಳಾ ಮೀಸಲು ಮಸೂದೆ, ತೆರೆ ಮರೆಯಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡನೆಗೆ ಹೂಡಿದ ತಂತ್ರವಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ಕುಸುಮ ತಿಳಿಸಿದ್ದಾರೆ.ಈಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2023ರ ಸೆಪ್ಟಂಬರ್‌ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡನೆಯಾಗಿ,ಒಮ್ಮತದಿAದ ಅಂಗೀಕಾರವಾದ ಮಸೂದೆಯನ್ನು ಜಾರಿಗೆ ತರದೆ, ಐದು ರಾಜ್ಯಗಳ ಚುನಾವಣೆಯಲ್ಲಿ ಮತದಾರರ ಮುಂದೆ ಕಾಂಗ್ರೆಸ್ ಪಕ್ಷ ಮಹಿಳಾ ವಿರೋಧಿ ಎಂದು ಬಿಂಬಿಸುವ ಸಲುವಾಗಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಮಾಡಿದ ಕುತಂತ್ರವಾಗಿದೆ.ಈ ಸತ್ಯವನ್ನು ಜನರ ಮುಂದಿಡುವ ಸಲುವಾಗಿ ಕೆಪಿಸಿಸಿ ವತಿಯಿಂದ ಎಲ್ಲಾ ಜಿಲ್ಲೆಗಳಲ್ಲಿಯೂ ಮಾಧ್ಯಮಗಳು ಮತ್ತು ಜನರ ಮುಂದೆ ಇಂತಹ ಗೋಷ್ಠಿಗಳನ್ನು ಆಯೋಜಿಸಲಾಗುತ್ತಿದೆ ಎಂದರು.ಯುಪಿಎ ಸರಕಾರ ಸಿದ್ದಪಡಿಸಿದ ಮಹಿಳಾ ಬಿಲ್‌ನ್ನು ಅದೇ ಹೆಸರಿನಲ್ಲಿ 2023ರಲ್ಲಿ ಮಂಡಿಸಿ, ಒಪ್ಪಿಗೆ ಪಡೆದು, 2026ರ ಜನಗಣತಿ ನಂತರ ಕ್ಷೇತ್ರಗಳ ಪುನರ್ ವಿಂಗಡನೆ ಮಾಡಿ,ನಂತರ ಜಾರಿಗೆ ತರುವ ಮಾತುಗಳನ್ನಾಡಿದ್ದ ಕೇಂದ್ರ ಸರಕಾರ,ಐದು ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಜನರ ಬಳಿ ಹೋಗಲು ಮುಖವಿಲ್ಲದೆ, ಮತ್ತೊಮ್ಮೆ ನಾರಿ ಶಕ್ತಿ ವಂದನ್ ಹೆಸರಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸುವ ನಾಟಕವಾಡಿ,ಮತದಾರರನ್ನು ಮರಳು ಮಾಡಲು ಬಳಸಿಕೊಂಡಿದೆ.ನಿಜವಾದ ಮಹಿಳಾ ವಿರೋಧಿಗಳೆಂದರೆ ಅದು ಬಿಜೆಪಿ ಪಕ್ಷ,ಮಹಿಳೆಯರ ಬಗ್ಗೆ ಅಷ್ಟು ಕಾಳಜಿ ಇದ್ದರೆ ಈಗಾಗಲೇ ಅನುಮೋಧನೆ ಯಾಗಿರುವ ಬಿಲ್‌ನ ಪ್ರಕಾರ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಶೇ33ರಷ್ಟು ಮಹಿಳಾ ಮೀಸಲಾತಿಯನ್ನು ಕೂಡಲೇ ಜಾರಿಗೆ ತರಲಿ ಎಂದು ಕುಸುಮ ಸವಾಲು ಹಾಕಿದರು.ಕಾಂಗ್ರೆಸ್ ತನ್ನ 140 ವರ್ಷಗಳ ಇತಿಹಾಸದಲ್ಲಿ ಎಂದಿಗೂ ಮಹಿಳಾ ವಿರೋಧಿಯಾಗಿ ನಡೆದುಕೊಂಡಿಲ್ಲ.ಕಾAಗ್ರೆಸ್ ಪಕ್ಷದ ರಾಷ್ಟಿçÃಯ ಅಧ್ಯಕ್ಷರಾಗಿ ಅನಿಬೇಸೆಂಟ್‌ಅವರನ್ನು, ಪ್ರಧಾನಿಯಾಗಿ ಇಂದಿರಾಗಾAಧಿ,ಸ್ಪೀಕರ್ ಆಗಿ ಮೀರಾಕುಮಾರಿ, ರಾಷ್ಟçಪತಿ ಯಾಗಿ ಪ್ರತಿಭಾಪಾಟೀಲ್,ಗರ‍್ನರ್ ಆಗಿ ಸರೋಜಿನಿ ನಾಯ್ಡು ಹೀಗೆ ಕಾಂಗ್ರೆಸ್‌ನಿAದ ಅಧಿಕಾರ ಪಡೆದ ಮಹಿಳೆಯರ ದೊಡ್ಡ ದಂಡೇ ಇದೆ.ಆದರೆ ಬಿಜೆಪಿಯನ್ನು ಮುನ್ನೆಡೆಸುತ್ತಿರುವ ಆರ್.ಎಸ್.ಎಸ್.ನಲ್ಲಿ ಇದುವರೆಗೂ ಮಹಿಳೆಯರಿಗೆ ಅವಕಾಶವಿಲ್ಲ ಏಕೇ ?,ಮೋದಿ ಅವರಿಗೆ ನಿಜಕ್ಕೂ ಮಹಿಳೆಯರಿಗೆ ಅಧಿಕಾರ ನೀಡಬೇಕೆಂದಿದ್ದರೆ, ಅವರ ಸ್ಥಾನಕ್ಕೆ ಮಹಿಳೆಯರೊಬ್ಬರನ್ನು ಆಯ್ಕೆ ಮಾಡಿ, ನಂತರ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲಿ.ಹೀಗಿರುವ 543 ಕ್ಷೇತ್ರಗಳಲ್ಲಿಯೇ ಶೇ33ರಷ್ಟು ಸಂಸದರ ಸ್ಥಾನವನ್ನು ಮಹಿಳೆಯರಿಗೆ ಬಿಟ್ಟುಕೊಡಲಿ.ಮತ ರಾಕಜಕಾರಣಕೋಸ್ಕರ ಮಹಿಳಾ ಮೀಸಲಿನಂತಹ ಮಹತ್ವದ ಮಸೂದೆಯನ್ನು ಅಪಮಾನಿಸಬಾರದು ಎಂದರು.ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಮಾತನಾಡಿ,ಕೇವಲ ಐದು ರಾಜ್ಯಗಳ ಚುನಾವಣೆಯಲ್ಲಿ ಮತಗಳಿಸುವ ಉದ್ದೇಶದಿಂದ ಈಗಾಗಲೇ ಎರಡು ಸದನಗಳಲ್ಲಿ ಅನುಮೋಧನೆಗೊಂಡಿರುವ ಮಹಿಳಾ ಮೀಸಲು ಮಸೂದೆ ಪುನಃ ಮಂಡಿಸಿ, ಕಾಂಗ್ರೆಸ್ ಪಕ್ಷವನ್ನು ಮಹಿಳಾ ವಿರೋಧಿ ಎಂದು ಬಿಂಬಿಸಲು ಹೊರಟಿರುವ ಬಿಜೆಪಿ ಪಕ್ಷ ಮಹಿಳಾ ಸಬಲೀಕರಣಕ್ಕೆ ಬಿಜೆಪಿ ಕೊಡುಗೆ ಏನು ? ಎಂದು ಪ್ರಶ್ನಿಸಿದ ಅವರು,ಇದುವರೆಗೂ ಮಹಿಳೆಯರ ಪರವಾಗಿ ಇರುವ ಕಾಯ್ದೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ,, ನೆಹರು ಕಾಲದಿಂದ ಇಲ್ಲಿಯವರೆಗೂ ಪಕ್ಷದಲ್ಲಾಗಲಿ, ಸರಕಾರಗಳ ಆಡಳಿತದಲ್ಲಾಗಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶವನ್ನು ಕಾಂಗ್ರೆಸ್ ನೀಡಿದೆ.ಬಿಜೆಪಿಯ ಅಪಪ್ರಚಾರದ ವಿರುದ್ದ ಮಹಿಳಾ ಕಾಂಗ್ರೆಸ್ ಮತ್ತಷ್ಟು ಸತ್ಯವನ್ನು ಜನರ ಮುಂದಿಡುವ ಕೆಲಸವನ್ನು ಮಾಡಲಿದೆ ಎಂದರು.ಕೆಪಿಸಿಸಿಯ ಡಾ.ವನಿತಾ ಮಾತನಾಡಿ,ಕಾಂಗ್ರೆಸ್ ಮಹಿಳಾ ವಿರೋಧಿ ಎಂದು ಬಿಂಬಿಸುತ್ತಿರುವ ಬಿಜೆಪಿಯ ಹೇಳಿಕೆ ತಪ್ಪು ಎಂದು ಜನರಿಗೆ ತಿಳಿಸುವ ಸಲುವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಮಾಧ್ಯಮ ಗೋಷ್ಠಿ ಆಯೋಜಿಸಲಾಗುತ್ತಿದೆ. 2023ರಲ್ಲಿ 2011ರ ಜನಗಣತಿ ಅನ್ವಯ ಮಹಿಳಾ ಕ್ಷೇತ್ರಗಳ ವಿಂಗಡನೆ ಸರಿಯಲ್ಲ ಎಂದು ಹೇಳಿದ್ದ ಬಿಜೆಪಿ, ಐದು ರಾಜ್ಯಗಳ ಚುನಾವಣೆ ಬಂದ ತಕ್ಷಣ ಮಹಿಳಾ ಮೀಸಲು ಮಂಡನೆಗೆ ನಾಟಕ ಆರಂಭಿಸಿತ್ತು. ಇದರ ಹಿಂದಿನ ಸತ್ಯ ಅರಿತಿದ್ದ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಅದಕ್ಕೆ ಸೋಲುಂಟಾಗುವAತೆ ಮಾಡಿವೆ.ಮಹಿಳೆಯರ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ ಮೊದಲು ಉನಾವೋ, ಹತ್ರಾಸ್,ಮಣಿಪುರದಲ್ಲಿ ಪ್ರಾಣ, ಮಾನ ಕಳೆದುಕೊಂಡು ನರಳುತ್ತಿರುವ ಕುಟುಂಬಗಳಿಗೆ ನ್ಯಾಯ ದೊರಕಿಸಲಿ, ಎಸ್.ಐ.ಆರ್,ಮೂಲಕ ಹಿಂಬಾಗಿಲ ರಾಜಕಾರಣ ಗಟ್ಟಿಗಳಿಸಿಕೊಳ್ಳಲು ಹೊರಟಿದೆ ಎಂದರು.ಕೆಪಿಸಿಸಿ ಮತ್ತೊಬ್ಬ ಮುಖಂಡರಾದ ಶುಭ ಮಾತನಾಡಿ,ಮನಮೋಹನ್ ಸಿಂಗ್ ಸರಕಾರ ನಿರ್ಭಯ ಪ್ರಕರಣವನ್ನೇ ಕೇಂದ್ರವಾಗಿಟ್ಟುಕೊAಡು, ಅತ್ಯಾಚಾರಕ್ಕೆ ಒಳಗಾಗುವ ಹೆಣ್ಣು ಮಕ್ಕಳಿಗೆ ತ್ವರಿತ ನ್ಯಾಯ ಒದಗಿಸಲು ನಿರ್ಭಯ ಕಾಯ್ದೆ ಜಾರಿಗೆ ತಂದು, ಅದಕ್ಕಾಗಿ ಸುಮಾರು 4000 ಕೋಟಿ ರೂಗಳನ್ನು ಮೀಸಲಿಟ್ಟಿತ್ತು. ಆದರೆ ಮೋದಿ ಸರಕಾರ ಆ ಹಣವನ್ನು ತನ್ನ ಪ್ರಚಾರಕ್ಕೆ ಬಳಕೆ ಮಾಡಿಕೊಂಡಿದೆ.ಇದರ ಬಗ್ಗೆ ಬಿಜೆಪಿ ಮಹಿಳಾ ಮುಖಂಡರಿAದ ಚಕಾರವಿಲ್ಲ. ಲೋಕಸಭೆಯಲ್ಲಿ ಬಿಜೆಪಿ ಮಂಡಿಸಿದ್ದು ಮಹಿಳಾ ಮಸೂದೆಯಲ್ಲ. ಬಿಜೆಪಿ ಪುರುಷ ಸಂರಕ್ಷಣಾ ಮಸೂದೆ ಎಂದು ಲೇವಡಿ ಮಾಡಿದರು.ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ,ಬಿಜೆಪಿ ಪಕ್ಷ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವನ್ನಾಗಿಸಲು ಹೊರಟಿದೆ.ಇದನ್ನು ತಡೆಯುವ ನಿಟ್ಟಿನಲ್ಲಿ ಇಂದು ಕೆಪಿಸಿಸಿ ವತಿಯಿಂದ ಪ್ರತಿ ಜಿಲ್ಲೆಯಲ್ಲಿಯೂ ಅಭಿಯಾನ ನಡೆಸಿ, ಜನರಿಗೆ ಸತ್ಯ ತಿಳಿಸುವ ಪ್ರಯತ್ನ ಮೊದಲ ಹಂತದಲ್ಲಿ ನಡೆಸಿದ್ದೇವೆ.ಎರಡನೇ ಹಂತದಲ್ಲಿ ಶಾಲಾ, ಕಾಲೇಜುಗಳಲ್ಲಿ ಯುವಜನರಿಗೆ ಮಹಿಳಾ ಮಸೂದೆಯ ಹಿಂದಿನ ಕಹಿ ಸತ್ಯಗಳನ್ನು ಸಂವಾದ, ವಿಚಾರ ಸಂಕಿರಣದ ಮೂಲಕ ಮನವರಿಕೆ ಮಾಡಿಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತ, ವಿಜಯಲಕ್ಷಿö್ಮ, ಎಸ್ಸಿ ಸೇಲ್‌ನ ಲಿಂಗರಾಜು, ಅಲ್ಪಸಂಖ್ಯಾತರ ಘಟಕದ ಇರ್ಫಾನ್ ಅಹಮದ್, ಮಂಜುನಾಥ್, ಶಿವಾಜಿ, ಸೇವಾದಳದ ಭೈಲಪ್ಪ, ಶಿವಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಾವಗಡ: ‘ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನದಿಂದ ಮಹಿಳೆಯರಿಗೆ ಪುರುಷರಿಗೆ ಸಮಾನತೆ ನೋಡುವ ವ್ಯವಸ್ಥೆ ಅಂಬೇಡ್ಕರ್ ಮಾಡಿದ್ದಾರೆ ಹೆಣ್ಣು ಮಕ್ಕಳಿಗೆ ವೇದಿಕೆ ಕೊಡಿ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು’ ಎಂದು ಡಿ ಎಸ್ ಎಸ್ ನಾರಾಯಣಪ್ಪ ತಿಳಿಸಿದರು. ಪಾವಗಡ ತಾಲೂಕಿನ ದವಡಬೆಟ್ಟ ಗ್ರಾಮದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ 135 ನೇ ಜಯಂತಿ ಹಾಗೂ ಡಾ”ಹಸಿರು ಕ್ರಾಂತಿಯ ಬಾಬು ಜಗಜೀವನ್ ರಾಮ್ ಜಯಂತಿಯಲ್ಲಿ ಜೈ ಭೀಮ್ ಯುವಕರ ಬಳಗದ ವತಿಯಿಂದ ಮಹಿಳೆಯರ ಕುಂಭಮೇಳವನ್ನು ಹೊತ್ತು ಯುವಕರು ತಮಟೆ ಸದ್ದಿಗೆ ಹೆಜ್ಜೆ ಹಾಕುತ್ತಾ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಿದರು , ಹನುಮಂತರಾಯಪ್ಪ ಸಿ ಕೆ ಪುರ ಕಲಾವಿದ ಇವರ ತಂಡದಿಂದ ಮತ್ತು ಮಹಿಳೆಯ ವಿದ್ಯಾರ್ಥಿಗಳಿಂದ ಹಾಡಿನ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು, ರಾಜ್ಯ ಸಂಪನ್ಮೂಲ ವ್ಯಕ್ತಿ ನವೀನ್ ಕಿಲಾರ್ಲಹಳ್ಳಿ ಇವರು ನಿರೂಪಣೆಯಾಗಿ ವೇದಿಕೆಯನ್ನು ಅಲಂಕರಿಸಿದ್ದಾರೆ, ನಂತರ ಡಿಎಸ್ಎಸ್ ನಾರಾಯಣಪ್ಪ ಮಾತನಾಡುತ್ತಾ ತಾಲ್ಲೂಕಿನ ಹಳ್ಳಿಯಲ್ಲಿ ದವಡಬೆಟ್ಟ ಗ್ರಾಮದಲ್ಲಿ ಭಾನುವಾರ ನಡೆದ ಜಯಂತಿಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ ಮಾಡುವ ಉದ್ದೇಶವಾಗಿ ಇಳಿದಿದ್ದೀವಿ ಇವತ್ತು ನಾವು ಸಮಾನತೆ ನೋಡುವ ಒಂದು ವ್ಯವಸ್ಥೆ ನಾವು ಇಳಿದಿದ್ದೀವಿ ಅದು ತತ್ವ ಸಿದ್ಧಾಂತ ಇನ್ನು ಮುಂದೆ ಇದೇ ತರಹ ಮಾಡಿದರೆ ಈ ವೇದಿಕೆಯಲ್ಲಿ ಎರಡು ಅಥವಾ ಮೂರು ಜನ ಹೆಣ್ಣು ಮಕ್ಕಳನ್ನು ಕರೆಸಿ ವೇದಿಕೆ ಮೇಲೆ ಕೂರಿಸಿ ಅಂಬೇಡ್ಕರ್ ರವರು ಸಮಾನತೆ ಕೊಟ್ಟಿದ್ದಾರೆ ಆದರೆ ನಾವು ಹೇಗೆ ಸಮಾನತೆ ಕಾಣುವುದು, ತಾಲೂಕಿನ ಹಲವಾರು ಎಲ್ಲಾ ಹಳ್ಳಿಗಳಲ್ಲಿ ನೋಡುತ್ತಾ ಇದ್ದೇವೆ ತುಂಬಾ ತುಂಬಾ ಚೆನ್ನಾಗಿ ಆಚರಣೆ ಮಾಡುತ್ತಿದ್ದಾರೆ, ಈ ತಾಲೂಕಿನಲ್ಲಿ ಏನು ನಡಿತಾ ಇತ್ತು ಏನು ನಡೆದಿದೆ ಹಿಂದೆ ಈಗ ಎಚ್ಚೆತ್ತುಕೊಂಡು ಎಲ್ಲಾ ಕಡೆಗನು ನಮ್ಮ ಸಮುದಾಯದವರು ಎಚ್ಚರಿಕೆಯಿಂದ ಎದ್ದಿದ್ದಾರೆ, ನಮಗೆ ನಾವೇ ಸೀಮಿತಾಗಬಾರದು ನಿಮ್ಮಲ್ಲಿ ಹಲವಾರು ಮಂದಿಗಳು ಇರುತ್ತಾರೆ ಸವರ್ಣಿಯರ ನಿಮ್ಮ ಸ್ನೇಹಿತರನ್ನು ವೇದಿಕೆಗೆ ಕರೆಯಬೇಕು ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಬಗ್ಗೆ ಇತಿಹಾಸ ತಿಳಿದುಕೊಳ್ಳಬೇಕು ಅದು ಅವರಿಗೆ ಅರ್ಥವಾಗಬೇಕು ಎಂದರು ಎಲ್ಲಾ ಜಾತಿಗಳು ಸಮಾನವಾಗಿ ಇರೋಣ ಅಂತ ನಾವು ಭಾವಿಸಿದರೆ ಆದರೆ ನಮ್ಮನ್ನು ಎಲ್ಲಾ ಒಂದು ಕಡೆಗೆ ದೂಕುತ್ತಾರೆ ಅಸ್ಪೃಶ್ಯತೆ ಇನ್ನೂ ಸಹ ನಮ್ಮ ತಾಲೂಕಿನಲ್ಲಿ ಇದೆ, ಎಸ್ ಎಸ್ ಕೆ ರಂಗಮಂದಿರದಲ್ಲಿ ಒಬ್ಬರಿಗೂ ಸಹ ಇವತ್ತಿಗೆ ಸಹ ಮಾದಿಗರಿಗೆ ಅಥವಾ ವಲೇರಿಗಾಗಲಿ ಸದಸ್ಯತ್ವ ಕೊಟ್ಟಿಲ್ಲ ನಾನು ಸರ್ಕಾರದ ಲ್ಯೂಮಿನೇಷನ್ ಕಮಿಷನ್ ಗೆ ಅರ್ಜಿ ಬರೆದವು ಅಲ್ಲಿಗೆ ಬರದಾಗ ಅಲ್ಲಿಂದ ಡಿಸಿ ರವರು ಮಾದಿಗರಿಗೆ ಸದಸ್ಯತ್ವಕ್ಕೆ ತೆಗೆದುಕೊಳ್ಳಬೇಕು ಎಂದು ಆರ್ಡರ್ ಮಾಡಿದರು, ಇವತ್ತು ಕಾರ್ಯಕಾರಿ ಮಂಡಳಿಯಲ್ಲಿ ಸದಸ್ಯತ್ವವನ್ನು ಮಾದಿಗರಿಗೆ ಕೊಡಲೇಬೇಕೆಂದು ಕಾನೂನಿನಲ್ಲಿ ಇದೆ ಎಂದು ತಿಳಿಸಿದರು, ನಿವೃತಾ ಪ್ರಾಂಶುಪಾಲರಾದ ಬಸವಲಿಂಗಪ್ಪ ಮಾತನಾಡುತ್ತಾ ಈ ದಿನ ಎರಡು ಕಣ್ಣುಗಳು ನಮ್ಮ ಮುಂದೆ ಇದ್ದಾರೆ ಡಾಕ್ಟರ್ ಬಿಆರ್ ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿ ಬಾಬು ಜಗಜೀವನ್ ರಾಮ್ ರವರು ಈ ಭಾರತ ದೇಶ ಕಂಡಂತಹ ಅತ್ಯಂತ ದೊಡ್ಡ ಪ್ರಮುಖ ನಾಯಕರು ಒಬ್ಬರು ಈ ದೇಶದ ಜಾತಿಯ ಪರಿಶಿಷ್ಟ ಖ್ಯಾತಿಯ ಪರಿಶಿಷ್ಟ ವರ್ಗದ ಅಥವಾ ಕೆಳ ಜಾತಿಯ ಆತ್ಮ ವಿಮೋಚನೆಗಾಗಿ ಹೋರಾಡಿದ್ದಾರೆ, ಇನ್ನೊಬ್ಬರು ಈ ದೇಶದ ರಾಜಕೀಯದಲ್ಲಿ ಅಗ್ರಗಣ್ಯರಾಗಿ ತೊಡಗಿಸಿಕೊಳ್ಳುತ್ತಾ ಹೋಗುತ್ತಾರೆ ಅಂಬೇಡ್ಕರ್ ರವರಿಗೂ ಬಾಬು ಜಗಜೀವನ್ ರಾಮ್ ರವರಿಗೂ 17 ವರ್ಷ ಹೆಚ್ಚು ಕಡಿಮೆ ವಯಸ್ಸು ಆದರೆ ಅಂಬೇಡ್ಕರ್ ಅವರ ದೊಡ್ಡವರು ಬಾಬು ಜಗಜೀವನ್ ರಾಮ್ ಚಿಕ್ಕವರು ಅವರಿಬ್ಬರೂ ಅತ್ಯಂತ ಕೆಳ ಜಾತಿಯಿಂದ ಬಂದವರು ಜಾತಿ ತಾರತಮ್ಯವನ್ನು ಅನುಭವಿಸಿದವರು ಮೇಲುಜಾತಿ ಕೆಳ ಜಾತಿ ಎನ್ನುವ ಆಕಾಲಘಟ್ಟದಲ್ಲಿ ಬದುಕಿರುವಂತಹ ಮಹನೀಯರು ಅವನ್ನೆಲ್ಲಾ ಮೀರಿ ಈ ದೇಶಕ್ಕೆ ಹೆಸರು ಆಗಿರುವಂತಹ ನಾಯಕರಾಗಿದ್ದಾರೆ ಅಂದರೆ ಅವರ ಆತ್ಮಸ್ಥೈರ್ಯ ಆತ್ಮಶಕ್ತಿ ಒಂದು ಸಾರಿ ಆಲೋಚನೆ ಮಾಡಬೇಕು ಎಂದು ಹೆಚ್ಚಿನದಾಗಿ ವಿಷಯ ತಿಳಿಸಿದರು, ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಸಿ ಕೆ ತಿಪ್ಪೇಸ್ವಾಮಿ ಮಾತನಾಡುತ್ತಾ ಯಾರು ಹರಿಜನ ಪದ ಬಳಸುತ್ತಾರೆ ಬಳಸಬಾರದು ಬಳಸಿದರೆ ಅವರ ವಿರುದ್ಧ ಕಾನೂನು ಪ್ರೀತಿಯಲ್ಲಿ ಕೇಸ್ ಹಾಕಬಹುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಬಹಳ ಶಕ್ತಿಯುತವಾಗಿ ಒಂದು ಸಮಾಜವನ್ನು ಕಟ್ಟಬೇಕು ಅಂತ ಹೇಳಿದೆ, ಅದಕ್ಕೆ ಬಹಳ ಮುಖ್ಯ ಮಹಿಳೆಯರು ಮಹಿಳಾ ಮೀಸಲಾತಿ ಗೋಸ್ಕರ ನೇ ಅವರು ಕಾನೂನು ಮಂತ್ರಿ ಪದವಿಗೆ ಇಂದು ಕೋರ್ಟ್ ಬಿಲ್ ಎನ್ನುವ ಮುಖ್ಯಾಂಶಗಳು ಇರುತ್ತವೆ ಅದರಲ್ಲಿ ಮಹಿಳೆಯರ ಹಕ್ಕುಗಳ ರಕ್ಷಣೆ ಇರುತ್ತದೆ ಅದನ್ನು ಪಾಸ್ ಮಾಡಲಿಲ್ಲ ಅಂತ ಕಾನೂನು ಪದವಿಗೆ ರಾಜೀನಾಮೆ ಕೊಟ್ಟು ಹೊರಗಡೆ ಬರುತ್ತಾರೆ ಅಂದರೆ ಮಹಿಳೆಯರಲ್ಲಿ ಶಕ್ತಿಯನ್ನು ಕಂಡುಕೊಂಡಿದ್ದಾರೆ ಎಂದು ಹೆಚ್ಚಿನದಾಗಿ ತಿಳಿಸಿದರು, ಈ ಸಂದರ್ಭದಲ್ಲಿ ನರಸಿಂಹಪ್ಪ ಮಾದರ್ ಮಹಾಸಭಾ ತಾಲೂಕು ಅಧ್ಯಕ್ಷರು, ಮಲ್ಲಿಕಾರ್ಜುನ ಗ್ರಾ ಪಂ ಮಾಜಿ ಅಧ್ಯಕ್ಷರು, ಅವಿನಾಶ ದಲಿತ ಮುಖಂಡರು, ಪೆದ್ದಣ್ಣ ಡಿಎಸ್ಎಸ್ ತಾ ಸಂಚಾಲಕರು ಕೃಷ್ಣಪ್ಪ ಜಿ, ಎಸ್ ಎಸ್ ಕೆ ನಾಗರಾಜು, ನರಸಿಂಹಪ್ಪ ಕಡಪಲಕೆರೆ, ಗಂಗಾಧರ ಪಳವಳ್ಳಿ, ವೆಂಕಟರಮಣ ಚಿನ್ನಮ್ಮನಹಳ್ಳಿ, ಮೈಲಾರಪ್ಪ, ಅಂಜನ್, ನಾಗರಾಜು ಕೆಎಂ, ಜೈ ಭೀಮ್ ಯುವಕರ ಬಳಗ ಡಿಎಂ ನರೇಶ್, ಗೋವಿಂದರಾಯ, ಲಕ್ಷ್ಮಿಪತಿ, ನರೇಶ ಡಿಎನ್, ನಾಗರಾಜು ಡಿಜಿ, ದುಗ್ಗಮ್ಮ ಗ್ರಾ ಪಂ ಮಾಜಿ ಸದಸ್ಯರು, ಭುವನೇಶ್ವರಿ ಆಶಾ ಕಾರ್ಯಕರ್ತೆ, ಹಾಗೂ ಊರಿನ ಯುವಕರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು, ವರದಿ ರಾಮಪ್ಪ ಸಿಕೆಪುರ ಕಲ್ಪತರ ನ್ಯೂಸ್ ಪಾವಗಡ
ಜೆ ಸಿ ಐ ತುಮಕೂರು ಮೆಟ್ರೋ ವತಿಯಿಂದ ಕಾರ್ಮಿಕ ದಿನಾಚರಣೆ ಪ್ರಯುಕ್ತ ಪೌರಕಾರ್ಮಿಕರು ಹಾಗೂ ಆರೋಗ್ಯ ಕೇಂದ್ರ ಸಿಬ್ಬಂದಿ ಹಾಗೂ ವಿವಿಧ ಕ್ಷೇತ್ರದ ಕಾರ್ಮಿಕರಿಗೆ ಸನ್ಮಾನಿಸಲಾಯಿತು ಜೆಸಿಐ ತುಮಕೂರು ಮೆಟ್ರೋ ವತಿಯಿಂದ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು, ಮೀಡಿಯಾ ಮಾಧ್ಯಮ ಪ್ರತಿನಿಧಿಗಳು, ಆರೋಗ್ಯ ಕೇಂದ್ರದ ಸಿಬ್ಬಂದಿ, ಸೆಕ್ಯುರಿಟಿ ಸಿಬ್ಬಂದಿ, ಹೋಮ್ ಗಾರ್ಡ್ ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜೆಸಿ ಮಮತಾ ರಾಜ್, ಕಾರ್ಯದರ್ಶಿ ಜೆಸಿ ಸುನೀತ್ ರಾಜ್, ಪ್ರಾಜೆಕ್ಟ್ ಡೈರೆಕ್ಟರ್ ಜೆಸಿ ಸದಾನಂದ, ಗಣೇಶ್ ಟೂರ್ಸ್ & ಟ್ರಾವೆಲ್ಸ್ ಮಾಲೀಕರು ಹಾಗೂ ಘಟಕದ ಪೂರ್ವ ಅಧ್ಯಕ್ಷರಾದ ಜೆಸಿ ಶಿವಕುಮಾರ ಸ್ವಾಮಿ ಮತ್ತು ಜೆಸಿ ವೇಣುಗೋಪಾಲ್ ಸರ್, ವೈಸ್ ಪ್ರೆಸಿಡೆಂಟ್ಸ್‌ಗಳಾದ ಜೆಸಿ ಲಕ್ಷ್ಮಿ, ಜೆಸಿ ಮಧುಸೂದನ್, ಜೆಸಿ ದೀಪಕ್, ಜೆಸಿ ನಾಗೇಂದ್ರನಾಥ್, ಖಜಾಂಚಿಗಳಾದ ಜೆಸಿ ಪ್ರಿಯ ಗೋಕುಲ್ ಹಾಗೂ ಸದಸ್ಯರಾದ ಜೆಸಿ ಅನುರಮೇಶ್ ಮತ್ತು ಜೆಸಿ ಆನಂದ್ ಉಪಸ್ಥಿತರಿದ್ದು, ಕಾರ್ಮಿಕರ ಸೇವೆಯನ್ನು ಗೌರವಿಸಿದರು.ಇದೇ ಸಂದರ್ಭದಲ್ಲಿ ಚಾಲಕರಿಗೆ ಸ್ಟೈನ್ಲೆಸ್ ಸ್ಟೀಲ್ ನೀರಿನ ಬಾಟಲಿಗಳನ್ನು ವಿತರಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ನಗರದತ್ತ ಸಣ್ಣ ಹೆಜ್ಜೆ ಇಡುವ ಪ್ರಯತ್ನ ಮಾಡಲಾಯಿತು
ಮುಖ್ಯಮಂತ್ರಿ Siddaramaiah ಅವರು ಇಂದು ಎಲ್ಲಾ ಇಲಾಖೆಗಳ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು / ಕಾರ್ಯದರ್ಶಿಗಳ ಸಭೆ ನಡೆಸಿ, ಹಲವು ಮಹತ್ವದ ಸೂಚನೆಗಳನ್ನು ನೀಡಿದರು. • ರಾಜ್ಯದ ಆಡಳಿತ ಸಮರ್ಪಕವಾಗಿ ನಡೆಯಲು ಇಲಾಖಾ ಕಾರ್ಯದರ್ಶಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇದನ್ನು ಸಂವಿಧಾನದಲ್ಲಿಯೇ ಉಲ್ಲೇಖಿಸಲಾಗಿದೆ. ಸಂವಿಧಾನದ ಆಶಯಗಳ ಪ್ರಕಾರ ಕಾರ್ಯ ನಿರ್ವಹಿಸಬೇಕಾದುದು ಎಲ್ಲಾ ಕಾರ್ಯದರ್ಶಿಗಳ ಕರ್ತವ್ಯವಾಗಿದೆ. ಸಂವಿಧಾನಕ್ಕೆ ವಿರುದ್ಧವಾದ ಯಾವುದೇ ಕಾರ್ಯವನ್ನು ಮಾಡಬಾರದು.• ವಲ್ಲಭಬಾಯ್ ಪಟೇಲ್ ಅವರು ʻಕಾರ್ಯದರ್ಶಿಗಳು ನಿರ್ಭಯವಾಗಿ ಸ್ವತಂತ್ರವಾಗಿ ತಮ್ಮ ಅಭಿಪ್ರಾಯಗಳನ್ನು ಮಂತ್ರಿಗಳಿಗೆ ತಿಳಿಸಬೇಕು. ಮಂತ್ರಿ ಅಸಮಾಧಾನಗೊಳ್ಳುತ್ತಾರೆ ಎಂದು ಸತ್ಯ ಹೇಳುವುದರಿಂದ ಹಿಂಜರಿಯಬಾರದುʼ ಎಂದು ಸಂವಿಧಾನ ಸಭೆಯಲ್ಲಿ ಹೇಳಿದ್ದರು. ಇದರಂತೆ ಹಿರಿಯ ಅಧಿಕಾರಿಗಳು ನಿಮ್ಮ ಅಭಿಪ್ರಾಯಗಳನ್ನು ನಿರ್ಭಯವಾಗಿ, ಸ್ವತಂತ್ರವಾಗಿ, ಸತ್ಯವಾಗಿ ಹೇಳಿ. • ಅಧಿಕಾರಿಗಳು ಯಾವತ್ತೂ ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ನೀಡಬಾರದು & ಸರ್ಕಾರವನ್ನು ತಪ್ಪು ಹಾದಿಗೆ ಎಳೆಯಬಾರದು. ನಮ್ಮ ನಿಲುವುಗಳು, ತೀರ್ಮಾನಗಳು ಯಾವತ್ತೂ ಜನಪರವಾಗಿರಬೇಕು. ಅಧಿಕಾರಿಗಳು 30-35 ವರ್ಷಗಳ ಕಾಲ ಆಡಳಿತ ವ್ಯವಸ್ಥೆಯಲ್ಲಿದ್ದರೆ, ಜನಪ್ರತಿನಿಧಿಗಳು ಕೇವಲ 5 ವರ್ಷಗಳ ಕಾಲ ಮಾತ್ರ ಇರುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ. • ಬಜೆಟ್ ನಲ್ಲಿ ಮಾಡಿರುವ ಘೋಷಣೆಗಳನ್ನು ಜಾರಿಗೊಳಿಸುವ ಕಾರ್ಯ ಅಧಿಕಾರಿಗಳದ್ದು. ಕಳೆದ ವರ್ಷದ ಬಜೆಟ್‌ನ 15 ಘೋಷಣೆಗಳ ಜಾರಿ ಇನ್ನೂ ಆಗಿಲ್ಲ. ಇದಕ್ಕೆ ಯಾರು ಹೊಣೆ? ಈ ವರ್ಷದ ಬಜೆಟ್‌ನಲ್ಲಿ 218 ಹೊಸ ಘೋಷಣೆಗಳು ಸೇರಿದಂತೆ ಒಟ್ಟಾರೆ 565 ಘೋಷಣೆಗಳನ್ನು ಮಾಡಿದ್ದೇವೆ. ಬಜೆಟ್‌ನ ಎಲ್ಲಾ ಘೋಷಣೆಗಳನ್ನು ಅದೇ ವರ್ಷ ಜಾರಿಗೊಳಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಬಜೆಟ್ ಘೋಷಣೆಗಳು ಯಾವುದೇ ಕಾರಣಕ್ಕೂ ಅನುಷ್ಠಾನಗೊಳ್ಳದೆ ಇರಬಾರದು. ಅನುಷ್ಠಾನದಲ್ಲಿನ ಪ್ರಾಯೋಗಿಕ ತೊಡಕುಗಳನ್ನು ನೇರವಾಗಿ ನನ್ನ ಅಥವಾ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರಬೇಕು. • 2026-27ನೇ ಸಾಲಿನ ಬಜೆಟ್ ನಲ್ಲಿನ ಘೋಷಣೆಗಳ ಪೈಕಿ ಕೇವಲ 5 ಘೋಷಣೆಗಳ ಬಗ್ಗೆ ಮಾತ್ರ ಸರ್ಕಾರಿ ಆದೇಶ ಮಾಡಲಾಗಿದೆ. ಮೇ ತಿಂಗಳ ಒಳಗಾಗಿ ಎಲ್ಲಾ ಸರ್ಕಾರಿ ಆದೇಶಗಳನ್ನು ಜಾರಿಗೊಳಿಸಿ, ಅನುಷ್ಠಾನ ಕಾರ್ಯ ಆರಂಭಿಸಬೇಕು ಇಲ್ಲದಿದ್ದರೆ ಆಯಾ ಕಾರ್ಯದರ್ಶಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು. • ಅಧಿಕಾರಕ್ಕೆ ಬಂದ ಬಳಿಕ ರಾಜ್ಯಮಟ್ಟದಲ್ಲಿ ಎರಡು ಜನಸ್ಪಂದನ ಸಭೆಯಲ್ಲಿ ಸ್ವೀಕರಿಸಲಾಗಿದ್ದ 15,334 ಸ್ವೀಕೃತಿಗಳ ಪೈಕಿ 15,295 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿಯಿರುವ 45 ಅರ್ಜಿಗಳನ್ನು ವಿಲೇವಾರಿ ಮಾಡಬೇಕು. • ಸಾರ್ವಜನಿಕ ಕುಂದುಕೊರತೆ (IPGRS)ಯಡಿ 3,27,052 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 3,17,576 ವಿಲೇವಾರಿ ಮಾಡಲಾಗಿದೆ. 1,828 ಅರ್ಜಿಗಳ ವಿಲೇವಾರಿ ನಿಗದಿತ ಕಾಲಾವಧಿ ಮುಗಿದಿದೆ. ಸಾರ್ವಜನಿಕರ ಕುಂದುಕೊರತೆಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡದಿದ್ದರೆ ಜನರಿಗೆ ಸರ್ಕಾರದ ಮೇಲಿನ ನಂಬಿಕೆಯೇ ಹೊರಟು ಹೋಗುತ್ತದೆ. ಇದಕ್ಕೆ ಅವಕಾಶ ಮಾಡಬಾರದು. ಇದೇ ರೀತಿ ಸಕಾಲ ಅಡಿ ಸ್ವೀಕರಿಸಲಾಗುವ ಅರ್ಜಿಗಳನ್ನು ಸಹ ಸಕಾಲದಲ್ಲಿಯೇ ವಿಲೇವಾರಿ ಮಾಡಬೇಕು. • ನೇಮಕಾತಿಗೆ ಮಂಜೂರಾತಿ ನೀಡಲಾಗಿರುವ ಹುದ್ದೆಗಳ ಭರ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಆರ್ಥಿಕ ಇಲಾಖೆಯಿಂದ 24,300 ಹುದ್ದೆಗಳ ಭರ್ತಿಗೆ ಮಂಜೂರಾತಿ ನೀಡಲಾಗಿದೆ. ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ವೃಂದದಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗದೇ ಬಾಕಿಯಿರುವ 32,132 ಹುದ್ದೆಗಳಿವೆ. ಕೆಲವು ಇಲಾಖೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿ ಪರಿಷ್ಕರಣೆ ಬಾಕಿಯಿದ್ದು, ಇದನ್ನು ಆದಷ್ಟು ಬೇಗನೆ ಮುಗಿಸಬೇಕು. • ವಿವಿಧ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಡಿ 2025-26 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ರೂ. 22,768 ಕೋಟಿ ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರ ರೂ.16,729 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರದಿಂದ ರೂ.11,367 ಕೋಟಿ ಅನುದಾನ ಬಿಡುಗಡೆಗೆ ಬಾಕಿಯಿದೆ. ಈ ಅವಧಿಯಲ್ಲಿ ಒಟ್ಟಾರೆ ರೂ.42,222 ಕೋಟಿ ಲಭ್ಯ ಅನುದಾನವಿದ್ದು, ರೂ.38,236 ಕೋಟಿ ವೆಚ್ಚ ಮಾಡಲಾಗಿದೆ. ಅನುದಾನವನ್ನು ನಿಗದಿತ ಅವಧಿಯ ಒಳಗಾಗಿ ಖರ್ಚು ಮಾಡಲು ಕ್ರಮ ಕೈಗೊಳ್ಳಬೇಕು. • ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ರೂ.2 ಕೋಟಿ ವರೆಗೆ ಮೀಸಲಾತಿ ಕಲ್ಪಿಸಲಾಗಿದೆ. ವಿವಿಧ ಕಾಮಗಾರಿಗಳನ್ನು ಒಟ್ಟು ಸೇರಿಸಿ ಪ್ಯಾಕೇಜ್ ಮಾಡುವ ಮೂಲಕ ಮೀಸಲಾತಿ ತಪ್ಪಿಸಲು ಅವಕಾಶ ನೀಡಬಾರದು. ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು. ಕಾಮಗಾರಿ ವಿಳಂಬದಿಂದ ನಿರ್ಮಾಣ ವೆಚ್ಚ ಹೆಚ್ಚಳಕ್ಕೆ ಅವಕಾಶ ಮಾಡಬಾರದು.• ಈ ವರ್ಷ ಮಳೆ ಶೇ.5ರಷ್ಟು ಮಳೆ ಕಡಿಮೆಯಾಗುವ ಸಾಧ್ಯತೆಯಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಪರಿಸ್ಥಿತಿ ಬಗ್ಗೆ ನಿರಂತರ ನಿಗಾ ವಹಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ಸಭೆ ನಡೆಸಬೇಕು. ತಮ್ಮ ಉಸ್ತುವಾರಿಯಲ್ಲಿನ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವುದು ಆಯಾ ಕಾರ್ಯದರ್ಶಿಗಳ ಜವಾಬ್ದಾರಿಯಾಗಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗಬಾರದು.• ಅಧಿಕಾರಿಗಳು ರಾಜಕಾರಣಿಗಳ ಓಲೈಕೆ ಮಾಡಲು ಹೋಗಬಾರದು, ಇದು ಸರ್ವಾಧಿಕಾರಕ್ಕೆ ಹಾದಿ ಮಾಡುತ್ತದೆʼ ಎಂದು ಅಂಬೇಡ್ಕರ್ ಅವರು ಎಚ್ಚರಿಕೆ ನೀಡಿದ್ದರು. ಅದರಂತೆ ನೀವು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಿ. ಸಚಿವರಿಗೆ ಕಾನೂನಿನ ವ್ಯಾಪ್ತಿಯೊಳಗೆ ಸಲಹೆಗಳನ್ನು ನೀಡಿ. ಸರ್ಕಾರಕ್ಕೆ ಒಳ್ಳೆಯ ಹೆಸರು ತರುವುದು ಕಾರ್ಯದರ್ಶಿಗಳ ಕಾರ್ಯ ಚಟುವಟಿಕೆಗಳ ಮೇಲೆ ಅವಲಂಬಿತವಾಗಿದೆ. ಆಡಳಿತವು ಇನ್ನಷ್ಟು ಚುರುಕುಗೊಳ್ಳಬೇಕು.
ದಿನಾಂಕ:02-05-2026ರಂದು ಮೇ 20ರಂದು ಸನ್ಮಾನ್ಯ ಮುಖ್ಯಮಂತ್ರಿ Siddaramaiah ಅವರು ನೇತೃತ್ವದ ಸರ್ಕಾರಕ್ಕೆ 3 ವರ್ಷ ತುಂಬಲಿದ್ದು, ತುಮಕೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಳ್ಳುವಂತೆ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು DR. G Parameshwara ಅವರು ತಿಳಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ತುಮಕೂರು ಜಿಲ್ಲೆಯಲ್ಲಿ ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಸಮಾವೇಶವನ್ನು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಈಗ ಮೇ 20ರಂದೇ ರಾಜ್ಯ ಸರ್ಕಾರಕ್ಕೆ 3 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲೇ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.20ರಂದು ನಡೆಯುವ ಸಮಾವೇಶಕ್ಕೆ ರಾಜ್ಯಾದ್ಯಂತ 2ಲಕ್ಷಕ್ಕೂ ಅಧಿಕ ಫಲಾನುಭವಿಗಳು ಭಾಗವಹಿಸಲಿದ್ದು, ರಾಜ್ಯಾದ್ಯಂತ ಆಗಮಿಸುವ ಫಲಾನುಭವಿಗಳಿಗಾಗಿ 4,000 ಬಸ್ಸುಗಳ ಅಗತ್ಯವಿರುತ್ತದೆ. ಅಲ್ಲದೆ, ರಾಜ್ಯ ಸರ್ಕಾರದ ಅಭೂತಪೂರ್ವ ಯಶಸ್ವಿ ಯೋಜನೆಗಳ ಅನುಷ್ಠಾನ ಮತ್ತಿತರ ಇಲಾಖೆಗಳ ಪ್ರಗತಿ ದರ್ಶನ ಕುರಿತ ವಸ್ತುಪ್ರದರ್ಶನ ನಡೆಯಲಿದೆ. ಅಲ್ಲದೆ, ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಪ್ರಗತಿಯ ಪಟ್ಟಿ, ಶಂಕುಸ್ಥಾಪನೆ ಅಥವಾ ಉದ್ಘಾಟನೆಯಾಗಬೇಕಿರುವ ಮಾಹಿತಿ ಹಾಗೂ ಶಿಲಾನ್ಯಾಸ ಫಲಕಗಳ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ತಕ್ಷಣ ಒದಗಿಸಬೇಕು. ರಾಜ್ಯಾದ್ಯಂತ ಫಲಾನುಭವಿಗಳು ಬೃಹತ್ ಸಮಾವೇಶಕ್ಕೆ ಆಗಮಿಸುವುದರಿಂದ ಅವರಿಗೆ ಆಸನ ವ್ಯವಸ್ಥೆ, ಊಟ, ಸಾರಿಗೆ, ಇತ್ಯಾದಿ ವ್ಯವಸ್ಥೆಗಳನ್ನು ಯಾವುದೇ ಲೋಪವಿಲ್ಲದಂತೆ ನಿಭಾಯಿಸಬೇಕಿದೆ. ಇದಕ್ಕಾಗಿ ಜಿಲ್ಲಾಡಳಿತ ಉಪಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ಹಂಚುವಂತೆ ಅವರು ಸೂಚಿಸಿದರು.ಸಮಾವೇಶಕ್ಕೆ ಬಹುತೇಕ ಎಲ್ಲಾ ಸಚಿವರು, ಶಾಸಕರು, ಸಂಸದರೂ ಆಗಮಿಸಲಿದ್ದು, ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲು ತಾತ್ಕಾಲಿಕವಾಗಿ ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಸಮಾರಂಭದ ವೇದಿಕೆ, ಫಲಾನುಭವಿಗಳಿಗೆ ಊಟದ ವ್ಯವಸ್ಥೆ, ವಸ್ತುಪ್ರದರ್ಶನ ಹಾಗೂ ಹೆಲಿಪ್ಯಾಡ್ ಇತ್ಯಾದಿ ವಿಷಯಗಳ ಕುರಿತು ಜಿಲ್ಲಾಡಳಿತ ತುರ್ತಾಗಿ ಯೋಜನೆ ರೂಪಿಸಬೇಕಿದೆ. ಅಲ್ಲದೆ, ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೊಳ್ಳಲಿರುವ ಇಲಾಖೆ ಕಟ್ಟಡಗಳ ಮಾಹಿತಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಬೇಕು. ಅವರು ಶಿಲಾನ್ಯಾಸ ಫಲಕಗಳ ಜಾಗ ಮತ್ತಿತರ ವ್ಯವಸ್ಥೆಯನ್ನು ಮಾಡಿಕೊಳ್ಳಲಿದ್ದಾರೆ ಎಂದು ಅವರು ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ SP Tumakuru, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ 112 ಎಮೆರ್ಜೆನ್ಸಿ ರೆಸ್ಪಾನ್ಸ್ (ERSS) ಬಹುಭಾಷೆಗಳಲ್ಲಿ ಸ್ಪಂದಿಸುವ ತಂತ್ರಜ್ಞಾನವನ್ನು ಬೆಂಗಳೂರು ನಗರ ಪೊಲೀಸರು ಅಳವಡಿಸಿಕೊಂಡಿದ್ದು, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಚಾಲನೆ ನೀಡಿದೆ.ಯಾರಾದರೂ 112 ಗೆ ಕರೆ ಮಾಡಿದಾಗ, ಭಾಷಾ ಸಮಸ್ಯೆ ಇದ್ದಲ್ಲಿ, ಕರೆ ಸ್ವಯಂಚಾಲಿತವಾಗಿ ಕರೆ ಮಾಡುವವರಿಗೆ ಅನುಕೂಲಕರವಾದ ಭಾಷೆಗೆ ಅನುವಾದಗೊಳ್ಳುತ್ತದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಹತ್ತು ಭಾಷೆಗಳನ್ನು ಸಕ್ರಿಯಗೊಳಿಸಲಾಗಿದೆ.112 ಎಮೆರ್ಜೆನ್ಸಿ ರೆಸ್ಪಾನ್ಸ್ ಆಯಾ ರಾಜ್ಯಗಳ ಭಾಷೆಗಳಿಗೆ ಸೀಮಿತವಾಗಿ ಸೇವೆ ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಬೆಂಗಳೂರು ಪೊಲೀಸರು, ಕನ್ನಡ ಭಾಷೆ ಸೇರಿದಂತೆ ವಿವಿಧ ರಾಜ್ಯಗಳ 7 ಭಾಷೆಗಳಿಗೆ ಮತ್ತು ಹೊರದೇಶಗಳ 3 ಭಾಷೆಗಳಿಗೆ ಸ್ಪಂದಿಸಲಿದೆ. 112ಗೆ ಕರೆ ಮಾಡುವ ನಾಗರಿಕರು, ಅವರು ಮಾತನಾಡುವ ಅನುಕೂಲಕರ ಭಾಷೆಯಲ್ಲಿ ಅರ್ಥವಾಗುವ ರೀತಿಯಲ್ಲಿ ಯಾವುದೇ ರೀತಿಯ ತುರ್ತು ಕರೆಗಳಿಗೆ ತರ್ಜುಮೆ ಮಾಡಿ ನೆರವು ನೀಡಲಾಗುತ್ತದೆ.ದೇಶದ ಯಾವುದೇ ಮಹಾನಗರಗಳಲ್ಲಿಯೂ 112 ಎಮರ್ಜೆನ್ಸಿ ರೆಸ್ಪಾನ್ಸ್‌ಗೆ ಈ ರೀತಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡಿಲ್ಲ. ಪ್ರಥಮ ಬಾರಿಗೆ ಬೆಂಗಳೂರು ನಗರ ಪೊಲೀಸರು ಬಹುಭಾಷೆಗಳಲ್ಲಿ ನೆರವು ನೀಡುವ ವ್ಯವಸ್ಥೆ ಮಾಡಿದ್ದಾರೆ.ಬೆಂಗಾಲಿ, ಗುಜುರಾತಿ, ಓಡಿಯಾ, ಮಣಿಪುರಿ, ಕಾಶ್ಮೀರಿ, ನೇಪಾಳಿ ಮತ್ತು ಅಸ್ಸಾಮಿ ಭಾಷೆಗಳಿಗೆ ಸ್ಪಂದಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಪಂಚದ ಎಲ್ಲ ಕಡೆಯ ಜನರು ಬೆಂಗಳೂರಿಗೆ ಬರುತ್ತಿದ್ದಾರೆ. ಸಾಮಾನ್ಯವಾಗಿ ಹೊರದೇಶದಿಂದ ಬರುವವರು ಇಂಗ್ಲೀಷ್ ಭಾಷೆ ಹೊರತಾಗಿ ಬೇರೆ ಭಾಷೆಗಳಲ್ಲಿ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿದೇಶದಿಂದ, ಯಾವ ಭಾಷೆ ಹೆಚ್ಚು ಮಾತಾಡುವ ಜನರು ಬರುತ್ತಾರೆ ಎಂಬ ಬಗ್ಗೆ ಡೇಟಾ ಸಂಗ್ರಹಿಸಲಾಗಿದೆ. ಇದರ ಆಧಾರದ ಮೇಲೆ ಸ್ಪ್ಯಾನೀಶ್, ಫ್ರೆಂಚ್, ಅರೇಬಿಕ್ ಭಾಷೆ ಮಾತಾಡುವ ವಿದೇಶಿಗರು ಹೆಚ್ಚಾಗಿ ಬೆಂಗಳೂರಿಗೆ ಬರುತ್ತಾರೆ ಎಂಬುದು ಕಂಡು ಬಂದಿದೆ. ವಿದೇಶಿಗರಿಗೂ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಬಹುಭಾಷೆಗಳಿಗೆ ಸ್ಪಂದಿಸುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. 112 ERSS ಬಹುಭಾಷೆಗಳಲ್ಲಿ ಸ್ಪಂದಿಸುವ ವ್ಯವಸ್ಥೆ ಬಹಳ ಉಪಯುಕ್ತವಾಗಲಿದೆ. ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋಥ್, ವಂಶಿಕೃಷ್ಣ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾದ ಅಜಯ್ ಹಿಲೋರಿ ಹಾಗೂ ಎಲ್ಲ ವಿಭಾಗದ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಪಾವಗಡ:ಡಾ”ಬಿ, ಆರ್ ಅಂಬೇಡ್ಕರ್ ಕೊಟ್ಟಿರುವಂತಹ ಸಂವಿಧಾನದಿಂದ ಸಾಕಷ್ಟು ಬದಲಾವಣೆಯಾಗಿದೆ. ಹಾಗೂ ಬಾಬು ಜಗಜೀವನ್ ರಾಮ್ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು’ ಎಂದು ಅಧ್ಯಕ್ಷತೆ ವಹಿಸಿಕೊಂಡ ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ ತಿಳಿಸಿದರು.ತಾಲೂಕಿನ ನಿಡಗಲ್ಲು ಹೋಬಳಿ ವ್ಯಾಪ್ತಿಯ ಪೆಮ್ಮನಹಳ್ಳಿ ಈ ಗ್ರಾಮದಲ್ಲಿ ಮಹಿಳೆಯರು ಕುಂಭಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ *135ನೇ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ119ನೇ ಡಾ” ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ರವರ* ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆಯನ್ನು ಯುವಕರು ನೀಲಿ ಬಾವುಟಗಳನ್ನು ಹಿಡಿದು ‘ಜೈ ಭೀಮ್’ ಘೋಷಣೆಗಳೊಂದಿಗೆ ತಮಟೆ ಸದ್ದಿಗೆ ಹೆಜ್ಜೆ ಹಾಕಿ ಮುಂದೆ ಸಾಗಿದರು, ಶ್ರೀ ಅಭಿನವ್ ಕೋಟಿ ಎಂಬ ವಿದ್ಯಾರ್ಥಿಯಿಂದ ಸಂವಿಧಾನ ಪೀಠಿಕೆಯನ್ನು ಓದಿಸಿ ಭೀಮ ಬಂಧುಗಳಿಗೆ ತಿಳಿಸಿದನು,ಈ ಸಭೆಯನ್ನು ಕಲಾವಿದ ಹನುಮಂತರಾಯಪ್ಪ ಸಿ ಕೆ ಪುರ, ಇವರ ತಂಡದಿಂದ ಅಂಬೇಡ್ಕರ್ ರವರ ಹಾಡಿನ ಮೂಲಕ ಸ್ಮರಿಸುತ್ತಾ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಶಾಸಕರಾದ ತಿಮ್ಮರಾಯಪ್ಪನವರು ಮಾತನಾಡುತ್ತಾ ನಮ್ಮ ತಾಲೂಕಿನಲ್ಲಿ ನಮ್ಮ ಯುವಕರು ಎಲ್ಲೇ ಅಂಬೇಡ್ಕರ್ ಜಯಂತಿಗಳು ಮಾಡಿದರೆ ಮೊದಲು ಕಿಲ್ಲಾರ್ಲಹಳ್ಳಿ ನವೀನ್ ರವರಿಗೆ ವೇದಿಕೆ ಕೊಡಿ,ಡಾಕ್ಟರ್ ಬಿಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಜಯಂತಿಗಳನ್ನು ಮಾಡುತ್ತಾ ಅವರಿಬ್ಬರನ್ನು ನೆನಪಿಸಿಕೊಳ್ಳಬೇಕು ತುಂಬಾ ಕೆಳ ಸಮಾಜದ ಈ ಸಮಾಜವನ್ನು ಕೆಟ್ಟ ವಾತಾವರಣದಲ್ಲಿ ಬದುಕಿರುವಂತಹ ಸಮಾಜವನ್ನು ಸ್ವಾತಂತ್ರ ಬಂದಮೇಲೆ ಸರ್ವರಿಗೂ ಸಮಾನ ಎಂದು ಭಾವನೆ ಬಂತು ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದ ಅವಕಾಶವನ್ನು ಸಮಾಜಕ್ಕೆ ಅಳವಡಿಸಿದ್ದಾರೆ ಎಂದು ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಬಗ್ಗೆ ಹೆಚ್ಚಿನದಾಗಿ ತಿಳಿಸಿದರು, ಎ ಪಿ ಪಿ ರಾಮಾಂಜಿನಪ್ಪ ಮಾತನಾಡುತ್ತಾ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಆಚರಣೆ ಮಾಡುವುದರ ಮೂಲಕ ನಾವೆಲ್ಲ ಸಂತೋಷ ಪಡುತ್ತಿದ್ದೇವೆ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ದಿನದಲಿತರು ಸರ್ವ ಜನಾಂಗಕ್ಕೂ ಸಂವಿಧಾನ ಕೊಟ್ಟಂತಹ ಮಹಾನ್ ವ್ಯಕ್ತಿ ಅಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಎಂದು ತಿಳಿಸಿದರು,ಮಾದರ್ ಮಹಾಸಭಾ ಸಂಘದ ನಿಡಗಲ್ ಹೋಬಳಿ ಅಧ್ಯಕ್ಷರಾದ ಹನುಮಂತರಾಯಪ್ಪನವರು ಮಾತನಾಡುತ್ತಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು ಶಿಕ್ಷಣ ಸಂಘಟನೆ ಹೋರಾಟ ಶಿಕ್ಷಣಕ್ಕೆ ಹೆಚ್ಚಿನದಾಗಿ ತಂದೆತಾಯಿಗಳು ಮಕ್ಕಳಲ್ಲಿ ಅರಿವು ಮೂಡಿಸಿದರೆ ಮಾತ್ರ ಇವತ್ತು ಅಂಬೇಡ್ಕರ ಅಂತಹ ಕಲಾವಿದರು ನೂರಾರು ಜನ ಆಗಬಹುದು, ಶಿಕ್ಷಣಕ್ಕೆ ಎಷ್ಟು ಹೊತ್ತು ಕೊಡುತ್ತೇವೋ, ಸಂಘಕ್ಕೂ ಕೂಡ ಅಷ್ಟೇ ಹೊತ್ತು ನೀಡಬೇಕು ಒಳ ಮೀಸಲಾತಿಗೆ ಒಂದು ಸುವರ್ಣ ಅವಕಾಶ ಸಿಕ್ಕಿದೆ, ನಮ್ಮ ಮಾಧರ್ ಮಹಾ ಸಂಘದ ನೋಂದಣಿ ಮಾಡಿಸಿಕೊಳ್ಳಿ ನಿಮಗೆ ಯಾವ ಕಷ್ಟ ಬಂದರೂ ಈ ಸಂಘದಿಂದ ನೋಂದಣಿ ಮಾಡಿಸಿಕೊಂಡರೆ ತುಂಬಾ ಅನುಕೂಲವಾಗಿರುತ್ತದೆ ಎಂದು ತಿಳಿಸಿದರು,ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ನವೀನ್ ಕಿಲ್ಲಾರ್ಲಹಳ್ಳಿ ರವರು ಮಾತನಾಡುತ್ತಾ ಶಿಕ್ಷಣಕ್ಕೆ ವಂಚಿತರಾದ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕಂತ ಸಾವಿತ್ರಿಬಾಯಿ ಫುಲೆ ಮನೆ ಬಿಡುತ್ತಾರೆ, ನನ್ನ ಜನಗಳಿಗೆ ಸಮಾನತೆ ಮತ್ತು ನ್ಯಾಯ ಕೊಡಬೇಕು ಅನ್ನ ನೀರು ಕೊಡಿಸಬೇಕು ಅಂತಹ ಹೇಳಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು ಧರ್ಮವನ್ನೇ ಬಿಡುತ್ತಾರೆ ಅಂತಹ ಪುಣ್ಯಾತ್ಮನ ದಿನಾಚರಣೆ ಆಚರಣೆ ಮಾಡುತ್ತಿದ್ದೇವೆ ಇದು ಕೇವಲ ದಿನಾಚರಣೆ ಅಲ್ಲ ಕಾರ್ಯಕ್ರಮ ಅಲ್ಲ ಬದುಕಲು ಯುಗವನ್ನು ತಿರುಗಿ ನೋಡುವಂತಹ ದಿನ ನಮ್ಮಂತಹ ಧ್ವನಿ ಇಲ್ಲದವರಿಗೆ ಶಕ್ತಿ ಕೊಡುವಂತಹವರು ನಮ್ಮ ಹಕ್ಕುಗಳಿಗೆ ಬೆಳಕಾಗಿ ಚೆಲ್ಲುವಂತಹ ಮಹಾತ್ಮರನ್ನು ಸ್ಮರಣೆ ಮಾಡುವಂತಹ ದಿನ ಎಂದು ತಿಳಿಸಿದರು,ನಂತರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದಸಿ ಕೆ ತಿಪ್ಪೇಸ್ವಾಮಿ ರವರು ಮಾತನಾಡುತ್ತಾ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಜಯಂತಿಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದೀರ ಅಂಬೇಡ್ಕರ್ ಅವರು ನಮಗೆ ಕಾನೂನು ರಚನೆ ಮಾಡಿಕೊಟ್ಟಿದ್ದಾರೆ ಆ ಕಾನೂನು ರೀತಿಯಲ್ಲಿ ಬಾಬು ಜಗಜೀವನ್ ರಾಮ್ ರವರು ಸಂವಿಧಾನದ ಮೂಲಕ ನಾವೆಲ್ಲರೂ ಹಕ್ಕುಗಳನ್ನು ಪಡೆಯಬಹುದು ಎಂದು ಅವರು ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿ ಜಾರಿ ಮಾಡಿರುವಂತಹ ಕೆಲಸ ಮಾಡಿದ್ದಾರೆ ರೈಲ್ವೆ ಮಂತ್ರಿಗಳಾಗಿದ್ದರು ಆ ಸಂದರ್ಭದಲ್ಲಿ ತುಂಬಾ ಅಸೃಶ್ಯತೆ ಇತ್ತು ಈಗಲೂ ನಮ್ಮನ್ನು ನೌಕರರಾಗಿ ಯಾರನ್ನು ಸೇರಿಸಿಕೊಳ್ಳುತ್ತಿರಲಿಲ್ಲ ಅಂತಹ ಸಂದರ್ಭದಲ್ಲಿ ಅವರಿಗೆ ಅಸ್ಪೃಶ್ಯತೆ ನೋವು ಇತ್ತು, ಬಡತನ ಏನು ಅಂತ ಗೊತ್ತಿತ್ತು, ಆ ಕಾರಣದಿಂದ ಬಹಳಷ್ಟು ಜನ ರೈಲ್ವೆ ನೇಮಕಾತಿಯಲ್ಲಿ ನಮ್ಮವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಂತಹ ಕೆಲಸಗಳನ್ನು ಮಾಡಬೇಕೆಂದು ಅವರು ರೈಲ್ವೆ ಮಂತ್ರಿಗಳಾಗಿದ್ದರು ಎಂದು ತಿಳಿಸಿದರು, ಈ ಸಂದರ್ಭದಲ್ಲಿ ನಾಗರಾಜಪ್ಪ ಮಾಸ್ಟರ್, ಕೆ ಪಿ ಲಿಂಗಣ್ಣ, ವೆಂಕಟರಮಣ ನಿರೂಪಣೆ, ನಾಗರಾಜು ಹರಿಹರಪುರ, ಪೊಲೀಸ್ ಸಿಬ್ಬಂದಿ, ಹಾಗೂ ಟಿಎನ್ ಬೆಟ್ಟ ಗ್ರಾಮದ ಎಲ್ಲ ಸಮಸ್ತ ಬಂಧುಗಳು, ಪಾಲ್ಗೊಂಡಿದ್ದರು,ವರದಿ ರಾಮಪ್ಪ ಸಿ ಕೆ ಪುರಕಲ್ಪತರು ನ್ಯೂಸ್ ಪಾವಗಡ
ಬೌರಿಂಗ್ ಆಸ್ಪತ್ರೆ ದುರಂತ. ಸಿಎಂ ಅಧ್ಯಕ್ಷತೆಯಲ್ಲಿ ಜಿಬಿಎ ಆಯುಕ್ತರುಗಳ ಸಭೆ. ಉಪ ಮುಖ್ಯಮಂತ್ರಿಗಳ ಉಪಸ್ಥಿತಿ……ಗೋಡೆಗೆ ಹಾನಿ ಆಗಲಿದೆ ಎಂದು ತಿಳಿದಿದ್ದರೂ ಕಾಮಗಾರಿ ನಡೆಯುವಾಗ ಮಣ್ಣು ಸುರಿದದ್ದು ಏಕೆ.ಸಂಬಂಧಪಟ್ಟ ಕಾರ್ಯಪಾಲಕ ಎಂಜಿನಿಯರ್ ಕೂಡಲೇ ಅಮಾನತು ಮಾಡಿ ಎಂದ ಸಿಎಂ. ಗೋಡೆಗೆ ಹಾನಿಯಾಗುವಂತೆ ಮಣ್ಣು ಸುರಿದದ್ದು ಏಕೆ. ನೀವು ಏಕೆ ನೋಡಿಕೊಳ್ಳಲಿಲ್ಲ. ಆಸ್ಪತ್ರೆ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡ ಸಿಎಂ.ಬೌರಿಂಗ್ ಆಸ್ಪತ್ರೆ ಮುಖ್ಯಸ್ಥರಿಗೆ ನೋಟಿಸ್ ನೀಡಲು ಆದೇಶ.
ಬೌರಿಂಗ್ ಆಸ್ಪತ್ರೆ ದುರಂತ: ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜಿಬಿಎ ಆಯುಕ್ತರುಗಳ ಸಭೆ ನಗರದ ಗುಂಡಿಗಳನ್ನು ಮುಚ್ಚಲು ಕೂಡಲೇ ಕ್ರಮ ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ**ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ:ಸಂಬಂಧಪಟ್ಟ ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಬೆಂಗಳೂರು, ಏಪ್ರಿಲ್ 30: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು ಏಳು ಜನರ ಸಾವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಾರ್ಯಪಾಲಕ ಇಂಜಿನಿಯರ್ ಅವರನ್ನು ಅಮಾನತುಗೊಳಿಸಿ, ನೋಟೀಸು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಭಾರಿ ಮಳೆಯಿಂದ ಬೌರಿಂಗ್ ಆಸ್ಪತ್ರೆ ದುರಂತದ ಹಿನ್ನೆಲೆಯಲ್ಲಿ ಇಂದು ಅವರ ಅಧ್ಯಕ್ಷತೆಯಲ್ಲಿ ಜಿಬಿಎ ಆಯುಕ್ತರುಗಳ ಸಭೆ ಜರುಗಿತು.ಬೆಂಗಳೂರಿನಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ಹಾಗೂ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತದಿಂದ ನಿನ್ನೆ ಏಳು ಜನ ಮೃತಪಟ್ಟಿರುವ ಕುರಿತಂತೆ ಜಿಬಿಎ ಆಯುಕ್ತರೊಂದಿಗೆ ಚರ್ಚಿಸಿದ ಮುಖ್ಯಮಂತ್ರಿಗಳು ಗೋಡೆಗೆ ಹಾನಿ ಆಗಲಿದೆ ಎಂದು ತಿಳಿದಿದ್ದರೂ ಕಾಮಗಾರಿ ನಡೆಯುವಾಗ ಮಣ್ಣು ಸುರಿದದ್ದು ಏಕೆ ಎಂದು ಪ್ರಶ್ನಿಸಿದರು.ಗೋಡೆಗೆ ಹಾನಿಯಾಗುವಂತೆ ಮಣ್ಣು ಸುರಿದದ್ದು ನೀವು ಏಕೆ ನೋಡಿಕೊಳ್ಳಲಿಲ್ಲ ಎಂದು ಆಸ್ಪತ್ರೆ ಮುಖ್ಯಸ್ಥರನ್ನು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಬೌರಿಂಗ್ ಆಸ್ಪತ್ರೆ ಮುಖ್ಯಸ್ಥರಿಗೆ ನೋಟಿಸ್ ನೀಡಲು ಸೂಚಿಸಿದ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಗುಂಡಿಗಳನ್ನು ಮುಚ್ಚಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು. ನಿನ್ನೆ ಬೆಂಗಳೂರಿನಲ್ಲಿ ಉಂಟಾದ ಮಳೆಯಲ್ಲಿ ಸಾಕಷ್ಟು ಹಾನಿಯಾಗಿದ್ದು, 250 ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಏಳು ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ಸತ್ತವರ ಕುಟುಂಬದವರಿಗೆ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ.ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಮುಂಗಾರು ಮಳೆ ಪ್ರಾರಂಭವಾಗುವ ಮೊದಲೇ ಸಿದ್ಧತೆ ಕೈಗೊಳ್ಳಿ ಮುಂಗಾರು ಮಳೆ ಪ್ರಾರಂಭವಾಗುವ ಮೊದಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಬೆಂಗಳೂರಿನ ಐದೂ ವಲಯಗಳ ಆಯುಕ್ತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು . ಒಣಗಿರುವ ಅಪಾಯಕಾರಿ ಮರಗಳ ರೆಂಬೆಗಳನ್ನು ಕತ್ತರಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು ರಾಜಕಾಲುವೆಗಳಲ್ಲಿ ಹೂಳು ತೆಗೆಯುವುದು, ಪ್ರವಾಹ ಉಂಟಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದರು. ಮಳೆಯಿಂದ ರಸ್ತೆಯಲ್ಲಿ ಬಿದ್ದಿರುವ ಕಸ, ರೆಂಬೆಗಳನ್ನು ಕೂಡಲೇ ತೆರವು ಮಾಡಲು ಸೂಚಿಸಿದರು. ಅಂಡರ್ ಪಾಸ್ ಗಳಲ್ಲಿ ಮಳೆ ನೀರು ನಿಲ್ಲದಂತೆ ಹಾಗೂ ಜನ ಅಂಡರ್ ಪಾಸ್ ಬಳಸದಂತೆ ಕೂಡಲೇ ಬ್ಯಾರಿಕೇಡ್ ಹಾಕಿ ಎಂದು ಅವರು ಸೂಚಿಸಿದರು. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಶಾಸಕ ರಿಜ್ವಾನ್ ಅರ್ಷದ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಬಿಎ ಆಯುಕ್ತ ಮಹೇಶ್ವರ ರಾವ್ , ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಮೊದಲಾದವರು ಉಪಸ್ಥಿತರಿದ್ದರು.