ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕೇಂದ್ರ ಸರ್ಕಾರ ಜಾರಿಗೆ ತಂದ ನಾಲ್ಕು ಕಾರ್ಮಿಕ ಕೋಡ್‌ಗಳನ್ನು ವಿರೋಧಿಸಿ ಸಿಐಟಿಯು ಹಟ್ಟಿ ಘಟಕದ ನೇತೃತ್ವದಲ್ಲಿ ಬುಧವಾರ ಹಟ್ಟಿ ಗಣಿ ಮುಂಭಾಗದಲ್ಲಿ ಕಪ್ಪು ದಿನಾಚರಣೆ ಪ್ರತಿಭಟನೆ

*ಹಟ್ಟಿ ಗಣಿಯಲ್ಲಿ ನಾಲ್ಕು ಕಾರ್ಮಿಕ ಕೋಡ್‌ಗಳಿಗೆ ವಿರೋಧಿಸಿ ಕಪ್ಪು ದಿನಾಚರಣೆ ಪ್ರತಿಭಟನೆ*ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕೇಂದ್ರ ಸರ್ಕಾರ ಜಾರಿಗೆ ತಂದ ನಾಲ್ಕು ಕಾರ್ಮಿಕ ಕೋಡ್‌ಗಳನ್ನು ವಿರೋಧಿಸಿ ಸಿಐಟಿಯು ಹಟ್ಟಿ ಘಟಕದ ನೇತೃತ್ವದಲ್ಲಿ ಬುಧವಾರ ಹಟ್ಟಿ ಗಣಿ ಮುಂಭಾಗದಲ್ಲಿ ಕಪ್ಪು ದಿನಾಚರಣೆ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಸರ್ಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಸುಧಾರಣೆ ಹೆಸರಿನಲ್ಲಿ ಕಾರ್ಮಿಕರ ಹಕ್ಕು ಮುಂತಾದ ಹಲವು ಸೌಲಭ್ಯಗಳನ್ನು ಕಸಿದು, ಕೆಲಸದ ಹೊರೆ ಹೆಚ್ಚು ಮಾಡುವ ನಿಟ್ಟಿನಲ್ಲಿ ಈ ಕೋಡ್‌ಗಳನ್ನು ಜಾರಿಗೆ ತಂದಿದೆ ಎಂದು ಕಾರ್ಮಿಕ ಮುಖಂಡರು ಆರೋಪಿಸಿದರು.*ಮುಖಂಡರ ಹೇಳಿಕೆ:*ಕಾರ್ಮಿಕ ವರ್ಗದ ಹಕ್ಕುಗಳನ್ನು ಕಸಿದುಕೊಳ್ಳುವ ಈ ಕಾರ್ಮಿಕ ಕೋಡ್‌ಗಳು ಕಾರ್ಮಿಕರ ಶೋಷಣೆಗೆ ನಾಂದಿಯಾಗಲಿವೆ. ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.’ನಮ್ಮ ಹಕ್ಕು ನಮ್ಮ ಜೀವನಾಧಾರ’, ‘ಕಾರ್ಮಿಕ ಕೋಡ್ ಹಿಂಪಡೆಯಿರಿ’ ಎಂಬ ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಯಿತು. ಸಿಐಟಿಯು ಜಿಲ್ಲಾ ಮುಖಂಡರಾದ ಮಲ್ಲಿಕಾರ್ಜುನ, ರಮೇಶ್ ಬಾಬು, ನಾಗರಾಜ್, ಗೋವಿಂದಪ್ಪ, ಮಂಜು, ಸಿದ್ದಪ್ಪ ಮಂಟೂರಕರ್, ಚಂದ್ರಶೇಖರ್ ಗುಂಟಿ, ಪಕ್ಕೀರಪ್ಪ ಚೌಡ್ಕರ್, ಜಗದೀಶ್ ಬಿಡದಿ, ಕಾಮಯ್ಯ ನಿವೇದಕರ್ ಗೌರವಲ್, ಕುಮಾರ್ ಮುನಿರಾಬಾದ್, ದೊಡ್ಡಪ್ಪ ಅಕ್ಕಪುರ, ಸಾಹೇಬ್, ಶ್ರೀಧರ್ ರೆಡ್ಡಿ, ರಾಜಣ್ಣ, ನಿಂಗಪ್ಪ, ವಾರೇಶ್ ಸೇರಿದಂತೆ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

