ಹಟ್ಟಿ ಚಿನ್ನದ ಗಣಿ ಯಲ್ಲಿ ಶ್ರೀ ರಾಮ್ ನವಮಿ ಸಂಭ್ರಮ ಆಚರಣೆಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ಶ್ರೀ ರಾಮಾ ಸೇನೆ ವತಿಯಿಂದ ಶ್ರೀ ರಾಮಚಂದ್ರನಿಗೆ ಭಾವಚಿತ್ರಕ್ಕೆ ವಿಶೇಷ ಪೋಜೆ ನೆರವೇರಿಸಿದರು
ಹಟ್ಟಿ ಚಿನ್ನದ ಗಣಿ ಯಲ್ಲಿ ಶ್ರೀ ರಾಮ್ ನವಮಿ ಸಂಭ್ರಮ ಆಚರಣೆಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ಶ್ರೀ ರಾಮಾ ಸೇನೆ ವತಿಯಿಂದ ಶ್ರೀ ರಾಮಚಂದ್ರನಿಗೆ ಭಾವಚಿತ್ರಕ್ಕೆ ವಿಶೇಷ ಪೋಜೆ ನೆರವೇರಿಸಿದರು

ಹಟ್ಟಿ ಚಿನ್ನದ ಗಣಿ ಯಲ್ಲಿ ಶ್ರೀ ರಾಮ್ ನವಮಿ ಸಂಭ್ರಮ ಆಚರಣೆಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ಶ್ರೀ ರಾಮಾ ಸೇನೆ ವತಿಯಿಂದ ಶ್ರೀ ರಾಮಚಂದ್ರನಿಗೆ ಭಾವಚಿತ್ರಕ್ಕೆ ವಿಶೇಷ ಪೋಜೆ ನೆರವೇರಿಸಿದರು ಭಕ್ತಾದಿಗಳಿಗೆ ಮಧ್ಯಾಹ್ನ ಪಾನಕ ಮಹಾಪ್ರಸಾದ ವಿತರಣೆ ಮಾಡಲಾಯಿತು.ಈ ‌ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಅಧ್ಯಕ್ಷರಾದ ರಘು ಗೌಡ ನಾಯಕ್, ಹಟ್ಟಿ ನಗರ ಘಟಕ ಅಧ್ಯಕ್ಷರಾದ ರಾಜು ರೆಡ್ಡಿ, ರಂಗನಾಥ್ ಮುಂಡರಗಿ ಶಿವಾನಂದ ಗಾಣಿಗೇರ್ ಸಿಪಿಐ ಹಟ್ಟಿ ಮತ್ತು, ಪೊಲೀಸ್ ಇಲಾಖೆ, ನಿಂಗಪ್ಪ ಭೋವಿ ಕಾರ್ಮಿಕ , ಚಂದ್ರು ಕಾರ್ಮಿಕ ಮುಖಂಡರು ,ಸದಾನಂದ ಕಟ್ಟಿಮನಿ ,ಶಂಕರ ,ಚಿನ್ನ ಬಾಬು, ಶ್ರೀನಿವಾಸ್ ಟೈಲರ್, ಇತರರು ಉಪಸ್ಥಿತರಿದ್ದರು.

ತುಮಕೂರಿನದಿಬ್ಬೂರಿನ ಚಲವಾದಿ ಸಮುದಾಯದ ಮುಖಂಡರು:ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟ ಒಳ ಮೀಸಲಾತಿಯನ್ನು ತೀರ್ಪು ನೀಡಿದ್ದು ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲಾ ಉಪಜಾತಿಗಳಿಗೂ ಸೂಕ್ತ ಪ್ರಾತಿನಿತ್ಯ ಸಿಗದ ಬಗ್ಗೆ ಖಚಿತವಾದ ಅಂಕಿ ಅಂಶಗಳ ವರದಿ

ತುಮಕೂರಿನದಿಬ್ಬೂರಿನ ಚಲವಾದಿ ಸಮುದಾಯದ ಮುಖಂಡರು:ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟ ಒಳ ಮೀಸಲಾತಿಯನ್ನು ತೀರ್ಪು ನೀಡಿದ್ದು ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲಾ ಉಪಜಾತಿಗಳಿಗೂ ಸೂಕ್ತ ಪ್ರಾತಿನಿತ್ಯ ಸಿಗದ ಬಗ್ಗೆ ಖಚಿತವಾದ ಅಂಕಿ ಅಂಶಗಳ ವರದಿಯ ಆಧಾರದ ಮೇಲೆ ಸದರಿ ಕೀರ್ತಿನ ಅನ್ವಯ ಕರ್ನಾಟಕ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯಲ್ಲಿ ಕೊಡಮಿಸಲಾತಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ನೇಮಕ ಮಾಡಿ ಸಮೀಕ್ಷೆ ನಡೆಸಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ದಿನಾಂಕ3-9-2025 ನೇರ ನೇಮಕಾತಿಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶವು ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಚಿತ್ರದಲ್ಲಿದಿಬ್ಬೂರಿನ ಚಲವಾದಿ ಸಮುದಾಯದ ಮುಖಂಡರು: ಇಂದ್ರ ಕುಮಾರ್ ಡಿಕೆಬೈರೇಶ ಸತೀಶ್ ಗಿರೀಶ್ ಶ್ರೀನಿವಾಸ್ ಶಿವಣ್ಣ ಮೇಷ್ಟ್ರು ಪರಮೇಶ ಯೋಗೀಶು ಶಿವರಾಜು ಲಕ್ಷ್ಮಣಪ್ಪ ನಾಗರಾಜು ಹನುಮಂತರಾಜು ಗಂಗರಾಜು ಸೋಮಶೇಖರ್ ಶಶಿಧರ್ ನರಸಿಂಹಮೂರ್ತಿ ರಘು ಮಂಜುನಾಥ್ ಸಮುದಾಯದ ಮುಖಂಡರು ಭಾಗವಹಿಸಿದ್ದರು

ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದಿಂದ ಒಳ ಮೀಸಲಾತಿ ರಹಿತ ಹಳೆ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ಸಮಾವೇಶ
ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದಿಂದ ಒಳ ಮೀಸಲಾತಿ ರಹಿತ ಹಳೆ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ಸಮಾವೇಶ
{“remix_data”:[],”remix_entry_point”:”challenges”,”source_tags”:[“local”],”origin”:”unknown”,”total_draw_time”:0,”total_draw_actions”:0,”layers_used”:0,”brushes_used”:0,”photos_added”:0,”total_editor_actions”:{},”tools_used”:{“transform”:1},”is_sticker”:false,”edited_since_last_sticker_save”:true,”containsFTESticker”:false}

ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟ ದಿನಾಂಕ 25.3.2026ರಂದು ಒಳ ಮೀಸಲಾತಿ ರಹಿತ ಹಳೆ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಂಡಿದ್ದು ತುಮಕೂರು ಜಿಲ್ಲೆಯಿಂದ ಸುಮಾರು 10,000 ಪ್ರತಿಭಟನೆಯಲ್ಲಿ ಭಾಗವಹಿಸಲು ಹೊರಟಿದ್ದು ತುಮಕೂರು ನಗರದ ಜಯಪುರ ಬಡಾವಣೆಯಿಂದ ಶ್ರೀ ಲಕ್ಷ್ಮಿ ದೇವಿ ಟ್ರಸ್ಟ್ ಹಾಗೂ ಅಂಬೇಡ್ಕರ್ ಯುವಕ ಸಂಘ ಹಾಗೂ ಜಯಪುರ ಬಡಾವಣೆಯ ಅನೇಕ ಜನರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು. ಭಾರತದ ಸರ್ವೋಚ್ಚ ನ್ಯಾಯಾಲಯವು ದಿನಾಂಕ 1 -8 -2024 ರಂದು ಒಳ ಮೀಸಲಾತಿಯನ್ನು ನೀಡಲು ಹಾಯ ರಾಜ್ಯಗಳಿಗೆ ಅಧಿಕಾರವಿದೆಯೆಂದು ತೀರ್ಪು ನೀಡಿದ್ದು ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲಾ ಉಪಜಾತಿಗಳಿಗೂ ಸೂಕ್ತ ಪ್ರಾತಿನಿತ್ಯ ಸಿಗದ ಬಗ್ಗೆ ಖಚಿತವಾದ ಅಂಕಿ ಅಂಶಗಳ ವರದಿಯ ಆಧಾರದ ಮೇಲೆ ಸದರಿ ಕೀರ್ತಿನ ಅನ್ವಯ ಕರ್ನಾಟಕ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯಲ್ಲಿ ಕೊಡಮಿಸಲಾತಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ನೇಮಕ ಮಾಡಿ ಸಮೀಕ್ಷೆ ನಡೆಸಿ ವರದಿಯನ್ನು ದಿನಾಂಕ 4-8- 2025 ರಂದು ಪಡೆದು ದಿನಾಂಕ 18-8-2025 ರಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ದಿನಾಂಕ3-9-2025 ನೇರ ನೇಮಕಾತಿಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶವು ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಮರಣ ಶಾಸನ ವಾಗಿದ್ದು ಇದನ್ನು ಕೈ ಬಿಡಬೇಕೆಂಬುದಾಗಿ ಆ ಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು ಈ ಸಂದರ್ಭದಲ್ಲಿ ಟಿ ಆರ್ ನಾಗೇಶ್ ವಕೀಲರು ಶಾಂತರಾಜು ಉಪಾಧ್ಯಕ್ಷರು ಟಿಆರ್ ಗುರುಪ್ರಸಾದ್ ಪ್ರಧಾನ ಕಾರ್ಯದರ್ಶಿ ಗುರು ಶಂಕರ್ ಮಹಾದೇವ್ ಗಿರೀಶ್ ರುದ್ರೇಶ್ ಲೋಕೇಶ್ ರಾಜು ಕೃಷ್ಣಮೂರ್ತಿ ಶಿವಶಂಕರ್ ರಾಜಣ್ಣ ಸುದರ್ಶನ್ ತ್ರಿಲೋಕ್ ಶ್ರೀಕಂಠಪ್ಪ ಶ್ರೀ ಲಕ್ಷ್ಮಿ ದೇವಿ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಇನ್ನಿತರರು ಭಾಗವಹಿಸಿದ್ದರು

ನ್ಯಾ.ನಾಗಮೋಹನ್‌ದಾಸ್ ವರದಿ ತಿರಸ್ಕರಿಸಲು ಬಲಗೈ ಸಮುದಾಯ ಒತ್ತಾಯ:ಮಾ.೨೫ ಬೃಹತ್ ಪ್ರತಿಭಟನೆತುಮಕೂರು.ಮಾ.೨೩:ಸುಪ್ರಿಂ ಕೋರ್ಟಿನ ನಿರ್ದೇಶನದ ಮೇಲೆ ಸರಕಾರ ರಚಿಸಿದ್ದ

ನ್ಯಾ.ನಾಗಮೋಹನ್‌ದಾಸ್ ವರದಿ ತಿರಸ್ಕರಿಸಲು ಬಲಗೈ ಸಮುದಾಯ ಒತ್ತಾಯ:ಮಾ.೨೫ ಬೃಹತ್ ಪ್ರತಿಭಟನೆತುಮಕೂರು.ಮಾ.೨೩:ಸುಪ್ರಿಂ ಕೋರ್ಟಿನ ನಿರ್ದೇಶನದ ಮೇಲೆ ಸರಕಾರ ರಚಿಸಿದ್ದ ನ್ಯಾ.ನಾಗಮೋಹನ್ ದಾಸ್ ಆಯೋಗ ನೀಡಿರುವ ಒಳಮೀಸಲಾತಿ ವರ್ಗೀಕರಣ ವರದಿ ಅತ್ಯಂತ ಅವೈಜ್ಞಾನಿಕವಾಗಿದ್ದು,ಸರಕಾರ ಅದನ್ನು ರದ್ದು ಪಡಿಸಿ,೨೭ ಫೆಬ್ರವರಿ ೨೦೨೬ ರಂದು ಹೊರಡಿಸಿರುವ ಆದೇಶದಂತೆ ಒಳಮೀಸಲಾತಿ ರಹಿತ ನೇಮಕಾತಿ ಆದಿಸೂಚನೆ ಹೊರಡಿಸಬೇಕೆಂದು ಆಗ್ರಹಿಸಿ ಮಾ.೨೫ ರಂದು ಉರಿಲಿಂಗಿ ಪೆದ್ದಿ ಮಠದ ಶ್ರೀಜ್ಞಾನಪ್ರಕಾಶ್ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ತುಮಕೂರಿನಿಂದ ೨೫ ಸಾವಿರಕ್ಕು ಹೆಚ್ಚು ಜನರು ಭಾಗವಹಿಸುವುದಾಗಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಜಿಲ್ಲಾ ಮುಖಂಡರಾದ ಸಿ.ಭಾನುಪ್ರಕಾಶ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನ್ಯಾ.ನಾಗಮೋಹನ್‌ದಾಸ್ ನೀಡಿರುವ ವರದಿ ಅತ್ಯಂತ ಅವೈಜ್ಞಾನಿಕವಾಗಿದ್ದು, ದೋಷಪೂರಿಕ ಮತ್ತು ಪಕ್ಷ ಪಾತದಿಂದ ಕೂಡಿದೆ.ಗೊಂದಲ ಬಗೆಹರಿಸುವ ಬದಲು, ಹೊಲಯ ಸಮುದಾಯದ ತಲೆಯ ಮೇಲೆ ಚಪ್ಪಡಿ ಕಲ್ಲು ಎಳೆಯುವ ಪ್ರಯತ್ನವನ್ನು ಮಾಡಿದೆ ಎಂದು ಆರೋಪಿಸಿದರು.ಒಳಮೀಸಲಾತಿಯೂ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ೧೦೧ ಜಾತಿಗಳಿಗೆ ಸಮಾನವಾಗಿ ಹಂಚಿಕೆಯಾಗಬೇಕಾದರೆ ಮೀಸಲಾತಿಯ ಪ್ರಮಾಣ ಹೆಚ್ಚಾಗಬೇಕು.ಸರಕಾರ ಕೇವಲ ೧ ಜಾತಿಯ ಒತ್ತಡಕ್ಕೆ ಮಣಿದು ಶೇ೧೫ರ ಮೀಸಲಾತಿಯಲ್ಲಿಯೇ ಒಳಮೀಸಲಾತಿ ಜಾರಿಗೊಳಿಸಲು ಹೊರಟಿರುವುದು ಸರಿಯಾದ ಕ್ರಮವಲ್ಲ.ನಮ್ಮ ವಿರೋಧದ ನಡುವೆಯೂ ಒಳಮೀಸಲಾತಿ ಜಾರಿಗೊಳಿಸಲು ಮುಂದಾದರೆ ಬಲಗೈ ಸಮುದಾಯಗಳ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಡಿಸಿಎಂಎಸ್ ನ ಅಧ್ಯಕ್ಷರಾದ ಡಾ.ಚಂದ್ರಪ್ಪ ಮಾತನಾಡಿ,ಸರಕಾರ ಅವೈಜ್ಞಾನಿಕ ಮತ್ತು ದೋಷಪೂರಿತವಾದ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಬೇಕು.ಓಬಿಸಿ ಆಯೋಗದ ಸಮೀಕ್ಷಾ ವರದಿಯನ್ನು ನ್ಯಾ.ನಾಗಮೋಹನ್ ದಾಸ್ ವರದಿಗೆ ತಾಳೆಹಾಕಿ, ವೆತ್ಯಾಸ ಕಂಡು ಬಂದರೆ ಮತ್ತೊಮ್ಮೆ ಸಮೀಕ್ಷೆ ನಡೆಸಬೇಕು.ರಾಜ್ಯ ಸರಕಾರವೂ ೦೩-೦೯-೨೦೨೫ ರಂದು ಯಾವುದೇ ಮಾನದಂಡವಿಲ್ಲದೆ ಹೊರಡಿಸಿರುವ ಮೀಸಲಾತಿ ಆದೇಶವನ್ನು ಹಿಂಪಡೆಯಬೇಕು. ಜಾತಿ ಪ್ರಮಾಣ ಪತ್ರಗಳಲ್ಲಿ ಮೂಲ ಜಾತಿಯ ನಮೂದೆನೆ ಕಡ್ಡಾಯಗೊಳಿಸುವುದು, ಈಗಾಗಲೇ ಇರುವ ಜಾತಿ ಪ್ರಮಾಣ ಪತ್ರಗಳನ್ನು ಹೊಸ ಜಾತಿ ಪ್ರಮಾಣ ಪತ್ರಗಳೊಂದಿಗೆ ಪರಿಗಣಿಸಲು ಸೂಕ್ತ ಆದೇಶ ಹೊರಡಿಸಬೇಕು.ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಸೇರಿರುವ ೬೩ ಜಾತಿಗಳನ್ನು ಒಂದು ಗುಂಪಿಗೆ ತಂದು ಉದ್ಯೋಗ, ಶಿಕ್ಷಣ ಇತರೆ ಸೌಲಭ್ಯ ಪಡೆಯಲು ಆದೇಶ ಹೊರಡಿಸಬೇಕು. ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿ ಕೆಲ ಜಿಲ್ಲೆಗಳಲ್ಲಿ ಬಲಗೈ ಜಾತಿಗಳ ಸಂಖ್ಯೆಯನ್ನು ಅತಿ ಕಡಿಮೆ ನಮೂದಿಸಿದ್ದು,ಪುನರ್ ಪರಿಶೀಲನೆ ನಡೆಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಮಾ.೨೫ ರಂದು ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಲಕ್ಷಾಂತರ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಮುಖAಡರಾದ ಶ್ರೀನಿವಾಸ್ ಮಾತನಾಡಿ, ಸರಕಾರದ ಮೀಸಲಾತಿ ಅನ್ವಯ ಇತ್ತೀಚಿನ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶಗಳಲ್ಲಿನ ರೋಸ್ಟರ್ ಬಿಂದುಗಳನ್ನು ಅವಲೋಕಿಸಿದರೆ ಬಲಗೈ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯಗಳಿಗೆ ಬಾರಿ ಅನ್ಯಾಯವಾಗಲಿದೆ.ನಾವು ಮೀಸಲಾತಿ ವಿರೋಧಿಗಳಲ್ಲ. ಆದರೆ ಇದೇ ರೋಸ್ಟರ್ ಬಿಂದು ಮುಂದುವರೆದರೆ ಪರಿಶಿಷ್ಟ ಜಾತಿಯಲ್ಲಿರುವ ಒಂದು ವರ್ಗವನ್ನು ಹೊರತು ಪಡಿಸಿ, ಉಳಿದ ವರ್ಗಗಳಿಗೆ ಉದ್ಯೋಗ, ಶಿಕ್ಷಣ, ಅರ್ಥಿಕ ಸವಲತ್ತುಗಳು ದೊರೆಯುವುದು ಮರಿಚೀಕೆ.ಹಾಗಾಗಿ ಇದರ ವಿರುದ್ದ ಹೋರಾಟ ಅನಿವಾರ್ಯವಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಛಲವಾದಿ ಶೇಖರ್, ಸಿದ್ದಲಿಂಗಯ್ಯ, ಭೈರೇಶ್, ಕೃಷ್ಪಪ್ಪ ಹೆಗ್ಗೆರೆ,ಗಿರಿಜೇಶ್,ಜಿ.ಆರ್, ಅಪ್ಪಾಜಯ್ಯ, ಇಂದ್ರಕುಮಾರ್, ವಕೀಲರಾದ ನಾಗೇಶ್, ಗಂಗಾAಜನೇಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗಿದ್ದ ವಿದ್ಯಾರ್ಥಿನಿಯನ್ನು ಕರೆದುಕೊಂಡು ಬಂದು ಮತ್ತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಸಿದಂತಹ ಘಟನೆ ಗದಗ ಜಿಲ್ಲೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗಿದ್ದ ವಿದ್ಯಾರ್ಥಿನಿಯನ್ನು ಕರೆದುಕೊಂಡು ಬಂದು ಮತ್ತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಸಿದಂತಹ ಘಟನೆ ಗದಗ ಜಿಲ್ಲೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗಿದ್ದ ವಿದ್ಯಾರ್ಥಿನಿಯನ್ನು ಕರೆದುಕೊಂಡು ಬಂದು ಮತ್ತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಸಿದಂತಹ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬರದೂರು ಗ್ರಾಮದಲ್ಲಿ ನಡೆದಿದೆ.ಬಾಲಕಿಯ ತಂದೆ ಅನಾರೋಗ್ಯ ಪೀಡಿತರಾಗಿದ್ದರು. ಮನೆಯಲ್ಲಿ ಬಡತನವೂ ತುಂಬಿ ತುಳುಕಾಡುತ್ತಿತ್ತು. ಈ ಹಿನ್ನೆಲೆ ಬಾಲಕಿ ಪರೀಕ್ಷೆ ತೊರೆದು ಕೂಲಿ ಕೆಲಸಕ್ಕೆಂದು ದ್ರಾಕ್ಷಿ ತೋಟದಲ್ಲಿ ಕೆಲಸಕ್ಕೆ ಹೋಗಿದ್ದಳು. ಆದರೆ ಈ ವಿಚಾರ ತಿಳಿದ ಸರ್ಕಾರಿ ಶಿಕ್ಷಣ ಇಲಾಖೆ ಅಧಿಕಾರಿಗಳು ಆಕೆಯನ್ನು ವಾಪಸ್ ಕರೆಸಿ ಆಕೆಗೆ ಮರು ಪರೀಕ್ಷೆ ಮಾಡಿದ್ದಾರೆ.ಮನೆಯಲ್ಲಿದ್ದ ದುಸ್ಥಿತಿ ನೆನೆದು ಆಕೆ ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗಿದ್ದಳು. ಈ ವಿಚಾರ ಕ್ಷೇತ್ರ ಶಿಕ್ಷಾಧಿಕಾರಿ ಗಂಗಾಧರ ಅಣ್ಣಿಗೇರಿ ಅವರ ಗಮನಕ್ಕೆ ಬರುತ್ತಿದ್ದಂತೆ ಹುಡುಗಿಯನ್ನು ವಾಪಸ್ ಕರೆಸಿದ ಅವರು ಮುಂಡರಗಿ ಪಟ್ಟಣದ ವಿಜಿ ಲಿಂಬಿಕಾಯಿ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಆಕೆಗೆ ಪರೀಕ್ಷೆ ಬರೆಸಿದ್ದಾರೆ. ವಿದ್ಯಾರ್ಥಿನಿ ಮನವೊಲಿಸಿ ವಿಜ್ಞಾನ ಪರೀಕ್ಷೆ ಬರೆಸಿದ ಕ್ಷೇತ್ರ ಶಿಕ್ಷಾಧಿಕಾರಿ ಗಂಗಾಧರ ಅಣ್ಣಿಗೇರಿ ಅವರ ಕಾರ್ಯಕ್ಕೆ ಈಗ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.

ʻಹೊಸ ಜಾಹೀರಾತು ನೀತಿ ಮೂಲಕ ಪತ್ರಿಕೆಗಳ ದಮನಕ್ಕೆ ಮುಂದಾದ ಸರಕಾರʼಕರ್ನಾಟಕ ಜಾಹೀರಾತು ನೀತಿ ಪುನರ್‌ ಪರಿಶೀಲನೆಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಒತ್ತಾಯತಾಂಡವಪುರ ಮಾರ್ಚ್ 21: ರಾಜ್ಯ ಸರಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು

ʻಹೊಸ ಜಾಹೀರಾತು ನೀತಿ ಮೂಲಕ ಪತ್ರಿಕೆಗಳ ದಮನಕ್ಕೆ ಮುಂದಾದ ಸರಕಾರʼಕರ್ನಾಟಕ ಜಾಹೀರಾತು ನೀತಿ ಪುನರ್‌ ಪರಿಶೀಲನೆಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಒತ್ತಾಯತಾಂಡವಪುರ ಮಾರ್ಚ್ 21: ರಾಜ್ಯ ಸರಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ ಹಾಗೂ ಸೇಡಿನ ಮನೋಭಾವ ಒಳಗೊಂಡ ನೀತಿಯಾಗಿದ್ದು, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಪಾಲಿಗೆ ಮರಣ ಶಾಸನವಾಗಿದೆ. ಪತ್ರಿಕೆಗಳು ನಾಶವಾದರೆ ಪ್ರಜಾಪ್ರಭುತ್ವವೂ ನಾಶವಾಗಲಿದೆ ಎಂಬ ಅರಿವು ಸರಕಾರಕ್ಕೆ ಇರಬೇಕು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಅಭಿಪ್ರಾಯಪಟ್ಟಿದೆ.ಈ ಸಂಬಂಧ ಇಂದು ಪತ್ರಕರ್ತರ ಭವನದಲ್ಲಿ ಸಂಘದ ಅಧ್ಯಕ್ಷ ಕೆ.ದೀಪಕ್‌ ನೇತೃತ್ವದಲ್ಲಿ ನಡೆದ ಪತ್ರಿಕಾ ಸಂಪಾದಕರ ಸಭೆಯಲ್ಲಿ ರಾಜ್ಯ ಸರಕಾರವು ʻಕರ್ನಾಟಕ ಜಾಹೀರಾತು ನೀತಿʼಯನ್ನು ಜಾರಿಗೆ ತರಲು ಮುಂದಾಗುವ ಮೂಲಕ ಸಂಕಷ್ಟದಲ್ಲಿರುವ ಪತ್ರಿಕೆಗಳನ್ನು ಮೇಲೆತ್ತುವ ಬದಲು ಕುತ್ತಿಗೆ ಹಿಸುಕಿ ಕೊಲ್ಲಲು ಸಂಚು ರೂಪಿಸಿದೆ ಎಂಬ ಅನಿಸಿಕೆ ಸಭೆಯಲ್ಲಿ ಪತ್ರಿಕಾ ಸಂಪಾದಕರು ಕಳವಳ ವ್ಯಕ್ತಪಡಿಸಿದರು.ಸಾಮಾನ್ಯ ವರ್ಗದ ಪತ್ರಿಕೆಗಳು ಮಾಧ್ಯಮ ಪಟ್ಟಿಗೆ ಸೇರಲು 2 ವರ್ಷದಿಂದ 3 ವರ್ಷಕ್ಕೆ ಪ್ರಕಟಣಾ ಅವಧಿಯನ್ನು ವಿಸ್ತರಿಸಿರುವುದು ಹಾಗೂ ಪರಿಶಿಷ್ಟ ಜಾತಿ, ವರ್ಗ, ವಿಶೇಷ ಸ್ಥಾನಮಾನ ಹೊಂದಿರುವ ಜಿಲ್ಲೆಗಳ ಪತ್ರಿಕೆಗಳು ಹಾಗೂ ಪ್ರಾದೇಶಿಕ ಭಾಷಾ ಪತ್ರಿಕೆಗಳಿಗೆ ಇದ್ದ 1 ವರ್ಷದ ಪ್ರಸಾರಣ ಅವಧಿಯನ್ನು 2 ವರ್ಷಕ್ಕೆ ವಿಸ್ತರಿಸಿರುವುದು ಹೊಸ ಪತ್ರಿಕೆಗಳ ಆರಂಭಕ್ಕೆ ಕಡಿವಾಣ ಹಾಕುವ ಹುನ್ನಾರವಾಗಿದೆ. ಸದ್ಯ ಮಾನ್ಯತಾ ಪಟ್ಟಿಯಲ್ಲಿರುವ ಪತ್ರಿಕೆಗಳ ಮಾನ್ಯತೆಯನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಮಾಧ್ಯಮ ಪರಿಶೀಲನಾ ಸಮಿತಿಯಿಂದ ಪುನರ್‌ ಪರಾಮರ್ಶಿಸುವುದು, ಪ್ರಾದೇಶಿಕ ಪತ್ರಿಕೆಗಳು ಸ್ವಂತ ಕಛೇರಿ ಮತ್ತು ಮುದ್ರಣಾ ಘಟಕ ಹೊಂದಿರಬೇಕು ಹಾಗೂ ಕನಿಷ್ಠ 15 ಜನ ಖಾಯಂ ನೌಕರರರನ್ನು ಹೊಂದಿರಬೇಕು ಹಾಗೂ ಕನಿಷ್ಠ 6 ಜಿಲ್ಲೆಗಳಲ್ಲಿ 25,000 ಪ್ರತಿಗಳ ಪ್ರಸಾರ ಸಂಖ್ಯೆಯನ್ನು ಹೊಂದಿರಬೇಕು ಎಂದು ಷರತ್ತು ಹಾಕಲಾಗಿದೆ. ಪ್ರಾದೇಶಿಕ ಪತ್ರಿಕೆ ನಡೆಸುತ್ತಿರುವ ಎಲ್ಲರೂ ಪ್ರತ್ಯೇಕ ಮುದ್ರಣ ಘಟಕ ಸ್ಥಾಪಿಸಲು ಸಾಧ್ಯವೆ ? ಎಂದು ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಪತ್ರಿಕೆ ಟೈಟಲ್‌ ವರ್ಗಾವಣೆ ರದ್ದು: ಪತ್ರಿಕೆಯ ಟೈಟಲ್‌ ವರ್ಗಾವಣೆಯನ್ನು ಕೇವಲ ಕುಟುಂಬಕ್ಕೆ ಸೀಮಿತಗೊಳಿಸುವುದು ಒಂದು ಪತ್ರಿಕೆಯ ಪರಂಪರೆ ಮುಂದುವರೆಕೆಗೆ ಧಕ್ಕೆಯಾಗಲಿದೆ. ಸಂಪಾದಕ ಸತ್ತರೂ ಪತ್ರಿಕೆಗಳು ಸಾಯಬಾರದು. ಪತ್ರಿಕೆಗಳ ಟೈಟಲ್‌ ವರ್ಗಾವಣೆ ಮಾಡಿದರೆ ಮಾನ್ಯತಾ ಪಟ್ಟಿಯಿಂದ ಕೈಬಿಡುವ ಕ್ರಮವೂ ಸಹ ಪತ್ರಿಕೆ ಮಾಲೀಕನ ಹಕ್ಕುಗಳನ್ನು ಕಸಿದುಕೊಳ್ಳುವಂತ್ತಾಗಲಿದೆ. ಹಾಗೂ ಪತ್ರಿಕೆಗಳು ದೀರ್ಘಕಾಲ ಮುದ್ರಣಗೊಳ್ಳಲು ತೊಡಕಾಗಲಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.ಜಾಹೀರಾತು ದರ ಪರಿಷ್ಕರಣೆ ವಿಷಯದಲ್ಲಿ ಕರ್ನಾಟಕ ಜಾಹೀರಾತು ನೀತಿ-2013 ಅನ್ವಯ ಶೇ. 12ರಷ್ಟು ಜಾಹಿರಾತು ದರವನ್ನು 2 ವರ್ಷಕ್ಕೊಮ್ಮೆ ಪರಿಷ್ಕರಿಸಬೇಕಿತ್ತು. ಅದರೆ, ಕಳೆದ ಐದು ವರ್ಷಗಳಿಂದ ದರ ಪರಿಷ್ಕರಣೆಯಾಗಿಲ್ಲ. ಈನಡುವೆ, ಪರಿಶಿಷ್ಟ ಜಾತಿ ಮತ್ತು ವರ್ಗದವರ ಮಾಲಿಕತ್ವದ ಪತ್ರಿಕೆಗಳಿಗೆ ಜಾಹಿರಾತು ಹಣವನ್ನು ಎಸ್.ಸಿ.ಎಸ್.ಪಿ/ಟಿ.ಎಸ್‌.ಪಿಗೆ ಅನುದಾನದ ವ್ಯಾಪ್ತಿಗೆ ಒಳಪಡಿಸಿ ವಾರ್ತಾ ಇಲಾಖೆಯಿಂದ ಬೇರ್ಪಡಿಸಿ, ಈ ಸಮುದಾಯಗಳ ಪತ್ರಿಕೆಗಳನ್ನು ಮುಖ್ಯವಾಹಿನಿಯಿಂದ ದೂರವಿಡುವ ಷಡ್ಯಂತರ ನಡೆದಿದೆ ಎಂದು ದೂರಲಾಯಿತು. (ಬಾಕ್ಸ್‌ )ಸಿಎಂ ಬಳಿಗೆ ನಿಯೋಗ:ಕರ್ನಾಟಕ ಹೊಸ ಜಾಹಿರಾತು ನೀತಿಯ ನ್ಯೂನ್ಯತೆಗಳ ವಿರುದ್ಧ ರಾಜ್ಯ ಮಟ್ಟದಲ್ಲಿ ಎಲ್ಲ ಪತ್ರಿಕಾ ಸಂಪಾದಕರ ಸಭೆಯನ್ನು ಮಾರ್ಚ್‌ 24ರಂದು ಬೆಂಗಳೂರಿನಲ್ಲಿ ಕರೆಯಲಾಗಿದ್ದು, ಸಭೆಯ ನಂತರ ಮೈಸೂರು ಜಿಲ್ಲಾ ಪತ್ರಕರ್ತರ ನಿಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹೊಸ ಜಾಹೀರಾತು ನೀತಿಯಿಂದ ಉಂಟಾಗಿರುವ ಪರಿಣಾಮಗಳನ್ನು ಗಮನಕ್ಕೆ ತರಲು ಸಭೆಯಲ್ಲಿ ನಿರ್ಧರಿಸಲಾಯಿತು. ಹಾಗೂ ಸರಕಾರ ಪತ್ರಿಕಾ ಸಂಪಾದಕರ ಸಂಘಗಳು, ಪತ್ರಕರ್ತರ ಸಂಘಗಳು ಒಳಗೊಂಡ ಸಮಿತಿಯ ಮೂಲಕ ಹೊಸ ನೀತಿಯನ್ನು ಪುನರ್‌ ಪರಿಶೀಲಿಸಬೇಕೆಂದು ಆಗ್ರಹಿಸಲಾಯಿತು. ಸಭೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್‌, ಪ್ರತಿನಿಧಿ ಪತ್ರಿಕೆಯ ಪ್ರಕಾಶಕರಾದ ಶ್ರೀಹರಿ ದ್ವಾರಕನಾಥ್‌, ಸಂಪಾದಕರಾದ ಸಿ.ಕೆ.ಮಹೇಂದ್ರ, ರಾಜ್ಯಧರ್ಮ ಪತ್ರಿಕೆ ಸಂಪಾದಕಿ ಎಸ್.ಕವಿತಾ, ಪ್ರಜಾನುಡಿ ಪತ್ರಿಕೆಯ ಸಂಪಾದಕ ಸ್ವರೂಪ್‌, ವರ್ತಮಾನ ಪತ್ರಿಕೆಯ ಸಂಪಾದಕ ಕೆ.ಎನ್.ರವಿ, ಮೈಸೂರು ಪತ್ರಿಕೆಯ ಸಂಪಾದಕ ಮೋಹನ್‌, ನಗರ ಬೆಳಕು ಪತ್ರಿಕೆ ಸುವರ್ಣ, ಮಲ್ಲಿಗೆ ಮಾಚಮ್ಮ, ಸಾಧ್ವಿ ಪತ್ರಿಕೆ ಸಂಪಾದಕ ಬಿ.ರಾಘವೇಂದ್ರ, ನಿಜದನಿ ಪತ್ರಿಕೆಯ ಸಂಪಾದಕ ಸುನಿಲ್‌, ನನ್ನೂರು ಮೈಸೂರು ಪತ್ರಿಕೆ ಎನ್.‌ ಸುರೇಶ್‌, ಲೋಕಹಿತ ಪತ್ರಿಕೆಯ ಸಂಪಾದಕ ಲೋಹಿತ್‌, ಪ್ರಬುದ್ಧ ಮಿತ್ರ ಪತ್ರಿಕೆಯ ರಾಘವೇಂದ್ರಸ್ವಾಮಿ, ಪ್ರಬುದ್ಧ ವಿಜಯ ಪತ್ರಿಕೆ ಸಂಪಾದಕ ಕಿಶೋರ್‌ ನಾಗ್ ಹಾಗೂ ಅನೇಕ ಪತ್ರಿಕೆಗಳ ಪ್ರತಿನಿಧಿಗಳು, ಸಂಘದ ಪದಾಧಿಕಾರಿಗಳಾದ ದಾರಾ ಮಹೇಶ್‌, ನಿರ್ದೇಶಕರಾದ ಸೋಮಶೇಖರ್‌, ಹನಗೋಡು ನಟರಾಜ್‌ ಮತ್ತಿತರರು ಹಾಜರಿದ್ದರು. ಕೋಟ್ಸ್…ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜಾಪ್ರಭುತ್ವವಾದಿಗಳು. ಪ್ರಜಾಪ್ರಭುತ್ವ ಉಳಿವಿನಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು ಎಂದು ಸದಾ ಹೇಳುವವರು. ಆದರೆ, ಕರ್ನಾಟಕ ಜಾಹೀರಾತು ನೀತಿ-2026 ಮೂಲಕ ಅನವಶ್ಯಕ ಷರತ್ತುಗಳನ್ನು ವಿಧಿಸಿ ಪತ್ರಿಕೆಗಳ ಕುತ್ತಿಗೆ ಹಿಸುಕುವ ಕಾರ್ಯಕ್ಕೆ ಸರಕಾರ ಮುಂದಾಗಿದೆ. ಒಬ್ಬ ಕಳ್ಳನನ್ನು ತಡೆಯಲು ವಿಶ್ವಾಸರ್ಹತೆ ಉಳಿಸಿಕೊಂಡಿರುವ ಇಡೀ ಪತ್ರಿಕಾ ಸಮ್ಮೂಹಕ್ಕೆ ಕೋಳ ತೊಡಿಸಲು ಸರಕಾರ ಮುಂದಾಗಿದೆ. ವಾರ್ತಾ ಇಲಾಖೆಯು ಪೂರ್ವಾಗ್ರಹ ಮನಸ್ಥಿತಿಯಿಂದ ಹೊರ ಬಂದು ಹೊಸ ಜಾಹಿರಾತು ನೀತಿಯನ್ನು ಎಲ್ಲರ ಸಲಹೆ ಪಡೆದು ಪುನರ್‌ ಪರಿಶೀಲಿಸಬೇಕು. ಪತ್ರಿಕೆಗಳು ನಾಶವಾದರೆ ಪ್ರಜಾಪ್ರಭುತ್ವವೂ ನಾಶವಾಗಲಿದೆ ಎಂಬ ಅರಿವು ಸರಕಾರಕ್ಕೆ ಇರಬೇಕು.- ಕೆ.ದೀಪಕ್‌, ಅಧ್ಯಕ್ಷ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ

ಯುಗಾದಿ ಹಬ್ಬದ ಮರುದಿನವೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಆತ್ಮಹತ್ಯೆ
ಯುಗಾದಿ ಹಬ್ಬದ ಮರುದಿನವೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಆತ್ಮಹತ್ಯೆ

ಪಾವಗಡ ಯುಗಾದಿ ಹಬ್ಬದ ಮರುದಿನ ಶುಕ್ರವಾರ ಸಂಜೆ ಪಾವಗಡ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ್ ರವರು ಪಟ್ಟಣದ ಆಪ್ ಬಂಡೆ ಯ ತಮ್ಮ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಮೇಲಾಧಿಕಾರಿಗಳ ಕಿರುಕುಳವೆ ಸಾವಿಗೆ ಕಾರಣವೆಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ವಿಡಿಯೋದಲ್ಲಿ ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣಪ್ಪ ಇದಕ್ಕೆ ಕಾರಣ ಎಂದು ಉಲ್ಲೇಖಿಸಿದ್ದಾರೆ ಕಳೆದ ಮೂರು ವರ್ಷಗಳಿಂದ ಪಾವಗಡ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದ ಮಲ್ಲಿಕಾರ್ಜುನ್ ರವರು ಇವರ ಸೇವಾ ಅವಧಿ ಮುಂದಿನ ಒಂದು ವಾರದಲ್ಲಿ ಮುಕ್ತಾಯಗೊಳ್ಳುತ್ತಿತ್ತು ಇವರು ಮೂಲತಃ ಪಾವಗಡ ತಾಲೂಕಿನ ಗುಂಡಲಾರ್ಲಹಳ್ಳಿ ಗ್ರಾಮದವರಾಗಿದ್ದು ಸಾವಿಗೂ ಮುನ್ನ ಮಲ್ಲಿಕಾರ್ಜುನ್ ಕೊನೆಯ ಮಾತು ನಮ್ಮ ತಾಯಿ ಹೆಂಡತಿ ಮಕ್ಕಳು ನಮ್ಮ ಇಡೀ ಸಂಸಾರ ನನ್ನ ಚೆನ್ನಾಗಿ ನೋಡಿಕೊಂಡಿದೆ ನನಗೆ ಒಳ್ಳೆ ಬೆಲೆ ಕೊಟ್ಟಿದ್ದಾರೆ ನಾನು ಅವರಿಗೆ ಇನ್ನೂ ಸಹಾಯ ಮಾಡಬೇಕಿತ್ತು ಆದ್ರೆ ನನ್ನಿಂದ ಆಗಲಿಲ್ಲ ನನ್ನ ಕುಟುಂಬದವರು ಏನು ಸೇಡು ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲ ದೇವರೇ ಅವರಿಗೆ ಕಾನೂನು ಶಿಕ್ಷೆ ಕೊಟ್ಟೆ ಕೊಡುತ್ತಾನೆ ಎಂದು ವಿಡಿಯೋ ದಲ್ಲಿ ಹೇಳಿದ್ದಾರೆ ಮಲ್ಲಿಕಾರ್ಜುನ್ ರವರ ಸಾವಿಗೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಜೈಲುಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯಲು ಕಾರಾಗೃಹ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ

ಜೈಲುಗಳಲ್ಲಿ ಡ್ರಗ್ಸ್ ನೆಟ್​ವರ್ಕ್​ ಬ್ರೇಕ್ ಹಾಕಲು ಡಿಜಿಪಿ ಪ್ಲಾನ್; ರಾಜ್ಯದ ಎಲ್ಲಾ ಜೈಲುಗಳ ಕೈದಿಗಳಿಗೆ ಡ್ರಗ್ಸ್ ಟೆಸ್ಟ್!ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯಲು ಕಾರಾಗೃಹ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರ ಸೂಚನೆಯಂತೆ ರಾಜ್ಯದ ಎಲ್ಲಾ ಜೈಲುಗಳಲ್ಲಿ ಕೈದಿಗಳನ್ನು ಮಾದಕ ವಸ್ತು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.ಈಗಾಗಲೇ ರಾಜ್ಯದ ಶೇ10 ಕೈದಿಗಳಿಗೆ ಟೆಸ್ಟ್..ಪರಪ್ಪನ ಅಗ್ರಹಾರದಲ್ಲಿ ಮಾರ್ಚ್ 9 ರಂದು ಸಿಬ್ಬಂದಿಯೇ ತನ್ನ ಒಳುಡುಪಿನಲ್ಲಿ ಮಾದಕ ವಸ್ತುಗಳನ್ನು ಜೈಲಿನೊಳಗೆ ತಂದ ಘಟನೆ ನಡೆದಿತ್ತು. ಇದೊಂದೇ ಅಲ್ಲದೆ ಹಲವು ಬಾರಿ ರಾಜ್ಯದ ಜೈಲುಗಳಲ್ಲಿ ಈ ರೀತಿಯ ಅಕ್ರಮಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆ ನಿಮ್ಹಾನ್ಸ್ ಆಸ್ಪತ್ರೆಯ ಸಹಯೋಗದೊಂದಿಗೆ ಡ್ರಗ್ಸ್ ಮುಕ್ತ ಕಾರಾಗೃಹ ನಿರ್ಮಾಣ ಮಾಡುವ ಗುರಿಯಿಂದ ಕೈದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.ಈ ಯೋಜನೆಯಡಿ ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ಗಾಂಜಾ, ಹೆರೊಯಿನ್, ಕೊಕೈನ್ ಸೇರಿದಂತೆ ವಿವಿಧ ಮಾದಕ ವಸ್ತುಗಳ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸದ್ಯ ಮೊದಲ ಹಂತದಲ್ಲಿ ಎಲ್ಲಾ ಜೈಲುಗಳಲ್ಲಿ ಸುಮಾರು ಶೇ10ರಷ್ಟು ಕೈದಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಕಾರಾಗೃಹ ಇಲಾಖೆ ನೀಡಿರುವ ವಿಶೇಷ ಕಿಟ್‌ಗಳ ಮೂಲಕ ಜೈಲು ವೈದ್ಯಾಧಿಕಾರಿಗಳು ಈ ಪರೀಕ್ಷೆಗಳನ್ನು ಮಾಡುತ್ತಿದ್ದಾರೆ.ಮಾದಕ ವಸ್ತು ಸೇವನೆ ಪತ್ತೆಯಾದರೆ ಕೌನ್ಸೆಲಿಂಗ್ಪರೀಕ್ಷೆಯಲ್ಲಿ ಕೈದಿಗಳು ಮಾದಕ ವಸ್ತು ಸೇವಿಸಿರುವುದು ಪತ್ತೆಯಾದರೆ ತಕ್ಷಣವೇ ಅವರಿಗೆ ಕೌನ್ಸೆಲಿಂಗ್ ನೀಡಲಾಗುತ್ತದೆ. ಹೆಚ್ಚು ಅಡಿಕ್ಟ್ ಆಗಿರುವ ಕೈದಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡುವ ವ್ಯವಸ್ಥೆಯೂ ಮಾಡಲಾಗಿದೆ. ಆದರೆ ಈ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ಪತ್ತೆಯಾದ ಕೈದಿಗಳ ಮೇಲೆ ಸದ್ಯಕ್ಕೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬದಲಿಗೆ ಕೌನ್ಸೆಲಿಂಗ್ ಮತ್ತು ಚಿಕಿತ್ಸೆಯ ಮೂಲಕ ಕೈದಿಗಳನ್ನು ಸರಿಯಾದ ದಾರಿಗೆ ತರಲು ಕಾರಾಗೃಹ ಇಲಾಖೆ ಮುಂದಾಗಿದೆ.

ಅಕ್ರಮ ಗಾಂಜಾ ಮಾರಾಟ : ವ್ಯಕ್ತಿಯ ಬಂಧನ.!ಮುಂಡಗೋಡ, ಮಾ.20: ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ
ಅಕ್ರಮ ಗಾಂಜಾ ಮಾರಾಟ : ವ್ಯಕ್ತಿಯ ಬಂಧನ.!ಮುಂಡಗೋಡ, ಮಾ.20: ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ

ಅಕ್ರಮ ಗಾಂಜಾ ಮಾರಾಟ : ವ್ಯಕ್ತಿಯ ಬಂಧನ.!ಮುಂಡಗೋಡ, ಮಾ.20: ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಇಂದೂರು ಗ್ರಾಮದ ಕುನ್ನೂರ ಓಣಿಯ ನಿವಾಸಿ ಅಕ್ಷರ ಮೌಲಾಸಾಬ ಸೈಯದ್‌ಅಲಿ (32) ಎಂದು ಗುರುತಿಸಲಾಗಿದೆ. ಈತನು ಗುರುವಾರ ಬೆಳಿಗ್ಗೆ ಸುಮಾರು 11:45 ರ ಸಮಯದಲ್ಲಿ ಶಿರಸಿ-ಹುಬ್ಬಳ್ಳಿ ಮಾರ್ಗದ ರಾಜ್ಯ ಹೆದ್ದಾರಿ-69ರ ಬಸ್ ಡಿಪೋ ಬಳಿ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಗಾಂಜಾ ಇಟ್ಟುಕೊಂಡು ಗ್ರಾಹಕರಿಗಾಗಿ ಕಾಯುತ್ತಿದ್ದಾಗ ಪೊಲೀಸರು ದಾಳಿ ಮಾಡಿದ್ದಾರೆ.ದಾಳಿಯ ವೇಳೆ ಸುಮಾರು 12,000 ರೂ. ಮೌಲ್ಯದ 184 ಗ್ರಾಂ ಗಾಂಜಾ ಹಾಗೂ ಆರೋಪಿಯ ಬಳಿಯಿದ್ದ 360 ರೂ. ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎಮ್.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ ಹಾಗೂ ಶಿರಸಿ ಡಿ.ಎಸ್.ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಮುಂಡಗೋಡ ಪೊಲೀಸ್ ಇನ್ಸ್‌ಪೆಕ್ಟರ್ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ, ಪಿ.ಎಸ್.ಐ ಮಂಜುನಾಥ ಗೌಡರ, ಎ.ಎಸ್.ಐ ಸೋಮಶೇಖರ ಮೇತ್ರಿ ಹಾಗೂ ಸಿಬ್ಬಂದಿಗಳಾದ ಕೋಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ಮಹಾಂತೇಶ ಮುಧೋಳ, ನಾಗಪ್ಪ ಮೊರಟಗಿ ಮತ್ತು ಬಸವರಾಜ ಒಡೆಯರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸ್ಲಂ ಸಮಿತಿಯಿಂದ ಯುಗಾದಿ – ರಂಜಾನ್ ಇಫ್ತಿಯಾರ್ ಕೂಟ ದ್ವೇಷಕ್ಕೆ ಪ್ರೀತಿ ಉತ್ತರ – ಎ ನರಸಿಂಹಮೂರ್ತಿ. ನಗರದ ಸ್ಲಂ ಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ

ಸ್ಲಂ ಸಮಿತಿಯಿಂದ ಯುಗಾದಿ – ರಂಜಾನ್ ಇಫ್ತಿಯಾರ್ ಕೂಟ ದ್ವೇಷಕ್ಕೆ ಪ್ರೀತಿ ಉತ್ತರ – ಎ ನರಸಿಂಹಮೂರ್ತಿ. ನಗರದ ಸ್ಲಂ ಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಬಾಂಧವರಲ್ಲಿ ಸೌಹಾರ್ದತೆ ಮತ್ತು ಬಂಧುತ್ವ ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಯುಗಾದಿ -ರಂಜಾನ್ ಸೌಹಾರ್ಧ ಇಫ್ತಿಯಾರ್ ಕೂಟ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಬಹುತ್ವ ಬೋಜನ ಉಣಬಡಿಸುವ ಮೂಲಕ ಚಾಲನೆ ನೀಡಿದ ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ ಕಳೆದ 25 ವರ್ಷಗಳಿಂದ ತುಮಕೂರು ನಗರದಲ್ಲಿ ಸ್ಲಂ ಸಮಿತಿಯಿಂದ ಹಿಂದೂ ಮತ್ತು ಮುಸ್ಲಿಂ ಬಾಂಧವರಲ್ಲಿ ಸೌಹಾರ್ದತೆಯನ್ನು ಬೆಸೆಯುವ. ನಾಡ ಕವಿ ಕುವೆಂಪು ರವರ ವಿಶ್ವ ಮಾನವ ಸಂದೇಶ ಮನುಜ ಜಾತಿ ತಾನೊಂದೇ ವಲಂ ಎಂಬ ಆಶಯದೊಂದಿಗೆ ಬಹುತ್ವವನ್ನು ಗಟ್ಟಿಗೊಳಿಸುತ್ತಿದು ಇಂದು ತುಮಕೂರು ಸ್ಲಂ ಸಮಿತಿಯ ಕಾರ್ಯಕರ್ತರು ನಮ್ಮ ಮನೆಗಳ ಹೋಳಿಗೆ. ಕೋಸಂಬರಿ ಫ್ರೂಟ್ ಸಲಾಡ್. ಸಮೋಸ ಜ್ಯೂಸ್ ಇನ್ನಿತ್ತಾರೆ ತಿನಿಸುಗಳನ್ನು ತಂದು ಒಟ್ಟಿಗೆ ಸೇರಿ ಸ್ಲಂಗಳಲ್ಲಿರುವ ಮುಸ್ಲಿಂ ಕಾರ್ಯಕರ್ತರು ಬಾಂಧವರ ಉಪವಾಸದಲ್ಲಿ ತೊಡಗಿರುವವರಿಗೆ ಇಪ್ತಿಯರ್ ಏರ್ಪಡಿಸಿರುವುದು ಮಾನವೀಯತೆಯನ್ನು ಬೆಸೆಯುವುದಾಗಿದೆ ನಮ್ಮ ದೇಶ ಪ್ರಬುದ್ಧ ಭಾರತವಾಗಬೇಕು ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಆದರೆ ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚುನಾವಣಾ ಆಯೋಗವನ್ನು ಗಾಳವಾಗಿ ಬಳಸಿಕೊಂಡು SIR ಎಂಬ ಜನವಿರೋಧಿ ನೀತಿಗಳನ್ನು ಜಾರಿಗೆ ತರುವ ಜೊತೆಗೆ ದೇಶದ ಪ್ರಜಾಪ್ರಭುತ್ವದ ಹಕ್ಕನ್ನು ಕಸಿಯುವುದು ಮತ್ತು ದೇಶದ ವಿವಿಧ ಭಾಷೆ ಆಚಾರ ವಿಚಾರ ಸಂಸ್ಕೃತಿಯ ಮೇಲೆ ದಾಳಿ ನಡೆಸಿ ಸಮಾಜದಲ್ಲಿ ಬಹುತ್ವವನ್ನು ಕದಡುವ ಕೆಲವು ದುಷ್ಟಶಕ್ತಿಗಳಿಗೆ ಒಗ್ಗಟ್ಟಿನಿಂದ ಉತ್ತರ ನೀಡಬೇಕಿದೆ ಸಂವಿಧಾನದ ಮೌಲ್ಯಗಳನ್ನು ಗಟ್ಟಿಗೊಳಿಸಬೇಕಿದೆ ದ್ವೇಷಕ್ಕೆ ಪ್ರೀತಿಯೇ ಉತ್ತರವಾಗಬೇಕು ಎಂದರು. ಈ ಸಂಧರ್ಭದಲ್ಲಿ ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್ . ಶಂಕರಯ್ಯ. ಕೃಷ್ಣಮೂರ್ತಿ. ಕೆಂಪಣ್ಣ. ಮೋಹನ್. ರಾಮಕೃಷ್ಣಪ್ಪ. ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆಯ ಸಂಚಾಲಕರಾದ ಅನುಪಮಾ. ಮಹಿಳಾ ಮುಖಂಡರಾದ ಶಾರದಮ್ಮ. ಹನುಮಕ್ಕ. ಸಂಧ್ಯಾ. ವಸಂತಮ್ಮ . ಎಸ್ ಎನ್ ಪಾಳ್ಯದ ಗುಲ್ನಾಜ್. ಸಲ್ಮಾಬಾನು. ಆಯಿಷ. ಮರಳೂರು ದಿಣ್ಣೆ. ಅಬೀಬ್ ಉನ್ನಿಸ. ಮುಬಾರಕ್. ಮುಂತಾದವರು. ಮುಸಲ್ಮಾನ್ ಭಾಂದವರು ಭಾಗವಹಿಸಿದ್ದರು.

Call Us Now
WhatsApp