ತುಮಕೂರು ನಗರ ಮಂಡಿಪೇಟೆಯ ಮಾರಿಯಮ್ಮ ನಗರದ ಶ್ರೀ ಮಾರಿಯಮ್ಮ ದೇವಿಯ ಜಾತ್ರಾ ಕರಗ ಮಹೋತ್ಸವಕ್ಕೆ ಇಂದು ತುಮಕೂರು ಜಿಲ್ಲಾಧಿಕಾರಿ ಶ್ರೀಮತಿ ಶುಭಕಲ್ಯಾಣ್ ಚಾಲನೆ ನೀಡಿದರು

ಶ್ರೀ ಮಾರಿಯಮ್ಮ ದೇವಿ ಜಾತ್ರೆ ಡಿ.ಸಿ ಶುಭ ಕಲ್ಯಾಣ್ ಚಾಲನೆ
ತುಮಕೂರು ನಗರ ಮಂಡಿಪೇಟೆಯ ಮಾರಿಯಮ್ಮ ನಗರದ ಶ್ರೀ ಮಾರಿಯಮ್ಮ ದೇವಿಯ ಜಾತ್ರಾ ಕರಗ ಮಹೋತ್ಸವಕ್ಕೆ ಇಂದು ತುಮಕೂರು ಜಿಲ್ಲಾಧಿಕಾರಿ ಶ್ರೀಮತಿ ಶುಭಕಲ್ಯಾಣ್ ಚಾಲನೆ ನೀಡಿದರು.
ಶ್ರಮ ಜೀವಿಗಳು ವಾಸಿಸುವ ಮಾರಿಯಮ್ಮ ನಗರದಲ್ಲಿ ತುಮಕೂರು ಮಂಡಿಪೇಟೆ ಹಾಗೂ ತರಕಾರಿ ಮಾರುಕಟ್ಟೆಯಗೆ ಮಾನವ ಸಂಪತ್ತನ್ನು ಹೊಂದಿರುವ ಯುವ ಸಮೂಹದ ದೊಡ್ಡ ದಂಡೆ ಇಲ್ಲಿದ್ದು ನಿರಂತರವಾಗಿ ತುಮಕೂರು ಸ್ಲಂ ಸಮಿತಿಯ ಜೊತೆ ಬಾಬಾ ಸಾಹೇಬ್ ಅಂಬೇಡ್ಕರ್ರವರು ಹಾಕಿಕೊಟ್ಟ ಹೋರಾಟದ ಹಾದಿಯಲ್ಲಿ ಸಾಗುವ ಇಲ್ಲಿನ ಜನರು ಸ್ವಾವಲಂಬಿಯಾಗಿ ಸ್ವಂತ ವ್ಯಾಪಾರ ಹಾಗೂ ಏಜೆನ್ಸಿಗಳ ಮಾಲಿಕರಾಗಿ ಆರ್ಥಿಕವಾಗಿ ಸಬಲರಾಗಿರುವುದು ವಿಶೇಷವಾಗಿದೆ, ಇದೇ ತುಮಕೂರು ನಗರಕ್ಕೆ ಊರ ಮಾರಮ್ಮನ ಜಾತ್ರೆಯನ್ನು ಅದ್ಧೂರಿಯಾಗಿ ವರ್ಷಕ್ಕೊಮ್ಮೆ ಮಾಡಲಾಗುತ್ತದೆ, ಈ ಸಂದರ್ಭದಲ್ಲಿ ಮಾರಿಯಮ್ಮ ಯುವಕರ ಸಂಘ, ಯುವ ಭೀಮ ಪಡೆ ಪದಾಧಿಕಾರಿಗಳು 15 ದಿನ ರಜೆ ಮಾಡಿ ಶಿಸ್ತು ಬದ್ದವಾಗಿ ಜಾತ್ರೆಯನ್ನು ನಡೆಸುವರು ಇದಕ್ಕೆ ಬೆಂಬಲವಾಗಿ ತುಮಕೂರು ಸ್ಲಂ ಸಮಿತಿ ಮಾರ್ಗದರ್ಶನದಲ್ಲಿ ತುಮಕೂರು ನಗರದ ಸ್ಥಳೀಯವಾಗಿ ಜನಮಾನಸದಲ್ಲಿ ಇಲ್ಲಿನ ಜನರು ಉಳಿದಿದ್ದಾರೆ.
ಜಾತ್ರೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಶುಭಕಲ್ಯಾಣ್ ಇತ್ತೀಚೆಗೆ ಡಿ.ಸಿ.ಎಂ ಡಾ|| ಜಿ.ಪರಮೇಶ್ವರ್ ಸರ್ ಇಲ್ಲಿನ ದೇವಸ್ಥಾನಕ್ಕೆ ದಂಪತಿ ಸಮೇತ ಭೇಟಿ ನೀಡಿ ಪೂಜೆ ಮಾಡಿದ ಸಂದರ್ಭದಲ್ಲಿ ಇಲ್ಲಿನ ನಾಗರೀಕರು ದೇವಸ್ಥಾನ ಅಭಿವೃದ್ಧಿಗೆ ಮನವಿ ಮಾಡಿದರು ಮಾನ್ಯ ಉಪಮುಖ್ಯಮಂತ್ರಿಗಳಾದ ಜಿ. ಪರಮೇಶ್ವರ್ ಸಾಹೇಬರ ನಿರ್ದೇಶನದಂತೆ ದೇವಸ್ಥಾನ ಅಭಿವೃದ್ಧಿಗೆ ಜಿಲ್ಲಾಡಳಿತದಿಂದ ಕ್ರಮ ವಹಿಸಲಾಗುವುದು ಇಲ್ಲಿನ ಜನರ ಸಾಂಸ್ಕೃತಿಕ ಮತ್ತು ಆಚಾರ-ವಿಚಾರಗಳು ಬದಲಾಗದೇ ಹಾಗೇ ಉಳಿಸಿಕೊಂಡು ಬಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶ್ರೀ ಮಾರಿಯಮ್ಮ ದೇವಿಗೆ ಪೂಜೆ ಸಲ್ಲಿಸಿ ಜನರಿಗೆ ಸಿಹಿ ಹಂಚಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನದ ಎ.ನರಸಿಂಹಮೂರ್ತಿ ಅನುಪಮಾ, ಮಾರಿಯಮ್ಮ ಯುವಕರ ಸಂಘದ ಕಣ್ಣನ್, ಕೃಷ್ಣ, ಮಾರಿ, ಮಾಧವನ್, ರಾಜ, ಸ್ಲಂ ಸಮಿತಿಯ ಕಾರ್ಯದಶರ್ಿ ಅರುಣ್ ಮುಂತಾದವರು ಉಪಸ್ಥಿತರಿದ್ದರು.

