೨೯ರಂದು ಕಲಾಶ್ರೀ ಡಾ.ಲಕ್ಷö್ಮಣದಾಸ್ ಅಭಿನಂದನಾ ಸಮಾರಂಭದಿನವಿಡೀ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿಗೆ ಗೌರವ ಸಮರ್ಪಣೆತುಮಕೂರು: ಹಿರಿಯ ರಂಗಕಲಾವಿದರಾದ ಕಲಾಶ್ರೀ ಡಾ. ಲಕ್ಷö್ಮಣದಾಸ್ ಅವರ ಅಭಿನಂದನಾ ಸಮಾರಂಭ
೨೯ರಂದು ಕಲಾಶ್ರೀ ಡಾ.ಲಕ್ಷö್ಮಣದಾಸ್ ಅಭಿನಂದನಾ ಸಮಾರಂಭದಿನವಿಡೀ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿಗೆ ಗೌರವ ಸಮರ್ಪಣೆತುಮಕೂರು: ಹಿರಿಯ ರಂಗಕಲಾವಿದರಾದ ಕಲಾಶ್ರೀ ಡಾ. ಲಕ್ಷö್ಮಣದಾಸ್ ಅವರ ಅಭಿನಂದನಾ ಸಮಾರಂಭ
೨೯ರಂದು ಕಲಾಶ್ರೀ ಡಾ.ಲಕ್ಷö್ಮಣದಾಸ್ ಅಭಿನಂದನಾ ಸಮಾರಂಭದಿನವಿಡೀ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿಗೆ ಗೌರವ ಸಮರ್ಪಣೆತುಮಕೂರು: ಹಿರಿಯ ರಂಗಕಲಾವಿದರಾದ ಕಲಾಶ್ರೀ ಡಾ. ಲಕ್ಷö್ಮಣದಾಸ್ ಅವರ ಅಭಿನಂದನಾ ಸಮಾರಂಭ ಈ ತಿಂಗಳ ೨೯ರಂದು ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಏರ್ಪಾಟಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ರಂಗಭೂಮಿ ಕಲಾವಿದರ ಸಂಘ, ಅಖಿಲ ಕರ್ನಾಟಕ ಕೀರ್ತನಾ ಕಲಾ ಪರಿಷತ್ ಹಾಗೂ ವಿವಿಧ ಸಂಘಸAಸ್ಥೆಗಳ ಸಹಯೋಗದಲ್ಲಿ ದಿನವಿಡೀ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಇದರ ಅಂಗವಾಗಿ ಗುರುವಾರ ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರ ಪೂರ್ವಭಾವಿ ಸಭೆ ನಡೆಯಿತು.ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕಸಾಪ ಅದ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ರಂಗಭೂಮಿ, ಕೀರ್ತನಾ ಕಲೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ. ಲಕ್ಷö್ಮಣದಾಸ್ ಅವರನ್ನು ಅಭಿನಂದಿಸುವ ಮೂಲಕ ಈ ಮೂರೂ ಕ್ಷೇತ್ರಗಳನ್ನೂ ಅಭಿನಂದಿಸಿ ಗೌರವಿಸುವ ಕಾರ್ಯಕ್ರಮವಾಗಿದೆ ಎಂದರು.೨೯ರAದು ಬೆಳಿಗ್ಗೆ ೧೦ ಗಂಟೆಗೆ ಕಲಾಶ್ರಿ ಡಾ. ಲಕ್ಷö್ಮಣದಾಸ್ ಅಭಿನಂದನಾ ಸಮಾರಂಭವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಉದ್ಘಾಟಿಸುವರು. ಶಾಸಕ ಜಿ.ಬಿ. ಜ್ಯೋತಿಗಣೇಶ್ ಅಧ್ಯಕ್ಷತೆಯಲ್ಲಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ದಿಕ್ಸೂಚಿ ಭಾಷಣ ಮಾಡುವರು. ಮಧ್ಯಾಹ್ನ ೧೧.೩೦ಕ್ಕೆ ಕಲಾಶ್ರೀ ಡಾ.ಲಕ್ಷö್ಮಣದಾಸ್ ಅವರ ಜೀವನ ಮತ್ತು ಸಾಧನೆ ಕುರಿತ ಗೋಷ್ಠಿಯಲ್ಲಿ ಸಾಹಿತಿ ಡಾ.ರಾಜಪ್ಪ ದಳವಾಯಿ ಅಧ್ಯಕ್ಷತೆ ವಹಿಸುವರು. ವಿವಿಧ ಗಣ್ಯರು ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡುವರು ಎಂದರು.ಮಧ್ಯಾಹ್ನ ೨ ಗಂಟೆಗೆ ಕಲಾಶ್ರೀ ಜಿ. ಶೀಲಾನಾಯ್ಡು ಅವರ ಅಧ್ಯಕ್ಷತೆಯಲ್ಲಿ ರಂಗಗೀತೆ ಗಾಯನ, ನಂತರ ಕಲಾಶ್ರೀ ಸೋಮಶೇಖರ ದಾಸ್ ಅಧ್ಯಕ್ಷತೆಯಲ್ಲಿ ಕಥಾಕೀರ್ತನೆ, ಸಂಜೆ ೪ ಗಂಟೆಗೆ ಡಾ. ಲಕ್ಷö್ಮಣದಾಸ್ ಅವರೊಂದಿಗೆ ಸಂವಾದ ಏರ್ಪಡಿಸಲಾಗಿದೆ. ಸಂಜೆ ೫ ಗಂಟೆಗೆ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಕೆ.ಎನ್. ರಾಜಣ್ಣ ಅವರು ಡಾ. ಲಕ್ಷö್ಮಣದಾಸ್ ಅವರನ್ನು ಸನ್ಮಾನಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮನೆ ಸಮಾರೋಪ ಭಾಷಣ ಮಾಡುವರು ಎಂದು ಕೆ.ಎಸ್. ಸಿದ್ಧಲಿಂಗಪ್ಪ ಹೇಳಿದರು.ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ರಂಗಭೂಮಿ, ಕಲಾಕೀರ್ತನೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ. ಲಕ್ಷö್ಮಣದಾಸ್ ಅವರು ತುಮಕೂರಿಗೆ ಕೀರ್ತಿ ತಂದಿದ್ದಾರೆ. ಇವರನ್ನು ಜಿಲ್ಲೆಯ ಎಲ್ಲರೂ ಗೌರವಿಸಿ ಅಭಿನಂದಿಸುವುದು ಕರ್ತವ್ಯ. ಡಾ.ಲಕ್ಷö್ಮಣದಾಸ್ ಅವರು ರಂಗಭೂಮಿ ಹಾಗೂ ಕೀರ್ತನಾ ಕಲೆಯನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇವರಿಂದ ಪ್ರೇರಿತರಾಗಿ ಅನೇಕ ಹೊಸ ಕಲಾವಿದರು ಕಲಾ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಲಕ್ಷö್ಮಣದಾಸ್ ಅವರ ಕಲಾ ಕೊಡುಗೆ ಅಪಾರ ಎಂದು ಹೇಳಿದರು.ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎನ್. ಶಿವಣ್ಣ, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ, ಹಿರಿಯ ಕಲಾವಿದರಾದ ಎಂ.ವಿ. ನಾಗಣ್ಣ, ವಸಂತಕುಮಾರ್, ಯೋಗಾನಂದಕುಮಾರ್, ವಿವಿಧ ಸಂಘಟನೆಗಳ ಮುಖಂಡರಾದ ನಟರಾಜಶೆಟ್ಟಿ, ಶಬ್ಬೀರ್ ಅಹ್ಮದ್, ಬೆಸ್ಟೆಕ್ಸ್ ರಾಮರಾಜು ಮೊದಲಾದವರು ಡಾ. ಲಕ್ಷö್ಮಣದಾಸ್ ಅವರನ್ನು ಅಭಿನಂದಿಸಿ ಮಾತನಾಡಿದರು.ಕನ್ನಡ ಸೇನೆ ಗೌರವಾಧ್ಯಕ್ಷ ಆರ್.ಎನ್. ವೆಂಕಟಾಚಲ, ಗುರುರಾಘವೇಂದ್ರ, ವಿಠಲ್, ಕನ್ನಡ ಮತ್ತು ಸಂಸ್ಕೃತಿ ವೇದಿಕೆಯ ಕನ್ನಡ ಪ್ರಕಾಶ್, ಕಲಾವಿದರ ಒಕ್ಕೂಟದ ಅಧ್ಯಕ್ಷ ವೀರೇಶ್ ಗುಬ್ಬಿ, ಮುಖಂಡರಾದ ರಾಮಚಂದ್ರರಾವ್, ನಾಗರಾಜು, ಬಸವರಾಜು, ತೇಜಸ್, ಇಮ್ರಾನ್ ಅಹ್ಮದ್, ಷಫಿ ಅಹ್ಮದ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.ನಂತರ ಜಿಲ್ಲಾ ಕಸಾಪ ಅದ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಕಲಾಶ್ರೀ ಡಾ. ಲಕ್ಷö್ಮಣದಾಸ್ ಅವರಿಗೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದರು.