ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಪ್ರತಿನಿಧಿಗಳ ಸಮ್ಮೇಳನದಲ್ಲಿ ನಿರ್ಣಯ*ರಾಜ್ಯ ಸರ್ಕಾರ ಸ್ಲಂ ಜನರಿಗೆ ನೀಡಿರುವ ಭರವಸೆಗಳನ್ನು ಕೂಡಲೇ ಈಡೇರಿಸಲು ಆಗ್ರಹ*.3 ವರ್ಷ ಕಳೆದು ನಾಯಕತ್ವ ಬದಲಾದರು ಸ್ಲಂ ಜನರ ಸಮಸ್ಯೆಗಳ ಬಗ್ಗೆ ಕಾಂಗ್ರೇಸ್ ಸರ್ಕಾರ ನೀಡಿರುವ ಚುನಾವಣಾ ಪೂರ್ವ ಮತ್ತು ನಂತರದ ಭರವಸೆಗಳನ್ನು ಕೂಡಲೇ ಈಡೇರಿಸಬೇಕೆಂದು ಇತ್ತೀಚಿಗೆ ಗದಗನ ಲಯನ್ಸ್ ಕ್ಲಬ್ನಲ್ಲಿ ನಡೆದ ರಾಜ್ಯ ಪ್ರತಿನಿಧಿಗಳ ಸಮ್ಮೇಳನದ ಒಕ್ಕೋರಲ ನಿರ್ಣಯವನ್ನು

ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಪ್ರತಿನಿಧಿಗಳ ಸಮ್ಮೇಳನದಲ್ಲಿ ನಿರ್ಣಯ*ರಾಜ್ಯ ಸರ್ಕಾರ ಸ್ಲಂ ಜನರಿಗೆ ನೀಡಿರುವ ಭರವಸೆಗಳನ್ನು ಕೂಡಲೇ ಈಡೇರಿಸಲು ಆಗ್ರಹ*.3 ವರ್ಷ ಕಳೆದು ನಾಯಕತ್ವ ಬದಲಾದರು ಸ್ಲಂ ಜನರ ಸಮಸ್ಯೆಗಳ ಬಗ್ಗೆ ಕಾಂಗ್ರೇಸ್ ಸರ್ಕಾರ ನೀಡಿರುವ ಚುನಾವಣಾ ಪೂರ್ವ ಮತ್ತು ನಂತರದ ಭರವಸೆಗಳನ್ನು ಕೂಡಲೇ ಈಡೇರಿಸಬೇಕೆಂದು ಇತ್ತೀಚಿಗೆ ಗದಗನ ಲಯನ್ಸ್ ಕ್ಲಬ್ನಲ್ಲಿ ನಡೆದ ರಾಜ್ಯ ಪ್ರತಿನಿಧಿಗಳ ಸಮ್ಮೇಳನದ ಒಕ್ಕೋರಲ ನಿರ್ಣಯವನ್ನು ಕೈಗೊಳ್ಳಲಾಯಿತು.ಕಳೆದ 3 ವರ್ಷಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಹಲವು ನೀತಿಗಳು ನಗರ ಬಡಜನರ/ ಸ್ಲಂ ನಿವಾಸಿಗಳ/ ನಗರವಂಚಿತ ಸಮುದಾಯಗಳಿಗೆ ಸಂವಿಧಾನ ಮತ್ತ ಬಡಜನ ವಿರೋಧಿಯಾಗಿವೆ ಎಂದು ಹಲವಾರು ಹೋರಾಟಗಳ ಮೂಲಕ ಪ್ರತಿರೋಧ ದಾಖಲಿಸಿದ್ದು ಕರ್ನಾಟಕದಲ್ಲಿ ಬುಲ್ಡೋಜರ್ ಸಂಸ್ಕೃತಿಯನ್ನು ಪ್ರಭಲವಾಗಿ ವಿರೋಧಿಸಲಾಗುವುದು ಸಿ.ಎಂ ಡಿ.ಕೆ. ಶಿವಕುಮಾರ್ ಬಿ.ಜೆ.ಪಿಯ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿ ನೀತಿಗಳನ್ನು ಮೃದುವಾಗಿ ಅನುಸರಿಸಬಾರದು ಇದಕ್ಕಾಗಿ ಸ್ಲಂ ಜನರ ಹೋರಾಟವನ್ನು ರಾಜ್ಯಾದ್ಯಂತ ತೀವ್ರಗೊಳಿಸಲು ಸಮ್ಮೇಳನದಲ್ಲಿ 18 ಜಿಲ್ಲಾ ಸಮಿತಿಗಳ ಪ್ರತಿನಿಧಿಗಳು ಸಮಾಲೋಚನೆ ನಡೆಸಿ ರಾಜ್ಯ ಸರ್ಕಾರವನ್ನು ಎಚ್ಚರಿಸಲು ಈ ಕೆಳಕಂಡ ನಿರ್ಣಯಗಳನ್ನು ಕೈಗೊಳ್ಳಲಾಯಿತು.*ಗದಗ ಸಮ್ಮೇಳನದ ನಿರ್ಣಯಗಳು* :1. ಸ್ಲಂ ಜನರಿಗೆ ಕಾಂಗ್ರೇಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಮತ್ತು 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಹಾಗೂ ಸರ್ಕಾರ ರಚನೆ ನಂತರ ನೀಡಿರುವ ಭರವಸೆಗಳನ್ನು ಕೂಡಲೇ ಈಡೇರಿಸಬೇಕು. 2. ಸಿ.ಎಂ ಡಿ.ಕೆ ಶಿವಕುಮಾರ್ ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ನೆಪದಲ್ಲಿ ನಗರ ಪ್ರದೇಶದಲ್ಲಿರುವ ಬಡವರು/ ಸ್ಲಂ ಜನರನ್ನು ನಿಯಂತ್ರಿಸುವ ಸ್ಮಾರ್ಟ್ ಮಾನದಂಡಗಳನ್ನು ಅನ್ವಯಿಸಬಾರದು ಮತ್ತು ಪಂಚ ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು.3. ಎಸ್ಐಆರ್ ಹೆಸರಿನಲ್ಲಿ ಚುನವಾಣಾ ಆಯೋಗ ಮತದಾರರ ತೀವ್ರ ಪರಿಷ್ಕರಣೆಯಲ್ಲಿ ರಾಜ್ಯದ ಸ್ಲಂ ನಿವಾಸಿಗಳು ಮತದ ಹಕ್ಕಿನಿಂದ ವಂಚಿತರಾಗದಂತೆ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಮತದ ಹಕ್ಕನ್ನು ರಕ್ಷಿಸಬೇಕು ಇದಕ್ಕಾಗಿ ರಾಜ್ಯಾದ್ಯಂತ ಕೊಳಚೆ ಪ್ರದೇಶಗಳಲ್ಲಿ ಸಂಘಟನೆಯಿಂದ ಜಾಗೃತಿಯನ್ನು ಕೈಗೊಳ್ಳುವುದು.4. ನೂತನ ಸರ್ಕಾರ ಸ್ಲಂ ಜನರಿಗೆ ಅನ್ನ, ಆಶ್ರಯ, ಆರೋಗ್ಯದಂತಹ ಸಂವಿಧಾನ ಖಾತ್ರಿಯನ್ನು ಜಾರಿಗೊಳಿಸಿ ಸಮಾನತೆಯ ಸಮಾಜ ನಿರ್ಮಿಸಬೇಕು,5. ಸ್ಲಂ ನಿವಾಸಿಗಳಿಗೆ ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಬೇಕು.6. ಸ್ಲಂ ನಿವಾಸಿಗಳ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಬೇಕು.7. ರಾಜ್ಯದಲ್ಲಿ ವಸತಿ ಹಕ್ಕುಕಾಯಿದೆ ಮತ್ತು ನಗರ ಲ್ಯಾಂಡ್ ಬ್ಯಾಂಕ್ ನೀತಿಯನ್ನು ಜಾರಿ ಮಾಡಬೇಕು.8. ಸ್ಲಂ ನಿವಾಸಿಗಳು ವಾಸಿಸುವ ಪ್ರದೇಶಗಳಿಗೆ ‘ಶ್ರಮಿಕ ವರ್ಗಗಳ’ ಪ್ರದೇಶಗಳೆಂದು ನಾಮಕರಣ ಮಾಡಬೇಕು.9. ರಾಜ್ಯದಲ್ಲಿ ಸ್ಲಂ ನಿವಾಸಿಗಳಿಗೆ ಭೂ ಗ್ಯಾರಂಟಿಯಲ್ಲಿ ಹಕ್ಕುಪತ್ರ ವಿತರಣೆ/ನೊಂದಣಿಯನ್ನು ಸರಳೀಕರಿಸಿ ನಗರಸ್ಥಳೀಯ ಸಂಸ್ಥೆಗಳಿಂದ ಇ- ಖಾತಾವನ್ನು ನೀಡಬೇಕು.10. ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ನಲ್ಲಿ ರಾಜ್ಯದಲ್ಲಿ ಬಿಎಲ್ಸಿ BLC ಮಾದರಿಯಲ್ಲಿ 5 ಲಕ್ಷ ಕುಟುಂಬಗಳಿಗೆ ವಸತಿ ನಿರ್ಮಿಸಲು ಅನುದಾನ ನೀಡಬೇಕೆಂದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.ರಾಜ್ಯ ಪ್ರತಿನಿಧಿಗಳ ಸಮ್ಮೇಳನದ ಉದ್ಘಾಟನೆಯನ್ನು ಪರಮಪೂಜ್ಯ ಡಾ.ಪ್ರಭು ಮಹಾಂತ ಮಹಾ ಸ್ವಾಮಿಜಿಗಳು. ಅಧ್ಯಕ್ಷತೆಯನ್ನು ಸಾವಿತ್ರ ಬಾಯಿಪುಲೆ ಮಹಿಳಾ ಸಂಘದ ಸಂಚಾಲಕಿ ಚಂದ್ರಮ್ಮ. ಪ್ರಾಸ್ತಾವಿಕ ನುಡಿಯನ್ನು ಎ.ನರಸಿಂಹಮೂರ್ತಿ ಎಸ್.ಜೆ.ಕೆ ರಾಜ್ಯ ಸಂಚಾಲಕರು ನೆರವೇರಿಸಿದರು. ಪ್ರಗತಿಪರ ಚಿಂತಕರಾದ ಬಸವರಾಜ್ ಸುಳಿಬಾವಿ, ಮುಖ್ಯ ಅತಿಥಿಗಳಾಗಿ ಪೂರ್ಣರವಿಶಂಕರ್, ಹೈಕೋರ್ಟ್ ನ್ಯಾಯವಾದಿಗಳು, ಎಂ.ಎಸ್ ಹಡಪದ ವಕೀಲರು, ವಿಭಾಗಿಯ ಸಂಚಾಲಕರಾದ ಇಮ್ತಿಯಾಜ್ ಮಾನ್ವಿ, ಜನಾರ್ಧನ್ ಹಳ್ಳಿಬೆಂಚಿ, ಜಿಲ್ಲಾ ಸಂಚಾಲಕರುಗಳಾದ ಶೋಭಾ ಕಮತಾರ್. ರೇಣುಕಾ ಸರಡಗಿ, ಸುಧಾ, ರೇಣುಕಾ ಯಲ್ಲಮ್ಮ, ಅರುಣ್, ಮಂಜುಬಾಯಿ, ವೆಂಕಮ್ಮ, ಪಕೀರಪ್ಪ ತಳವಾರ್, ಶೇಖರ್ ಬಾಬು ,ಮುತ್ತು ಬೋವಿ. ನಾಗರತ್ನ ಅಳವಂಡಿ. ರೇಷ್ಮ ಭಾನು. ಪರ್ವೀನ್ ಭಾನು.ರಸೂಲ್ ನದಾಫ್. ಹನುಮಂತ ಕಟ್ಟಿಮನಿ ಮುಂತಾದವರು ಪಾಲ್ಗೊಂಡಿದ್ದರು.

