ಡಾ. ಅಂಬೇಡ್ಕರ್ ಸಂಭ್ರಮಿಸುವ ಭೀಮೋತ್ಸವ ಆಚರಣೆಮೇ ೧-೨ರಂದು ನಗರದಲ್ಲಿ ಸಂವಿಧಾನಶಿಲ್ಪಿಯ ಸಾಂಸ್ಕೃತಿಕ ಸ್ಮರಣೆತುಮಕೂರು: ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸಂಭ್ರಮಿಸುವ, ಅವರ ೧೩೫ನೇ ಜನ್ಮದಿನದ ಅಂಗವಾಗಿ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಮೇ ೧ ಮತ್ತು ೨ರಂದು ಕಲ್ಪತರು ಸಾಂಸ್ಕೃತಿಕ ವೇದಿಕೆಯಿಂದ

ಡಾ. ಅಂಬೇಡ್ಕರ್ ಸಂಭ್ರಮಿಸುವ ಭೀಮೋತ್ಸವ ಆಚರಣೆಮೇ ೧-೨ರಂದು ನಗರದಲ್ಲಿ ಸಂವಿಧಾನಶಿಲ್ಪಿಯ ಸಾಂಸ್ಕೃತಿಕ ಸ್ಮರಣೆತುಮಕೂರು: ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸಂಭ್ರಮಿಸುವ, ಅವರ ೧೩೫ನೇ ಜನ್ಮದಿನದ ಅಂಗವಾಗಿ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಮೇ ೧ ಮತ್ತು ೨ರಂದು ಕಲ್ಪತರು ಸಾಂಸ್ಕೃತಿಕ ವೇದಿಕೆಯಿಂದ ವೈಭವದ ‘ಕರ್ನಾಟಕ ಭೀಮೋತ್ಸವ’ ಹಮ್ಮಿಕೊಳ್ಳಲಾಗಿದೆ.ವೇದಿಕೆಯ ಅಧ್ಯಕ್ಷ ಸೋಮಶೇಖರ್ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭೀಮೋತ್ಸವ ಕಾರ್ಯಕ್ರಮದ ವಿವರ ನೀಡಿ, ಡಾ. ಅಂಬೇಡ್ಕರ್ ಅವರನ್ನು ಸಂಗೀತ, ಸಾಂಸ್ಕೃತಿಕವಾಗಿ ಆರಾಧಿಸುವ, ಸಂಭ್ರಮಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಇದರ ಅಂಗವಾಗಿ ಮೇ ೧ರಂದು ಸಂಜೆ ಜನಪ್ರಿಯ ಗಾಯಕರಾದ ಕಂಬದರAಗಯ್ಯ, ನವೀನ್ ಸಜ್ಜು, ಸವಿತಕ್ಕ, ಶಿವಾನಿ ತಂಡದಿAದ ಜಾನಪದ ಸಂಭ್ರಮ ಏರ್ಪಾಟಾಗಿದೆ. ನಂತರ ಅರುಣ್ಕುಮಾರ್ ಮತ್ತು ತಂಡದಿAದ ಅಂಬೇಡ್ಕರ್ ಕುರಿತ ಗೀತಗಾಯನ ನಡೆಯಲಿದೆ. ಮೇ ೨ರಂದು ಖ್ಯಾತ ಹಿನ್ನಲೆ ಗಾಯಕ ರಾಜೇಶ್ಕೃಷ್ಣನ್, ಖ್ಯಾತ ಗಾಯಕಿ ಮಂಗ್ಲಿ ಹಾಗೂ ಬ್ಯಂದವಿಹಾರಿ ತಂಡದಿAದ ಗೀತಗಾಯವ ವೈಭವ ನಡೆಯಲಿದೆ. ಚಲನಚಿತ್ರ ನಟ ಗಣೇಶ್, ಫಿಲಂ ಫೇರ್ ಪ್ರಶಸ್ತಿ ವಿಜೇತ ಹಿಶವರ ಅಬ್ದುಲ್ ವಹಾಬ್ ಮುಂತಾದವರು ‘ಕಲ್ಪತರು ಸಂಗೀತ ಸಂಭ್ರಮ’ ನಡೆಸಿಕೊಡುವರು. ಇದರಲ್ಲಿ ಅಂಬೇಡ್ಕರ್ ಅವರ ಮರಿ ಮೊಮ್ಮಗ ರಾಜರತ್ನ ಅಶೋಕ ಅಂಬೇಡ್ಕರ್ ಪಾಲ್ಗೊಳ್ಳಲಿದ್ದಾರೆ. ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಪಾಲನಹಳ್ಳಿ ಮಠದ ಸಿದ್ದರಾಜು ಸ್ವಾಮೀಜಿ, ಎಲೆರಾಂಪುರ ಮಠದ ಡಾ. ಹನುಮಂತನಾಥ ಸ್ವಾಮೀಜಿಗಳು ಉದ್ಘಾಟನಾ ಸಮಾರಂಭದ ದಿವ್ಯಸಾನಿಧ್ಯ ವಹಿಸುವರು. ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ ಪರಮೇಶ್ವರ್, ಶಾಸಕ ಜಿ.ಬಿ. ಜ್ಯೋತಿಗಣೇಶ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸುವರು ಎಂದು ಸೋಮಶೇಖರ್ ತಿಳಿಸಿದರು.ರಾಜ್ಯದ ವಿವಿಧೆಡೆಗಳಿಂದ ಡಾ. ಅಂಬೇಡ್ಕರ್ ಅನುಯಾಯಿಗಳು, ದಲಿತ ಸಂಘರ್ಷ ಸಮಿತಿ ಹೋರಾಟಗಾರರು, ವಿವಿಧ ಸಂಘಸAಸ್ಥೆಗಳ ಪ್ರಮುಖರು, ವಿದ್ಯಾರ್ಥಿಗಳು ಭಾಗವಹಿಸುವರು. ಎರಡು ಈ ದಿನಗಳ ಕಾರ್ಯಕ್ರಮದಲ್ಲಿ ಸುಮಾರು ೧ ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.ಕರ್ನಾಟಕ ಭೀಮೋತ್ಸವ ಕಾರ್ಯಕ್ರಮವನ್ನು ರಾಜ್ಯದ ಪ್ರತಿಷ್ಠಿತ ಇವೆಂಟ್ ಮ್ಯಾನೆಂಜ್ಮೆAಟ್ ರಾಜ್ ಇವೆಂಟ್ಸ್ನವರು ನಡೆಸಿಕೊಡಲಿದ್ದಾರೆ. ಇದರ ವ್ಯವಸ್ಥಾಪಕ ಸಿದ್ಧರಾಜು ಭಾಗವಹಿಸುವರು. ಜಿಲ್ಲೆಯ ಇತಿಹಾಸದಲ್ಲಿ ಬಾಬಾ ಸಾಹೇಬರ ಅಂಬೇಡ್ಕರ್ ಅವರ ಜಯಂತಿಯನ್ನು ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ಉತ್ಸವವಾಗಿ ಹಬ್ಬದ ರೀತಿ ಆಚರಿಸಿ, ಸಂವಿಧಾನಶಿಲ್ಪಿಯನ್ನು ಸಾಂಸ್ಕೃತಿಕವಾಗಿ ಸ್ಮರಣೆ ಮಾಡುವ ಕಾರ್ಯಕ್ರಮ ಇದಾಗಿದೆ ಎಂದು ಸೋಮಶೇಖರ್ ಹೇಳಿದರು. ವಿದ್ಯಾವಾಹಿನಿ ಸಂಸ್ಥೆ ಕಾರ್ಯದರ್ಶಿ ಎನ್.ಬಿ. ಪ್ರದೀಪ್ಕುಮಾರ್, ವಿವಿಧ ಸಂಘಟನೆಗಳ ಮುಖಂಡರಾದ ಡಾ.ಧನಿಯಾಕುಮಾರ್, ಡಾ. ನೇತಾಜಿ ಶ್ರೀಧರ್, ನವಚೇತನ್, ಡಾ.ಕೊಟ್ಟ ಶಂಕರ್, ಅರವಿಂದ್, ಡ್ಯಾಗೇರಹಳ್ಳಿ ವಿರೂಪಾಕ್ಷ, ಅಖಿಲೇಶ್, ಪಿ.ಎನ್. ರಾಮಯ್ಯ, ರವಿಕುಮಾರ್, ಓಂಕಾರ್, ನರಸಿಂಹಮೂರ್ತಿ, ಚಂದನ್ ಪಟೇಲ್, ವಿಠಲ್, ಗುರುರಾಘವೇಂದ್ರ ಮೊದಲಾದವರು ಪತ್ರಿಕಾಗೋಷ್ಠೀಯಲ್ಲಿ ಹಾಜರಿದ್ದರು.ಇದಕ್ಕೂ ಮೊದಲು ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮದ ಪೆಂಡಾಲ್ಗೆ ಭೂಮಿ ಪೂಜೆ ನೆರವೇರಿಸಲಾಯಿತು. ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರೊಂದಿಗೆ ವಿವಿಧ ಸಂಘಟನೆಗಳು ಮುಖಂಡರು ಭಾಗವಹಿಸಿದ್ದರು.

