ಎಸ್.ಎಂ. ಕೃಷ್ಣ ದತ್ತಿ ನಿಧಿಗೆ ಯುವ ಮುಖಂಡ ರಘುವೀರ್ ಎಸ್ ಗೌಡ 3 ಲಕ್ಷ ದೇಣಿಗೆ ಕರ್ನಾಟಕ ಸಂಘದಲ್ಲಿ ಸ್ಥಾಪಿತ ದತ್ತಿ ನಿಧಿ ಮೊತ್ತ 10ಲಕ್ಷ ರೂ.ಗೇರಿಕೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಎಸ್.ಎಂ.ಕೃಷ್ಣ ಹೆಸರಿನಲ್ಲಿ ಪ್ರಶಸ್ತಿ : ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಿರಿಯ ಮುತ್ಸುದ್ದಿ ಎಸ್.ಎಂ.ಕೃಷ್ಣ ಅವರ ಸ್ಮರಣಾರ್ಥವಾಗಿ ಕರ್ನಾಟಕ ಸಂಘದಲ್ಲಿ ಸ್ಥಾಪಿಸಿರುವ ಎಸ್.ಎಂ. ಕೃಷ್ಣ ದತ್ತಿ ನಿಧಿ ಗೆ ಕಾಂಗ್ರೆಸ್ ಯುವ ಮುಖಂಡ ರಘುವೀರ್ ಎಸ್.ಗೌಡ ಅವರು

ಎಸ್.ಎಂ. ಕೃಷ್ಣ ದತ್ತಿ ನಿಧಿಗೆ ಯುವ ಮುಖಂಡ ರಘುವೀರ್ ಎಸ್ ಗೌಡ 3 ಲಕ್ಷ ದೇಣಿಗೆ ಕರ್ನಾಟಕ ಸಂಘದಲ್ಲಿ ಸ್ಥಾಪಿತ ದತ್ತಿ ನಿಧಿ ಮೊತ್ತ 10ಲಕ್ಷ ರೂ.ಗೇರಿಕೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಎಸ್.ಎಂ.ಕೃಷ್ಣ ಹೆಸರಿನಲ್ಲಿ ಪ್ರಶಸ್ತಿ : ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಿರಿಯ ಮುತ್ಸುದ್ದಿ ಎಸ್.ಎಂ.ಕೃಷ್ಣ ಅವರ ಸ್ಮರಣಾರ್ಥವಾಗಿ ಕರ್ನಾಟಕ ಸಂಘದಲ್ಲಿ ಸ್ಥಾಪಿಸಿರುವ “ಎಸ್.ಎಂ. ಕೃಷ್ಣ ದತ್ತಿ ನಿಧಿ”ಗೆ ಕಾಂಗ್ರೆಸ್ ಯುವ ಮುಖಂಡ ರಘುವೀರ್ ಎಸ್.ಗೌಡ ಅವರು, 3 ಲಕ್ಷ ರೂ. ನೀಡಿದ್ದಾರೆ.ಎಸ್.ಎಂ.ಕೃಷ್ಣ ಅವರ ಅಭಿಮಾನಿಗಳು ಕರ್ನಾಟಕ ಸಂಘದಲ್ಲಿ ಕಳೆದ ವರ್ಷ 7 ಲಕ್ಷ ರೂ. ಮೊತ್ತದಲ್ಲಿ ಎಸ್.ಎಂ.ಕೃಷ್ಣ ದತ್ತಿ ನಿಧಿ ಸ್ಥಾಪಿಸಿದ್ದರು. ಈಗ ರಘುವೀರ್ ಅವರು ಈ ದತ್ತಿ ನಿಧಿಗೆ 3 ಲಕ್ಷ ರೂ. ದೇಣಿಗೆ ನೀಡಿದ್ದು, ದತ್ತಿ ನಿಧಿ ಮೊತ್ತ 10 ರೂ.ಗೆ ಏರಿಕೆಯಾಗಿದೆ.ಎಸ್.ಎಂ.ಕೃಷ್ಣ ಅವರ ಅಭಿಮಾನಿ ಆಗಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ರಘುವೀರ್ ಎಸ್. ಗೌಡ ಅವರು ಕೆಪಿಸಿಸಿ ಬೆಂಗಳೂರು ಕೇಂದ್ರ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಎಸ್.ಎಂ.ಕೃಷ್ಣ ಅವರು ಈ ನಾಡಿಗೆ ನೀಡಿರುವ ಕೊಡುಗೆಗಳು ಅವಿಸ್ಮರಣೀಯ. ಅವರ ಸಾಧನೆ ನಮಗೆ ದಾರಿದೀಪವಾಗಬೇಕು. ಅವರ ಹೆಸರು, ಸಾಧನೆಯನ್ನು ನೆನೆಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಕರ್ನಾಟಕ ಸಂಘದಲ್ಲಿ ಸ್ಥಾಪಿಸಿರುವ ಎಸ್.ಎಂ.ಕೃಷ್ಣ ದತ್ತಿ ನಿಧಿಗೆ 3 ಲಕ್ಷ ರೂ. ನೀಡಲಾಗಿದೆ ಎಂದು ಹೇಳಿದರು.ಶಿಕ್ಷಣ, ಆರೋಗ್ಯ, ಸಂಶೋಧನೆ, ಸಾಹಿತ್ಯ, ಕೃಷಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಸಾಧನೆ ಮಾಡಿದವರಿಗೆ ಎಸ್.ಎಂ.ಕೃಷ್ಣ ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಎಸ್.ಎಂ.ಕೃಷ್ಣ ದತ್ತಿ ನಿಧಿಯಿಂದ ಪ್ರಶಸ್ತಿ ನೀಡಲಾಗುತ್ತದೆ. ಎಸ್.ಎಂ.ಕೃಷ್ಣ ದತ್ತಿ ನಿಧಿಯ ಪ್ರಥಮ ವರ್ಷದ ಪ್ರಶಸ್ತಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಪಾತ್ರರಾಗಿದ್ದು ಮೇ 5 ರಂದು “ಎಸ್.ಎಂ.ಕೃಷ್ಣ” ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ.

