ವಾಟರ್ ಪಾರ್ಕ್ ತೆರವಿಗೆ ಆಗ್ರಹಿಸಿ ನವೆಂಬರ್ 2 ರಿಂದ ಅಹೋರಾತ್ರಿ ಧರಣಿ ಮೈಸೂರು: ಮೃಗಾಲಯದ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ಅಕ್ರಮವಾಗಿ ನಿರ್ಮಾಣ ವಾಗಿರುವ ಲೋಕರಂಜನ್ ವಾಟರ್ ಪಾರ್ಕ್ ತೆರವು ಗೊಳಿಸುವಂತೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳ ಒಕ್ಕೂಟ ನವೆಂಬರ್ 2 ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.ಮೈಸೂರಿನ ಮೃಗಾಲಯದ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ

ವಾಟರ್ ಪಾರ್ಕ್ ತೆರವಿಗೆ ಆಗ್ರಹಿಸಿ ನವೆಂಬರ್ 2 ರಿಂದ ಅಹೋರಾತ್ರಿ ಧರಣಿ ಮೈಸೂರು: ಮೃಗಾಲಯದ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ಅಕ್ರಮವಾಗಿ ನಿರ್ಮಾಣ ವಾಗಿರುವ ಲೋಕರಂಜನ್ ವಾಟರ್ ಪಾರ್ಕ್ ತೆರವು ಗೊಳಿಸುವಂತೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳ ಒಕ್ಕೂಟ ನವೆಂಬರ್ 2 ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.ಮೈಸೂರಿನ ಮೃಗಾಲಯದ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.ಮೃಗಾಲಯವು ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಯಮಗಳ ಅಡಿಯಲ್ಲಿ ಬರುವುದರಿಂದ ಮೃಗಾಲಯದ ಕಾಂಪೌಂಡ್ ನಿಂದ 1 ಕಿಲೋಮೀಟರ್ ದೂರದ ವರೆಗೆ ಅಥವಾ 100 ರಿಂದ 500 ಕಿಲೋಮೀಟರ್ ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಪರಿಗಣಿಸಲಾಗುತ್ತದೆ.ಈ ಜಾಗದಲ್ಲಿ ಪ್ರಾಣಿಗಳಿಗೆ ಶಬ್ದ ಮಾಲಿನ್ಯ ಅಥವಾ ತೊಂದರೆಯಾಗುವಂತಹ ದೊಡ್ಡ ಕಮರ್ಷಿಯಲ್ ಆಕರ್ಷಣೆಗಳು ಮತ್ತು ವಾಟರ್ ಪಾರ್ಕ್ ಗಳಿಗೆ ಅನುಮತಿ ನೀಡುವಂತಿಲ್ಲ ಆದರೂ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ನಿರ್ಮಾಣ ವಾಗಿರುವ ವಾಟರ್ ಪಾರ್ಕ್ ನಿಂದ ಮೃಗಾಲಯದ ಪ್ರಾಣಿ ಪಕ್ಷಿಗಳಿಗೆ ಕಂಟಕ ಉಂಟಾಗಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆಯವರು ವಾಟರ್ ಪಾರ್ಕ್ ತೆರವು ಗೊಳಿಸುವಂತೆ ಒತ್ತಾಯಿಸಿ ಮತ್ತು ಅವರುಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆಈ ನಡುವೆ ಎಂಡಿಸಿಸಿ ಸಂಸ್ಥಾಪಕ‌ ಅಧ್ಯಕ್ಷರಾದ ಮತ್ತು ಕನ್ನಡ ಹೋರಾಟಗಾರಾದ ಸ್ಟೀಫನ್ ಸುಜೀತ್ ಅವರಿಗೆ ಅಕ್ರಮ ವಾಟರ್ ಪಾರ್ಕ್ ತೆರವಿಗಾಗಿ ಕಾನೂನು ಹೋರಾಟ ಮಾಡುವಂತೆ ಮನವಿ ಮಾಡಿದ್ದೆವು ಮನವಿಗೆ ಸ್ಪಂದಿಸಿದ ಸುಜೀತ್ ಅವರು ಈಗಾಗಲೇ ವಕೀಲರೊಂದಿಗೆ ಚರ್ಚೆನಡೆಸಿದ್ದು ಕಾನೂನು ಹೋರಾಟದ ಪ್ರಕ್ರಿಯೆಯನ್ನು ಶುರುಮಾಡಿದ್ದಾರೆ ಅವರಿಗೆ ಕನ್ನಡ ಹೋರಾಟಗಾರರ ವತಿಯಿಂದ ಧಾನ್ಯವಾದಗಳನ್ನ ಸಲ್ಲಿಸಿದ್ದೇವೆ ಎಂದು ತೇಜಸ್ವಿ ತಿಳಿಸಿದ್ದಾರೆ.ಧರಣಿ ಸತ್ಯಾಗ್ರಹದಲ್ಲಿ ಹಿರಿಯ ಹೋರಾಟಗಾರರ ಡಾ. ಲಿಂಗರಾಜು ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ ಸೇರಿದಂತೆ ಸುಮಾರು 25 ಕ್ಕೂ ಹೆಚ್ಚು ವಿವಿಧ ಕನ್ನಡಪರ ಸಂಘಟನೆಗಳು ಪಾಲ್ಗೊಳ್ಳಲಿದ್ದಾರೆ.ಪ್ರಾಣಿ ಪಕ್ಷಿಗಳ ಪ್ರೇಮಿಗಳು ಹಾಗೂ ಪ್ರಾಣಿದಯಾ ಸಂಘ ಸಂಸ್ಥೆಗಳು ಭಾಗವಹಿಸಿ ಮೃಗಾಲಯದ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ಹೋರಾಟದಲ್ಲಿ ಭಾಗವಸಬೆಕೇಂದು ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದ್ದಾರೆ.