ಭವಿಷ್ಯದ ದೃಷ್ಟಿಯಲ್ಲಿ ಸ್ಲಂ ಮಕ್ಕಳು ವಿದ್ಯಾವಂತರಾಗಬೇಕು*ಪ್ರತಿಭಾ ಪುರಸ್ಕಾರದಲ್ಲಿ ಶಾಸಕ ಜಿ. ಬಿ. ಜ್ಯೋತಿಗಣೇಶ್ ಕರೆಇಂದು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋಲನ ಕರ್ನಾಟಕದಿಂದ ನಗರದ ಕನ್ನಡ ಭವನದಲ್ಲಿ 24ನೇ ವರ್ಷದ ಸ್ಲಂ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮವನ್ನು ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ ಜ್ಯೋತಿಗಣೇಶ್ ಉದ್ಘಟಿಸಿ ಮಾತನಾಡಿದರು

*ಭವಿಷ್ಯದ ದೃಷ್ಟಿಯಲ್ಲಿ ಸ್ಲಂ ಮಕ್ಕಳು ವಿದ್ಯಾವಂತರಾಗಬೇಕು**ಪ್ರತಿಭಾ ಪುರಸ್ಕಾರದಲ್ಲಿ ಶಾಸಕ ಜಿ. ಬಿ. ಜ್ಯೋತಿಗಣೇಶ್ ಕರೆ*ಇಂದು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋಲನ ಕರ್ನಾಟಕದಿಂದ ನಗರದ ಕನ್ನಡ ಭವನದಲ್ಲಿ 24ನೇ ವರ್ಷದ ಸ್ಲಂ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮವನ್ನು ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ ಜ್ಯೋತಿಗಣೇಶ್ ಉದ್ಘಟಿಸಿ ಮಾತನಾಡಿದರು.ಕೊಳಚೆ ಪ್ರದೇಶಗಳಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಕಷ್ಠದ ಪರಿಸ್ಥಿತಿಗಳಲ್ಲಿ ಪೋಷಕರು ತಮ್ಮ ಮಕ್ಕಳ ಓದನ್ನು ತಮ್ಮಗೆ ತೊಂದರೆಯಿದ್ದರೂ ಇತ್ತೀಚಿನ ದಿನಗಳಲ್ಲಿ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿರುವುದು ಶ್ಲಾಘನೀಯ ಕಳೆದ 24 ವರ್ಷಗಳಿಂದ ತುಮಕೂರು ಸ್ಲಂ ಸಮಿತಿ ಜಾತ್ಯಾತೀತವಾಗಿ ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸುತ್ತ ಬಂದಿರುವುದು ಅಭಿನಂದನೀಯವಾಗಿದೆ. ಭವಿಷ್ಯದಲ್ಲಿ ಮಕ್ಕಳು ಯಾರು ಯಾರು ಏನೇನಾಗುತ್ತಾರೋ ಗೊತ್ತಿಲ್ಲ ಹಾಗಾಗಿ ಸ್ಲಂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ವಿದ್ಯಾವಂತರಾಗಿ ಕಷ್ಠದಿಂದ ಸುಖದ ದಾರಿಗೆ ಬರಬೇಕು. ಇಂದು ಶಿಕ್ಷಣ ದುಬಾರಿಯಾಗಿದೆ ಆದರೂ ಸರ್ಕಾರಿ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ಸ್ಲಂನಲ್ಲಿರುವ ಪ್ರತಿಭಾವಂತರು ಮುಂದೆ ಬರಬೇಕೆಂದರು. ಸ್ಲಂ ಎಂದು ಕರೆಯುವುದನ್ನು ನಿಲ್ಲಿಸಬೇಕು ಇದಕ್ಕಾಗಿ ಸರ್ಕಾರ ಪರ್ಯಾಯ ಪದವನ್ನು ನಾಮಕರಣ ಮಾಡಬೇಕೆಂದು ಸದನದಲ್ಲಿ ಒತಾಯಿಸುತ್ತೇನೆ ಎಂದರು.ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆಯುತ್ತಿವೆ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ಇಲ್ಲದವರಿಗೆ ವಸತಿ ಕಲ್ಪಿಸಲು ಮುಂದಾಗಿದ್ದೇವೆ. ಸ್ಲಂ ನಿವಾಸಿಗಳಿಗೆ ನೀಡುವ ವಸತಿ ಸಮುಚ್ಚಯಗಳು 200 ರಿಂದ 500 ವಸತಿ ಸಮುಚ್ಚಯಗಳಾಗಿದ್ದಲ್ಲಿ ಎಲ್ಲಾ ರೀತಿಯ ಸೌಲಭ್ಯ ಕೊಡಲು ಸಾಧ್ಯ ಈ ಹಿಂದೆ ದಿಬ್ಬೂರಿನಲ್ಲಿ 1200 ಮನೆಗಳನ್ನು ನೀಡಿರುವುದು ವೈಜ್ಞಾನಿಕವಾಗಿಲ್ಲ ಹಾಗಾಗಿ ಮುಂದಿನ ದಿನಗಳಲ್ಲಿ ತುಮಕೂರು ಸೇರಿದಂತೆ ಇತರೆ ನಗರಗಳಲ್ಲಿ ಸ್ಲಂ ಜನರನ್ನು ಅಥವಾ ನಿವೇಶನ ರಹಿತರನ್ನು ಪುನರ್ವಸತಿಗೊಳಿಸಬೇಕಾದಲ್ಲಿ ಕನಿಷ್ಠ ಕುಟುಂಬಗಳನ್ನಷ್ಟೇ ಪರಿಗಣಿಸಬೇಕು. ಸ್ಲಂ ಸಮಿತಿ ನಿವೇಶನ ರಹಿತರ 31 ಒಂಟಿ ಮಹಿಳೆ ನಿವೇಶನ ರಹಿತರಿಗೆ ಹೊನ್ನೇನಹಳ್ಳಿಯ 192 ವಸತಿ ಸಮುಚ್ಚಯಗಳಲ್ಲಿ ಅನರ್ಹ ಪಲಾನುಭವಿಗಳನ್ನು ತೆಗೆದು ಆಧ್ಯತೆ ಮೇಲೆ ಸೇರಿಸುವುದಾಗಿ ತಿಳಿಸಿದರು. *ಈ ದೇಶ ಇಲ್ಲದವರು ಮತ್ತು ಇರುವವರ ಸಂಘರ್ಷವಾಗಿದೆ-* *ಇಲ್ಲದ ಸ್ಲಂ ಸಮುದಾಯ ಮಾದರಿಯಾಗಬೇಕು* – *ಡಾ.ಎನ್ ತಿಪ್ಪೇಸ್ವಾಮಿ* ವಿವಿಧ ಸ್ಲಂಗಳ ಪಿಯುಸಿ ಮತ್ತು ಎಸ್ಎಸ್ಎಲ್ಸಿಯಲ್ಲಿ 96% ನಿಂದ 60% ವರೆಗೂ ಅತ್ಯುತ್ತಮ ಅಂಕ ಗಳಿಸಿದ 65 ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳಾದ ಡಾ.ಎನ್.ತಿಪ್ಪೇಸ್ವಾಮಿ ಈ ದೇಶ ಇಲ್ಲದವರು ಮತ್ತು ಇರುವವರ ಸಂಘರ್ಷವಾಗಿದೆ ಇಲ್ಲದಿರುವಿಕೆಯೆ ಬಡತನಕ್ಕೆ ಸಾಕ್ಷಿ ಇದು ಜಾತಿ ವ್ಯವಸ್ಥೆಗೆ ಮುಖ್ಯ ಕಾರಣವಾಗಿದೆ. ಸ್ಲಂಗಳಲ್ಲಿ ಬದುಕಬೇಕೆಂಬ ಕಾರಣ ಅನಿವಾರ್ಯವಾಗಿ ಬದುಕನ್ನು ಕಟ್ಟುತ್ತಿದೆ. ಭಾರತದ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಬಹಳ ಹಿಂದೆಯೇ ಇಂತಹವರು ಹೀಗೆ ಇರಬೇಕೆಂಬ ಕಟ್ಟುಪಾಡುಗಳನ್ನು ಹೇರಲಾಗಿದೆ. ನಗರಗಳಲ್ಲಿ ಅನಿವಾರ್ಯ ಪರಿಸ್ಥಿತಿಯಿಂದ ಸ್ಲಂಗಳಲ್ಲಿ ಕೆಳಜಾತಿ ಜನರು ಜೀವಿಸುತ್ತಿದ್ದು ಇಲ್ಲಿ ಪ್ರತಿಭಾವಂತರು ಇದ್ದಾರೆ. ಇಂತಹ ಪ್ರತಿಭಾವಂತರಿಗೆ ನಾನು ಎಂಬ ಅಹಂ ಬಂದರೆ ನಾವು ನಾಶವಾಗುತ್ತೇವೆ. ಇದು ಮುಂದಿನ ಗುರಿ ತಲುಪಲು ಸಾಧ್ಯವಾಗುವುದಿಲ್ಲ ಹಸಿದವನು ಇಂದು ಎಲ್ಲಾ ಹಂತದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ನಮ್ಮ ಸಮಾಜ ಬದಲಾವಣೆಯಾಗಬೇಕಂದರೆ ಶಿಕ್ಷಣ ಒಂದೇ ಮಾರ್ಗವಾಗಿದೆ. ಹಸಿವನ್ನು ಹತ್ತಿರದಿಂದ ನೋಡಿದವರು ಜಯಶಾಲಿಗಳಾಗುತ್ತಾರೆ. ಜ್ಞಾನದ ಹಸಿವಿದ್ದವರು ದೇಶವನ್ನು ಆಳುತ್ತಾರೆ ಪ್ರತಿಭೆ ಯಾರ ಸ್ವತ್ತಲ್ಲ ಜೀವನದ ದಾರಿಯ ತಿರುವನ್ನು ನಾವು ಮುಟ್ಟಬೇಕಾದರೆ ನಾನು ಯಾರು ಎಂಬ ಪ್ರಶ್ನೆ ಹಾಕಿಕೊಂಡಾಗ ಮಾತ್ರ ನಮ್ಮ ಕುಟುಂಬ ಮತ್ತು ಸಮಾಜಕ್ಕೆ ಬೆಳಕಾಗಬಹುದು ನಮ್ಮ ಪ್ರತಿಭೆ ಮೇಲ್ಮುಖವಾಗಿ ಚಲನೆಯಾಗಬೇಕು ಹಾಗಾಗಿ ನಾವು ಕನಸ್ಸು ಕಾಣಬೇಕು. ನೊಂದವರು ಶೋಷಿತರು ಭವಿಷ್ಯದಲ್ಲಿ ಸಮಾಜದ ಕಣ್ಣುಗಳಾಗಬೇಕೆಂದರು.ಚರಕ ಆಸ್ಪತ್ರೆಯ ಡಾ. ಬಸವರಾಜು ಮಾತನಾಡಿ ವಿದ್ಯಾರ್ಥಿಗಳಿಗೆ ಒಳ್ಳೆಯದಕ್ಕಿಂತ ಕೆಟ್ಟದ್ದು ಬೇಗ ಆಕರ್ಷಿಣೀಯವಾಗಿರುತ್ತದೆ. ಮೌಢ್ಯವನ್ನು ಪ್ರಶ್ನಿಸಿದರೆ ವೈಚಾರಿಕಾವಾಗಿ ನಾವು ಬೆಳೆಯಬಹುದು ನಮ್ಮಲ್ಲಿರುವ ಕೀಳರಿಮೆ ಹೋಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಿರಿಯ ಚಿಂತಕರಾದ ಕೆ.ದೊರೈರಾಜು ಜಗತ್ತಿನಲ್ಲಿರುವ ಎಲ್ಲಾ ಪ್ರತಿಭಾವಂತರು ಶೋಷಣೆ ಮತ್ತು ದುಡಿಯುವ ಸಮುದಾಯದಿಂದ ಬಂದವರಾಗಿರುತ್ತಾರೆ. ಸ್ಲಂಗಳಲ್ಲಿ ಹೆಣ್ಣು ಮಕ್ಕಳು ಓದುವ ಸಂಖ್ಯೆ ಕಡಿಮೆಯಾಗಿದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ಇರುವಿಕೆಯನ್ನು ಸಾಬೀತುಪಡಿಸಲು ಸ್ಲಂ ವಿದ್ಯಾರ್ಥಿಗಳು ಮುಂದಾಗಬೇಕು ಇದಕ್ಕೆ ಪೋಷಕರು ಸಹಕಾರ ನೀಡಬೇಕು ಸಮಸ್ಯೆಗಳೇ ನಮ್ಮನ್ನು ಸಂಘಟಿತರಾಗಿ ಮಾಡುತ್ತವೆ ಎಂದರು.ಆಶಯ ನುಡಿ ಮಾತನಾಡಿದ ಎ.ನರಸಿಂಹಮೂರ್ತಿ ಕಳೆದ 24 ವರ್ಷಗಳಲ್ಲಿ ಈ ಪ್ರತಿಭಾಪುರಸ್ಕಾರ ಸ್ಲಂ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪ್ರಜ್ಞೆಯನ್ನು ನಿರ್ಮಿಸಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಅಸ್ತಿತ್ವವನು ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಭಾನುಪ್ರತಾಪ್ ಸಿಂಹ, ತುಮಕೂರು ವಿ.ವಿ ಶೇಖರ್ , ಮಾಜಿ ನಗರಸಭೆ ಸದಸ್ಯರುಗಳಾದ ಎ.ಶ್ರೀನಿವಾಸ್, ಲಕ್ಷ್ಮೀ ನರಸಿಂಹರಾಜು, ಸ್ಲಂ ಸಮಿತಿ ಗೌರವಧ್ಯಕ್ಷರಾದ ದೀಪಿಕಾ, ಸಾವಿತ್ರಿ ಬಾಯಿಪುಲೆ ಸಂಘಟನೆಯ ಅನುಪಮಾ, ತುಮಕೂರು ನಗರ ಠಾಣೆಯ ರಾಮಚಂದ್ರಯ್ಯ, ಮಂಜಣ್ಣ, ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಅರುಣ್ ಟಿ.ಜಿ ಸ್ವಾಗತವನ್ನು ತಿರುಮಲಯ್ಯ, ವಂದನಾರ್ಪಣೆಯನ್ನು ಅನುಪಮಾ ನೆರವೇರಿಸಿದರು ತುಮಕೂರು ಸ್ಲಂ ಸಮಿತಿಯ ಪದಾದಿಕಾರಿಗಳು ಉಪಸ್ಥಿತರಿದ್ದರು.