ನಗರಪಾಲಿಕೆಯ ತೆರಿಗೆ ಹೆಚ್ಚಳ ಕ್ರಮಕ್ಕೆ ಆಕ್ರೋಶಪಾಲಿಕೆ ಕಚೇರಿ ಬಳಿ ಬಿಜೆಪಿ ಮುಖಂಡರ ಪ್ರತಿಭಟನೆತುಮಕೂರು: ತುಮಕೂರು ನಗರಪಾಲಿಕೆ ವಿವಿಧ ತೆರಿಗೆ ಹೆಚ್ಚಳ ಮಾಡಿರುವುದನ್ನು ಖಂಡಿಸಿ, ಪಾಲಿಕೆಯಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರ

ಪಾಲಿಕೆ ಕಚೇರಿ ಬಳಿ ಬಿಜೆಪಿ ಮುಖಂಡರ ಪ್ರತಿಭಟನೆ
ತುಮಕೂರು: ತುಮಕೂರು ನಗರಪಾಲಿಕೆ ವಿವಿಧ ತೆರಿಗೆ ಹೆಚ್ಚಳ ಮಾಡಿರುವುದನ್ನು ಖಂಡಿಸಿ, ಪಾಲಿಕೆಯಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರ ವಿರೋಧಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಗುರುವಾರ ಪಾಲಿಕೆ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಏರಿಸಿರುವ ತೆರಿಗೆ ಹಿಂಪಡೆಯಲು ಒತ್ತಾಯಿಸಿ ನಗರಪಾಲಿಕೆ ಆಯುಕ್ತೆ ಶುಭಾ ಅವರಿಗೆ ಮನವಿಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಬೇಗೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ತುಮಕೂರು ನಗರಪಾಲಿಕೆ ತೆರಿಗೆ ಹೆಚ್ಚಳ ಮಾಡಿ ಮತ್ತಷ್ಟು ಹೊರೆ ಮಾಡಿದೆ. ಪಾಲಿಕೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಲಂಚವಿಲ್ಲದೆ ಯಾವುದೇ ಕೆಲಸಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಈಗ ಪಾಲಿಕೆ ನೀರಿನ ಕಂದಾಯವನ್ನು ಶೇಕಡ ೨೦೦ರಷ್ಟು ಹೆಚ್ಚಿಸಿದೆ. ಯುಜಿಡಿ ಕಂದಾಯ ಶೇಕಡ ೫೦ರಷ್ಟು ಏರಿಕೆ ಮಾಡಿದೆ. ಇದಲ್ಲದೆ, ಅನೇಕ ತೆರಿಗೆಗಳನ್ನೂ ಹೆಚ್ಚಿಸಿ ಜನವಿರೋಧಿ ನೀತಿ ಅನುಸರಿಸಿದೆ. ಕೂಡಲೇ ಏರಿಕೆ ಮಾಡಿದರುವ ಕಂದಾಯವನ್ನು ಇಳಿಸಬೇಕು, ಇಲ್ಲವಾದಲ್ಲಿ ನಗರಪಾಲಿಕೆ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ನಿಡಿದರು.
ಇ-ಸ್ವತ್ತು ಮಾಡಿಕೊಡಲು ನಗರಪಾಲಿಕೆ ಅಧಿಕಾರಿಗಳು ಇಲ್ಲದ ಸಬೂಬು ಹೇಳುತ್ತಾ ವಿಳಂಬ ಮಾಡುತ್ತಾರೆ. ಆದರೆ ಲಂಚ ಕೊಟ್ಟರೆ ಕೆಲಸ ಆಗುತ್ತದೆ. ಇ-ಸ್ವತು ಮಾಡಿಸಿಕೊಳ್ಳಲು ಸ್ವತ್ತಿನ ಮಾಲೀಕರು ನೀಡಿರುವ ಅರ್ಜಿಗಳನ್ನೇ ವಿಲೇವಾರಿ ಮಾಡದೆ ತಿಂಗಳುಗಟ್ಟಲೆಯಿAದ ಬಾಕಿ ಉಳಿಸಿಕೊಂಡಿರುವ ಪಾಲಿಕೆಯವರು ಈಗ ಮನೆ ಬಾಗಿಲಿಗೆ ಬಂದು ಇ-ಖಾತೆ ಮಾಡಿಕೊಡುತ್ತೇವೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಮೊದಲು ಪಾಲಿಕೆಗೆ ಬಂದಿರುವ ಅರ್ಜಿಗಳನ್ನು ಇತ್ಯರ್ಥಗೊಳಿಸಿ, ಭ್ರಷ್ಟಾಚಾರ ಗೊನೆಗೊಳಿಸಿ ಎಂದು ರವಿಶಂಕರ್ ಹೆಬ್ಬಾಕ ಒತ್ತಾಯಿಸಿದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ನಿಕಟಪೂರ್ವ ನಗರ ಅಧ್ಯಕ್ಷ ಟಿ.ಹೆಚ್. ಹನುಮಂತರಾಜು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಜಿಲ್ಲಾ ವಕ್ತಾರ ಟಿ.ಆರ್. ಸದಾಶಿವಯ್ಯ, ನಗರಪಾಲಿಕೆ ಮಾಜಿ ಸದಸ್ಯರಾದ ವಿಷ್ಣುವರ್ಧನ್, ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ಇಂದ್ರಕುಮಾರ್, ಮುಖಂಡರಾದ ಮನೋಹರಗೌಡ, ಮಹೇಶ್‌ಬಾಬು, ಜ್ಯೋತಿ ತಿಪ್ಪೇಸ್ವಾಮಿ, ಬಂಬೂ ಮೋಹನ್, ಜೆ.ಜಗದೀಶ್, ಹನುಮಂತರಾಜು, ನಿಸರ್ಗ ರಮೇಶ್, ಅಂಜನ್‌ಮೂರ್ತಿ, ವಸಂತಮ್ಮ, ಗಂಗಾಧರ್, ಪ್ರೀತಂ ಜೈನ್, ಕೊಪ್ಪಲ್ ನಾಗರಾಜು, ರೇಖಾ ಶಿವಕುಮಾರ್, ಲತಾಬಾಬು, ಮರಿತಿಮ್ಮಯ್ಯ, ವೆಂಕಟೇಶಾಚಾರ್, ಆಟೋ ಯಡಿಯೂರಪ್ಪ, ಪ್ರಸನ್ನಕುಮಾರ್, ಹರಿಪ್ರಸಾದ್, ದೇವರಾಜು ಮೊದಲಾದವರು ಭಾಗವಹಿಸಿದ್ದರು.

