ಸಂಘಟಿತ ಹೋರಾಟದಿಂದ   ಜಿಲ್ಲೆಯ ಅಲೆಮಾರಿ/ ಅರೆ ಅಲೆಮಾರಿ/ ಹಂದಿಜೋಗಿ ಸಮುದಾಯಗಳಿಗೆ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ರವರಿಂದ ಹಕ್ಕುಪತ್ರ ವಿತರಣೆ ಸ್ಲಂ ಜನಾಂದೋಲನದಿಂದ ಶ್ಲಾಘನೆ

*ಸಂಘಟಿತ ಹೋರಾಟದಿಂದ ಜಿಲ್ಲೆಯ ಅಲೆಮಾರಿ/ ಅರೆ ಅಲೆಮಾರಿ/ ಹಂದಿಜೋಗಿ ಸಮುದಾಯಗಳಿಗೆ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ರವರಿಂದ ಹಕ್ಕುಪತ್ರ ವಿತರಣೆ ಸ್ಲಂ ಜನಾಂದೋಲನದಿಂದ ಶ್ಲಾಘನೆ*ಇಂದು ತುಮಕೂರು ಜಿಲ್ಲಾಡಳಿತದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಳೆದ 50 ವರ್ಷಗಳಿಗೂ ಮೇಲ್ಪಟ್ಟು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬದುಕು ಕಟ್ಟಿಕೊಂಡಿರುವ ತುಮಕೂರು ನಗರದ ಇಸ್ಮಾಯಿಲ್ ನಗರ ಕುಮುಟಯ್ಯನ ಬಡಾವಣೆ ಹಂದಿಜೋಗಿ ಕುಟುಂಬಗಳಿಗೆ ತುಮಕೂರು ತಾಲೂಕು ಊರುಕೆರೆ ಅಣ್ಣೆನಳ್ಳಿ ಹಾಗೂ ಅರಕೆರೆ ಹಕ್ಕಿ ಪಿಕ್ಕಿ ಸಮುದಾಯದ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕಿನ ಅಲೆಮಾರಿ ಮತ್ತು ಅರೆ ಅಲೆಮಾರಿ ಹಂದಿಜೋಗಿ ಸಿಳ್ಳೆಕ್ಯಾತ ಸಮುದಾಯದ 209 ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಈ ಸಂಧರ್ಭದಲ್ಲಿ ತುಮಕೂರು ನಗರ ಶಾಸಕರಾದ ಜಿ ಬಿ ಜ್ಯೋತಿಗಣೇಶ್. ಗ್ರಾಮಾಂತರ ಶಾಸಕರಾದ ಸುರೇಶ್ ಗೌಡ. ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್. ADC ತಿಪ್ಪೇಸ್ವಾಮಿ. ಜಿಲ್ಲಾ ಪಂಚಾಯತ್ CEO ಬಿವಿ ಅಶ್ವೀಜ. ಮತ್ತು ಮಹಾನಗರ ಪಾಲಿಕೆಯ ಆಯುಕ್ತರಾದ ಶುಭ. ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು. ಹಾಗೂ ತುಮಕೂರು ತಹಶೀಲ್ದಾರ್. ಮುಂತಾದ ಅಧಿಕಾರಿ ವೃಂದದವರು ಮತ್ತು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ ನರಸಿಂಹಮೂರ್ತಿ. ಉಪಸ್ಥಿತರಿದ್ದರು.ತುಮಕೂರು ಸ್ಲಂ ಸಮಿತಿ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಅಭಿನಂದಿಸಲಾಯಿತು ಸಂವಿಧಾನದ ಸಮಪಾಲು ಸಮಬಾಳು ಆಶಯದ ಸಾಮಾಜಿಕ ನ್ಯಾಯದಂತೆ ಅಲೆಮಾರಿ ಸಮುದಾಯಗಳಿಗೆ ಹಕ್ಕುಪತ್ರ ನೀಡಿರುವುದು ಶ್ಲಾಘನೀಯ ಎಷ್ಟು ಮಹಿಳೆಯಾರ ಹತ್ತಾರು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ.ಸರ್ಕಾರ ತುರ್ತು ಲೇಔಟ್ ಮಾಡಿಸಿ ವಿಶೇಷ ವಸತಿ ಯೋಜನೆಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ. ನರಸಿಂಹಮೂರ್ತಿ ಅಗ್ರಹಿಸಿದರು