ಪಾವಗಡ ತಾಲೂಕಿನ ಹರಿಹರಪುರ ಗ್ರಾಮದಲ್ಲಿ ಭೀಮ ಬಾಯ್ಸ್ ಯುವಕರು ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಮತ್ತು ಸಂವಿಧಾನದ ಆಶಯಗಳನ್ನು ಗೌರವಿಸಲು ವಿಶೇಷ ಕಾರ್ಯಕ್ರಮ

ಪಾವಗಡ ತಾಲೂಕಿನ ಹರಿಹರಪುರ ಗ್ರಾಮದಲ್ಲಿ ಭೀಮ ಬಾಯ್ಸ್ ಯುವಕರು ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಮತ್ತು ಸಂವಿಧಾನದ ಆಶಯಗಳನ್ನು ಗೌರವಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.ಈ ಗ್ರಾಮದಲ್ಲಿ ಕುಂಭಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಡಾ” ಬಿ.ಆರ್. ಅಂಬೇಡ್ಕರ್ ಹಾಗೂ ಡಾ” ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ರವರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆಯನ್ನು ಭೀಮ ಬಾಯ್ಸ್ ಯುವಕರು ನೀಲಿ ಬಾವುಟಗಳನ್ನು ಹಿಡಿದು ‘ಜೈ ಭೀಮ್’ ಘೋಷಣೆಗಳೊಂದಿಗೆ ತಮಟೆ ಸದ್ದಿಗೆ ಹೆಜ್ಜೆ ಹಾಕಿ ಮುಂದೆ ಸಾಗಿದರು,ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಉದ್ದೇಶದಿಂದ ಜಯಂತಿಗಳನ್ನು ಆಚರಣೆ ಮಾಡುತ್ತೇವೆ ಎಂದು *ಎಚ್ ಡಿ ಈರಣ್ಣನವರು* ತಿಳಿಸಿದರು,ಈ ಗ್ರಾಮದಲ್ಲಿ ಕುಂಭಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ *ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ರವರ* ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆಯನ್ನು ಯುವಕರು ನೀಲಿ ಬಾವುಟಗಳನ್ನು ಹಿಡಿದು ‘ಜೈ ಭೀಮ್’ ಘೋಷಣೆಗಳೊಂದಿಗೆ ತಮಟೆ ಸದ್ದಿಗೆ ಹೆಜ್ಜೆ ಹಾಕಿ ಮುಂದೆ ಸಾಗಿದರು,ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಉದ್ದೇಶದಿಂದ ಸಾರ್ವಜನಿಕವಾಗಿ ಸಂವಿಧಾನದ ವಿಷಯಗಳನ್ನು ತಿಳಿಸುವ ಉದ್ದೇಶಕ್ಕಾಗಿ ಆಚರಣೆಗಳು ಮಾಡುತ್ತೇವೆ ಎಂದರು, ಸ್ಥಳೀಯ ಯುವಕ ಸಂಘಗಳು ಬಾಬಾಸಾಹೇಬರ ಜೀವನ, ಅವರು ಕಂಡ ಸಮಾನತೆಯ ಕನಸು ಮತ್ತು ಶಿಕ್ಷಣದ ಮಹತ್ವದ ಬಗ್ಗೆ ಭಾಷಣ ಹಾಗೂ ವೈಚಾರಿಕ ಚರ್ಚೆಗಳನ್ನು ಆಯೋಜಿಸುತ್ತವೆ, ಈ ಆಚರಣೆಯ ಮೂಲಕ ಹರಿಹರಪುರ ಗ್ರಾಮದ ಯುವಕರು ” *ಶಿಕ್ಷಣ ಪಡೆಯಿರಿ* , *ಸಂಘಟಿತರಾಗಿ* , *ಹೋರಾಡಿ”* ಎಂಬ ಅಂಬೇಡ್ಕರ್ ಅವರ ಮೂಲ ಮಂತ್ರವನ್ನು ಜನರಿಗೆ ತಲುಪಿಸಲು ಜಯಂತಿ ಆಚರಣೆಯ ಮಾಡಬೇಕು ಎಂದರು,ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿರುತ್ತದೆ,ವರದಿ ರಾಮಪ್ಪ ಸಿ ಕೆ ಪುರಕಲ್ಪತರು ನ್ಯೂಸ್ ಪಾವಗಡ