ಹಾಲಪ್ಪ ಮಾತನಾಡುತ್ತ ಬಂದಿರುವ ಪ್ರೇಕ್ಷಕರರಲ್ಲಿ ಹೆಚ್ಚಿನವರು ಪೋಷಕರು ಇಂತಹ ಬೇಸಿಗೆ ಶಿಬಿರಗಳ ಅವಕಾಶ ಬಳಸಿಕೊಂಡು ಮಕ್ಕಳಲ್ಲಿ ಇಂತಹ ಹವ್ಯಾಸಗಳ ರುಚಿ ಹತ್ತಿಸಬೇಕು ಎಂದು ಹೇಳುತ್ತಲೇ ಮಕ್ಕಳ ನಾಟಕವು ಕೇವಲ ಒಂದೆರಡು ಪ್ರದೇಶಗಳಲ್ಲಿ ಸೀಮಿತವಾಗದೆ ನಗರದ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚೆಚ್ಚು ಜನರ ತಲುಪಬೇಕೆಂಬ ಇಚ್ಚೆ ವ್ಯಕ್ತಪಡಿಸಿದರು

ಹಾಲಪ್ಪ ಮಾತನಾಡುತ್ತ ಬಂದಿರುವ ಪ್ರೇಕ್ಷಕರರಲ್ಲಿ ಹೆಚ್ಚಿನವರು ಪೋಷಕರು ಇಂತಹ ಬೇಸಿಗೆ ಶಿಬಿರಗಳ ಅವಕಾಶ ಬಳಸಿಕೊಂಡು ಮಕ್ಕಳಲ್ಲಿ ಇಂತಹ ಹವ್ಯಾಸಗಳ ರುಚಿ ಹತ್ತಿಸಬೇಕು ಎಂದು ಹೇಳುತ್ತಲೇ ಮಕ್ಕಳ ನಾಟಕವು ಕೇವಲ ಒಂದೆರಡು ಪ್ರದೇಶಗಳಲ್ಲಿ ಸೀಮಿತವಾಗದೆ ನಗರದ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚೆಚ್ಚು ಜನರ ತಲುಪಬೇಕೆಂಬ ಇಚ್ಚೆ ವ್ಯಕ್ತಪಡಿಸಿದರು. ನಿಕೇತ್ ಅವರು ಮಾತನಾಡುತ್ತ ವೃತ್ತಿಧರ್ಮಕ್ಕಿಂತ ಪ್ರವೃತಿಯ ಬಗ್ಗೆ ಹೆಚ್ಚು ಒತ್ತುಕೊಡುತ್ತ ತಾನು ಅತಿಥಿಯಾಗಿ ಹೆಚ್ಚಾಗಿ ಒಬ್ಬ ಪೋಷಕನಾಗಿ ಬಂದಿರುವೆ.. ತನ್ನ ಇಬ್ಬರು ಪುಟ್ಟ ಮಕ್ಕಳು ಇಲ್ಲಿನ ಶಿಬಿರಾರ್ಥಿಗಳಾಗಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.. ಮುರುಳಿ ಧರ್ ಹಾಲಪ್ಪನಿಖಿತ್ ಮೌರ್ಯಅಧ್ಯಕ್ಷರಾದ ರಮಾದೇವಿರಾಜು ಕೆ ಎಸ್, ಭಾನುಪ್ರಕಾಶ್ವಿಶೇಷವಾಗಿ ಆಯ್ಕೆಯಾದ ಶಿಭಿರಾರ್ಥಿಯ ಪೋಷಕರು..ಭಾನುಪ್ರಕಾಶ್ ಸರ್ ಮಾತನಾಡುತ್ತ ಅಚಲ ಕಲಾ ಕೇಂದ್ರ ಕಟ್ಟಲು ಕಾರಣ ಕೌಟುಂಬಿಕ ಹಿನ್ನಲೆ, ತಂದೆ ಶಿಕ್ಷಕರಾಗಿ ನಾಟಕಗಳನ್ನು ಬರೆದು ರಂಗಭೂಮಿಯಲ್ಲಿ ಒಳಗೊಂಡ ಕಾರಣ ಅಚಲಪ್ಪ ಎಂಬುದು ಅವರ ತಂದೆಯ ಹೆಸರು ಆಗಿದ್ದಿರಿಂದ ಅಚಲ ಕಲಾ ಕೇಂದ್ರ ಹುಟ್ಟುಹಾಕಲು ಪ್ರೇರಣೆಯಾಯಿತು.ಮಕ್ಕಳ ರಂಗಭೂಮಿ ಏಕೆ ಎಂದರೆ ಮಕ್ಕಳಲ್ಲಿ ಹೊರಜಗತ್ತಿನ ಪರಿವಿಲ್ಲ.. ಬರಿ ಮೊಬೈಲ್ ಗೀಳು ಹೆಚ್ಚಾಗಿದೆ.. ಅವರಿಗೆ ಲಲಿತಾಕಲೆಗಳಿಗೆ ಪರಿಚಯಿಸಿ ಮಕ್ಕಳನ್ನು ಜೀವಂತವಾಗಿಡಲು ಇರುವ ಸೇತುವೆ ಈ ಬೇಸಿಗೆ ಶಿಬಿರ ಎಂದು ಹೇಳಿದ್ದಾರೆ..ರಂಗಪ್ರಯೋಗಕ್ಕೆ ಮಕ್ಕಳ ಏಕೆ ಎಂದರೆ ಮಕ್ಕಳ ಜೊತೆ ಕೆಲಸ ಮಾಡುವಾಗ ಕಲಿಕೆಗೆ ಹೆಚ್ಚು ಅವಕಾಶವಿರುತ್ತದೆ.. ಮಕ್ಕಳ ಮುಕ್ತ ಚಿಂತನೆಯ ಬಗ್ಗೆ ಉಲ್ಲೇಖಿಸುತ್ತ ಕುವೆಂಪು ಅವರ ವಿಶ್ವಮಾನವ ಸಂದೇಶದ ಬಗ್ಗೆ ಮಾತನಾಡಿದರು..ಮಕ್ಕಳಲ್ಲಿ ಬಿತ್ತುವ ಒಂದಷ್ಟು ಧನಾತ್ಮಕ ವಿಷಯಗಳನ್ನು ಬಿತ್ತಿದರೆ ಮುಂದೆ ಹೆಮ್ಮೆರವಾಗಿ ಸಮಾಜಕ್ಕೆ ಮಾದರಿ ಆಗುತ್ತದೆ ಎಂದರು

