ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ರೋಡಲಬಂಡ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್ನು ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು

ರೋಡಲಬಂಡದಲ್ಲಿ ಅಂಬೇಡ್ಕರ್ ಜಯಂತಿ: ದಸಂಸ ಗ್ರಾಮ ಘಟಕ ರಚನೆ ಭಾವಚಿತ್ರದ ಅದ್ದೂರಿ ಮೆರವಣಿಗೆ, ಶಂಭುಲಿಂಗ ಎಸ್. ಅಧ್ಯಕ್ಷರಾಗಿ ಆಯ್ಕ* ಏ.14:* ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ರೋಡಲಬಂಡ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್ನು ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರದ *ಅದ್ದೂರಿ ಮೆರವಣಿಗೆ* ನಡೆಸಲಾಯಿತು. ಯುವಕರು, ಹಿರಿಯರು *”ಜೈ ಭೀಮ್”* ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ನಡೆದ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಲಾಯಿತು.*ಇದೇ ಸಂದರ್ಭದಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ (ದಸಂಸ) ರೋಡಲಬಂಡ ಗ್ರಾಮ ಘಟಕದ* ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.*ಸರ್ವಾನುಮತದಿಂದ ಆಯ್ಕೆಯಾದ ನೂತನ ಪದಾಧಿಕಾರಿಗಳು:* *ಅಧ್ಯಕ್ಷರಾಗಿ: ಶಂಭುಲಿಂಗ ಎಸ್.* *ಉಪಾಧ್ಯಕ್ಷರಾಗಿ: ವಂದ್ನೆಪ್ಪ* *ಕಾರ್ಯದರ್ಶಿಯಾಗಿ: ಕ್ಷೀರಲಿಂಗ ರಾಯ್* *ಖಜಾಂಚಿಯಾಗಿ: ದುರ್ಗಪ್ಪ* *ಕಾರ್ಯಕರ್ತರಾಗಿ: ಭೀಮೇಶ್, ರಮೇಶ್, ಪವನ್ ಕುಮಾರ್* ಅವರನ್ನು ಆಯ್ಕೆ ಮಾಡಲಾಯಿತು.ನೂತನ ಅಧ್ಯಕ್ಷ ಶಂಭುಲಿಂಗ ಎಸ್. ಮಾತನಾಡಿ, “ಪ್ರೊ. ಬಿ. ಕೃಷ್ಣಪ್ಪ ಅವರ ಆಶಯದಂತೆ ಗ್ರಾಮದಲ್ಲಿ ದಸಂಸ ಸಂಘಟನೆ ಬಲಪಡಿಸಿ, ಡಾ. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡುತ್ತೇವೆ. ಶೋಷಿತರ ಪರವಾಗಿ ದನಿ ಎತ್ತುತ್ತೇವೆ” ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.