ವೀರಲೋಕ ಪುಸ್ತಕ ಸಂತೆ ಸಾಹಿತ್ಯ ಸಮ್ಮೇಳನದಷ್ಟೇ ಪರಿಣಾಮಕಾರಿ: ಪ್ರಾಂಶುಪಾಲ ಚಂದ್ರಯ್ಯಶಿರಾ: ಕನ್ನಡ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿರುವ ವೀರಲೋಕ ಪುಸ್ತಕ ಸಂತೆ ಕಾರ್ಯಕ್ರಮವು ಸಾಹಿತ್ಯ ಸಮ್ಮೇಳನದಷ್ಟೇ ಪರಿಣಾಮಕಾರಿ ಹಾಗೂ ಜನಪರ ಕಾರ್ಯಕ್ರಮವಾಗಲಿದೆ ಎಂದು ಶಿರಾ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಯ್ಯ ಅಭಿಪ್ರಾಯಪಟ್ಟರು

ವೀರಲೋಕ ಪುಸ್ತಕ ಸಂತೆ ಸಾಹಿತ್ಯ ಸಮ್ಮೇಳನದಷ್ಟೇ ಪರಿಣಾಮಕಾರಿ: ಪ್ರಾಂಶುಪಾಲ ಚಂದ್ರಯ್ಯಶಿರಾ: ಕನ್ನಡ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿರುವ ವೀರಲೋಕ ಪುಸ್ತಕ ಸಂತೆ ಕಾರ್ಯಕ್ರಮವು ಸಾಹಿತ್ಯ ಸಮ್ಮೇಳನದಷ್ಟೇ ಪರಿಣಾಮಕಾರಿ ಹಾಗೂ ಜನಪರ ಕಾರ್ಯಕ್ರಮವಾಗಲಿದೆ ಎಂದು ಶಿರಾ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಯ್ಯ ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೀರಲೋಕ ಪುಸ್ತಕ ಸಂತೆಯಲ್ಲಿ ಬಹಳಷ್ಟು ಜನಸಾಮಾನ್ಯರು ಭಾಗವಹಿಸಿ ತಮ್ಮ ಇಷ್ಟದ ಪುಸ್ತಕಗಳನ್ನು ಖರೀದಿಸುವ ಅವಕಾಶ ದೊರೆಯಲಿದೆ. ಪುಸ್ತಕ ಓದುವ ಹವ್ಯಾಸವನ್ನು ಉತ್ತೇಜಿಸುವ ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಜ್ಞಾನ ಮತ್ತು ಅರಿವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.ಒಂದು ಉತ್ತಮ ಪುಸ್ತಕವನ್ನು ಖರೀದಿಸಲು ಬೆಂಗಳೂರಿನಂತಹ ಮಹಾನಗರಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ಅಲ್ಲಿನ ಹೆಚ್ಚಿನ ಟ್ರಾಫಿಕ್ ಹಾಗೂ ಸಮಯದ ಸಮಸ್ಯೆಗಳ ನಡುವೆ ಪುಸ್ತಕ ಖರೀದಿಸುವುದು ಕಷ್ಟಕರವಾಗುತ್ತದೆ. ಆದರೆ ತುಮಕೂರು ಜಿಲ್ಲೆಯಲ್ಲಿಯೇ ಇಂತಹ ಅದ್ಭುತ ಪುಸ್ತಕ ಸಂತೆ ಆಯೋಜನೆಯಾಗಿರುವುದು ಜಿಲ್ಲೆಯ ಪುಸ್ತಕ ಪ್ರಿಯರಿಗೆ ಸಂತಸದ ಸುದ್ದಿಯಾಗಿದೆ ಎಂದು ತಿಳಿಸಿದರು.ತುಮಕೂರಿನ ಗಾಜಿನ ಮನೆಯಲ್ಲಿ ನಡೆಯಲಿರುವ ಈ ಪುಸ್ತಕ ಸಂತೆಯಲ್ಲಿ ಸುಮಾರು 70ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು ಭಾಗವಹಿಸಲಿದ್ದು, ಸಾಹಿತ್ಯ, ಇತಿಹಾಸ, ವಿಜ್ಞಾನ, ಕಾದಂಬರಿ, ಮಕ್ಕಳ ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಸಾವಿರಾರು ಪುಸ್ತಕಗಳು ಒಂದೇ ಸೂರಿನಡಿ ಲಭ್ಯವಾಗಲಿವೆ. ಓದುಗರಿಗೆ ತಮ್ಮ ಆಸಕ್ತಿ ಮತ್ತು ಹವ್ಯಾಸಕ್ಕೆ ಅನುಗುಣವಾಗಿ ಬೇಕಾದ ಎಲ್ಲಾ ರೀತಿಯ ಪುಸ್ತಕಗಳು ಇಲ್ಲಿ ದೊರೆಯಲಿವೆ ಎಂದು ಹೇಳಿದರು.ವೀರಲೋಕ ಪುಸ್ತಕ ಸಂತೆ ಕಾರ್ಯಕ್ರಮವು ಜಿಲ್ಲೆಯ ಓದುಗರನ್ನು ಪುಸ್ತಕಗಳತ್ತ ಸೆಳೆಯುವ ಮೂಲಕ ಓದುವ ಸಂಸ್ಕೃತಿಗೆ ಹೊಸ ಉತ್ತೇಜನ ನೀಡಲಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.ಪುಸ್ತಕ ಓದುವುದು ಜ್ಞಾನ ವೃದ್ಧಿಗೆ ಅತ್ಯುತ್ತಮ ಮಾರ್ಗ: ಸಮಾಜಸೇವಕ ಕಲ್ಕೆರೆ ರವಿಕುಮಾರ್ಶಿರಾ: ಪುಸ್ತಕ ಓದುವ ಹವ್ಯಾಸವು ವ್ಯಕ್ತಿಯ ಜ್ಞಾನವನ್ನು ವೃದ್ಧಿಸುವುದರ ಜೊತೆಗೆ ಸಮಾಜದ ಬಗ್ಗೆ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಮಾಜಸೇವಕ ಕಲ್ಕೆರೆ ರವಿಕುಮಾರ್ ಅಭಿಪ್ರಾಯಪಟ್ಟರು.ವೀರಲೋಕ ಪುಸ್ತಕ ಸಂತೆ ಕುರಿತು ಮಾತನಾಡಿದ ಅವರು, ತಮಗೂ ಸಹ ಪುಸ್ತಕ ಓದುವ ಅಭ್ಯಾಸವಿದ್ದು, ಬೆಂಗಳೂರಿನ ಸಪ್ನಾ ಬುಕ್ ಸ್ಟಾಲ್‌ಗೆ ಭೇಟಿ ನೀಡಿದಾಗ ಒಂದೇ ಬಾರಿ 20 ರಿಂದ 25 ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಖರೀದಿಸಿ ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದೇನೆ ಎಂದು ತಿಳಿಸಿದರು.ತುಮಕೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವೀರಲೋಕ ಪುಸ್ತಕ ಸಂತೆ ಕಾರ್ಯಕ್ರಮವನ್ನು ತುಮಕೂರಿನ ಗಾಜಿನ ಮನೆಯಲ್ಲಿ ಆಯೋಜಿಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯದ ಹಲವಾರು ಖ್ಯಾತ ಸಾಹಿತಿಗಳು, ಲೇಖಕರು ಹಾಗೂ ಪುಸ್ತಕ ಪ್ರೇಮಿಗಳು ಭಾಗವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಓದುವ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ತಾವೂ ಸಹ ಹಾಜರಾಗಿ ಪುಸ್ತಕ ಪ್ರೇಮಿಗಳೊಂದಿಗೆ ಸಂವಾದ ನಡೆಸಲಿದ್ದೇನೆ ಎಂದು ರವಿಕುಮಾರ್ ಹೇಳಿದರು.ಇಂತಹ ಪುಸ್ತಕ ಮೇಳಗಳು ಯುವಜನರಲ್ಲಿ ಓದುವ ಆಸಕ್ತಿ ಹೆಚ್ಚಿಸುವುದರ ಜೊತೆಗೆ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾಗಲಿವೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸಭೆಯಲ್ಲಿ ವೀರಲೋಕ ಪುಸ್ತಕ ಸಂತೆ ತಂಡದೊಂದಿಗೆ, ಸಿರಾ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ.ಪಿ.ಪಾಂಡುರಂಗಯ್ಯ, , ಸಮಾಜಸೇವಕ ಕಲ್ಕೆರೆ ರವಿಕುಮಾರ್, ಪ್ರಾಂಶುಪಾಲರಾದ ಚಂದ್ರಯ್ಯ, ಜಿಲ್ಲಾ ಪುಸ್ತಕ ಸಂತೆ ಸಂಚಾಲಕರಾದ ಆರ್.ಕೆ.ಶ್ರೀನಿವಾಸ್, ಜಾನಪದ ಆಕಾಡೆಮಿ ಸದಸ್ಯರು ಹಾಗೂ ಜನಪದ ಗಾಯಕರಾದ ಮಲ್ಲಿಕಾರ್ಜುನ್ ಕೆಂಕೆರೆ, ರೂಪೇಶ್ ಕೃಷ್ಣಯ್ಯ, ತುಮಕೂರು ಎಕ್ಸ್‌ಪ್ರೆಸ್ ದಿನ ಪತ್ರಿಕೆ ಸಂಪಾದಕರಾದ ಸೀಗಲಹಳ್ಳಿ ನರಸಿಂಹ ಮೂರ್ತಿ, ಲೇಖಕಿ ಪೂರ್ಣಿಮಾ ಬಾಬು, ಸಾಹಿತಿ ಸಕ್ಕರ ನಾಗರಾಜು, ಹೆಂದೊರೆ ಶಿವಣ್ಣ, ದ್ವಾರನಕುಂಟೆ, ಲಕ್ಷಣ , ರವಿಕುಮಾರ್, ಹುಣಸೆಹಳ್ಳೆ ರಾಜಣ್ಣ, ಸೇರಿದಂತೆ ಹಲವು ಕನ್ಮಡ ಅಭಿಮಾನಿಗಳು ಭಾಗವಹಿಸಿದ್ದರು

