ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರ ಸಾಧನೆ: SSLC ಪರೀಕ್ಷೆಯಲ್ಲಿ ಶಕುಂತಲಾ ಪ್ರಥಮ ಲಿಂಗಸಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದರೋಡಲಬಂಡ

ರೋಡಲಬಂಡ( ತವಗ)ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರ ಸಾಧನೆ: SSLC ಪರೀಕ್ಷೆಯಲ್ಲಿ ಶಕುಂತಲಾ ಪ್ರಥಮ**ಲಿಂಗಸಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದರೋಡಲಬಂಡ (ತವಗ) 2025-26ನೇ ಸಾಲಿನ SSLC ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆ ರೋಡಲಬಂಡ (ತವಗ)ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆ ಮಾಡಿ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.ಶಾಲೆಯ ವಿದ್ಯಾರ್ಥಿನಿ *ಶಕುಂತಲಾ ತಂದೆ ಶಿವಪುತ್ರಪ್ಪ* 625ಕ್ಕೆ *559 ಅಂಕ (89.44%)* ಪಡೆದು ಶಾಲೆಗೆ *ಪ್ರಥಮ ಸ್ಥಾನ* ಪಡೆದಿದ್ದಾಳೆ. *ಗೀತಾ ತಂದೆ ಬಸವರಾಜ* *556 ಅಂಕ (88.96%)* ಪಡೆದು *ದ್ವಿತೀಯ ಸ್ಥಾನ*, *ಮೌನಮ್ಮ ತಂದೆ ಚನ್ನಬಸವ* *518 ಅಂಕ (82.88%)* ಪಡೆದು


ತೃತೀಯ ಸ್ಥಾನ* ಗಳಿಸಿದ್ದಾರೆ.ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು ಈ ರೀತಿ ಉತ್ತಮ ಸಾಧನೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿದ್ಯಾರ್ಥಿನಿಯರ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕ ವೃಂದ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.ರೋಡಲಬಂಡ (ತವಗ) ಗ್ರಾಮದ ಹಿರಿಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಪೋಷಕರು ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು.ಈ ವಿದ್ಯಾರ್ಥಿನಿಯರ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಮಾದರಿ ಹಾಗೂ ಸ್ಫೂರ್ತಿಯಾಗಿದೆ ಎಂದು ಗ್ರಾಮಸ್ಥರು ಶ್ಲಾಘಿಸಿದ್ದಾರೆ.

