ತುಮಕೂರು: ಜೆಸಿಐ ತುಮಕೂರು ಮೆಟ್ರೋ ಘಟಕಕ್ಕೆ ನ್ಯಾಷನಲ್ ವೈಸ್ ಪ್ರೆಸಿಡೆಂಟ್ ಜೇಸಿ ಜಿತೇಶ್ ಅಡ್ವಾನಿ ರವರು ಭೇಟಿ ನೀಡಿ ಘಟಕದ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಉತ್ತೇಜನ ನೀಡಿದರು.ಈ ಸಂದರ್ಭದಲ್ಲಿ ಜೇಸಿಐ ಭಾರತದ ಫ್ಲಾಗ್‌ಶಿಪ್ ಕಾರ್ಯಕ್ರಮ

ತುಮಕೂರು: ಜೆಸಿಐ ತುಮಕೂರು ಮೆಟ್ರೋ ಘಟಕಕ್ಕೆ ನ್ಯಾಷನಲ್ ವೈಸ್ ಪ್ರೆಸಿಡೆಂಟ್ ಜೇಸಿ ಜಿತೇಶ್ ಅಡ್ವಾನಿ ರವರು ಭೇಟಿ ನೀಡಿ ಘಟಕದ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಉತ್ತೇಜನ ನೀಡಿದರು.ಈ ಸಂದರ್ಭದಲ್ಲಿ ಜೇಸಿಐ ಭಾರತದ ಫ್ಲಾಗ್‌ಶಿಪ್ ಕಾರ್ಯಕ್ರಮವಾದ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನದ ಅಂಗವಾಗಿ ನಗರದ ಬಿಜಿಎಸ್ ವೃತ್ತದಲ್ಲಿ ಆಟೋ ಚಾಲಕರು ಹಾಗೂ ಸಾರ್ವಜನಿಕರಿಗೆ ಸ್ಟೀಲ್ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಘಟಕದ ಅಧ್ಯಕ್ಷರಾದ ಜೇಸಿ ಮಮತ ರಾಜ್ ಹಾಗೂ ಕಾರ್ಯದರ್ಶಿ ಜೇಸಿ ಸುನಿತ್ ರಾಜ್ ಅವರ ನೇತೃತ್ವದಲ್ಲಿ ನಡೆಸಲಾಯಿತು.ಈ ವೇಳೆ ಮಾತನಾಡಿದ ನ್ಯಾಷನಲ್ ವೈಸ್ ಪ್ರೆಸಿಡೆಂಟ್ ಜಿತೇಶ್ ಅಡ್ವಾನಿ ಅವರು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಸ್ಟೀಲ್ ಬಾಟಲ್‌ಗಳನ್ನು ದಿನನಿತ್ಯ ಬಳಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣಕ್ಕೆ ಸಹಕರಿಸುವಂತೆ ಮನವಿ ಮಾಡಿದರು.ಜೇಸಿಐ ವಲಯ 14ರ ಅಧ್ಯಕ್ಷ ಜೇಸಿ ಪ್ರಜ್ವಲ್ ಎಸ್. ಜೈನ್ ಅವರು ಮಾತನಾಡಿ, ಮನುಷ್ಯರು ಅರಿವಿಲ್ಲದೆ ದಿನನಿತ್ಯ ಮೈಕ್ರೋ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದು, ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಯುವಜನರಲ್ಲಿ ಜಾಗೃತಿ ಮೂಡಿಸಲು ಜೆಸಿಐ ಈ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದರು.ಘಟಕದ ಅಧ್ಯಕ್ಷರಾದ ಜೇಸಿ ಮಮತ ರಾಜ್ ಅವರು ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.ಇದರ ಜೊತೆಗೆ ಬೆಳ್ಳಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೆಚ್.ಐ.ವಿ ಪೀಡಿತರಿಗೆ ಪೌಷ್ಟಿಕ ಆಹಾರ ವಿತರಿಸಲಾಯಿತು. ಹಾಗೆಯೇ ರಕ್ತದಾನ ಹಾಗೂ ರಕ್ತ ವಿತರಣೆ ಕಾರ್ಯಕ್ರಮವೂ ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮದಲ್ಲಿ ಜೆಸಿಐ ತುಮಕೂರು ಮೆಟ್ರೋ ಪೂರ್ವಅಧ್ಯಕ್ಷರಾದ ಬೆಳ್ಳಿ ಲೋಕೇಶ್, ನ್ಯಾಷನಲ್ ವೈಸ್ ಪ್ರೆಸಿಡೆಂಟ್ ಜೆಸಿ ಯಶಸ್ವಿನಿ ಜೋನಲ್ ತರಬೇತಿ ವಿಭಾಗದ ಚೇರ್ಮನ್ ಉಮಾಮಹೇಶ್, ಜೆಕಾಂ ಜೋನ್ ಚೇರ್ಮನ್ ಶ್ರೀನಿವಾಸಮೂರ್ತಿ ಹಾಗೂ ಪದಾಧಿಕಾರಿಗಳಾದ ಸಂಜಯ್, ಅನು, ನಾಗೇಂದ್ರನಾಥ್, ನಾಗಭೂಷಣ್, ವೇಣುಗೋಪಾಲ್, ನಾಗರಾಜ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

