ಜೆ ಸಿ ಐ ತುಮಕೂರು ಮೆಟ್ರೋ ವತಿಯಿಂದ ಕಾರ್ಮಿಕ ದಿನಾಚರಣೆ ಪ್ರಯುಕ್ತ ಪೌರಕಾರ್ಮಿಕರು ಹಾಗೂ ಆರೋಗ್ಯ ಕೇಂದ್ರ ಸಿಬ್ಬಂದಿ ಹಾಗೂ ವಿವಿಧ ಕ್ಷೇತ್ರದ ಕಾರ್ಮಿಕರಿಗೆ ಸನ್ಮಾನಿಸಲಾಯಿತು ಜೆಸಿಐ ತುಮಕೂರು ಮೆಟ್ರೋ ವತಿಯಿಂದ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು

ಜೆ ಸಿ ಐ ತುಮಕೂರು ಮೆಟ್ರೋ ವತಿಯಿಂದ ಕಾರ್ಮಿಕ ದಿನಾಚರಣೆ ಪ್ರಯುಕ್ತ ಪೌರಕಾರ್ಮಿಕರು ಹಾಗೂ ಆರೋಗ್ಯ ಕೇಂದ್ರ ಸಿಬ್ಬಂದಿ ಹಾಗೂ ವಿವಿಧ ಕ್ಷೇತ್ರದ ಕಾರ್ಮಿಕರಿಗೆ ಸನ್ಮಾನಿಸಲಾಯಿತು ಜೆಸಿಐ ತುಮಕೂರು ಮೆಟ್ರೋ ವತಿಯಿಂದ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು, ಮೀಡಿಯಾ ಮಾಧ್ಯಮ ಪ್ರತಿನಿಧಿಗಳು, ಆರೋಗ್ಯ ಕೇಂದ್ರದ ಸಿಬ್ಬಂದಿ, ಸೆಕ್ಯುರಿಟಿ ಸಿಬ್ಬಂದಿ, ಹೋಮ್ ಗಾರ್ಡ್ ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜೆಸಿ ಮಮತಾ ರಾಜ್, ಕಾರ್ಯದರ್ಶಿ ಜೆಸಿ ಸುನೀತ್ ರಾಜ್, ಪ್ರಾಜೆಕ್ಟ್ ಡೈರೆಕ್ಟರ್ ಜೆಸಿ ಸದಾನಂದ, ಗಣೇಶ್ ಟೂರ್ಸ್ & ಟ್ರಾವೆಲ್ಸ್ ಮಾಲೀಕರು ಹಾಗೂ ಘಟಕದ ಪೂರ್ವ ಅಧ್ಯಕ್ಷರಾದ ಜೆಸಿ ಶಿವಕುಮಾರ ಸ್ವಾಮಿ ಮತ್ತು ಜೆಸಿ ವೇಣುಗೋಪಾಲ್ ಸರ್, ವೈಸ್ ಪ್ರೆಸಿಡೆಂಟ್ಸ್ಗಳಾದ ಜೆಸಿ ಲಕ್ಷ್ಮಿ, ಜೆಸಿ ಮಧುಸೂದನ್, ಜೆಸಿ ದೀಪಕ್, ಜೆಸಿ ನಾಗೇಂದ್ರನಾಥ್, ಖಜಾಂಚಿಗಳಾದ ಜೆಸಿ ಪ್ರಿಯ ಗೋಕುಲ್ ಹಾಗೂ ಸದಸ್ಯರಾದ ಜೆಸಿ ಅನುರಮೇಶ್ ಮತ್ತು ಜೆಸಿ ಆನಂದ್ ಉಪಸ್ಥಿತರಿದ್ದು, ಕಾರ್ಮಿಕರ ಸೇವೆಯನ್ನು ಗೌರವಿಸಿದರು.ಇದೇ ಸಂದರ್ಭದಲ್ಲಿ ಚಾಲಕರಿಗೆ ಸ್ಟೈನ್ಲೆಸ್ ಸ್ಟೀಲ್ ನೀರಿನ ಬಾಟಲಿಗಳನ್ನು ವಿತರಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ನಗರದತ್ತ ಸಣ್ಣ ಹೆಜ್ಜೆ ಇಡುವ ಪ್ರಯತ್ನ ಮಾಡಲಾಯಿತು

