ತುಮಕೂರು:ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಭಗವಾನ್.ಬಿ.ಸಿ. ಅವರ ಅಧ್ಯಕ್ಷತೆಯಲ್ಲಿ,ರಾಜೀವಗಾಂಧಿ ಆರೋಗ್ಯ ವಿವಿಯ ವ್ಯಾಪ್ತಿಗೆ ಒಳಪಡುವ ಕಾಲೇಜುಗಳ ಸಹಯೋಗದಲ್ಲಿ ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್

ತುಮಕೂರು:ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಭಗವಾನ್.ಬಿ.ಸಿ. ಅವರ ಅಧ್ಯಕ್ಷತೆಯಲ್ಲಿ,ರಾಜೀವಗಾಂಧಿ ಆರೋಗ್ಯ ವಿವಿಯ ವ್ಯಾಪ್ತಿಗೆ ಒಳಪಡುವ ಕಾಲೇಜುಗಳ ಸಹಯೋಗದಲ್ಲಿ ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್, ಅಂಗಾAಗ ಧಾನ ಅಭಿಯಾನ ಮತ್ತು ಜಾಥಾವನ್ನು ಸಹಯೋಗದಲ್ಲಿ ಏಪ್ರಿಲ್ ೨೫ ರಂದು ಆಯೋಜಿಸಲಾಗಿದೆ ಎಂದು ಐಎಂಎ ರಾಜ್ಯ ಅಧ್ಯಕ್ಷರಾದ ಡಾ.ವೀರಭದ್ರಯ್ಯ ತಿಳಿಸಿದ್ದಾರೆ.ಐಎಂಎ ಸಭಾಂಗಣದಲ್ಲಿAದು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಕ್ಯಾಂಪಸ್ಗಳಲ್ಲಿ ಬಹಳ ಸರಾಗವಾಗಿ ನಶೆ ಎರಿಸುವ ಅಮುಲು ಪದಾರ್ಥಗಳು ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಹದಿಹರೆಯದ ಮಕ್ಕಳು ಬಹುಬೇಗ ನಶೆಗೆ ಕದಂಬ ಬಾಹುಗಳಿಗೆ ಬಲಿಯಾಗುತಿದ್ದು,ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಾಕಥಾನ್ ಹಮ್ಮಿಕೊಳ್ಳಲಾಗಿದೆ.ಇದುವರೆಗೂ ೧೪ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಏಪ್ರಿಲ್ ೨೫ ರಂದು ೧೫ನೇ ಕಾರ್ಯಕ್ರಮವನ್ನು ತುಮಕೂರು ಜಿಲ್ಲೆಯಲ್ಲಿ ಕೈಗೊಳ್ಳಲಾಗಿದೆ ಎಂದರು.ರಾಜೀವ್ಗಾAಧಿ ವಿಶ್ವವಿದ್ಯಾಲಯದದ ಕುಲಪತಿಗಳು ವಿಶ್ವವಿದ್ಯಾಲಯ ಕ್ಯಾಂಪಸ್ಗಳನ್ನು ಕೇವಲ ಶಿಕ್ಷಣ ನೀಡಲಷ್ಟೇ ಬಳಕೆ ಮಾಡದೆ,ಇಂತಹ ಸಾಮಾಜಿಕ ಕಳಕಳಿಯ ಕೆಲಸಗಳಿಗೂ ಉತ್ತೇಜನ ನೀಡುತ್ತಾ ಬಂದಿದೆ.ಏಪ್ರಿಲ್ ೨೫ರಂದು ಬೆಳಗ್ಗೆ ೬:೩೦ ಗಂಟೆಗೆ ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಳ್ಳುವ ವಿದ್ಯಾರ್ಥಿಗಳು, ಯುವಜನರು, ಜನಸಾಮಾನ್ಯರು ಸರಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಹೊರಟು, ಶಿವಕುಮಾರಸ್ವಾಮಿ ಸರ್ಕಲ್ನಿಂದ ಕೋತಿ ತೋಪು ಮೂಲಕ ಅಮಾನಿಕೆರೆಯಲ್ಲಿರುವ ಗಾಜಿನಮನೆಯಲ್ಲಿ ಮುಕ್ತಾಯಗೊಳ್ಳಲಿದೆ.೮-೧೦ ಸಾವಿರಕ್ಕೂ ಹೆಚ್ಚು ಯುವಜನರು ಜನರು ಪಾಲ್ಗೊಳ್ಳುತ್ತಿದ್ದಾರೆ ಎಂದು ಡಾ.ವೀರಭದ್ರಯ್ಯ ತಿಳಿಸಿದರು.ಸಮಾಜ ಸೇವಕ ಸ್ಪೂರ್ತಿ ಚಿದಾನಂದ ಮಾತನಾಡಿ,ಡ್ರಗ್ ಇಂದು ಮಕ್ಕಳಿಗೆ ಪಿಡುಗಾಗಿ ಪರಿಣಮಿಸಿದೆ.ಇದುವರೆಗೂ ನಗರದ ಪ್ರತಿಷ್ಠಿತ ಶಾಲಾ, ಕಾಲೇಜುಗಳಿಗೆ ಮಾತ್ರ ಸಿಮೀತವಾಗಿದ್ದ ಡ್ರಗ್ಸ್ ಮಾಫೀಯ ಇಂದು ಗ್ರಾಮೀಣ ಭಾಗವನ್ನು ತಲುಪಿವೆ. ಅತಿ ಹೆಚ್ಚು ಬಲಿಯಾಗುತ್ತಿರುವುದು ಮೆಡಿಕಲ್ ಮತ್ತು ಇಂಜಿನಿಯರಿAಗ್ ಓದುತ್ತಿರುವ ಯುವಜನರು. ಹಾಗಾಗಿ ಇದನ್ನು ವ್ಯವಸ್ಥಿತ ರೀತಿಯಲ್ಲಿ ತಡೆಗಟ್ಟುವ ನಿಟ್ಟಿನಲ್ಲಿ ಶಾಲಾ,ಕಾಲೇಜುಗಳಲ್ಲಿಯೂ ಮಕ್ಕಳನ್ನು ರಕ್ತ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.ಡ್ರಗ್ಸ್ ಸೇವನೆಯ ಜೊತೆಗೆ,ಸಮಾಜಕ್ಕೆ ಕಂಟಕ ಪ್ರಾಯರಾದ ಡ್ರಗ್ ಪೆಡ್ಲರ್ಗಳನ್ನು ಪತ್ತೆ ಹಚ್ಚಿ,ವ್ಯವಸ್ಥಿತ ಜಾಲವನ್ನು ಬೇಧಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ನಶೆ ಮುಕ್ತ ಕ್ಯಾಂಪಸ್ ಅಭಿಯಾನವನ್ನು ಆಯೋಜಿಸಿದ್ದು, ೨೦೨೮ರ ವೇಳೆ ಕರ್ನಾಟಕವನ್ನು ನಶಮುಕ್ತ ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ.ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಸರಕಾರ ಮುಂದಾಗಿದೆ.ದಿಶಾ ಬೋಯಿ ಪೌಂಢೇಷನ್ ಸಹಯೋಗದಲ್ಲಿ ೧೫೦೦ ಉಪನ್ಯಾಸಕರಿಗೆ ತರಬೇತಿ ನೀಡಿ, ಅವರ ಮೂಲಕ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ನಶೆ ಮುಕ್ತ ಭಾರತ ನಿರ್ಮಾಣಕ್ಕೆ ಕೆಲಸ ಮಾಡಲಿದ್ದಾರೆ ಎಂದರು.ಭಾರತ ಇಂದು ಶೇ೪೪ರಷ್ಟು ಯುವಜನತೆಯನ್ನು ಹೊಂದಿದೆ.ಹೆಚ್ಚು ಯುವಜನರೇ ಇಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಡ್ರಗ್ಸ್ ಕಪಿಮುಷ್ಠಿಯಿಂದ ಯುವಜನರನ್ನು ಹೊರ ತರುವ ನಿಟ್ಟಿನಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು, ಅಧಿಕಾರಿಗಳು, ಮಾಧ್ಯಮಗಳು ಕೈಜೊಡಿಸಿ ಕೆಲಸ ಮಾಡಬೇಕಿದೆ. ಅ ಮೂಲಕ ೨೦೨೮ರೊಳಗೆ ದೇಶವನ್ನು ನಶೆ ಮುಕ್ತಗೊಳಿಸಲು ಕೇಂದ್ರ ಸರಕಾರ ಪಣ ತೊಟ್ಟಿದೆ.ಇಲ್ಲಿ ಪೋಷಕರ ಪಾತ್ರ ಮಹತ್ವ ಪಡೆಯಲಿದೆ.ಹಾಗಾಗಿ ಎಲ್ಲರೂ ಒಗ್ಗೂಡಿ ಡ್ರಗ್ಸ್ ಎಂಬ ಸಾಮಾಜಿಕ ಪಿಡುಗನ್ನು ಎದುರಿಸೋಣ ಎಂದು ಎಸ್.ಪಿ.ಚಿದಾನಂದ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಸಂಚಾಲಕರಾದ ಡಾ.ಎಂ.ಆರ್.ಹುಲಿನಾಯ್ಕರ್, ಐಎಂಎ ಪದಾಧಿಕಾರಿಗಳಾದ ಡಾ.ರಾಘವೆಂದ್ರ,ಡಾ.ಕೃಷ್ಣಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

