ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (KMF) ಮಹಿಳಾ ಹಾಲು ಉತ್ಪಾದಕರನ್ನು ಸಬಲೀಕರಣಗೊಳಿಸಲು ಮತ್ತು ವೈಜ್ಞಾನಿಕವಾಗಿ ಹೈನುಗಾರಿಕೆ ನಡೆಸಲು ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆಸಿ,ಎನ್,ಬಿಂದುಮಾಧವರಾವ್ ತಿಳಿಸಿದರು

*ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (KMF) ಮಹಿಳಾ ಹಾಲು ಉತ್ಪಾದಕರನ್ನು ಸಬಲೀಕರಣಗೊಳಿಸಲು ಮತ್ತು ವೈಜ್ಞಾನಿಕವಾಗಿ ಹೈನುಗಾರಿಕೆ ನಡೆಸಲು ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ
ಸಿ,ಎನ್,ಬಿಂದುಮಾಧವ
ರಾವ್ ತಿಳಿಸಿದರು,
ಪಾವಗಡ: ವಿ ಎಸ್ ಎಸ್ ಎನ್ ಸದಸ್ಯರಾದ
ಬಿಂದುಮಾಧವ ರಾವ್ ರವರು ಮಾತನಾಡುತ್ತಾ ನಿಡಗಲ್ ಹೋಬಳಿ ಸಿಕೆಪುರ ಗ್ರಾಮದ ಸೊಸೈಟಿ ವತಿಯಿಂದ ಸಿಕೆಪುರ ಹಾಲು ಉತ್ಪಾದಕರ ಮಹಿಳಾ ಸಂಘ ಸಿ ಕೆ ಪುರ ಸಂಘದಿಂದ ತುಮುಲು ಹಾಲು ಉತ್ಪಾದಕರ ಸಂಘ, ತುಮಕೂರು ಹಾಲು ಉತ್ಪಾದಕರ ಸಂಘ ಕೆಎಂಎಫ್ ಇವರ ವತಿಯಿಂದ ನಮಗೆ
ಜನಪ್ರಿಯ ಮಾನ್ಯ ಶಾಸಕರು ಹಾಗೂ ತುಮುಲು ಅಧ್ಯಕ್ಷರಾದ
ಹೆಚ್ ವಿ ವೆಂಕಟೇಶ್ ಹಾಗೂ ತುಮಕೂರು ಹಾಲು ಉತ್ಪಾದಕರ ಕೆಎಂಎಫ್ ಅಧ್ಯಕರಾದ ಶಾಸಕರು ನಮ್ಮ ಸಿಕೆಪುರ ಹಾಲು ಉತ್ಪಾದಕರ ಮಹಿಳಾ ಸಂಘಕ್ಕೆ ಕ್ಷೀರ ಸಂಜೀವಿನಿ ಅಡಿಯಲ್ಲಿ ಬಡ್ಡಿ ರಹಿತ ಸಾಲವನ್ನು ಸಿ ಕೆ ಪುರ ಸಂಘಕ್ಕೆ ಶಾಸಕರು 7 ಲಕ್ಷ ರೂಪಾಯಿಗಳು ಮಂಜೂರು ಮಾಡಿದ್ದಾರೆ ಸ್ಟೆಪ್ ಲೋನ್ ಅಧಿಕಾರಿಯದ ಮಧು ಮೇಡಂ ರವರು ಸಹ ಸಹಕಾರ ನೀಡಿದ್ದಾರೆ,
ಹಾಗಾಗಿ ಈ ಒಂದು ಕ್ಷೀರ ಸಂಜೀವಿನಿ ಅಡಿಯಲ್ಲಿ ಸಾಲ ನೀಡುತ್ತಾರೆ ಮೊದಲನೇ ಬಾರಿಗೆ ಹೆಣ್ಣು ಮಕ್ಕಳಿಗೆ ಕೆಎಂಎಫ್ ಕಟ್ಟಡದಲ್ಲಿ ತರಬೇತಿ ಕೊಡುತ್ತಾರೆ
ಮಹಿಳೆಯರಿಗೆ ತರಬೇತಿ ನೀಡಿ ಯಾವ ರೀತಿಯ ಹಸುಗಳು ಸಾಕಬೇಕು ಯಾವರೀತಿ ಸಾಲ ಪಡೆದು ಸಾಲದ ವ್ಯವಹಾರದ ಬಗ್ಗೆ ಎಲ್ಲಾ ಮಾಹಿತಿಗಳನ್ನು ಕೊಡುತ್ತಾರೆ,
ಆದ್ದರಿಂದ ನಮ್ಮ ಸಿಕೆಪುರ ಗ್ರಾಮದಿಂದ 30 ಜನ ಮಹಿಳೆಯರನ್ನು ಕಳಿಸುತ್ತೇವೆ,
ಈ ಗ್ರಾಮದ ಸೊಸೈಟಿ ವ್ಯಾಪ್ತಿಯಲ್ಲಿ ಸಿ ಕೆ ಪುರ, ಚನ್ನಸಾಗರದ ಹಟ್ಟಿ, ಉದ್ದಂಡಪ್ಪನ ಪಾಳ್ಯ, ದೇವರಹಟ್ಟಿ, ಈ ನಾಲ್ಕು ಹಳ್ಳಿಗಳಿಗೆ ಸೊಸೈಟಿ ಬರುತ್ತದೆ
ಎಲ್ಲಾ ರೈತರಿಗೂ ಕೂಡ ಬಡ್ಡಿ ರಹಿತವಾಗಿ 50,000 ಸಾಲ ಕೊಡುತ್ತೇವೆ,
ಸಾಲ ಮರುಪಾವತಿ ಯಾವ ರೀತಿ ಪಡೆಯುತ್ತಾರೆ ಎಂದರೆ ತಿಂಗಳ ತಿಂಗಳು ನಾವು ಕಟ್ಟಿಕೊಂಡು ಹೋಗುಬೇಕು
ರೈತರಿಗೆ ಹೊಸ ಹಸುಗಳು ತರುವವರಿಗೆ ಮಾತ್ರ ಸಾಲ ಮಂಜೂರು ಮಾಡಿಕೊಡುತ್ತಾರೆ
ಕ್ಷೀರ ಸಂಜೀವಿನಿ ಹಾಲು ಹೆಚ್ಚಿನದಾಗಿ ನಮ್ಮ ಸೊಸೈಟಿಗೆ ಜಾಸ್ತಿ ಬರಬೇಕು ಸ್ಟೆಪ್ ಲೋನ್ ಕ್ಷೀರ ಸಂಜೀವಿನಿ ಅಡಿಯಲ್ಲಿ 7 ಲಕ್ಷ ರೂಪಾಯಿಗಳು ಸಹಾಯ ಮಾಡುತ್ತಾರೆ,
ಕೌಶಲ್ಯ ಅಭಿವೃದ್ಧಿ: ಹಸುಗಳ ನಿರ್ವಹಣೆ, ಆಧುನಿಕ ಹೈನುಗಾರಿಕೆ ತಂತ್ರಜ್ಞಾನ ಮತ್ತು ಹಾಲಿನ ಗುಣಮಟ್ಟ ಕಾಪಾಡುವ ಬಗ್ಗೆ ಕೆಎಂಎಫ್ ತರಬೇತಿ ನೀಡುತ್ತದೆ.
ವಿಶೇಷವಾಗಿ ಎಚ್ ವಿ ವೆಂಕಟೇಶ್ ರವರು ತುಮುಲ್ ಅಧಿಕಾರಿಗಳ ಮಧು ಮೇಡಂ ರವರಿಗೆ ಹಾಗೂ ಪಾವಗಡ
ಕೆ ಎಂ ಎಫ್ ತುಮುಲ್ ನಿರ್ದೇಶಕರಿಗೆ ಧನ್ಯವಾದಗಳು ತಿಳಿಸಿದರು,
ವರದಿ ರಾಮಪ್ಪ ಸಿ ಕೆ ಪುರ
ಕಲ್ಪತರು ನ್ಯೂಸ್ ಪಾವಗಡ

