ಮಾದಿಗ ಜನಾಂಗದ ಕುಲಮೂಲಗಳ ಅದ್ಯಯನ ಅವಶ್ಯಕವಾಗಿದ್ದು ಸಮಾಜ ಆರ್ಥಿಕತೆಯತ್ತ ಮುನ್ನಡೆಯಬೇಕಿದೆ: ಎ.ನರಸಿಂಹಮೂರ್ತಿಇಂದು ತುಮಕೂರು ನಗರದ ಸುಧಾ ಟೀ ಹೌಸ್ನಲ್ಲಿ ರಾಷ್ಟ್ರೀಯ ಮಾದಿಗ ಪ್ರಚಾರಾಂದೋಲನ

ಮಾದಿಗ ಜನಾಂಗದ ಕುಲಮೂಲಗಳ ಅದ್ಯಯನ ಅವಶ್ಯಕವಾಗಿದ್ದು ಸಮಾಜ ಆರ್ಥಿಕತೆಯತ್ತ ಮುನ್ನಡೆಯಬೇಕಿದೆ: ಎ.ನರಸಿಂಹಮೂರ್ತಿಇಂದು ತುಮಕೂರು ನಗರದ ಸುಧಾ ಟೀ ಹೌಸ್ನಲ್ಲಿ ರಾಷ್ಟ್ರೀಯ ಮಾದಿಗ ಪ್ರಚಾರಾಂದೋಲನ ಸಮಿತಿಯಿಂದ ಜಿಲ್ಲೆಯ ಮಾದಿಗ ಜನಾಂಗದ ಪ್ರಸ್ತುತ ಸಾಮಾಜಿಕ ಪರಿಸ್ಥಿತಿ ಕುರಿತು ಸಮಾಲೋಚನಾ ಸಭೆ ನಡೆಸಲಾಯಿತು. ಮಾದಿಗ ಜನಾಂಗದ ಶ್ರೇಯೋಭಿವೃದ್ಧಿಯನ್ನು ಒಳಗೊಂಡಿರುವ ಕರಪತ್ರವನ್ನು ಪ್ರಮುಖಂಡರುಗಳು ಬಿಡುಗಡೆಗೊಳಿಸಿದರು. ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಎಸ್.ಸಿ/ಎಸ್.ಟಿ ಅಟ್ರಾಸಿಟಿ ತಡೆ ಮೇಲುಸ್ತುವಾರಿ ಸಮಿತಿಯ ಮಾಜಿ ಸದಸ್ಯರಾದ ಎ.ನರಸಿಂಹಮೂರ್ತಿ ತುಮಕೂರು ಜಿಲ್ಲೆಯಲ್ಲಿ ಮಾದಿಗ ಜನಾಂಗದ ಕುಲಮೂಲಗಳ ಅದ್ಯಯನವನ್ನು ತುಮಕೂರು ವಿಶ್ವವಿದ್ಯಾನಿಲಯದ ಡಾ|| ಬಾಬೂ ಜನಜೀವನರಾಮ್ ಅದ್ಯಯನ ಕೇಂದ್ರ ಕೈಗೊಳ್ಳಬೇಕೆಂದು ಅಭಿಪ್ರಾಯಿಸಿದರು. ಜಿಲ್ಲೆಯಲ್ಲಿ ಮಾದಿಗರ ಮೇಲಿನ ಜಾತಿ ಆಧಾರಿತ ದೌರ್ಜನ್ಯಗಳು ಹೆಚ್ಚುತ್ತಲೆ ಇವೆ, ಅಟ್ರಾಸಿಟಿ ಕಾಯಿದೆ ಕುರಿತು ಗ್ರಾಮ ಮಟ್ಟದಿಂದ ಜಾಗೃತಿಯ ಕಾರ್ಯಗಳಾಗಬೇಕಿವೆ. ನಗರ ಪ್ರದೇಶಗಳಲ್ಲಿರುವ ಕನಿಷ್ಟ 5 ಮಾದಿಗ ಕಾಲೋನಿಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸುವ ಮೂಲಕ ಶಾಲೆಯಿಂದ ಹೊರಗುಳಿಯುತ್ತಿರುವ ಮಕ್ಕಳ ಪ್ರಾಮಣವನ್ನು ಕಡಿಮೆ ಮಾಡಬೇಕಿದೆ ಹಾಗೆಯೇ ನಗರ ಪ್ರದೇಶದಲ್ಲಿ ಮಾದಿಗ ಮಹಿಳೆಯರು ಅನುಭವಿಸುತ್ತಿರುವ ಸೂಕ್ಷ್ಮವಾದ ಸಮಸ್ಯೆಗಳ ಮೇಲೆ ಗಮನಹರಿಸಬೇಕಿದ್ದು ಒಟ್ಟಾರೆ ಜನಾಂಗದ ಸಾಂಸ್ಕೃತಿಕ ಮತ್ತು ಸಮಾಜ ಆರ್ಥಿಕ ಅಭಿವೃದ್ಧಿಯತ್ತ ಮುನ್ನಡೆಯುವ ಕಾರ್ಯಕ್ರಮಗಳನ್ನು ಸಮಿತಿ ಹಮ್ಮಿಕೊಳ್ಳಬೇಕೆಂದು ಸಲಹೆ ಸೂಚಿಸಿದರು.ಮುಖಂಡರಾದ ಗೋಪಾಲ್ ಅವರು ಮಾತನಾಡಿ ಒಳಮೀಸಲಾತಿ ಪಡೆದುಕೊಳ್ಳಲು ಜಾತಿ ಪಾತ್ರ ಪ್ರಮುಖವಾಗಿದ್ದು ಮಾದಿಗ ಸಂಬಂಧಿತ ಜಾತಿಗಳು ತಮ್ಮ ಮೂಲ ಜಾತಿಗಳ ಹೆಸರಿನಲ್ಲೇ ಪ್ರಮಾಣಪತ್ರಗಳನ್ನು ಪಡೆದುಕೊಳ್ಳಲು ಮುಂದಾಗಬೇಕೆಂಬುದನ್ನು ಸಂಸ್ಥಾಪನ ಅಧ್ಯಕ್ಷರಾದ ಕುಮಾರ್ ಮಾದರ್ ಕಳೆದ 10 ವರ್ಷಗಳ ಹಿಂದೆಯೇ ಪ್ರಸ್ತಾಪಿಸಿ ಅದರ ಅನುಷ್ಟಾನಕ್ಕೆ ಸಹಕರಿಸಿದ್ದರೆಂದು ನೆನದರು. ತುಮಕೂರು ಜಿಲ್ಲಾ ಸಫಾಯಿ ಕರ್ಮಚಾರಿಗಳ ಕಾವಲು ಸಮಿತಿಯ ಸಿದ್ದಲಿಂಗಯ್ಯ ಅವರು ಮಾತನಾಡಿ ಅಟ್ರಾಸಿಟಿ ಆದ ಸಂದರ್ಭದಲ್ಲಿ ಬಹುಮುಖ್ಯವಾಗಿ ನಮ್ಮ ಜನರು FIR ಅನ್ನು ಪರಿಣಾಮಕಾರಿಯಾಗಿ ದಾಖಲು ಮಾಡುವಂತೆ ತರಬೇತಿ ನೀಡಬೇಕಿದೆ ಎಂದು ಅಭಿಪ್ರಾಯಿಸಿದರು. ಯುವ ಮುಖಂಡರಾದ ಶರಣ್ ಅಟ್ರಾಸಿಟಿ ಕಾಯಿದೆಯ ವ್ಯಾಪಕ ಪ್ರಚಾರ ಸೇರಿದಂತೆ ತುಮಕೂರು ವಿ.ವಿಯ ಬಾಬು ಜಗಜೀವನ ರಾಮ್ ಅದ್ಯಯನ ಕೇಂದ್ರದಿಂದ ಜಿಲ್ಲೆಯ ಮಾದಿಗ ಜನಾಂಗದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಅದ್ಯಯನ ನಡೆಸಲು ಮುಂದಾಗುವಂತೆ ಮಾಡಬೇಕಿದೆ ಎಂದರು. ರಾಷ್ಟ್ರೀಯ ಮಾದಿಗ ಪ್ರಚಾರಾಂದೋಲನದ ಕಾರ್ಯದರ್ಶಿಗಳಾದ ತೇಜಸ್ ಕುಮಾರ್ ಪ್ರಾಸ್ತಾವಿಕನ್ನಾಡಿದರು ಮತ್ತು ಸಂಯೋಜನೆಯನ್ನು ಸಂಘಟನಾ ಕಾರ್ಯದರ್ಶಿಯಾದ ಮನೋಜ್ ಕುಮಾರ್ ವಹಿಸಿಕೊಂಡಿದ್ದರು.ಈ ಸಂದರ್ಭದಲ್ಲಿ ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆಯ ಅನುಪಮ, ಯುವಜನರಾದ ಕಿಶೋರ್, ನಿಖಿಲ್ ಮೋಹನ್, ಕೆಂಪರಾಜು, ಆಕಾಶ್ ಮತ್ತು ಚಿಕ್ಕಓಬಳಯ್ಯ ಉಪಸ್ಥಿತರಿದ್ದರು.

