ಎಸ್. ಐ.ಆರ್ ಖಂಡಿಸಿ ಕರ್ನಾಟಕ ಪ್ರತಿರೋಧತುಮಕೂರಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಹೋರಾಟ. ಇಂದು ತುಮಕೂರಿನಲ್ಲಿ ಪ್ರಜಾತಂತ್ರ ಸಂರಕ್ಷಣಾ ವೇದಿಕೆ ಜನಪರ ಸಂಘಟನೆಗಳ ಒಕ್ಕೂಟದಿಂದ ಇತ್ತೀಚೆಗೆ ಮುಖ್ಯ ಚುನಾವಣಾ ಆಯೋಗ SIR ಎಂಬ ಅಸಂವಿಧಾನಿಕ ಪ್ರಜಾತಂತ್ರ ಜನವಿರೋಧಿಯಾದ ಮತದಾನ ಪರಿಷ್ಕರಣ ವಿಧಾನವನ್ನು ಜಾರಿಮಾಡ ಹೊರಟಿದೆ. ಇದು ಜನರ ಮತದಾನದ ಹಕ್ಕು ಕಿತ್ತುಕೊಳ್ಳುವ ಪ್ರಕ್ರಿಯೆಯಾಗಿರುವುದಿಂದ ಕರ್ನಾಟಕ ಪ್ರತಿರೋಧವನ್ನು ಹಮ್ಮಿಕೊಳ್ಳಲಾಗಿತ್ತು

ಎಸ್. ಐ.ಆರ್ ಖಂಡಿಸಿ ಕರ್ನಾಟಕ ಪ್ರತಿರೋಧತುಮಕೂರಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಹೋರಾಟ. ಇಂದು ತುಮಕೂರಿನಲ್ಲಿ ಪ್ರಜಾತಂತ್ರ ಸಂರಕ್ಷಣಾ ವೇದಿಕೆ ಜನಪರ ಸಂಘಟನೆಗಳ ಒಕ್ಕೂಟದಿಂದ ಇತ್ತೀಚೆಗೆ ಮುಖ್ಯ ಚುನಾವಣಾ ಆಯೋಗ SIR ಎಂಬ ಅಸಂವಿಧಾನಿಕ ಪ್ರಜಾತಂತ್ರ ಜನವಿರೋಧಿಯಾದ ಮತದಾನ ಪರಿಷ್ಕರಣ ವಿಧಾನವನ್ನು ಜಾರಿಮಾಡ ಹೊರಟಿದೆ. ಇದು ಜನರ ಮತದಾನದ ಹಕ್ಕು ಕಿತ್ತುಕೊಳ್ಳುವ ಪ್ರಕ್ರಿಯೆಯಾಗಿರುವುದಿಂದ ಕರ್ನಾಟಕ ಪ್ರತಿರೋಧವನ್ನು ಹಮ್ಮಿಕೊಳ್ಳಲಾಗಿತ್ತು. ಹಿರಿಯ ಪರಿಸರವಾದಿಗಳಾದ ಸಿ.ಯತಿರಾಜು ಮಾತನಾಡಿ 13 ರಾಜ್ಯಗಳಲ್ಲಿ ನಡೆದಿರುವ SIR ನಿಂದ 6 ಕೋಟಿ ಜನರನ್ನು ಮತದಾನದಿಂದ ಹೊರಗಿಡಲಾಗಿದೆ. SIR ಹಿಮ್ಮೆಟಿಸದೆ ಹೋದರೆ ಜನಸಾಮಾನ್ಯರ ಹಕ್ಕುಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಜನ ಹೋರಾಟದಿಂದ ಇದನ್ನು ಆಗದಂತೆ ನೋಡಿಕೊಳ್ಳಬೇಕು. ಜನಬೆಂಬಲವಿಲ್ಲದೆ ಸರ್ಕಾರ ಅಡ್ಡ ದಾರಿಯಿಂದ ಅಧಿಕಾರ ಹಿಡಿಯ ಹೊರಟಿರುವುದನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿ ಎಂದರ. ಪಿಯುಸಿಎಲ್ ಜಿಲ್ಲಾ ಅಧ್ಯಕ್ಷರಾದ ಕೆ. ದೊರೈರಾಜ್ ಮಾತನಾಡಿ ಮತದಾನ ಎಲ್ಲಾ ಜನಗಳ ಸಂವಿಧಾನಿಕ ಹಕ್ಕು ಇದನ್ನು ಕಿತ್ತುಕೊಳ್ಳಲು ಹಿಡಿದಿರುವ ಹಾದಿ SIR – SIR ಎಂಬ ಪದ ಸಂವಿಧಾನದಲ್ಲಿಯೇ ಇಲ್ಲ . ಸಾರಾಂಶ ಪರಿಷ್ಕರಣೆಗೆ SR ನಮ್ಮ ವಿರೋಧವಿಲ್ಲವೆಂದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಬಾ. ಹ ರಮಾಕುಮಾರಿ ಮಾತನಾಡಿ SIR ಮಾಡಿರುವವರು ಪರೀಕ್ಷಣೆ ವಿಶೇಷವಾದದ್ದು ಕೋಟ್ಯಂತರ ಜನ ನುಸುಳುಕೋರರು ಇದ್ದಾರೆ ಅವರನ್ನು ತೆಗೆಯಲು ಈ ಪ್ರಕ್ರಿಯೆ ಮಾಡಲಾಗಿದೆ ಎಂದು ಸುಳ್ಳು ಹೇಳುತ್ತಾ. ಕೆಲವರನ್ನು ಗುರುತಿಸಲು ಉಳಿದ ಎಲ್ಲರಿಗೂ ತೊಂದರೆ ಕೊಡುತ್ತಿದ್ದಾರೆ. ಅದಕ್ಕೆ ನಾವು SIR ಅನ್ನು ವಿರೋಧಿಸುತ್ತಿದ್ದೇವೆ ಎಂದರು. ರಾಜ್ಯ ರೈತ ಸಂಘದ ಶಂಕ್ರಪ್ಪ ಮಾತನಾಡಿ ಬಿಜೆಪಿ ಮತ್ತು ಚುನಾವಣಾ ಆಯೋಗ ಸಂವಿಧಾನ ಆಶಯವನ್ನು ಬುಡಮೇಲು ಮಾಡಲು ಹೊರಟಿದೇ. SIR ಒಂದು ಮಾರಕ ಹಸ್ತ್ರ ಮತದಾನದ ಹಕ್ಕಿಗೆ ದಕ್ಕೆ ತರಲು ಬಡಪಾಯಿ ಜನರನ್ನು ದಾಖಲೆ ಕೊಡಲು ಹಿಂಸೆ ಮಾಡಿ ಅವರಿಗೆ ಇದರ ಸಹವಾಸ ಬೇಡವೆಂದು ದೂರ ಸರಿದು ಮತದಾನ ಪಟ್ಟಿಯಿಂದ ಹೊರಗಿಡುವುದು ಜನವಿರೋಧಿ ಹುನ್ನಾರವಾಗಿದೆ ಎಂದರು. CITU ಜಿಲ್ಲಾಧ್ಯಕ್ಷರಾದ ಸಯ್ಯದ್ ಮುಜೀಬ್ ಮಾತನಾಡಿ SIR ಅನ್ನು ತರಲು ಹೊರಟಿರುವವರು ಮನುವಾದಿ ಸಂವಿಧಾನದ ಪ್ರತಿಪಾದನೆಗೆ ಹೊರಟಿದ್ದಾರೆ .ಸುಪ್ರೀಂ ಕೋರ್ಟ್ ತೀರ್ಪುಗಳು ಆಳುವ ಸರ್ಕಾರಗಳ ಡಿಕ್ಟೇಷನ್ ಇದ್ದಂತೆ ಇದೆ ಇದರಿಂದ ಕೇವಲ ಒಂದು ಸಂವಿದಾಯ ಅಲ್ಲ . ಎಲ್ಲಾ ಸಮುದಾಯಗಳು ಮತಾಧಿಕಾರ ಕಳೆದುಕೊಳ್ಳುತ್ತಾರೆ, ಅದಕ್ಕೆ ನಾವೆಲ್ಲರೂ ಸೇರಿ ಇದನ್ನು ತೀವ್ರವಾಗಿ ವಿರೋಧಿಸಬೇಕಾಗಿದೆ ಎಂದರು. ಜಾಗೃತ ಕರ್ನಾಟಕದ ಆದಂ ಖಾನ್ ಮಾತನಾಡಿ ಪರಿಷ್ಕರಣೆ ಹಿಂದೆ ನಡೆಯುತ್ತಿದ್ದಂತೆ ನಡೆಯುತ್ತಿಲ್ಲ ಆದರೆ SIR ನಲ್ಲಿ ಪ್ರತಿಯೊಬ್ಬರು ಹೊಸದಾಗಿ ಸೇರುವುದಕ್ಕೆ ಎನುಮರೇಷನ್ ಫಾರಂ ಕೊಡಲು ಒತ್ತಾಯಿಸುತ್ತಿದ್ದಾರೆ. ಇದು ಎಲ್ಲಾ ಜನಸಾಮಾನ್ಯರಿಗೂ ಸಾಧ್ಯವಾಗುವಂತಹದಲ್ಲ ಇದಕ್ಕೆ ನಮ್ಮ ವಿರೋಧವಿದೆ. ಅದಕ್ಕೆ ಈ ಕರ್ನಾಟಕ ಪ್ರತಿರೋಧ ವೆಂದರು. ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ. ನರಸಿಂಹಮೂರ್ತಿ ಹೊರಹೋಗದಂತೆ ಮಾಡಲು ಸಹಾಯವಾಗುವ ದಾಖಲೆಗಳನ್ನು ಜನ ನೀಡಲು ಅವರಿಗೆ ಸೂಕ್ತ ಅವಧಿ ನೀಡಿ ಅವರನ್ನು ಮತ ಪಟ್ಟಿಯಲ್ಲೇ ಇರುವಂತೆ ಖಾತ್ರಿಪಡಿಸಬೇಕೆಂದರು .ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ತಾಜುದ್ದೀನ್ ಮಾತನಾಡಿ SIR ವಿರೋಧ ಪುಣ್ಯದ ಕೆಲಸ ಜನಸಾಮಾನ್ಯರು ಮತಾಧಿಕಾರ ಕಳೆದುಕೊಳ್ಳದಂತಾಗಲೂ ನಾವೆಲ್ಲ ಸೇರಿ ಹೋರಾಡ ಎಂದರು. ಪ್ರತಿಭಟನೆಯಲ್ಲಿ ಜಮಾತೆ ಇಸ್ಲಾಮಿಕ್ ಹಿಂದ್. SDPI. ವಿಜ್ಞಾನ ಕೇಂದ್ರ. ಜನಶಕ್ತಿ. ಎದ್ದೇಳು ಕರ್ನಾಟಕ. ಜಾಗೃತ ಕರ್ನಾಟಕ. SPIM. SUSI. ನಿವೃತ್ತ ನೌಕರರ ಸಂಘ. ಸ್ಲಂ ಜನಾಂದೋಲನ. ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆ. ಸಂವಿಧಾನ ಸಂರಕ್ಷಣಾ ಪಡೆ. ಮುಂತಾದ ಸಂಘಟನೆಗಳಿಂದ ಅರುಣ್. ರಾಮಕೃಷ್ಣಪ್ಪ. ಅಕ್ಕಮ್ಮ. ಇಂದಿರಮ್ಮ. AIDSO ಜಿಲ್ಲಾಧ್ಯಕ್ಷರಾದ ಕಲ್ಯಾಣಿ. ಮರಿಯಾಂಬಿ. ಪುಷ್ಪಲತಾ. ಶಿವಲಿಂಗಯ್ಯ. ಮುಂತಾದವರು ಭಾಗವಹಿಸಿದ್ದರು.

