ಕೆ. ಎನ್. ರಾಜಣ್ಣನವರ ೭೬ನೇ ಹುಟ್ಟುಹಬ್ಬ ಆಚರಣೆಅಭಿಮಾನಿ ಬಳಗದಿಂದ ಅನ್ನಸಂತರ್ಪಣೆ, ಸಿಹಿ ವಿತರಣೆ ತುಮಕೂರು: ಮಾಜಿ ಸಚಿವ, ಮಧುಗಿರಿ ಶಾಸಕ, ಹಿರಿಯ ಸಹಕಾರಿ ಕೆ.ಎನ್. ರಾಜಣ್ಣ

ಕೆ. ಎನ್. ರಾಜಣ್ಣನವರ ೭೬ನೇ ಹುಟ್ಟುಹಬ್ಬ ಆಚರಣೆಅಭಿಮಾನಿ ಬಳಗದಿಂದ ಅನ್ನಸಂತರ್ಪಣೆ, ಸಿಹಿ ವಿತರಣೆ ತುಮಕೂರು: ಮಾಜಿ ಸಚಿವ, ಮಧುಗಿರಿ ಶಾಸಕ, ಹಿರಿಯ ಸಹಕಾರಿ ಕೆ.ಎನ್. ರಾಜಣ್ಣನವರ ೭೬ನೇ ಜನ್ಮದಿನವನ್ನು ಸೋಮವಾರ ಕೆ.ಎನ್.ಆರ್. ಅಭಿಮಾನಿ ಬಳಗದವರು ಸಂಭ್ರಮದಿAದ ಆಚರಿಸಿದರು.ನಗರದ ಗುಂಚಿವೃತ್ತದ ಟಿಎಪಿಸಿಎಂಎಸ್ ಕಟ್ಟಡ ಬಳಿ ನಡೆದ ಸಮಾರಂಭದಲ್ಲಿ ಕೆ.ಎನ್. ರಾಜಣ್ಣನವರ ಪುತ್ರಿ ಆರ್.ರಶ್ಮಿ ಗಿರೀಶ್ ಅವರು ಅನ್ನಸಂತರ್ಪಣೆಗೆ ಚಾಲನೆ ನೀಡಿದರು. ನಂತರ ರಶ್ಮಿಯವರು ಪೌರಕಾರ್ಮಿಕರೊಂದಿಗೆ ಬೃಹತ್ ಕೇಕ್ ಕತ್ತರಿಸಿ ಸಿಹಿ ತಿನ್ನಿಸಿ ತಮ್ಮ ತಂದೆಯ ಹುಟ್ಟುಹಬ್ಬ ಆಚರಣೆಯನ್ನು ಸಂಭ್ರಮಿಸಿದರು.ಇದರ ಅಂಗವಾಗಿ ಪೌರಕಾರ್ಮಿಕರನ್ನು ಸನ್ಮಾನಿಸಿ ಅವರ ಸೇವೆಯನ್ನು ಗೌರವಿಸಲಾಯಿತು. ಈ ಸಾಲಿನ ದ್ವಿತೀಯ ಪಿಯೂಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿ ಪ್ರೋತ್ಸಾಹಿಸಲಾಯಿತು. ಈ ಬಾರಿಯ ಬಾಬು ಜಗಜೀವನರಾಮ್ ಪ್ರಶಸ್ತಿ ಪುರಸ್ಕೃತರಾದ ನಗರಸಭೆ ಮಾಜಿ ಸದಸ್ಯ ನರಸಿಯಪ್ಪ ಅವರನ್ನು ಈ ವೇಳೆ ಗೌರವಿಸಿ ಅಭಿನಂದಿಸಲಾಯಿತು.ಕಳೆದ ೫೦ ವರ್ಷಗಳ ಕೆ.ಎನ್. ರಾಜಣ್ಣನವರ ಸಾರ್ವಜನಿಕ ಬದುಕಿನ ಪ್ರಮುಖ ಘಟನಾವಳಿಗಳ ಫೋಟೊ ಹಾಗೂ ವಿಡಿಯೋ ದೃಶ್ಯಾವಳಿಗಳನ್ನು ಎಲ್ಇಡಿಯ ದೊಡ್ಡ ಪರದೆ ಮೇಲೆ ಪ್ರದರ್ಶಿಸಲಾಗಿತ್ತು.ಹಿರಿಯ ರಂಗನಿರ್ದೇಶಕ ಡಾ. ಲಕ್ಷö್ಮಣದಾಸ್, ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಡಾ.ಎಸ್.ನಾಗಣ್ಣ, ಕೆ.ಎನ್.ಆರ್ ಅಭಿಮಾನಿ ಬಳಗದ ಮುಖಂಡರಾದ ನಗರಸಭೆ ಮಾಜಿ ಅಧ್ಯಕ್ಷ ಟಿ.ಪಿ.ಮಂಜುನಾಥ್, ವಕೀಲ ಪಿ.ಆರ್.ನಾರಾಯಣಗೌಡ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಲಕ್ಷಿö್ಮÃನಾರಾಯಣ, ಟಿಎಪಿಸಿಎಂಎಸ್ ನಿರ್ದೇಶಕರಾದ ಕುಂಕುಮನಹಳ್ಳಿ ನವರತ್ನಕುಮಾರ್, ಜಿಯಾವುಲ್ಲಾ, ಕಾರ್ಯದರ್ಶಿ ರವಿಕುಮಾರ್, ನೀಲಕಂಠೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಹೆಚ್. ಶಿವಾನಂದ್, ಮುಖಂಡರಾದ ನಿಸಾರ್ ಅಹ್ಮದ್, ಕುಂದೂರು ಮುರಳಿ, ಮಂಜೇಶ್ ಒಲಂಪಿಕ್, ರಮಣರೆಡ್ಡಿ, ಎಂ.ಹೆಚ್.ನಾಗರಾಜು, ಪಿ.ಎನ್. ರಾಮಯ್ಯ, ಎಂ.ಜೆ. ಶಿವಣ್ಣ, ನಟರಾಜಶೆಟ್ಟಿ, ನಂಜೇಗೌಡ, ರಂಗರಾಜು, ನರಸಿಯಪ್ಪ, ಕೈದಾಳ ರಮೇಶ್ ಸೇರಿದಂತೆ ವಿವಿಧ ಸಹಕಾರ ಸಂಸ್ಥೆ, ಸಂಘಸAಸ್ಥೆಗಳು ಪ್ರಮುಖರು ಭಾಗವಹಿಸಿದ್ದರು.

