“Congress government has given strength to the future of children”

“ಮಕ್ಕಳ ಭವಿಷ್ಯಕ್ಕೆ ಶಕ್ತಿ ತುಂಬಿದ ಕಾಂಗ್ರೆಸ್ ಸರ್ಕಾರ””ಶಾಲಾ ಮಕ್ಕಳ ಆರೋಗ್ಯಕ್ಕೆ ಪೌಷ್ಟಿಕ ಆಹಾರದ ಬಲ”ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಶಾಲಾ ಶಿಕ್ಷಣ ಸಚಿವರಾದ #Madhu_Bangarappa ಅವರ ನೇತೃತ್ವದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ವಿತರಣೆ. ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣ ಅಂಶ ದೊರಕುವ ಮೂಲಕ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಗಮನ ಮತ್ತು ಹಾಜರಾತಿಯಲ್ಲಿ ಸುಧಾರಣೆ.♦️ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ₹1,500 ಕೋಟಿ ವೆಚ್ಚದಲ್ಲಿ ವಾರದಲ್ಲಿ ಆರು ದಿನ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ.♦️₹100 ಕೋಟಿ ವೆಚ್ಚದಲ್ಲಿ ವಾರದಲ್ಲಿ 5 ದಿನ ಬಿಸಿ ಹಾಲಿನೊಂದಿಗೆ ರಾಗಿ ಮಾಲ್ಟ್ ವಿತರಣೆ.ಮಕ್ಕಳ ಬೆಳವಣಿಗೆಗೆ ಸಹಕರಿಸಿದ ಪ್ರತಿಯೊಬ್ಬ ದಾನಿಗಳಿಗೂ ಸರ್ಕಾರದ ಪರವಾಗಿ ಹಾಗೂ ವಯಕ್ತಿಕವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.#wipro #ajeempremji #annapoornatrust #smsghm @srimadhusudansai #annapoprnatrust #smsghm #oneworldonefamily #srimadhusudansaikannada #bengaluru #ajeempremji #kanataka #cmsiddaramaiah #newsupdate #newmenu #food #freelancing #freefoods #CongressForKarnataka#newmenu #food #school #govtexam #govt #karnatakafood #newsupdate #lifequotes #Education_minister #Madhu_Bangarappa #Team_Madhu_Bangarappa

"Congress government has given strength to the future of children"
Tipu Jayanti celebrated by Jai Karunadu Defence Forum

ಶ್ರೀ ಜೈ ಕರುನಾಡು ರಕ್ಷಣಾ ವೇದಿಕೆಯ ವತಿಯಿಂದ ನಗರದ ಮರಳೂರಿನಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಸಂಘಟನೆಯ ಗೌರವಾಧ್ಯಕ್ಷರಾದ ಶ್ರೀ ಪರಮೇಶ್ ರವರು ಹಾಗೂ ರಾಜ್ಯಧ್ಯಕ್ಷರಾದ ಶ್ರೀ ಝಬಿವುಲ್ಲಾ(ಬಾಬು) ರವರು ಸೈಯದ್ ಅಲ್ತಾಫ್ ಮತ್ತು ಅಜ್ಗರ್ ಟೈಲೊರ್ ರವರು ಶ್ರೀ ಚಾಂದ್ ಬಾಷಾ ರವರು ಮತ್ತಿತರರು ಭಾಗವಹಿಸಿದ್ದರು

Tipu Jayanti celebrated by Jai Karunadu Defence Forum
Tipu Jayanti celebrated by Jai Karunadu Defence Forum
Tejaswi demands removal of illegal houses in Chamundi Hills November 10, 2025 – Mysore

ಚಾಮುಂಡಿ ಬೆಟ್ಟದಲ್ಲಿ ಅಕ್ರಮ ಮನೆಗಳ ತೆರವಿಗೆ ತೇಜಸ್ವಿ ಆಗ್ರಹNovember 10, 2025 – ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿ ಪರಿಸರ ಹಾಳು ಮಾಡಲಾಗುತ್ತಿದೆ ಎಂದು ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಗಂಭೀರ ಆರೋಪ ಮಾಡಿದರು.ವಿವಿಧ ಸಂಘಟನೆಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು,ಚಾಮುಂಡಿ ಬೆಟ್ಟದಲ್ಲಿಯಾವುದೇ ಹೊಸ ಮನೆಗಳನ್ನು ನಿರ್ಮಾಣ ಮಾಡದಂತೆ ಆದೇಶ ಇದ್ದರು ಕೂಡ ಚಾಮುಂಡಿ ಬೆಟ್ಟದ ನಿವಾಸಗಳು ಹಾಗೂ ಬೆಟ್ಟಕ್ಕೆ ಬಂದಿರುವ ವಲಸಿಗರು ಅಲ್ಲಿನ ಗ್ರಾಮ ಪಂಚಾಯಿತಿ ಜಾಗಗಳಲ್ಲಿ ಹಾಗೂ ಜಮೀನುಗಳಲ್ಲಿ ಮನೆಗಳನ್ನು ಕಟ್ಟಿ ಬೆಟ್ಟದ ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.ಇದರ ಬಗ್ಗೆ ಗಮನ ಹರಿಸಬೇಕಾದ ಆ ಭಾಗದ ಶಾಸಕರಾದ ಜಿ ಟಿ ದೇವೇಗೌಡರು ಮೌನವಾಗಿರುವುದು ದುರಂತದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.ಗ್ರಾಮ ಪಂಚಾಯಿತಿ ಪಿಡಿಒ ಮತ್ತು ತಹಸಿಲ್ದಾರ್ ಹಾಗೂ ಅರಣ್ಯ ಅಧಿಕಾರಿಗಳು ಇದು ತಮ್ಮ ಕೆಲಸವಲ್ಲ ಎಂದು ಬೇಜವಾಬ್ದಾರಿಯಿಂದ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ತೇಜಸ್ವಿ ಕಿಡಿಕಾರಿದರು.ಈಗಾಗಲೇ ನಂದಿ ಹತ್ತಿರ ರಸ್ತೆ ಕುಸಿದು ಮೂರು ನಾಲ್ಕು ವರ್ಷಗಳು ಕಳೆದರೂ ಇನ್ನೂ ಸರಿಪಡಿಸಲಾಗಿಲ್ಲ ಮುಂದಿನ ದಿನದಲ್ಲಿ ಮಡಕೇರಿ ರೀತಿಯಲ್ಲಿ ಚಾಮುಂಡಿ ಬೆಟ್ಟವೂ ಕೂಡ ಕುಸಿಯುವುದನ್ನು ನಾವು ನೋಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಬೆಟ್ಟದಲ್ಲಿ ಅಕ್ರಮವಾಗಿ ಮನೆ ಕಟ್ಟುವ ಮಾಲೀಕರುಗಳಿಗೆ ಎಇಇ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡುವ ಮೂಲಕ ಕಾನೂನು ಉಲ್ಲಂಘಿಸುತ್ತಿದ್ದಾರೆ ಇದರ ಬಗ್ಗೆ ಗಮನಹರಿಸಿ ಅಧಿಕಾರಿಗಳಿಗೆ ಹಾಗೂ ಅಲ್ಲಿನ ಜನರಿಗೆ ಸರಿಯಾದ ಮಾರ್ಗದರ್ಶನ ನೀಡಿ ಅನಧಿಕೃತವಾಗಿ ಕಟ್ಟಿರುವ ಹಾಗೂ ಕಟ್ಟುತ್ತಿರುವ ಮನೆಗಳನ್ನು ತೆರವುಗೊಳಿಸಬೇಕೆಂದು ತೇಜಸ್ವಿ ನಾಗಲಿಂಗಸ್ವಾಮಿ ಮತ್ತಿತರರು ಆಗ್ರಹಿಸಿದರು.ಮುಂದಿನ ದಿನಗಳಲ್ಲಿ ಯಾರೇ ಕಾಮಗಾರಿ ಮಾಡಲು ಮುಂದಾದರೆ ಅಂತಹ ಮನೆಗಳನ್ನು ಹಾಗೂ ಕಟ್ಟಡಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಕನ್ನಡ ಕ್ರಾಂತಿದಳ , ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ, ಕರ್ನಾಟಕ ಯುವ ಸೇನೆ ವೇದಿಕೆ, ಕರ್ನಾಟಕ ಪ್ರಜಾಶಕ್ತಿ ವೇದಿಕೆ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಮೈಸೂರು ಜಿಲ್ಲಾಧ್ಯಕ್ಷ ಜಗದೀಶ್, ಕರ್ನಾಟಕ ಯುವ ಸೇನೆ ವೇದಿಕೆ ರಾಜ್ಯಾಧ್ಯಕ್ಷ ಅರುಣ್, ಯುವ ಹೋರಾಟಗಾರ ನಾಗರಾಜ್ ಮದಕರಿ, ನವೀನ್ ಮಹಿಳಾ ಹೋರಾಟಗಾರ್ತಿ ಕಲಾಧನು ಉಪಸ್ಥಿತರಿದ್ದರು.

Tejaswi demands removal of illegal houses in Chamundi Hills November 10, 2025 - Mysore
A grand Kannada Rajyotsava was celebrated

ತುಮಕೂರು ನಗರ 29 ನೇ ವಾರ್ಡ್ ಮರಳೂರು ಜನತಾ ಕಾಲೋನಿಯ ಡಾ, ಎ ಪಿ ಜೆ ಅಬ್ದುಲ್ ಕಲಾಂ ಆಟೋ ನಿಲ್ದಾಣದ ಬಳಿ ಹಜರತ್ ಟಿಪ್ಪು ಸುಲ್ತಾನ್ ಶಾಹಿದ್ (ರ ಅ ) ಸೇವಾ ಸಮಿತಿ ಟ್ರಸ್ಟ್ ಹಾಗೂ ಎ ಪಿ ಜೆ ಅಬ್ದುಲ್ ಕಲಾಂ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಜಂಟಿಯಾಗಿ ಅದ್ದೂರಿ ಕನ್ನಡ ರಾಜ್ಯೋತ್ಸವ ವನ್ನು ಆಚರಿಸಲಾಯಿತು ಕಾರ್ಯಕ್ರಮಕ್ಕೆ ತುಮಕೂರು ನಗರದ ಮಾಜಿ ಶಾಸಕರಾದ ಡಾ! ರಫೀಕ್ ಅಹಮದ್ ರವರು. ವಖ್ಫ್ ಬೋರ್ಡ್ ನ ಮಾಜಿ ಅಧ್ಯಕ್ಷರಾದ ಇಕ್ಬಾಲ್ ಅಹಮದ್ ರವರು. ವಾಲ್ಮೀಕಿ ಸಂಘದ ಮತ್ತು ಆಟೋ ಚಾಲಕರ ಜಂಟಿ ಕ್ರಿಯಾ ಸಮಿತಿಯ ರಾಜ್ಯ ಅಧ್ಯಕ್ಷರಾದ ಪ್ರತಾಪ್ ಮದಕರಿ ರವರು. ಕರ್ನಾಟಕ ರಾಜ್ಯ ಸರ್ವ ಜನಾಂಗ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷರಾದ ಬಾಬಾ ರವರು. ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯರವರು. ಕಾರ್ಮಿಕ ಅಧಿಕಾರಿಗಳಾದಂತಹ ಶ್ರೀಮತಿ ರಕ್ಷಿತಾ ರವರು ಆಟೋ ಚಾಲಕ ಸಂಘದ ಅಧ್ಯಕ್ಷರಾದ ತೌಫಿಕ್ ಅಹಮದ್ ರವರು ಸ್ಥಳೀಯ ಮುಖಂಡರಾದ ಚಂದ್ ಪಾಷರವರು. ಜಾವೀದ್ ರವರು. ಭಾಷಾ ರವರು. ಫೈರೋಜ್ ರವರು ಮತ್ತಿತರ ಮುಖಂಡರು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಲೇಬರ್ ಕಾರ್ಡಗಳನ್ನು ವಿತರಿಸಲಾಯಿತು ಹಾಗೂ ಆಟೋ ಚಾಲಕರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮವನ್ನು ಹಜರತ್ ಟಿಪ್ಪು ಸುಲ್ತಾನ್ ಶಹೀದ್ ರಹಮತುಲ್ಲಾ ಅಲೈ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ (ಮಹಬೂಬ್ ಸಾಬ್ ) ರವರು ಆಯೋಜಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಸೈಯದ್ ಅಲ್ತಾಫ್ ರವರು ನೆರವೇರಿಸಿದರು ಕಾರ್ಯಕ್ರಮವು ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು

A grand Kannada Rajyotsava was celebrated
Today is the 538th birth anniversary of the great sage Sri Kanakadasa in Tumkur city.

ಇಂದು ದಾಸಶ್ರೇಷ್ಠ ಶ್ರೀ ಕನಕದಾಸರ 538ನೇ ಜಯಂತಿ ಪ್ರಯುಕ್ತ ತುಮಕೂರು ನಗರದ ಶಿರಾಗೇಟ್‌ನ ಕನಕ ವೃತ್ತದಲ್ಲಿ ಸಾಂಸ್ಕೃತಿಕ ಕಲಾ ಹಾಗೂ ಕನಕ ದಾಸರ ಭಾವಚಿತ್ರ ಮೆರವಣಿಗೆಗೆ ಮಾನ್ಯ ಗೃಹ ಸವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಆದ ಡಾ ಜಿ ಪರಮೇಶ್ವರ್ ರವರು ಚಾಲನೆ ನೀಡಿದರು . ಈ ವೇಳೆ ಶ್ರೀ ಕನಕದಾಸರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು .ಈ ಸಂದರ್ಭದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು, ವಿಧಾನ ಪರಿಷತ್‌ನ ಮಾಜಿ ಸದಸ್ಯ ಡಾ. ಎಂ.ಆರ್.ಹುಲಿನಾಯ್ಕರ್ ರವರು, ಹಿರಿಯ ಪತ್ರಕರ್ತರಾದ ನಾಗಣ್ಣ ರವರು, ಬಿಎಂಟಿಸಿ ಉಪಾಧ್ಯಕ್ಷರಾದ ನಿಕೇತ್ ರಾಜ್ ಮೌರ್ಯ ರವರು, ಜಿಲ್ಲಾಧಿಕಾರಿ ಗಳಾದಶುಭ ಕಲ್ಯಾಣ್ ರವರು , ಜಿಲ್ಲಾ ಪಂಚಾಯತ್ ಸಿಇಒ ಪ್ರಭು ರವರುಹಾಗೂ ಕುರುಬ ಸಮಾಜದ ಹಿರಿಯ ಮುಖಂಡರುಗಳು ಹಾಗೂ ಇನ್ನಿತರರು ಹಾಜರಿದ್ದರು.

Today is the 538th birth anniversary of the great sage Sri Kanakadasa in Tumkur city.
Call Us Now
WhatsApp