ಬೆಂಗಳೂರಿನಲ್ಲಿ ನವೆಂಬರ್ 28 ರಂದು ನಡೆಯಲಿರುವ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಗೆ ಚಾಲನೆ ಕುರಿತು ತುಮಕೂರಿನ ಬಾಲ ಭವನದಲ್ಲಿ ನಡೆದ ಜಿಲ್ಲಾಮಟ್ಟದ ಪೂರ್ವಭಾವಿ ಸಭೆ ವೇಳೆ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಟಾಕಿಂಗ್ ಲ್ಯಾಪ್ ಟಾಪ್ ಮತ್ತು ಬ್ರೈಲ್ ಕಿಟ್ ಗಳನ್ನು ವಿವರಿಸಿದರು.
ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ಆಸ್ಪತ್ರೆ ಮೈದಾನದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ “ಜನಸಂಪರ್ಕ ಸಭೆ”ಯನ್ನು ಉದ್ಘಾಟಿಸಿದೆನು.
ಬಳಿಕ ಜನರಿಂದ ನೇರವಾಗಿ ಅಹವಾಲು ಸ್ವೀಕರಿಸಿ, ಅವರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಂದಂತಹ ದೂರುಗಳನ್ನು ಪರಿಶೀಲಿಸಿ, ಸ್ಥಳದಲ್ಲೇ ಅನೇಕರಿಗೆ ಪರಿಹಾರ ಒದಗಿಸಲಾಯಿತು.
ಕಾನೂನಿನ ಮಿತಿಯೊಳಗಿದ್ದ ಕೆಲವು ಅರ್ಜಿಗಳನ್ನು ಹೊರತುಪಡಿಸಿ ಉಳಿದವರೆಲ್ಲರ ಅರ್ಜಿಗಳನ್ನು ಕಾಲ ಮಿತಿಯೊಳಗೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿ, ಸೂಕ್ತ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದಾಗಿ ತಿಳಿಸಿದೆನು.
ಈ ಸಂದರ್ಭದಲ್ಲಿ ಸುಮಾರು 50ಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
ಸಭೆಯಲ್ಲಿ ಸಾಗರ ಉಪವಿಭಾಧಿಕಾರಿ ಶ್ರೀ ವೀರೇಶ್, ತಹಶೀಲ್ದಾರ್ ಶ್ರೀಮತಿ ರಶ್ಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.
ಇಂದು ವಿಧಾನಸೌಧದಲ್ಲಿ ನಡೆದ ಕಾವೇರಿ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ವರೊಂದಿಗೆ ಪಾಲ್ಗೊಂಡು, ಮಹತ್ವದ ವಿಚಾರಗಳ ಕುರಿತು ಚರ್ಚಿಸಲಾಯಿತು.
ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದ ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು
ಕೇಂದ್ರ ಜಲ ಶಕ್ತಿ ಇಲಾಖೆ ನೀಡುವ ‘ಜಲ್ ಸಂಚಯನ್- ಜನ್ ಭಾಗಿದಾರಿ’ (ಜೆ.ಎಸ್.ಜೆ.ಬಿ) ರಾಷ್ಟ್ರ ಪ್ರಶಸ್ತಿಗೆ ಜಿಲ್ಲೆ ಭಾಜನವಾಗಿದ್ದು, ಮಾನ್ಯ ರಾಷ್ಟ್ರಪತಿಗಳು ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
‘ಜಲ ಸಂರಕ್ಷಣೆ- ಜನರ ಭಾಗವಹಿಸುವಿಕೆ’ ಅಭಿಯಾನದಡಿ ಪ್ರಶಸ್ತಿ ನೀಡಲಾಗಿದೆ ಜಿಲ್ಲೆಯಲ್ಲಿ 2024-25 ಸಾಲಿನಲ್ಲಿ 9,885 ಜಲ ಸಂರಕ್ಷಣಾ ಕಾಮಗಾರಿ ಕೈಗೊಂಡಿರುವುದಕ್ಕೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ₹25 ಲಕ್ಷ ಬಹುಮಾನವನ್ನು ಒಳಗೊಂಡಿದೆ.
ತುಮಕೂರಿನ ಬಾಲ ಭವನದ ಆವರಣದಲ್ಲಿ ಗರ್ಭಿಣಿ ಮಹಿಳೆಯರಿಗೆ ಸಾಮೂಹಿಕ ಸಿಮಂತ ಹಾಗೂ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ನಡೆಸಲಾಯಿತು.
ಈ ವೇಳೆ ತುಮಕೂರು ನಗರದ ಶಾಸಕರಾದ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿಗಳಾದ ಶುಭಾ ಕಲ್ಯಾಣ್, ಗ್ಯಾರಂಟಿ ಯೋಜನೆಯ ವಿವಿಧ ತಾಲೂಕಿನ ಅಧ್ಯಕ್ಷರಾದ ಚಂದ್ರಶೇಖರ್, ವೆಂಕಟೇಶ್ ಮೂರ್ತಿ, ಚಂದ್ರಕಲಾ, ಕುಮುದಾ ಹರೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಸಿದ್ದರಾಮಣ್ಣ, ನಿರೂಪಣಾಧಿಕಾರಿ ಅಂಬಿಕಾ, ಇಲಾಖೆಯ ಅಧಿಕಾರಿಗಳು, ನೂರಾರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು.
ಮನ-ಮನೆಗೂ ಸಂವಿಧಾನ ಜಾಥಾ ವಿನೂತನ ಕಾರ್ಯಕ್ರಮ – ಕೆ.ದೊರೈರಾಜ್
ಇಂದು ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಂವಿಧಾನ ಸ್ನೇಹಿ ಬಳಗ ಬೆಂಗಳೂರು. ಜಂಟಿಯಾಗಿ ನವೆಂಬರ್ 22 ರಿಂದ 26ರವರೆಗೆ ಮನ-ಮನೆಗೂ ಸಂವಿಧಾನ ಜಾಗೃತಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಹಮ್ಮಿಕೊಳ್ಳಲಾಯಿತು.
ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಹಿರಿಯ ಚಿಂತಕರಾದ ಕೆ.ದೊರೈರಾಜ್ ಸಂವಿಧಾನ ಜಾರಿಯಾಗಿ 76ವರ್ಷ ಕಳೆದಿದ್ದು ಹಲವಾರು ಸಾಮಾಜಿಕ ಪರಿವರ್ತನೆಗೊಳ್ಳಲು ಕಾರಣವಾಗಿದೆಯಾದರು ಪೂರ್ಣ ಮಟ್ಟದಲ್ಲಿ ಸಮಾಜ ಬದಲಾವಣೆ ಕಂಡಿಲ್ಲ, ಇತ್ತೀಚಿನ ದಿನಗಳಲ್ಲಿ ಸಂವಿಧಾನ ಪೀಠಿಕೆಯನ್ನು ಶಾಲಾ ಕಾಲೇಜುಗಳಲ್ಲಿ ಓದಿಸುತ್ತಿದ್ದರೂ ಅದರ ಸಂಪೂರ್ಣ ಆಶಯಗಳನ್ನು ನಾಗರೀಕರು ತಿಳಿದುಕೊಳ್ಳುವಲ್ಲಿ ವಿಫಲರಾಗಿದ್ದು ಇದರ ಭಾಗವಾಗಿ ಸಾರ್ವಜನಿಕರು, ವಿದ್ಯಾರ್ಥಿ ಯುವಜನರು, ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನ- ಮನೆಗೂ ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಈ ಜಾಥ ವಿನೂತನವಾಗಿದೆ, ನವೆಂಬರ್ 26, 1949 ರಂದು ಭಾರತದ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿತು, ಇದನ್ನು ಸಂವಿಧಾನ ದಿನ ಎಂದು ಆಚರಿಸಲಾಗುತ್ತದೆ. ನಮ್ಮ ಸಂವಿಧಾನ ಅಂಗೀಕರಿಸಿ 76 ವರ್ಷಗಳ ಸಂಭ್ರಮದಲ್ಲಿದ್ದೇವೆ, ಸಂವಿಧಾನದ ಆಶ್ರಯದಲ್ಲಿ ನಮ್ಮ ದೇಶ ಬಹಳಷ್ಟು ಪ್ರಗತಿ ಕಂಡಿದೆ 1947ಕ್ಕೆ ಹೋಲಿಸಿದರೆ ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚಾಗಿದೆ, ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಮತ್ತು ಅವಕಾಶಗಳು ಹೆಚ್ಚಾಗಿದೆ, ಜಾತಿಯ ಹಿಡಿತ ಸ್ವಲ್ಪ ಕಡಿಮೆಯಾಗಿದೆ, ಸಾರ್ವಜನಿಕ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆ ಮುಂಚೆಗಿಂತ ವಿಸ್ತೃತಗೊಂಡಿದೆ. ಆದರೆ ನಾವು ಇನ್ನು ಸಹ ಸಮ ಸಮಾಜ ನಿರ್ಮಿಸಲು ಸಾಧ್ಯವಾಗಿಲ್ಲ, ಎಲ್ಲರಿಗೂ ಘನತೆಯ ಬದುಕನ್ನು ಖಾತ್ರಿಪಡಿಸಲು, ಅಸ್ಪೃಶ್ಯತೆ ತೊಲಗಿಸಲು ಸಾಧ್ಯವಾಗಿಲ್ಲ, ಅಸಮಾನತೆ ಹೆಚ್ಚುತ್ತಿದೆ, ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚಾಗಿವೆ, ಸಾರ್ವಜನಿಕ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯ ಗುಣಮಟ್ಟ ಹೆಚ್ಚು ಮಾಡುವ ಬದಲು ಸರ್ಕಾರಗಳು ಅದನ್ನು ಖಾಸಗೀಕರಿಸುತ್ತಿದ್ದಾರೆ, ಸಂವಿಧಾನದ ಆಶಯಗಳಾದ ಸ್ಥಾನಮಾನದ ಸಮಾನತೆಯ ಹಾಗೂ ಅವಕಾಶಗಳ ಸಮಾನತೆ, ಘನತೆ, ಸಾಮಾಜಿಕ ನ್ಯಾಯ ಹಾಗೂ ಸ್ವಾತಂತ್ರ್ಯ ಮರಿಚಿಕೆಯಾಗಿ ಉಳಿಯುವುದೇ ಎಂಬ ಆತಂಕವಿದೆ ಎಂದರು.
ಸಂವಿಧಾನ ಸ್ನೇಹಿ ಬಳಗದ ಪೂರ್ಣ ರವಿಶಂಕರ್ ಮತ್ತು ಅಶ್ವಿನಿ ಬೋಧ್ ಮಾತನಾಡಿ ಸಂವಿಧಾನದ ಪೀಠಿಕೆಯ ಭರವಸೆಗಳನ್ನು ಈಡೇರಿಸಬೇಕೆಂದರೆ ನಮ್ಮ ಸಂವಿಧಾನದ ಮೌಲ್ಯಗಳು ಪ್ರತಿ ಮನೆಯಲ್ಲೂ ಮನಸ್ಸಿನಲ್ಲೂ ಬೇರೂರಬೇಕು. ಶೋಷಿತರು ದಮನಿತರು ತಮ್ಮ ಹಕ್ಕಿನ ಬಗ್ಗೆ ತಿಳಿಯಬೇಕು. ಪ್ರತಿರೋಧದ ಹಕ್ಕು ಉಳಿಯಬೇಕು ಈ ನಿಟ್ಟಿನಲ್ಲಿ ಸಂವಿಧಾನದ ಮೌಲ್ಯಗಳನ್ನು ಪ್ರತಿ ಬೀದಿ, ಮನೆ ಹಾಗೂ ಮನಸ್ಸಿಗೆ ತಲುಪಿಸಲು ಪ್ರಗತಿಪರ ಸಂಘಟನೆಗಳ ಒಕ್ಕೂಟ-ತುಮಕೂರು, ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಂವಿಧಾನ ಸ್ನೇಹಿ ಬಳಗ ಬೆಂಗಳೂರು ಜಂಟಿಯಾಗಿ 5 ದಿವಸಗಳ ಸಂವಿಧಾನ ಜಾಥಾವನ್ನು ತುಮಕೂರಿನಲ್ಲಿ ಹಮ್ಮಿಕೊಂಡಿದ್ದೇವೆ, ಮನ-ಮನೆಗೂ ಸಂವಿಧಾನ ಕಾರ್ಯಕ್ರಮವು ನವೆಂಬರ್ 22 ರಂದು ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಧ್ವನಿಸುವ ವಿವಿಧ ಕ್ಷೇತ್ರದ ಗಣ್ಯರಿಂದ ನಗರದ ಬಾಪೂಜಿ ವಿದ್ಯಾಸಂಸ್ಥೆಯ ಕಲಾಕಾಲೇಜಿನಲ್ಲಿ ಉದ್ಘಾಟನೆ ಮೂಲಕ ಚಾಲನೆಗೊಂಡು 26ಕ್ಕೇ ಸಮಾರೋಪಗೊಳ್ಳಲಿದೆ, ನವೆಂಬರ್ 23 ರಂದು ನಗರದ ವಿವಿಧ ಸ್ಲಂಗಳಲ್ಲಿ ಹಾಗೂ ಸಂಜೆ 5. ಗಂಟೆಗೆ ಅಮಾನಿಕೆರೆ ನೂತನ ಸಂವಿಧಾನ ಪೀಠಿಕೆ ಮುಂದೆ ಸಾರ್ವಜನಿಕರೊಂದಿಗೆ ಸಂವಿಧಾನ ಕುರಿತು ಕಾರ್ಯರಕ್ರಮ ನಡೆಯಲಿದೆ. ನವೆಂಬರ್ 24 ಮತ್ತು 25 ರಂದು ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿಗಳೊಂದಿಗೆ ಹಾಗೂ ಗ್ಲೋಬಲ್ ಶಾಹೀನ್ ಮಹಿಳಾ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮಗಳು ನಡೆಯಲಿದೆ, ನವೆಂಬರ್ 26 ರಂದು ತುಮಕೂರು ನಗರದ ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಕರ್ನಾಟಕದ ಹಲವು ಭಾಷೆಗಳಲ್ಲಿ ಸಂವಿಧಾನ ಪೀಠಿಕೆಯ ವಿಡಿಯೋ ಬಿಡುಗಡೆ ಹಾಗೂ ಜಂಗಮ ಕಲೆಕ್ಟೀವ್ ಪ್ರಸ್ತುತ ಪಡಿಸುವ ‘ಬಾಬ್ ಮಾರ್ಲೆ ಫ್ರಮ್ ಕೋಡಿಹಳ್ಳಿ’ ರವರ ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಎನ್.ಕೆ ಸುಬ್ರಮಣ್ಯ ಮತ್ತು ಎ.ನರಸಿಂಹಮೂರ್ತಿ ಮಾತನಾಡಿ ಸಂವಿಧಾನದ ಆತ್ಮ-ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಬಂಧುತ್ವ-ಇವುಗಳನ್ನು ಜನಸಾಮಾನ್ಯರಿಗೆ ತಲುಪಿಸುವುದೇ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಕಾರ್ಯಕ್ರಮಗಳನ್ನು ಮಾಧ್ಯಮ ಸ್ನೇಹಿತರು ತಮ್ಮ ಸುದ್ದಿಗಳಲ್ಲಿ ಬಿತ್ತರಿಸುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಎಲ್ಲೆಡೆ ಕೊಂಡೊಯ್ಯಲು ಸಹಕರಿಸಬೇಕೆಂದು ಮನವಿ ಮಾಡುತ್ತೇವೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಸಾವಿತ್ರಿ ಬಾಯಿಪುಲೆ ಸಂಘಟನೆಯ ಅನುಪಮಾ ತುಮಕೂರು ಸ್ಲಂ ಸಮಿತಿಯ ಶಂಕ್ರಯ್ಯ, ಅರುಣ್. ತಿರುಮಲಯ್ಯ, ಕೃಷ್ಣಮೂರ್ತಿ, ರಾಜು APCR ಸಂಯೋಜಕರಾದ ತಾಜುದ್ದೀನ್. ಮಾದಿಗ ಪ್ರಚಾರ ಸಮಿತಿಯ ಮನೋಜ್ ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.
ತನಿಖಾ ಪತ್ರಿಕೋದ್ಯಮದಲ್ಲಿ ಛಾಪು ಮೂಡಿಸಿರುವ, ಇತ್ತೀಚೆಗಷ್ಟೇ ಕೋಟ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿಟ್ಟ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ನನ್ನನ್ನು ಭೇಟಿ ಮಾಡಿದರು. ತಮ್ಮ ನಿರ್ಭೀತ ಪತ್ರಿಕೋದ್ಯಮದ ಮೂಲಕ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿರುವ ಅವರು, ಹೆಣ್ಣುಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಭೇಟಿಯು ಸಂತಸ ನೀಡಿದೆ. @vijayatimeskannada @vijayatimesfoodcheck
ಸಿದ್ದಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದೆ. ಹೆಣ್ಣುಮಕ್ಕಳ ಸುರಕ್ಷತೆಯ ಕುರಿತಂತೆ ಪೊಲೀಸರು ಕೈಗೊಂಡ ಕ್ರಮಗಳ ಕುರಿತು ಪರಿಶೀಲಿಸಿ, ಮಹಿಳೆಯರ ಭದ್ರತೆ, ಅವರು ಠಾಣೆಗೆ ಭೇಟಿ ನೀಡಿದ ವೇಳೆ ಅವರೊಡನೆ ನಡೆದುಕೊಳ್ಳುವ ರೀತಿಯ ಬಗ್ಗೆ ಮಾಹಿತಿ ಪಡೆದೆ. ಠಾಣೆಯಲ್ಲಿ ದಾಖಲಾಗಿರುವ ಮಹಿಳೆಯರಿಗೆ ಸಂಬಂಧಿತ ಪ್ರಕರಣಗಳು ಹಾಗೂ ಅವುಗಳ ತನಿಖಾ ಪ್ರಗತಿಯ ಬಗ್ಗೆ ತಿಳಿದುಕೊಂಡು, ಅಲ್ಲಿನ ಮಹಿಳಾ ಸಿಬ್ಬಂದಿಯೊಡನೆ ಮಾತುಕತೆ ನಡೆಸಿದೆ.
ಇ-ಸ್ವತ್ತು ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ
ತುಮಕೂರು: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್-2025 ಅಡಿಯಲ್ಲಿ ಬರುವ ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳಿಗೆ ಸಂಬಂಧಿಸಿದ ನಿಯಮಗಳ ಕುರಿತು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತರಬೇತಿ ಏರ್ಪಡಿಸಲಾಗಿತ್ತು.
ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ (ಅಭಿವೃದ್ಧಿ) ಶ್ರೀ ಕೆ.ಪಿ ಸಂಜೀವಪ್ಪನವರು, 2025-26 ನೇ ಸಾಲಿನ ಬಜೆಟ್ ಕಂಡಿಕೆಗಳು (ಕಂಡಿಕೆ – 272) ಆಯವ್ಯಯ ಘೋಷಣೆಯಂತೆ ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆಗಾಗಿ ಮತ್ತು ಗ್ರಾಮೀಣ ಜನರಿಗೆ ವ್ಯವಸ್ಥಿತ ರೀತಿಯಲ್ಲಿ ಸೇವೆಗಳನ್ನು ಒದಗಿಸುವ ಹಿತದೃಷ್ಟಿಯಿಂದ-“ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿರುವ ಆಸ್ತಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲು ಇ-ಸ್ವತ್ತು ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದರು.
ತರಬೇತಿಯಲ್ಲಿ ತೆರಿಗೆ ದರಕ್ಕೆ ಒಳಪಡುವ ಆಸ್ತಿಗಳು, ತೆರಿಗೆ, ದರ ಮತ್ತು ಫೀಜುಗಳನ್ನು ವಿಧಿಸುವುದಕ್ಕಾಗಿ ಪ್ರಕ್ರಿಯೆ, ಹೊಸ ಆಸ್ತಿಗಳ ಸೇರ್ಪಡೆ, ಹೊಸ ಆಸ್ತಿಗಳ ಸೇರ್ಪಡೆ ಮೇಲ್ಮನವಿ, ತೆರಿಗೆ ನಿರ್ಧರಣಾ ವಿಧಾನ, ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆ ವಹಿಗಳು 11ಎ ಆಸ್ತಿಗಳ ವರ್ಗೀಕರಣ, 11ಬಿ ಆಸ್ತಿಗಳ ವರ್ಗೀಕರಣ, ಕಟ್ಟಡದ ವಿಧ & ದರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ರಾಜ್ಯ ಮಟ್ಟದಲ್ಲಿ ಹಮ್ಮಿಕೊಂಡಿದ್ದ ಇ-ಸ್ವತ್ತು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸುಬ್ಬರಾಜು ಅರಸ್, ಗಂಗಾಧರ್, ಚಂದ್ರಹಾಸ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತರಬೇತಿ ನೀಡಿದರು.
ಬೆಳ್ಳಾವಿ ಹೋಬಳಿಯ ನೆಲಹಾಳ್ ಗ್ರಾಮದಲ್ಲಿ ಜಪಾನ್ ದೇಶದ ಟಿಮೆಕ್ ಕಂಪನಿಯ ಸಿ ಎಸ್ ಆರ್ ವತಿಯಿಂದ ಸುಮಾರು 1 ಕೋಟಿ ರೂಗಳ ಅನುದಾನದಲ್ಲಿ ನೂತನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಯನ್ನು ನಿರ್ಮಾಣ ಮಾಡಿ ಇಂದು ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ಶಾಸಕರಾದ ಸುರೇಶ್ ಗೌಡರವರು ಶಿಕ್ಷಣ ತಜ್ಞರಾದ ಶ್ರೀ ಡಾ,ಗುರುರಾಜ ಕರಜಗಿರವರು ಹಾಗೂ ವಿಕ್ರಂ ಪತ್ರಿಕೆಯ ಸಂಪಾದಕರಾದ ನಾ ನಾಗರಾಜು,ತುಮಕೂರು ನಗರ ಶಾಸಕರಾದ ಜ್ಯೋತಿ ಗಣೇಶ್ ರವರು,ಟಿಮೇಕ್ ಕಂಪನಿಯ( Deputy Factory Head )ಶ್ರೀ ಕೆ.ವಿ ವಿರಾಜಶೆಟ್ಟಿ, ಶ್ರೀ ಪದ್ಮಪ್ರಸಾದ್ ಜೈನ್, (AGM -ESH),ಶ್ರೀಶೈಲೇಶ್ ಪುರಾಣಿಕ್, OM, ಶ್ರೀ ರತನ್ ರೈ (H R), ಶ್ರೀ ಆರ್ ಮಂಜುನಾಥ್ DGM HR, ಶ್ರೀ ರಾಜೇಶ್ ಸೀತಕಲ್ಲು ರೋಟರಿ ಕ್ಲಬ್ ಜೆಪಿ ನಗರ ಕ್ಲಬ್ ಬೆಂಗಳೂರು, ರಘುಚಂದ್ರ ಕೆ ಜಿ,ಮಾನ್ಯ ಉಪ ನಿರ್ದೇಶಕರು( ಆಡಳಿತ)ಶಾಲಾ ಶಿಕ್ಷಣ ಇಲಾಖೆ, ಹನುಮಂತಪ್ಪ ಕ್ಷೇತ್ರ ಶಿಕ್ಷಣಾಧಿಕಾರಿಗಳು ತುಮಕೂರು ತಾಲೂಕು, SDMC ಅಧ್ಯಕ್ಷರಾದ,ಬಿ ಕೃಷ್ಣಮೂರ್ತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ನಾಗರತ್ನಮ್ಮ,ಉಪಾಧ್ಯಕ್ಷರಾದ ಲಕ್ಷ್ಮಮ್ಮ,ಮುಖ್ಯ ಶಿಕ್ಷಕರಾದ ಶ್ರೀ ಸಿದ್ದರಾಮಯ್ಯ, ಮುಖಂಡರುಗಳಾದ ವಿಜಿಕುಮಾರ್,ರಾಜಶೇಖರ್,ಶಂಕರಣ್ಣ, ನಟರಾಜ್,ಸಿದ್ದಲಿಂಗಪ್ಪ,ರಮೇಶ್,ದೇವರಾಜು,ಕೃಷ್ಣಮೂರ್ತಿ, ಸೋಮಣ್ಣ ಇನ್ನೂ ಮುಂತಾದವರು ಗ್ರಾಮ ಪಂಚಾಯ್ತಿ PDO ಶ್ರೀನಿವಾಸ್, ಮೂಡ್ಲಪ್ಪ,ಶಿಕ್ಷಣ ಸಂಯೋಜಕರು ಬೆಳ್ಳಾವಿ ಹೋಬಳಿ,ಎಲ್ಲಾ ಗ್ರಾಮ ಪಂಚಾಯ್ತಿ ಸದಸ್ಯರುಗಳು ಶಾಲೆಯ ಶಿಕ್ಷಕರುಗಳು,ವಿದ್ಯಾರ್ಥಿಗಳು, ಸುತ್ತಮುತ್ತಲಿನ ಗ್ರಾಮಸ್ಥರು,ಪೋಷಕರು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.