ಅಂತರ ಜಿಲ್ಲಾ ಮನೆಗಳ್ಳರ ಬಂಧನ: ₹30.13 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ವಾಹನ ವಶ.!ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಹಾಗೂ ತರೀಕೆರೆ ವ್ಯಾಪ್ತಿಯಲ್ಲಿ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಅಂತರ್ ಜಿಲ್ಲಾ ಆರೋಪಿಗಳನ್ನು ಶ್ರೀ. ಹೆಚ್ ಪರಶುರಾಮಪ್ಪ, ಡಿ.ವೈ.ಎಸ್.ಪಿ., ತರೀಕೆರೆ ಉಪವಿಭಾಗ ಮತ್ತು ಶ್ರೀ. ರಫೀಕ್ ಎಂ, ಸಿ.ಪಿ.ಐ., ಕಡೂರು ವೃತ್ತ ನೇತೃತ್ವದ ಪೊಲೀಸ್ ತಂಡ ಯಶಸ್ವಿಯಾಗಿ ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು ₹ 30.13 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 186.350 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಸೇರಿದೆ. ವಿಚಾರಣೆ ವೇಳೆ ಆರೋಪಿಗಳು ಚಿಕ್ಕಮಗಳೂರು ಮಾತ್ರವಲ್ಲದೆ ಮೈಸೂರು, ಗದಗ, ಹುಬ್ಬಳ್ಳಿ ಹಾಗೂ ಹಾಸನ ಜಿಲ್ಲೆಯಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.ಪೊಲೀಸ್ ತಂಡದಲ್ಲಿ ಪಿಎಸ್ಐ ಗಳಾದ ಶ್ರೀ. ಪವನ್ ಕುಮಾರ್ ಸಿ ಸಿ, ಶ್ರೀ. ಧನಂಜಯ್ ಡಿ ಹೆಚ್, ಶ್ರೀಮತಿ. ವಿದ್ಯಾ ಕೆ ಜೆ, ಶ್ರೀ. ತಿಪ್ಪೇಶ್ ಡಿ ವಿ, ಶ್ರೀಮತಿ. ಮಂಜುಳಾಬಾಯಿ ಹಾಗೂ ಸಿಬ್ಬಂದಿಗಳಾದ ಶ್ರೀ. ಮಧುಕುಮಾರ್ ಜಿ ಕೆ, ಶ್ರೀ. ಸ್ವಾಮಿ ಎ ಓ, ಶ್ರೀ. ಹರೀಶ್ ಬಿ ಸಿ, ಶ್ರೀ. ಮಹಮ್ಮದ್ ರಿಯಾಜ್, ಶ್ರೀ. ದೇವರಾಜ್ ಎ ಎಸ್, ಶ್ರೀ. ಅರುಣ್ ಕುಮಾರ್, ಶ್ರೀ. ರಾಜಪ್ಪ ಬಿ ಹೆಚ್ ಮತ್ತು ಶ್ರೀ. ಮಂಜಪ್ಪ ರವರು ಕಾರ್ಯನಿರ್ವಹಿಸಿರುತ್ತಾರೆ.
ಟಿಬೇಟಿಯನ್ ಸೆಟಲ್ಮೆಂಟ್ ಸೇರಿ ವಿವಿಧ ಭಾಗಗಳಿಗೆ ಜಿಲ್ಲಾಧಿಕಾರಿ ಶ್ರೀರೂಪ ಭೇಟಿ:ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಪರಿಶೀಲನೆ▪️ಜಿಲ್ಲಾಧಿಕಾರಿ ಶ್ರೀರೂಪ ಅವರು ಹನೂರು ತಾಲೂಕಿನ ಟಿಬೆಟಿಯನ್ ಸೆಟಲ್ಮೆಂಟ್ ಪ್ರದೇಶಕ್ಕೆ ಇಂದು ಭೇಟಿ ನೀಡಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಸ್ಥಳಗಳನ್ನು ಪರಿಶೀಲಿಸಿದರು. ▪️ಟಿಬೇಟಿಯನ್ ಸೆಟಲ್ ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಮುಖಂಡರ ಜೊತೆ ಜಿಲ್ಲಾಧಿಕಾರಿಯವರು ಸಮಾಲೋಚಿಸಿದರು.▪️ಪ್ರವಾಸೋದ್ಯಮ ಅಭಿವೃದ್ದಿ ಸಂಬಂಧ ಸ್ಥಳಗಳನ್ನು ವೀಕ್ಷಣೆ ಮಾಡಿದರು. ▪️ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು.▪️ಬಳಿಕ ಗಡಿಭಾಗದ ಅರ್ಧನಾರಿಪುರ ಚೆಕ್ ಪೋಸ್ಟ್‌ಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ತಪಾಸಣ ಕಾರ್ಯವೈಖರಿಯನ್ನು ಪರಿಶೀಲಿಸಿದರು.ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಲಹೆ-ಸೂಚನೆಗಳನ್ನು ನೀಡಿದರು.
ಚಿತ್ತಾಪುರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಮುನ್ನುಡಿಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪುರ ಅವರೊಂದಿಗೆ ಭಾಗವಹಿಸಿ ಮಾತನಾಡಿದೆ. ಈ ರಾಜ್ಯದ ಮುಂದಿನ ಭವಿಷ್ಯಕ್ಕಾಗಿ ಪ್ರಿಯಾಂಕ್ ಖರ್ಗೆ ಅವರನ್ನು ಕೊಟ್ಟಿದ್ದೀರಿ ನಿಮಗೆ ನಮಸ್ಕಾರಗಳು. ಸಾಧನೆ ಅದರ ಪಾಡಿಗೆ ಅದು ಆಗುವುದಿಲ್ಲ, ಅದಕ್ಕೆ ಶ್ರಮ ಮತ್ತು ಛಲ ಇರಬೇಕು. ಜನರ ಬದುಕು ಬದಲಾವಣೆ ಮಾಡುತ್ತೇನೆ ಎಂಬ ಹಠ ಇರಬೇಕು. ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಪಕ್ಷದ ಅಭಿವೃದ್ಧಿಗಾಗಿ, ರಾಜ್ಯದ ಅಭಿವೃದ್ಧಿಗಾಗಿ ಹಾಗೂ ಎಲ್ಲ ವರ್ಗದ ಜನರಿಗೆ ನ್ಯಾಯವನ್ನು ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ನಾಯಕರ ಜೊತೆಗೆ ನೀವು ನಿಂತಿದ್ದಕ್ಕೆ ನಿಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸಿಕ್ಕ ಅವಕಾಶದಲ್ಲಿ ಜನರ ಕಣ್ಣೀರು ಒರೆಸುವಂತಹ ಕೆಲಸವನ್ನು ನಮ್ಮ ನಾಯಕರು ಮಾಡಿಕೊಂಡು ಬರುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ದೀರ್ಘವಾದ ಶ್ರಮದಿಂದ 371 (ಜೆ) ತಂದು ನಿಮ್ಮ ಋಣ ತೀರಿಸುವ ಕೆಲಸ ಮಾಡಿದ್ದಾರೆ. ನಮ್ಮ ಇಲಾಖೆಯಿಂದ 365 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಪ್ರಾರಂಭ ಮಾಡುತ್ತಿದ್ದೇವೆ. ಕೃಷ್ಣಾ ಜಲಾಶಯದ ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ಹಾಗೂ ಆಂಧ್ರದವರು ಅಡಚಣೆ ಮಾಡಿದ್ದಾರೆ. ನಮ್ಮ ನೀರು ನಮ್ಮ ಹಕ್ಕು, ನಿಮಗೆ ಸಿಗಬೇಕಾದಂತಹ ನ್ಯಾಯ ಅದು. ರೈತರನ್ನು ಬದುಕಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಖರ್ಗೆ ಸಾಹೇಬರ 50 ವರ್ಷಗಳ ತಪಸ್ಸಿನಿಂದ ಕಲ್ಯಾಣ ಕರ್ನಾಟಕಕ್ಕೆ ಅವರು ಕೊಟ್ಟ ಕಾರ್ಯಕ್ರಮಗಳನ್ನು ಇಡೀ ರಾಜ್ಯ ಹಾಗೂ ದೇಶ ನೆನಸುತ್ತಿದೆ. ರಾಜ್ಯದಲ್ಲಿ ನೀರಾವರಿ ಗ್ಯಾರಂಟಿ ಕೊಟ್ಟಿದ್ದೇವೆ. ಎಲ್ಲಾ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇವೆ. ಕಳೆದ ಮೂರು ವರ್ಷಗಳಲ್ಲಿ 400ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಿದ್ದೇವೆ. ನಿಮ್ಮ ಸಹಕಾರದಿಂದ ಹಲವು ಕಾರ್ಯಕ್ರಮಗಳನ್ನೂ ಕೊಟ್ಟಿದ್ದೇವೆ. ಪ್ರಿಯಾಂಕ್ ಖರ್ಗೆ ಹಾಗೂ ನಮ್ಮ ಪಕ್ಷದ ನಾಯಕರ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಆಶಿಸುತ್ತೇನೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್
ತುಮಕೂರು ನಗರದ ಜಯಪುರದಲ್ಲಿ ಕರ್ನಾಟಕ ಭೀಮಸೇನ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಮತ್ತು ತುಮಕೂರು ನಗರ ಮತ್ತು ತುಮಕೂರು ಗ್ರಾಮಾಂತರ ಜಿಲ್ಲಾ ಮಹಿಳಾ ಘಟಕ ಶಾಖೆಗಳ ಉದ್ಘಾಟನೆ ಹಾಗೂ ಕರ್ನಾಟಕ ಭೀಮಸೇನೆ ಕಪ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಟ್ರೋಫಿ ಟೂರ್ನಮೆಂಟ್ ಕಾರ್ಯಕ್ರಮವನ್ನು ದಿನಾಂಕ ಮಾರ್ಚ್ 7 -8 ರಂದು ಆಯೋಜನೆ ಮಾಡಲಾಗಿತ್ತು ಈ ಕಾರ್ಯಕ್ರಮವನ್ನು ತುಮಕೂರು ಜನಪ್ರಿಯ ಶಾಸಕರಾದ ಜ್ಯೋತಿ ಗಣೇಶ್ ರವರು ಪುಷ್ಪಾರ್ಚನೆ ಹಾಗೂ ದೀಪ ಹಚ್ಚಿ ಕ್ರಿಕೆಟ್ ಆಡುವುದರ ಮೂಲಕ ಟೂರ್ನಿಮೆಂಟ್ ಗೆ ಚಾಲನೆ ನೀಡಿದರು ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ದಾಸಪ್ಪ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ವಕೀಲರಾದ ನಾಗೇಶ್ ಶಿವಾಜಿ ಹಾಗೂ ಕರ್ನಾಟಕ ಭೀಮಸೇನೆಯ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು
ಜೈ ಭೀಮ್ ಬಂಧುಗಳೇ ದಿನಾಂಕ: 7 ಮತ್ತು 8 ಮಾರ್ಚ್ ಶನಿವಾರ ಭಾನುವಾರ ದಿನ ತುಮಕೂರು ನಗರದಲ್ಲಿ ಸ್ಥಳ:: ಜೈಪುರ. (ಜಯಪುರ) ತುಮಕೂರು ಇಲ್ಲಿ. ಕರ್ನಾಟಕ ಭೀಮ್ ಸೇನೆ. 4ನೇ ವರ್ಷದ ವಾರ್ಷಿಕೋತ್ಸವ ಮತ್ತು ತುಮಕೂರು ನಗರ, ಮತ್ತು ತುಮಕೂರು ಗ್ರಾಮಾಂತರ, ಮತ್ತು ತುಮಕೂರು ಜಿಲ್ಲಾ ಮಹಿಳಾ ಘಟಕ, ಶಾಖೆಗಳ ಉದ್ಘಾಟನೆ ಸಮಾರಂಭ ಮತ್ತು ಕರ್ನಾಟಕ ಭೀಮ್ ಸೇನೆ ಕಪ್ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಟ್ರೋಫಿ ಟೂರ್ನಮೆಂಟ್ ಕ್ರಿಕೆಟ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಆದ್ದರಿಂದ ಕರ್ನಾಟಕ ಭೀಮ್ ಸೇನೆಯ ರಾಜ್ಯಮಟ್ಟದ ಪದಾಧಿಕಾರಿಗಳು ಮತ್ತು ಕರ್ನಾಟಕ ಭೀಮ್ ಸೇನೆ ಎಲ್ಲಾ ಪದಾಧಿಕಾರಿಗಳು, ಮತ್ತು ಕರ್ನಾಟಕದ ಎಲ್ಲಾ ಕರ್ನಾಟಕ ಭೀಮ್ ಸೇನೆಯ ಎಲ್ಲಾ ಜಿಲ್ಲಾ ಅಧ್ಯಕ್ಷರು ತಾಲೂಕ್ ಅಧ್ಯಕ್ಷರು ಹೋಬಳಿ ಮಟ್ಟದ ಅಧ್ಯಕ್ಷರು ಪದಾಧಿಕಾರಿಗಳು ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ದಲಿತ ಪರ ಚಿಂತಕರು ಮಹಿಳೆಯರು ತಾಯಂದಿರು ಮತ್ತು ದಲಿತಪರ ಹೋರಾಟಗಾರರು, ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕೆಂದು ಈ ಮೂಲಕ ಜೈ ಭೀಮ್ ಆಹ್ವಾನಿಸಲಾಗಿದೆ. ಎನ್. ದಾಸಪ್ಪ. ಜಿಲ್ಲಾಧ್ಯಕ್ಷರು.ಕರ್ನಾಟಕ ಭೀಮ್ ಸೇನೆ ತುಮಕೂರು ಜಿಲ್ಲೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಿಐಡಿ ಹಾಗೂ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ಆಯೋಜಿಸಿದ್ದ ‘CIDECODE’ 3ನೇ ವರ್ಷದ ಸೈಬರ್ ಅಪರಾಧ ತನಿಖಾ ಶೃಂಗಸಭೆಯನ್ನು ಉದ್ಘಾಟನೆ ಅಪರಾಧಗಳನ್ನು ತನಿಖೆ ಮಾಡಲು ಮತ್ತು ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸಲು ಅಗತ್ಯವಾದ ಕೌಶಲ್ಯ, ತರಬೇತಿ ಮತ್ತು ತಂತ್ರಜ್ಞಾನದೊಂದಿಗೆ ವಿಶೇಷ ಸೈಬರ್ ಅಪರಾಧ ಘಟಕಗಳನ್ನು ಸ್ಥಾಪಿಸುವ ಮೂಲಕ ಕರ್ನಾಟಕ ಸರ್ಕಾರವು ಸೈಬರ್ ಅಪರಾಧಗಳನ್ನು ಮಟ್ಟಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಕರ್ನಾಟಕದ ಎಲ್ಲ ಜಿಲ್ಲೆಗಳು ಮತ್ತು ಪ್ರಮುಖ ನಗರಗಳಲ್ಲಿ ಒಟ್ಟು 43 ಸಿಇಎನ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದೆ. ನಮ್ಮ ನಾಗರಿಕರಿಗೆ ಸೈಬರ್ ಸುರಕ್ಷತೆ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ.ರಾಜ್ಯದಲ್ಲಿ ಸಿಸಿಐಟಿಆರ್ ಸ್ಥಾಪನೆಯಿಂದ ಸೈಬರ್ ಕ್ರೈಮ್ ತನಿಖೆಯನ್ನು ಬಲಪಡಿಸುವುದು, ಸಂಶೋಧನಾ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳನ್ನು ಸುಧಾರಿತ ತಾಂತ್ರಿಕ ಕೌಶಲ್ಯಗಳಿಂದ ಸಜ್ಜುಗೊಳಿಸಲು ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಿದೆ. ಈ ಕೇಂದ್ರದಿಂದ ಹೊರಹೊಮ್ಮುತ್ತಿರುವ ಸಂಶೋಧನಾ ಪ್ರಕಟಣೆಗಳು ಮತ್ತು ಸಾಮರ್ಥ್ಯವರ್ಧನಾ ಉಪಕ್ರಮಗಳು ಸೈಬರ್ ಪೊಲೀಸ್ ವ್ಯವಸ್ಥೆಗೆ ಅರ್ಥಪೂರ್ಣ ಕೊಡುಗೆಯನ್ನು ನೀಡುತ್ತಿದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದೆ.ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮೊಹಾಂತಿ, ಇನ್ಫೋಸಿಸ್ ಫೌಂಡೇಶನ್ ಟ್ರಸ್ಟಿ ಸುನೀಲ್ ಕುಮಾರ್ ಧಾರೇಶ್ವರ್, ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ಸಿಇಒ ವಿನಾಯಕ ಗೋಡ್ಸೆ ಮುಂತಾದವರು ಉಪಸ್ಥಿತರಿದ್ದರು.
2025-2026ನೇ ಸಾಲಿನ ಎಸ್ ಎಸ್ ಎಲ್ ಸಿ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ಯಲಗಟ್ಟಾ ಗ್ರಾಮದ ಸರಕಾರಿ ಫ್ರೌಢ ಶಾಲೆಯಲ್ಲಿ2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಮಕ್ಕಳ ಬೀಳ್ಕೊಡುವ ಕಾರ್ಯಕ್ರಮದಲ್ಲಿ ವಿದ್ಯೆ ಕೊಡುವ ತಾಯಿ ಸರಸತಿ ಭಾವಚಿತ್ರಕ್ಕೆ ಪೂಜ ಕಾರ್ಯಕ್ರಮ ಮಾಡುವ ಮೂಲಕ ಅದ್ದೂರಿಯಾಗಿ ಕಾರ್ಯಕ್ರಮ ಜರಗಿದ್ದುಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಂಬರೀಶ್ ನಿಲಗೋಲ್ ಮುಖ್ಯಪಾಗಿದ್ದರು ವಹಿಸಿಕೊಂಡಿದ್ದರು ಕಾರ್ಯಕ್ರಮದ ಉದ್ಘಾಟಕರಾಗಿ ಶಾಲೆಯ ಅಧ್ಯಕ್ಷರಾದ ನಿಂಗಣ್ಣ ಸೌಕಾರ್ ಉದ್ಘಾಟನೆ ನಿರ್ವಹಿಸಿದರುಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ಅಣ್ಣಯ್ಯ ಜಯ ಕರ್ನಾಟಕ ಸಂಘಟನೆಯ ಗ್ರಾಮ ಘಟಕ ಅಧ್ಯಕ್ಷರು ಮಕ್ಕಳು ಉತ್ತಮ ಫಲಿತಾಂಶ ತೆಗೆದುಕೊಡುವುದರ ಮೂಲಕ ಶಾಲೆಗೆ ಕೀರ್ತಿಯನ್ನು ತರುವುದರ ಜೊತೆಗೆ ತಂದೆ-ತಾಯಿರ ಕೀರ್ತಿಯನ್ನು ಹಾಗೂ ಊರಿನ ಕೀರ್ತಿಯನ್ನು ಎತ್ತಿಡಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರುಅದೇ ರೀತಿ ಕರವೇ ಗ್ರಾಮ ಘಟಕದ ಅಧ್ಯಕ್ಷರಾದ ರಾಜು ನಾಯಕ ಅವರು ಕೂಡ ಮಾತನಾಡುತ್ತಾ 10ನೇ ತರಗತಿ ಎಲ್ಲ ಮಕ್ಕಳಿಗೆ ಉತ್ತಮ ಫಲಿತಾಂಶ ತಂದು ಕೊಡಬೇಕಾಗಿ ಅವರು ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಶಿವಶಂಕರ ಕರುನಾಡ ವಿಜಯ ಸೇನೆ ಗ್ರಾಮಘಟಕ ಅಧ್ಯಕ್ಷರು ಯಲಗಟ್ಟಾ , ಬಸವರಾಜ,ನಾಗಣ್ಣ, ವೆಂಕಟೇಶ ಶಿಕ್ಷಕರು ಹನುಮಂತಪ್ಪ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಸಮತೋಲನ ಬಜೆಟ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು ಮಂಡಿಸಿರುವ 2026-27ನೇ ಬಜೆಟ್, ವಿವಿಧ ಇಲಾಖೆಗಳಲ್ಲಿನ 56 ಸಾವಿರ ಹುದ್ದೆಗಳ ನೇಮಕಾತಿ ಸೇರಿದಂತೆ ಎಲ್ಲ ಕ್ಷೇತ್ರಗಳನ್ನು ಒಳಗೊಂಡ ಸಮಗ್ರ ಮತ್ತು ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಸಮತೋಲನ ಬಜೆಟ್ ಆಗಿದೆ.ವಿಶೇಷವಾಗಿ ವಿವಿಧ ಹುದ್ದೆಗಳ ನೇಮಕಾತಿ ಬಗ್ಗೆ ಯುವಕರಿಗೆ ಆತಂಕವಿತ್ತು. 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದ್ದಾರೆ. ರೈತ ಸಮುದಾಯಕ್ಕೆ 30 ಸಾವಿರ ಕೋಟಿ ರೂ. ಸಾಲ ನೀಡುವ ತೀರ್ಮಾನವನ್ನು ಬಜೆಟ್‌ನಲ್ಲಿ ಕೈಗೊಂಡಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ 15000 ಹುದ್ದೆ, ಪೊಲೀಸ್ ಇಲಾಖೆಯಲ್ಲಿ 8 ಸಾವಿರ ಹುದ್ದೆಗಳು ಹಾಗೂ ಆರೋಗ್ಯ ಇಲಾಖೆಯಲ್ಲಿ 2500 ಹುದ್ದೆಗಳ ನೇಮಕಾತಿ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲಾಗುವುದು ಎಂಬುದನ್ನು ಬಜೆಟ್‌ನಲ್ಲಿ ತಿಳಿಸಿದ್ದಾರೆ.ಹೆಚ್ಚುತ್ತಿರುವ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಬೀರುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆ ನಿಷೇಧ ಮಾಡುವ ತೀರ್ಮಾನ ಒಳ್ಳೆಯ ಬೆಳವಣಿಗೆ. ತಂತ್ರಜ್ಞಾನ ಬಳಸಿ ರಾಜ್ಯಕ್ಕೆ ಸೀಮಿತವಾಗಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸದಂತೆ ನಿಷೇಧಿಸಬಹುದಾಗಿದೆ.ರಾಜ್ಯದ ಆರ್ಥಿಕ ಶಿಸ್ತನ್ನು ಕಾಪಾಡಿರುವ 17 ಬಾರಿ ಬಜೆಟ್ ಮಂಡಿಸಿರುವ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ ಮತ್ತೊಮ್ಮೆ ಅಭಿನಂದನೆಗಳು.
15ನೇ ವರ್ಷದ ಶ್ರೀ ಆದಿಶಕ್ತಿ ರೇಣುಕ ಯಲ್ಲಮ್ಮನವರ ವಾರ್ಷಿಕೋತ್ಸವ ಮತ್ತು ಜಾತ್ರಾ ಮಹೋತ್ಸವ ಆತ್ಮೀಯರೇ ಎಲ್ಲರಿಗೂ ಸ್ವಾಗತ ನಗರದ ಶೆಟ್ಟಿಹಳ್ಳಿ ಜ್ಯೋತಿ ನಗರ ಶ್ರೀ ಆಧಿಶಕ್ತಿ ರೇಣುಕ ಯಲ್ಲಮ್ಮ ದೇವಿಯ ಜಾತ್ರ ಮಹೋತ್ಸವವನ್ನು ವಿಶೇಷ ಪೂಜೆ ಮತ್ತು ಅಲಂಕಾರ, ಅನ್ನಸಂತರ್ಪಣಾ ಕಾರ್ಯಕ್ರಮವನ್ನು ಸತತ 16 ವರ್ಷಗಳಿಂದ ಶೆಟ್ಟಿಹಳ್ಳಿ ಗ್ರಾಮಸ್ತರು ಮಾಡುತ್ತ ಬರುತ್ತಿದ್ದು ಅದರಂತೆ ಈ ವರ್ಷವೂ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿದೆ,2010ರಿಂದ ಪ್ರಾರಂಭವಾಗಿರುವ ಈ ಜಾತ್ರಾ ಮಹೋತ್ಸವವನ್ನು ತುಮಕೂರು ನಗರ ಮತ್ತು ತಾಲ್ಲೂಕಿನಲ್ಲಿರುವ ಮಂಗಳಮುಖಿಯರು ಸಮುದಾಯದ ಮುಖಂಡರಾದ ಶ್ರೀಮತಿ ದೀಪಿಕಮ್ಮ ರವರ ನೇತೃತ್ವದಲ್ಲಿ ಸಾವಿರಾರು ತೃತೀಯ ಲಿಂಗಿಗಳು ಭರತ ಉಣ್ಣಿಮೆಯೆಂದು ಶ್ರೀ ರೇಣುಕ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ. ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಿಯ ಅದ್ದೂರಿ ಜಾತ್ರ ಮಹೋತ್ಸ ಸಮಾರಂಭವನ್ನು ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನಶಕ ವರ್ಷಂಗಳು 1947ನೇ ಶ್ರೀ ವಿಶ್ವಾವಸುನಾಮ ಸಂವತ್ಸರದ ಪಾಲ್ಗುಣ ಬಹುಳ ತದಿಗೆ ದಿನಾಂಕ: 06-3-2026ನೇ ಶುಕ್ರವಾರದಂದು ಬೆಳಗ್ಗೆ 5.30 ರಿಂದ 6.30ರೊಳಗೆ ಬ್ರಾಹ್ಮೀ ಮುಹೂರ್ತದಲ್ಲಿ ಸುಮಂಗಲಿಯರಿಂದ ಗಂಗಾ ಪೂಜೆ, ಗ್ರಾಮ ಪ್ರದಕ್ಷಿಣಾ ಪ್ರರ್ವಕ ದೇವಾಲಯ, ಯೋಗಶಾಲ ಪ್ರವೇಶ, ಮಹಾಗಣಪತಿ ಪೂಜೆ, ಪುಣ್ಯಾಹ, ಕಲಶ ಸ್ಥಾಪನೆ, ರಕ್ಷಾಸೂತ್ರ ಧಾರಣೆ, ನವಗ್ರಹ ಪೂಜೆ, ವಾಸ್ತುಹೋಮ, ರಾಷೆಘೃಹೋಮ, ಮಹಾಗಣಪತಿ ಹೋಮ, ಪಂಚಾಮೃತ ಅಭಿಷೇಕ, ಶ್ರೀರೇಣುಕಾಯಲ್ಲಮ್ಮ ದೇವಿ ಮೂಲಮಂತ್ರ ಹೋಮ(ಪೂಣರ್ಾಹುತಿ), ಅನ್ನಬಲಿ(ಬಲಿಹರಣ) ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮತ್ತು ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ, ಸಂಜೆ 6 ಗಂಟೆಗೆ ಶೆಟ್ಟಿಹಳ್ಳಿ ರಾಜಬೀದಿಯಲ್ಲಿ ಶಕ್ತಿ ಸ್ವರೂಪಿಣಿಯಾದ ಶ್ರೀ ರೇಣುಕಾಯಲ್ಲಮ್ಮ ನವರ ಮುತ್ತಿನ ಪಲ್ಲಕ್ಕಿ ಉತ್ಸವ, ವೀರಗಾಸೆ, ಮಂಗಳವಾದ್ಯಗಳೊಂದಿಗೆ ಕಾರ್ಯಮಕ್ರಮ ಏರ್ಪಡಿಸಲಾಗಿದೆ, ಭಕ್ತಮಹಾಷಯರು ಸರಿಯಾದ ಸಮಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಥಾಶಕ್ತಿ ತನು, ಮನ,ಧನ ಅರ್ಪಿಸುವುದರೊಂದಿಗೆ, ಶ್ರೀ ಆದಿಶಕ್ತಿ ರೇಣುಕ ಯಲ್ಲಮ್ಮ ದೇವಿಯವರ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಿ, ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರುತ್ತೇವೆ,15ನೇ ವರ್ಷದ ಶ್ರೀ ಆದಿಶಕ್ತಿ ರೇಣುಕ ಯಲ್ಲಮ್ಮ ದೇವಿಯ ಅದ್ದೂರಿ ಜಾತ್ರಮಹೋತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ಶ್ರೀ ದೀಪಿಕಾ, ಮತ್ತು ಅವರ ಬಳಗ, ಶೆಟ್ಟಿಹಳ್ಳಿ ಗ್ರಾಮಸ್ಥರಾದ ಶ್ರೀ ಜಯಕೀರ್ತಿಯವರು ಶ್ರೀದೊಡ್ಡಹನುಮಂತೇಗೌಡರು ಶ್ರೀಆಂಜಿನಪ್ಪನವರು, ಶ್ರೀ,ರಾಜಣ್ಣನವರು, ಶ್ರೀಗೋಪಾಲಣ್ಣ, ಶ್ರೀಹನುಮಂತರಾಯಪ್ಪ, ಶ್ರೀಶಂಕರ್ಗೌಡರು, ಶ್ರೀಮುದ್ದಪ್ಪನವರು, ಶ್ರೀನಟರಾಜಪ್ಪನವರು,ನಾಗಣ್ಣ, ನಾರಾಯಣಪ್ಪನವರು, ಕುಮಾರಣ್ಣ ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ಎ,ನರಸಿಂಹಮೂರ್ತಿ. ಅಧ್ಯಕ್ಷರು ಸ್ಲಂ ಸಮಿತಿ, ಶ್ರೀ ಕಣ್ಣನ್ ಮುಖಂಡರು ಮಾರಿಯಮ್ಮ ನಗರ, ಶಂಕ್ರಪ್ಪ ಮತ್ತು ತಿರುಮಲಯ್ಯ ಸ್ಲಂ ಸಮಿತಿ, ಜಾಬೀರ್ಖಾನ್ ಎಳ್ಳರ ಬಂಡೆ ಶಾಖಾ ಮುಖಂಡರು,ಶ್ರೀ ಅರುಣ್ ಟಿ.ಜಿ ಸ್ಲಂ ಸಮಿತಿ ಪ್ರೋತ್ಸಹಕರು ಶ್ರೀ ಕೃಷ್ಣಮೂರ್ತಿರವರು ರೇಣುಕಾದೇವಿ ಫ್ಲವರ್ ಡೆಕೋರೇಟರ್, ಸಾವಿತ್ರಿ ಬಾಯಿಪುಲೆ ಸಂಘಟನೆಯ ಶ್ರೀ ಅನುಪಮಾ, ಶಾರದಮ್ಮ, ಮಂಗಳಮ್ಮನವರು ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳುತ್ತಿದ್ದಾರೆ, ಆತ್ಮೀಯ ಮಾಧ್ಯಮ ಮಿತ್ರರು ಜಾತ್ರಾ ಮಹೋತ್ಸವಕ್ಕೆ ಬಂದು ಪಾಲ್ಗೊಂಡು ವರದಿ ಮಾಡುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರುತ್ತೇವೆ.
ಶಿಂಷಾ ನದಿ ಪಾತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳ ಸಭೆ .ಮದ್ದೂರು ತಾಲೂಕಿನಲ್ಲಿ ಹಾದುಹೋಗಿರುವ ಶಿಂಷಾ ನದಿ ಪಾತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕಾವೇರಿ ನೀರಾವರಿ ನಿಗಮ ಅಧೀನದಲ್ಲಿ ಅಗತ್ಯ ಕ್ರಮಗಳು ಮತ್ತು ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಮಾಜಿ ಸಂಸದರು ಹಾಗೂ ಬಮುಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರ ನೇತೃತ್ವದಲ್ಲಿ, ನೆರೆಯ ಕುಣಿಗಲ್ ಕ್ಷೇತ್ರದ ಶಾಸಕ ಡಾ. ರಂಗನಾಥ್ ಸೇರಿದಂತೆ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಯಿತು.ತಾಲೂಕಿನ ಕದಲೂರು ಗ್ರಾಮದ ನನ್ನ ನಿವಾಸದಲ್ಲಿ ನಡೆದ ಸಭೆಯಲ್ಲಿ ಕುಣಿಗಲ್ ಶಾಸಕ ಡಾ. ರಂಗನಾಥ್ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರೊಂದಿಗೆ ನೀರಾವರಿ ಇಲಾಖೆಯ ಉನ್ನತಾಧಿಕಾರಿಗಳು ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಿ ಅಗತ್ಯ ಮಾಹಿತಿ ವಿನಿಮಯ ಮಾಡಿಕೊಂಡರು.ಮದ್ದೂರು ತಾಲೂಕಿನ ಕಸಬಾ ಹೋಬಳಿಯ ಆರು ಏತನೀರಾವರಿ ಯೋಜನೆಗಳು ಹಾಗೂ ಇಗ್ಗಲೂರು ಬ್ಯಾರೇಜ್ ಇನ್ನೀರು ವ್ಯಾಪ್ತಿಯ 19 ಕೆರೆಗಳಿಗೆ ಬನ್ನಹಳ್ಳಿ ಏತನೀರಾವರಿ ಮೂಲಕ ನೀರು ತುಂಬಿಸುವ ಹೆಚ್ಚುವರಿ ಕಾಮಗಾರಿಗಳ ಕುರಿತು ನೀರಾವರಿ ನಿಗಮದ ಅಧಿಕಾರಿಗಳು ವಿವರ ಮಂಡಿಸಿದರು. ಇದರ ಜೊತೆಗೆ ಕಸಬಾ ಹೋಬಳಿ ವ್ಯಾಪ್ತಿಯ ಶಿಂಷಾ ನದಿ ಎಡದಂಡದ ವಿವಿಧ ಕೆರೆಗಳ ಪುನಶ್ಚೇತನ, ನದಿ ಜಲಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಹೆಚ್ಚುವರಿ ಯೋಜನೆಗಳು ಹಾಗೂ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು.ಇಗ್ಗಲೂರು ಬ್ಯಾರೇಜ್‌ನಿಂದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಕಣ್ವ ಮತ್ತು ಗರಕಹಳ್ಳಿ ಏತ ನೀರಾವರಿ ಯೋಜನೆಗಳ ಪ್ರಗತಿ ಕುರಿತು ಸಹ ಅಧಿಕಾರಿಗಳು ಮಾಹಿತಿ ನೀಡಿದರು. ಶಿಂಷಾ ನದಿ ಎಡ ಪಾರ್ಶ್ವದ ಆತಗೂರು ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ನೂರಾರು ಹಳ್ಳಿಗಳು ಮಳೆಯಾಶ್ರಿತ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ, ಈ ಭಾಗದ ರೈತರ ಕೃಷಿ ಜಮೀನುಗಳಿಗೆ ನೀರೊದಗಿಸುವ ಕೊಳವೆಬಾವಿಗಳ ಹಿತದೃಷ್ಟಿಯಿಂದ ಅಂತರ್ಜಲ ವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವನ್ನು ಒತ್ತಿಹೇಳಲಾಯಿತು.ಕಣ್ವ ಏತ ನೀರಾವರಿ ಯೋಜನೆಯಡಿ ಮದ್ದೂರು ತಾಲೂಕಿನ ಗಡಿಭಾಗದ ಮಾದನಾಯಕನಹಳ್ಳಿ, ಅರೆತಿಪ್ಪೂರು, ಕೂಳಗೆರೆ ಸೇರಿದಂತೆ ಐದು ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಿ, ಬನ್ನಹಳ್ಳಿ ಏತ ನೀರಾವರಿ ಸಂಪರ್ಕದಲ್ಲಿ ಕೈಬಿಟ್ಟಿರುವ ಕೆರೆಗಳಿಗೆ ಕಾರ್ಯಯೋಜನೆ ಸಿದ್ಧಪಡಿಸಲು ನಿರ್ಧರಿಸಲಾಯಿತು.ಸಿ.ಎ. ಕೆರೆ ವ್ಯಾಪ್ತಿಯ ಏತ ನೀರಾವರಿ ಕಾಮಗಾರಿಗಳ ರೂಪುರೇಷೆಗಳನ್ನು ಸಿದ್ಧಪಡಿಸಿ, ನಿಗದಿತ ಅವಧಿಯೊಳಗೆ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಆದ್ಯತೆ ನೀಡುವಂತೆ ಹಾಗೂ ಗುಣಮಟ್ಟದ ಕಾಮಗಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.ಈ ಸಭೆಯಲ್ಲಿ ಮಾಜಿ ಸಂಸದ ಹಾಗೂ ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್, ಕುಣಿಗಲ್ ಶಾಸಕ ಡಾ. ರಂಗನಾಥ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ಅಭಿಯಂತರ ರಘುರಾಮನ್, ಮುಖ್ಯ ಅಭಿಯಂತರ ಮಹೇಶ್, ಎ.ಇ.ಇ ನಾಗರಾಜು ಸೇರಿದಂತೆ ಇತರರು ಹಾಜರಿದ್ದರು.