ಯುವತಿಯ ಮೇಲೆ ವ್ಯಕ್ತಿಯಿಂದ ಮಚ್ಚಿನಿಂದ ಮಾರಣಂತಿಕ ಹಲ್ಲೆ ಯುವತಿಯ ಸ್ಥಿತಿ ಗಂಭೀರ .ತುಮಕೂರು – ತುಮಕೂರು ದಸರಾ ಸಂಭ್ರಮದ ನಡುವೆ ಯುವತಿಯ ಮೇಲೆ

ಯುವತಿಯ ಮೇಲೆ ವ್ಯಕ್ತಿಯಿಂದ ಮಚ್ಚಿನಿಂದ ಮಾರಣಂತಿಕ ಹಲ್ಲೆ ಯುವತಿಯ ಸ್ಥಿತಿ ಗಂಭೀರ .ತುಮಕೂರು – ತುಮಕೂರು ದಸರಾ ಸಂಭ್ರಮದ ನಡುವೆ ಯುವತಿಯ ಮೇಲೆ ವ್ಯಕ್ತಿಯೋರ್ವ ನಿಂದ ಮಾರಣಂತಿಕ ಹಲ್ಲೆಯಾಗಿ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ತುಮಕೂರಿನ ಎಸ್ ಎಸ್ ಪುರಂ ನ ವಾಸನ್ ಐ ಕೇರ್ ಪಕ್ಕದಲ್ಲಿರುವ ಪ್ರತಿಷ್ಠಿತ ಶಾಲೆಯ ಮುಂಭಾಗದಲ್ಲಿ ಯುವತಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ವ್ಯಕ್ತಿಯನ್ನು ನಾಗರಾಜು ಎಂದು ಗುರುತಿಸಲಾಗಿದೆ. ಹಳ್ಳೆಗೋಳಗಾದ ಯುವತಿ ಪವಿತ್ರ ಮೂಲತಹ ಚಿಕ್ಕನಾಯಕನಹಳ್ಳಿ ಮೂಲದ ಹೊಯ್ಸಳಕಟ್ಟೆ ಎಂದು ತಿಳಿದು ಬಂದಿದೆ. ಇಂದು ಸಂಜೆ ಏಳನೀರು ವ್ಯಾಪಾರ ಮಾಡುತ್ತಿದ್ದ ನಾಗರಾಜು ತನ್ನ ಹೆಂಡತಿಯಾದ ಪವಿತ್ರ ಮೇಲೆ ಮಚ್ಚಿನಿಂದ ತಲೆ ಮುಖ ಸೇರಿದಂತೆ ದೇಹದ ಹಲವು ಭಾಗಗಳಿಗೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದ್ದು ಹಲ್ಲೆಯಲ್ಲಿ ಯುವತಿಯ ನಾಲ್ಕು ಬೆರಳುಗಳು ತುಂಡಾಗಿವೆ. ಇನ್ನು ಹಲ್ಲೆ ಮಾಡುತ್ತಿದ್ದ ವ್ಯಕ್ತಿಯನ್ನು ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು ಯುವತಿಯನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವ ಕಾರಣ ತುಮಕೂರಿನ ಖಾಸಗಿ ಆಸ್ಪತ್ರೆಗೆ ಪ್ಲಾಸ್ಟಿಕ್ ಸರ್ಜರಿಗಾಗಿ ರವಾನಿಸಲಾಗಿದೆ. ಹಲ್ಲೆಗೊಳಗಾಗಿರುವ ಯುವತಿ ಪವಿತ್ರ ಹಾಗೂ ನಾಗರಾಜ್ ಮದುವೆಯಾಗಿ 13 ವರ್ಷ ಕಳೆದಿದ್ದು ಅಂದಿನಿಂದ ಇಲ್ಲಿಯವರೆಗೂ ಆಕೆಯ ಮೇಲೆ ಗಂಡ ಪದೇ ಪದೇ ಕಿರುಕುಳ ನೀಡುತ್ತಾ , ಬರುತ್ತಿದ್ದ ಇಂದು ಆಕೆಯ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹಲ್ಲೆಗೊಳಗಾಗಿರುವ ಯುವತಿ ಪ್ರಾಣಪಾಯದಿಂದ ಪಾರಾಗಿದ್ದು ಹಲ್ಲೆ ಮಾಡಿದ ವ್ಯಕ್ತಿಯನ್ನು ತುಮಕೂರಿನ ಹೊಸ ಬೆಳವಣಿ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ನಡೆಸಿದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸೋಕೋ ತಂಡ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ ಹೊಸ ಬಡಾವಣೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ