ಕೂಲಿ ಕೆಲಸಗಾರನ ಮಗಳು ಪಿ ಯು ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ.ತುಮಕೂರು – ನಗರದ ಸಿಮೆಂಟ್ ಗೋಡೌನ್ ನಲ್ಲಿ ಹಮಾಲಿ ಕೆಲಸ ಮಾಡುವ ಸಿರಾಜ್ ಎಂಬುವವರ ಮಗಳು ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 92(551) ರಷ್ಟು ಅಂಕ ಪಡೆಯುವ ಮೂಲಕ ಪೋಷಕರಿಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾಳೆ

ಕೂಲಿ ಕೆಲಸಗಾರನ ಮಗಳು ಪಿ ಯು ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ.ತುಮಕೂರು – ನಗರದ ಸಿಮೆಂಟ್ ಗೋಡೌನ್ ನಲ್ಲಿ ಹಮಾಲಿ ಕೆಲಸ ಮಾಡುವ ಸಿರಾಜ್ ಎಂಬುವವರ ಮಗಳು ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 92(551) ರಷ್ಟು ಅಂಕ ಪಡೆಯುವ ಮೂಲಕ ಪೋಷಕರಿಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾಳೆ. ತುಮಕೂರು ನಗರದ ಕುಣಿಗಲ್ ರಸ್ತೆಯ ಸಿಮೆಂಟ್ ಗೋಡೌನ್ ನಲ್ಲಿ ಕೆಲಸ ಮಾಡುವ ಸಿರಾಜ್ ಎಂಬುವವರ ಮಗಳು ಆಲಿಯಾ ತುಮಕೂರು ನಗರದ ಅನನ್ಯ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡಿ ಶೇಕಡ 92 ರಷ್ಟು ಅಂಕ ಪಡೆಯುವ ಮೂಲಕ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿನಿ ಆಲಿಯಾ ತಂದೆ ಸಿರಾಜ್ ರವರು ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದು ಮಗಳು ಉತ್ತಮ ವಿದ್ಯಾಭ್ಯಾಸಕ್ಕಾಗಿ ತಾನು ಹಗಲಿರುಳು ಶ್ರಮಿಸುತಿದ್ದೆ ಪ್ರತಿನಿತ್ಯ ಬೆಳಗ್ಗೆಯಿಂದ ಸಂಜೆಯವರೆಗೂ ಸಿಮೆಂಟ್ ಗೋಡನ್ನಲ್ಲಿ ಕೂಲಿ ಕೆಲಸ ನಿರ್ವಹಿಸಿ ಬಿಡುವಿನ ವೇಳೆಯಲ್ಲಿ ಆಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಾ ಮಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎನ್ನುವ ಮಹದಾಸೆ ಹೊತ್ತು ಮಗಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದೆ ಆದರೆ ಇಂದು ನನ್ನ ಮಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವುದು ನಿಜಕ್ಕೂ ನಮ್ಮ ಕುಟುಂಬಕ್ಕೆ ಸಂತಸದ ತಂದಿದೆ ಎಂದು ಮಗಳ ಸಾಧನೆಯನ್ನ ಸ್ನೇಹಿತರು ಹಾಗೂ ಕುಟುಂಬದವರಿಗೆ ಸಿಹಿ ಹಂಚುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಉತ್ತಮ ಸಾಧನೆ ಮಾಡಿರುವ ಆಲಿಯ ಮಾತನಾಡಿ ತಂದೆಯ ದಿನನಿತ್ಯದ ಶ್ರಮ ನನ್ನ ಸಾಧನೆಗೆ ಮೆಟ್ಟಿಲಾಗಿದ್ದವು ಕಾಲೇಜಿನ ಉತ್ತಮ ಪಾಠ ಪ್ರವಚನ ಹಾಗೂ ಮನೆಯ ಉತ್ತಮ ವಾತಾವರಣ ಇಂದಿನ ಸಾಧನೆಗೆ ಕಾರಣ ಎಂದಿದ್ದಾರೆ.

ತುಮಕೂರು: ಹೊಸ ಬಡಾವಣೆ ಪೊಲೀಸ್‌ ಠಾಣೆಯ ಮಹಿಳಾ PSI ನಾಪತ್ತೆ; ಮಗಳಿಂದ ದೂರು ದಾಖಲುಪಿಎಸ್‌ಐ ಮಂಗಳಮ್ಮ ಅವರಿಗಾಗಿ ತೀವ್ರ ಹುಡುಕಾಟ ನಡೆಸಿದ ಮಗಳು ಪತ್ತೆಯಾಗದಿದ್ದಾಗ ಹೊಸ ಬಡಾವಣೆ ಠಾಣೆಗೆ ತೆರಳಿ ತಾಯಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ
ತುಮಕೂರು: ಹೊಸ ಬಡಾವಣೆ ಪೊಲೀಸ್‌ ಠಾಣೆಯ ಮಹಿಳಾ PSI ನಾಪತ್ತೆ; ಮಗಳಿಂದ ದೂರು ದಾಖಲುಪಿಎಸ್‌ಐ ಮಂಗಳಮ್ಮ ಅವರಿಗಾಗಿ ತೀವ್ರ ಹುಡುಕಾಟ ನಡೆಸಿದ ಮಗಳು ಪತ್ತೆಯಾಗದಿದ್ದಾಗ ಹೊಸ ಬಡಾವಣೆ ಠಾಣೆಗೆ ತೆರಳಿ ತಾಯಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ

ತುಮಕೂರು: ಹೊಸ ಬಡಾವಣೆ ಪೊಲೀಸ್‌ ಠಾಣೆಯ ಮಹಿಳಾ PSI ನಾಪತ್ತೆ; ಮಗಳಿಂದ ದೂರು ದಾಖಲುಪಿಎಸ್‌ಐ ಮಂಗಳಮ್ಮ ಅವರಿಗಾಗಿ ತೀವ್ರ ಹುಡುಕಾಟ ನಡೆಸಿದ ಮಗಳು, ಪತ್ತೆಯಾಗದಿದ್ದಾಗ ಹೊಸ ಬಡಾವಣೆ ಠಾಣೆಗೆ ತೆರಳಿ, ತಾಯಿ, ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ. ತುಮಕೂರು: ತುಮಕೂರಿನ ಹೊಸ ಬಡಾವಣೆ ಪೊಲೀಸ್‌ ಠಾಣೆಯ ಪಿಎಸ್‌ಐ ಮಂಗಳಮ್ಮ ಅವರು ಕಾಣೆಯಾಗಿದ್ದಾರೆ.ಪಿಎಸ್‌ಐ ಮಂಗಳಮ್ಮ ಅವರಿಗಾಗಿ ತೀವ್ರ ಹುಡುಕಾಟ ನಡೆಸಿದ ಮಗಳು, ಪತ್ತೆಯಾಗದಿದ್ದಾಗ ಹೊಸ ಬಡಾವಣೆ ಠಾಣೆಗೆ ತೆರಳಿ, ತಾಯಿ, ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ.ಏಪ್ರಿಲ್ 3 ರಂದು ಡಿವೈಎಸ್‌ಪಿ ಕಚೇರಿಯಲ್ಲಿ ಸಭೆಗೆ ಮಂಗಳಮ್ಮ ಬಂದಿದ್ದರು. ಈ ವೇಳೆ ಮನೆಯಿಂದ ಕರೆ ಬಂದಿತ್ತು. ಬಳಿಕ ಅಲ್ಲಿಂದ ಠಾಣೆಗೆ ತೆರಳಿ, ಸಮವಸ್ತ್ರ ಬದಲಿಸಿ, ಸಿವಿಲ್‌ ಡ್ರೆಸ್‌ನಲ್ಲಿ ಹೊರಗೆ ತೆರಳಿದ್ದರು. ಬಳಿಕ ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಇದರಿಂದ ಆತಂಕಗೊಂಡ ಮಗಳು, ಪೊಲೀಸರಿಗೆ ದೂರು ನೀಡಿದ್ದಾರೆ.ಇತ್ತೀಚೆಗಷ್ಟೇ ಮಂಗಳಮ್ಮ ಅವರ ಪುತ್ರಿಗೆ ಡಿವೋರ್ಸ್ ಆಗಿತ್ತು. ಕೆಲ ದಿನಗಳಿಂದ ತಾಯಿ, ಮಗಳು ಒಟ್ಟಿಗೆ ವಾಸವಿದ್ದರು. ಕೌಟುಂಬಿಕ ಕಲಹ ಹಿನ್ನೆಲೆ, ಮನನೊಂದು ಮನೆ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.ನಾಪತ್ತೆಯಾದ ಪಿಎಸ್‌ಐಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ನೊಂದವರಿಗೆ ನ್ಯಾಯ ಕೊಡಿಸೋದು ಪೊಲೀಸರ ಕರ್ತವ್ಯ ಇತ್ತೀಚೆಗೆ ಸೈಬ‌ರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ ಇದರ ನಿಯಂತ್ರಣಕ್ಕೆ ತರಬೇತಿ ಅಗತ್ಯ ಖಾದರ್

ನೊಂದವರಿಗೆ ನ್ಯಾಯ ಕೊಡಿಸೋದು ಪೊಲೀಸರ ಕರ್ತವ್ಯ

ಇತ್ತೀಚೆಗೆ ಸೈಬ‌ರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ತರಬೇತಿ ಅಗತ್ಯ : ಖಾದರ್

ಈ ໖.

ದಿನ

ತುಮಕೂರು, ಏ. 2- ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪೊಲೀಸ್ ಧ್ವಜ ಬಿಡುಗಡೆ ಮಾಡಿದ ನಿವೃತ್ತ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಖಾದ‌ರ್ ಗೌರವ * ರಕ್ಷೆ ಸ್ವೀಕರಿಸಿ ಮಾತನಾಡಿ, ನಾನು ಸಬ್ ಇನ್ಸ್‌ಪೆಕ್ಟರ್ ಆಗಿದ್ದ ವೇಳೆ ಸಿರಾ ಬಳಿ ನಡೆದ ಶೇಂಗಾ ಬೆಳೆ ರೈತರ ಪ್ರತಿಭಟನೆ ಸಂದರ್ಭದಲ್ಲಿ ಮೇಲಾಧಿಕಾರಿಗಳ ಅಸಮರ್ಪಕ ನಿರ್ವಹಣೆಯಿಂದ ದಕ್ಷ, ಪ್ರಾಮಾಣಿಕ ಪೊಲೀಸ್ ತನ್ನ ನಡೆದ ಅಧಿಕಾರಿಯಾಗಿದ್ದ ಸಾಯಿಪ್ರಕಾಶ್ ರವರ ದಿಗೆ ಹತ್ಯೆಯಾಯಿತು ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

໖. ದಿಗೆ ಮ’

ನಾನು ಸುಮಾರು 30 ವರ್ಷಗಳ ಕಾಲ ತುಮಕೂರು ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇನೆ. ನನಗೆ ತುಮಕೂರು ಮಾತೃ ಜಿಲ್ಲೆಯಾಗಿ ಬಿಟ್ಟಿದೆ. ಅಷ್ಟರ ಮಟ್ಟಿಗೆ ನನ್ನ ಮತ್ತು ತುಮಕೂರಿನ ಸಂಬಂಧ

ಬೆಸೆದುಕೊಂಡಿದೆ ಎಂದರು.

ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧಗಳ ನಿಯಂತ್ರ ಮತ್ತು ಪತ್ತೆ ಎಲ್ಲವೂ ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ. ಇತ್ತೀಚೆಗೆ ನಿಯಂತ್ರಣ ಇಲ್ಲದೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಪರಾಧಗಳ ಪಟ್ಟಿಯಲ್ಲಿ ಸೈಬರ್ ಅಪರಾಧ ಮುಂಚೂಣಿಯಲ್ಲಿದೆ. ಇದರ ನಿಯಂತ್ರಕ್ಕೆ ಸಮರ್ಪಕವಾಗಿ ತರಬೇತಿ ಮತ್ತು ಸೌಲಭ್ಯಗಳ ಅಗತ್ಯವಿದೆ ಎಂದು ಅವರು ಹೇಳಿದರು.

ನೀಡಿದರು.

ಬಡವರು, ಅಸಹಾಯಕರು ಅವರ ಕೂಲಿ ಕೆಲಸ ಬಿಟ್ಟು ಪೊಲೀಸ್ ಠಾಣೆಗಳಿಗೆ ಅಲೆಯುವಂತಾಗಬಾರದು. ದಯವಿಟ್ಟು ಪೊಲೀಸರು ಅಸಹಾಯಕರಿಗೆ ಅಶಕ್ತರಿಗೆ, ಮಹಿಳೆಯರಿಗೆ, ವೃದ್ಧರಿಗೆ ಆದ್ಯತೆ ಮೇರೆಗೆ ಕೆಲಸ ಮಾಡಿಕೊಡಬೇಕು ಎಂದು ಅವರು ಹೇಳಿದರು.ಪೊಲೀಸರು ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸಬೇಕು. ಹಾಗಾಗಿ ಪ್ರತಿನಿತ್ಯವೂ ವ್ಯಾಯಾಮ, ಯೋಗಾಭ್ಯಾಸ, ಆಟೋಟಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ನೊಂದವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಡಬೇಕು. ಇದೊಂದು ಪುಣ್ಯದ ಕೆಲಸ ಎಂದರು.ಪೊಲೀಸ್ ಇಲಾಖೆಯಲ್ಲಿ ದಿನೇ ದಿನೇ ಕೆಲಸ ಹೆಚ್ಚಾಗುತ್ತಲೇ ಇರುತ್ತದೆ. ಯಾವುದೇ ಕಾರಣಕ್ಕೂ ಕಡಿಮೆಯಾಗುವುದಿಲ್ಲ. ಆದ್ದ-ರಿಂದ ಆದ್ಯತೆ ಮೇರೆಗೆ ಕೆಲಸ ಮಾಡಬೇಕು. ಅದರಲ್ಲೂ ನೊಂದವರಿಗೆ, ಅನ್ಯಾಯಕ್ಕೆ ಒಳಗಾದವರಿಗೆ ಆದ್ಯತೆ ಮೇರೆಗೆ ಪೊಲೀಸರು ಕೆಲಸ ಮಾಡಿಕೊಡಬೇಕು ಎಂದು ಸಲಹೆ

ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., 1965 ರ ಏ. 2 ರಂದು ಪೊಲೀಸ್ ಧ್ವಜ ದಿನಾಚರಣೆ ಜಾರಿಗೆ ಬಂತು. ಪೊಲೀಸ್ ಇಲಾಖೆಯಲ್ಲಿ ಒತ್ತಡದಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದವರಿಗೆ ಕಲ್ಯಾಣ ಕಾರ್ಯಕ್ರಮ ಹಾಕಿಕೊಳ್ಳುವಂತಹ ಕಾರ್ಯಕ್ರಮ ಇದಾಗಿದೆ ಎಂದರು.

ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ನಿಧಿ ಸಂಗ್ರಹ ಮಾಡಲಾಗುತ್ತದೆ. ಈ ನಿಧಿ ಸಂಗ್ರಹ ಮಾಡಿದ ಹಣವನ್ನು ನಿವೃತ್ತ ಪೊಲೀಸ್

ಅಧಿಕಾರಿಗಳ ಕ್ಷೇಮಾಭಿವೃದ್ಧಿಗೆ ಹಾಗೂ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿಗೆ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ನಿವೃತ್ತ ಪೊಲೀಸ್ ಕಲ್ಯಾಣ ಖಾತೆಯ ನಿಶ್ಚಿತ ಠೇವಣಿಯಲ್ಲಿ 20,40000 ರೂ. ಉಳಿತಾಯ ಖಾತೆಯಲ್ಲಿ 23,26,562 ರೂ. ಇರುತ್ತದೆ. 2025ನೇ ಸಾಲಿನಲ್ಲಿ ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿದ 26.95.250 ರೂ. ಸಂಗ್ರಹವಾಗಿರುತ್ತದೆ. ಈ ಪೈಕಿ ಶೇ. 50 ರಷ್ಟು 13,47625 ರೂ.ಗಳನ್ನು ಕೇಂದ್ರ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ನಿಧಿಗೆ ನೀಡಲಾಗಿರುತ್ತದೆ. ಉಳಿದ ಶೇ. 50 ರಷ್ಟನ್ನು ಈ ಘಟಕದ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ನಿಧಿಗೆ ಜಮಾ ಮಾಡಲಾಗಿದೆ ಎಂದರು.

ಸಮಾರಂಭದಲ್ಲಿ ಅಡಿಷನಲ್ ಎಸ್ಪಿಗಳಾದ ಗೋಪಾಲ್, ಪುರುಷೋತ್ತಮ್, ಡಿವೈಎಸ್ಪಿ ಚಂದ್ರಶೇಖರ್, ನಿವೃತ್ತ ಅಡಿಷನಲ್ ಎಸ್ಪಿ ಅಬ್ದುಲ್ ಖಾದ‌ರ್ ಪತ್ನಿ ತಬುಸಮ್ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳು ಅಧಿಕಾರಿಗಳು, ಸಿಬ್ಬಂದಿ ಹಾಗೂ ನಿವೃತ್ತ ಪೊಲೀಸರು ಭಾಗವಹಿಸಿದ್ದರು.

ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕೇಂದ್ರ ಸರ್ಕಾರ ಜಾರಿಗೆ ತಂದ ನಾಲ್ಕು ಕಾರ್ಮಿಕ ಕೋಡ್‌ಗಳನ್ನು ವಿರೋಧಿಸಿ ಸಿಐಟಿಯು ಹಟ್ಟಿ ಘಟಕದ ನೇತೃತ್ವದಲ್ಲಿ ಬುಧವಾರ ಹಟ್ಟಿ ಗಣಿ ಮುಂಭಾಗದಲ್ಲಿ ಕಪ್ಪು ದಿನಾಚರಣೆ ಪ್ರತಿಭಟನೆ

*ಹಟ್ಟಿ ಗಣಿಯಲ್ಲಿ ನಾಲ್ಕು ಕಾರ್ಮಿಕ ಕೋಡ್‌ಗಳಿಗೆ ವಿರೋಧಿಸಿ ಕಪ್ಪು ದಿನಾಚರಣೆ ಪ್ರತಿಭಟನೆ*ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕೇಂದ್ರ ಸರ್ಕಾರ ಜಾರಿಗೆ ತಂದ ನಾಲ್ಕು ಕಾರ್ಮಿಕ ಕೋಡ್‌ಗಳನ್ನು ವಿರೋಧಿಸಿ ಸಿಐಟಿಯು ಹಟ್ಟಿ ಘಟಕದ ನೇತೃತ್ವದಲ್ಲಿ ಬುಧವಾರ ಹಟ್ಟಿ ಗಣಿ ಮುಂಭಾಗದಲ್ಲಿ ಕಪ್ಪು ದಿನಾಚರಣೆ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಸರ್ಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಸುಧಾರಣೆ ಹೆಸರಿನಲ್ಲಿ ಕಾರ್ಮಿಕರ ಹಕ್ಕು ಮುಂತಾದ ಹಲವು ಸೌಲಭ್ಯಗಳನ್ನು ಕಸಿದು, ಕೆಲಸದ ಹೊರೆ ಹೆಚ್ಚು ಮಾಡುವ ನಿಟ್ಟಿನಲ್ಲಿ ಈ ಕೋಡ್‌ಗಳನ್ನು ಜಾರಿಗೆ ತಂದಿದೆ ಎಂದು ಕಾರ್ಮಿಕ ಮುಖಂಡರು ಆರೋಪಿಸಿದರು.*ಮುಖಂಡರ ಹೇಳಿಕೆ:*ಕಾರ್ಮಿಕ ವರ್ಗದ ಹಕ್ಕುಗಳನ್ನು ಕಸಿದುಕೊಳ್ಳುವ ಈ ಕಾರ್ಮಿಕ ಕೋಡ್‌ಗಳು ಕಾರ್ಮಿಕರ ಶೋಷಣೆಗೆ ನಾಂದಿಯಾಗಲಿವೆ. ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.’ನಮ್ಮ ಹಕ್ಕು ನಮ್ಮ ಜೀವನಾಧಾರ’, ‘ಕಾರ್ಮಿಕ ಕೋಡ್ ಹಿಂಪಡೆಯಿರಿ’ ಎಂಬ ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಯಿತು. ಸಿಐಟಿಯು ಜಿಲ್ಲಾ ಮುಖಂಡರಾದ ಮಲ್ಲಿಕಾರ್ಜುನ, ರಮೇಶ್ ಬಾಬು, ನಾಗರಾಜ್, ಗೋವಿಂದಪ್ಪ, ಮಂಜು, ಸಿದ್ದಪ್ಪ ಮಂಟೂರಕರ್, ಚಂದ್ರಶೇಖರ್ ಗುಂಟಿ, ಪಕ್ಕೀರಪ್ಪ ಚೌಡ್ಕರ್, ಜಗದೀಶ್ ಬಿಡದಿ, ಕಾಮಯ್ಯ ನಿವೇದಕರ್ ಗೌರವಲ್, ಕುಮಾರ್ ಮುನಿರಾಬಾದ್, ದೊಡ್ಡಪ್ಪ ಅಕ್ಕಪುರ, ಸಾಹೇಬ್, ಶ್ರೀಧರ್ ರೆಡ್ಡಿ, ರಾಜಣ್ಣ, ನಿಂಗಪ್ಪ, ವಾರೇಶ್ ಸೇರಿದಂತೆ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

ಅಭಿವೃದ್ಧಿಯ ಹರಿಕಾರರು ಹಾಗೂ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಮಾನಪ್ಪ ಡಿ ವಜ್ಜಲ್ ರವರು ಇಂದು ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಪೈದೊಡ್ಡಿ ಗ್ರಾಮದಲ್ಲಿ
ಅಭಿವೃದ್ಧಿಯ ಹರಿಕಾರರು ಹಾಗೂ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಮಾನಪ್ಪ ಡಿ ವಜ್ಜಲ್ ರವರು ಇಂದು ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಪೈದೊಡ್ಡಿ ಗ್ರಾಮದಲ್ಲಿ

ಅಭಿವೃದ್ಧಿಯ ಹರಿಕಾರರು ಹಾಗೂ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಮಾನಪ್ಪ ಡಿ ವಜ್ಜಲ್ ರವರು ಇಂದು ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಪೈದೊಡ್ಡಿ ಗ್ರಾಮದಲ್ಲಿ 2023-24ನೇ ಸಾಲಿನ ಶೈಕ್ಷಣಿಕ ಇಲಾಖೆಯ ಅನುದಾನದ ಅಡಿಯಲ್ಲಿ ನೂತನ ಸರ್ಕಾರಿ ಪ್ರೌಢ ಶಾಲೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.**ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಸುಜಾತ ಹೂನೂರು ಗುರುಗುಂಟಾ ಸಂಸ್ಥಾನ ರಾಜರಾದ ಶ್ರೀ ಸೋಮನಾಥ ನಾಯಕ ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.*

ಸಿದ್ಧಗಂಗೆಯ ಪುಣ್ಯಭೂಮಿಯಲ್ಲಿ ಆಧ್ಯಾತ್ಮದ ಅಲೆ!ಘನತೆವೆತ್ತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪತಿ ಮುರ್ಮು ಅವರ ಘನ ಉಪಸ್ಥಿತಿ ಹಾಗೂ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ

ಸಿದ್ಧಗಂಗೆಯ ಪುಣ್ಯಭೂಮಿಯಲ್ಲಿ ಆಧ್ಯಾತ್ಮದ ಅಲೆ!ಘನತೆವೆತ್ತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪತಿ ಮುರ್ಮು ಅವರ ಘನ ಉಪಸ್ಥಿತಿ ಹಾಗೂ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ನಡೆದ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 119ನೇ ಜಯಂತಿ ಹಾಗೂ ಗುರುವಂದನ ಮಹೋತ್ಸವದಲ್ಲಿ ಭಾಗವಹಿಸಿದೆ.ಸಿದ್ಧಗಂಗಾ ಮಠ ಎಂದರೆ ಕೇವಲ ಧಾರ್ಮಿಕ ಕೇಂದ್ರವಲ್ಲ, ಅದು ಹಸಿದವರಿಗೆ ಅನ್ನ ಸಿಗುವ ಸ್ಥಳ, ಬಡ ಮಕ್ಕಳಿಗೆ ಶಿಕ್ಷಣ ಸಿಗುವ ಸ್ಥಳ, ಆಶ್ರಯವಿಲ್ಲದವರಿಗೆ ಮನೆ ಸಿಗುವ ಸ್ಥಳ, ಮೌಲ್ಯವಿಲ್ಲದ ಬದುಕಿಗೆ ದಿಕ್ಕು ಸಿಗುವ ಸ್ಥಳ. ಇದು ನಿಜಕ್ಕೂ ಮಾನವೀಯತೆಯ ವಿಶ್ವವಿದ್ಯಾಲಯ.ಉತ್ತಮ ಶಿಕ್ಷಣ, ಉನ್ನತ ಸಂಸ್ಕಾರ, ಉದಾತ್ತ ಜೀವನದ ದಾರಿ ತೋರಿದವರು ಶ್ರೀಗಳು.ಪೂಜ್ಯರು ನಮಗೆ ಬೋಧಿಸಿದ ಅತ್ಯಂತ ಮಹತ್ವದ ಸಂದೇಶವೆಂದರೆ ಅನ್ನ ದಾಸೋಹ, ಅಕ್ಷರ ದಾಸೋಹ, ಆಧ್ಯಾತ್ಮಿಕ ದಾಸೋಹ. ಈ ಮೂರು ದಾಸೋಹಗಳು ಕೇವಲ ಪದಗಳಲ್ಲ, ಅವು ಸಮಾಜ ನಿರ್ಮಾಣದ ಮೂರು ಸ್ತಂಭಗಳು.ಕಾರ್ಯಕ್ರಮದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರಚಂದ್ ಗೆಹ್ಲೋಟ್, ಗೃಹ ಸಚಿವರಾದ ಡಾ. ಜಿ. ಪರಮೇಶ್ವರ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಸಚಿವರಾದ ಎಂ.ಬಿ.ಪಾಟೀಲ, ಅಪಾರ ಸಂಖ್ಯೆಯ ಸಿದ್ದಗಂಗಾ ಮಠದ ಭಕ್ತರು ಉಪಸ್ಥಿತರಿದ್ದರು.

ಮಾದಿಗ ಜನಾಂಗದ ಕುಲಮೂಲಗಳ ಅದ್ಯಯನ ಅವಶ್ಯಕವಾಗಿದ್ದು ಸಮಾಜ ಆರ್ಥಿಕತೆಯತ್ತ ಮುನ್ನಡೆಯಬೇಕಿದೆ: ಎ.ನರಸಿಂಹಮೂರ್ತಿಇಂದು ತುಮಕೂರು ನಗರದ ಸುಧಾ ಟೀ ಹೌಸ್‌ನಲ್ಲಿ ರಾಷ್ಟ್ರೀಯ ಮಾದಿಗ ಪ್ರಚಾರಾಂದೋಲನ
ಮಾದಿಗ ಜನಾಂಗದ ಕುಲಮೂಲಗಳ ಅದ್ಯಯನ ಅವಶ್ಯಕವಾಗಿದ್ದು ಸಮಾಜ ಆರ್ಥಿಕತೆಯತ್ತ ಮುನ್ನಡೆಯಬೇಕಿದೆ: ಎ.ನರಸಿಂಹಮೂರ್ತಿಇಂದು ತುಮಕೂರು ನಗರದ ಸುಧಾ ಟೀ ಹೌಸ್‌ನಲ್ಲಿ ರಾಷ್ಟ್ರೀಯ ಮಾದಿಗ ಪ್ರಚಾರಾಂದೋಲನ

ಮಾದಿಗ ಜನಾಂಗದ ಕುಲಮೂಲಗಳ ಅದ್ಯಯನ ಅವಶ್ಯಕವಾಗಿದ್ದು ಸಮಾಜ ಆರ್ಥಿಕತೆಯತ್ತ ಮುನ್ನಡೆಯಬೇಕಿದೆ: ಎ.ನರಸಿಂಹಮೂರ್ತಿಇಂದು ತುಮಕೂರು ನಗರದ ಸುಧಾ ಟೀ ಹೌಸ್‌ನಲ್ಲಿ ರಾಷ್ಟ್ರೀಯ ಮಾದಿಗ ಪ್ರಚಾರಾಂದೋಲನ ಸಮಿತಿಯಿಂದ ಜಿಲ್ಲೆಯ ಮಾದಿಗ ಜನಾಂಗದ ಪ್ರಸ್ತುತ ಸಾಮಾಜಿಕ ಪರಿಸ್ಥಿತಿ ಕುರಿತು ಸಮಾಲೋಚನಾ ಸಭೆ ನಡೆಸಲಾಯಿತು. ಮಾದಿಗ ಜನಾಂಗದ ಶ್ರೇಯೋಭಿವೃದ್ಧಿಯನ್ನು ಒಳಗೊಂಡಿರುವ ಕರಪತ್ರವನ್ನು ಪ್ರಮುಖಂಡರುಗಳು ಬಿಡುಗಡೆಗೊಳಿಸಿದರು. ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಎಸ್.ಸಿ/ಎಸ್.ಟಿ ಅಟ್ರಾಸಿಟಿ ತಡೆ ಮೇಲುಸ್ತುವಾರಿ ಸಮಿತಿಯ ಮಾಜಿ ಸದಸ್ಯರಾದ ಎ.ನರಸಿಂಹಮೂರ್ತಿ ತುಮಕೂರು ಜಿಲ್ಲೆಯಲ್ಲಿ ಮಾದಿಗ ಜನಾಂಗದ ಕುಲಮೂಲಗಳ ಅದ್ಯಯನವನ್ನು ತುಮಕೂರು ವಿಶ್ವವಿದ್ಯಾನಿಲಯದ ಡಾ|| ಬಾಬೂ ಜನಜೀವನರಾಮ್‌ ಅದ್ಯಯನ ಕೇಂದ್ರ ಕೈಗೊಳ್ಳಬೇಕೆಂದು ಅಭಿಪ್ರಾಯಿಸಿದರು. ಜಿಲ್ಲೆಯಲ್ಲಿ ಮಾದಿಗರ ಮೇಲಿನ ಜಾತಿ ಆಧಾರಿತ ದೌರ್ಜನ್ಯಗಳು ಹೆಚ್ಚುತ್ತಲೆ ಇವೆ, ಅಟ್ರಾಸಿಟಿ ಕಾಯಿದೆ ಕುರಿತು ಗ್ರಾಮ ಮಟ್ಟದಿಂದ ಜಾಗೃತಿಯ ಕಾರ್ಯಗಳಾಗಬೇಕಿವೆ. ನಗರ ಪ್ರದೇಶಗಳಲ್ಲಿರುವ ಕನಿಷ್ಟ 5 ಮಾದಿಗ ಕಾಲೋನಿಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸುವ ಮೂಲಕ ಶಾಲೆಯಿಂದ ಹೊರಗುಳಿಯುತ್ತಿರುವ ಮಕ್ಕಳ ಪ್ರಾಮಣವನ್ನು ಕಡಿಮೆ ಮಾಡಬೇಕಿದೆ ಹಾಗೆಯೇ ನಗರ ಪ್ರದೇಶದಲ್ಲಿ ಮಾದಿಗ ಮಹಿಳೆಯರು ಅನುಭವಿಸುತ್ತಿರುವ ಸೂಕ್ಷ್ಮವಾದ ಸಮಸ್ಯೆಗಳ ಮೇಲೆ ಗಮನಹರಿಸಬೇಕಿದ್ದು ಒಟ್ಟಾರೆ ಜನಾಂಗದ ಸಾಂಸ್ಕೃತಿಕ ಮತ್ತು ಸಮಾಜ ಆರ್ಥಿಕ ಅಭಿವೃದ್ಧಿಯತ್ತ ಮುನ್ನಡೆಯುವ ಕಾರ್ಯಕ್ರಮಗಳನ್ನು ಸಮಿತಿ ಹಮ್ಮಿಕೊಳ್ಳಬೇಕೆಂದು ಸಲಹೆ ಸೂಚಿಸಿದರು.ಮುಖಂಡರಾದ ಗೋಪಾಲ್‌ ಅವರು ಮಾತನಾಡಿ ಒಳಮೀಸಲಾತಿ ಪಡೆದುಕೊಳ್ಳಲು ಜಾತಿ ಪಾತ್ರ ಪ್ರಮುಖವಾಗಿದ್ದು ಮಾದಿಗ ಸಂಬಂಧಿತ ಜಾತಿಗಳು ತಮ್ಮ ಮೂಲ ಜಾತಿಗಳ ಹೆಸರಿನಲ್ಲೇ ಪ್ರಮಾಣಪತ್ರಗಳನ್ನು ಪಡೆದುಕೊಳ್ಳಲು ಮುಂದಾಗಬೇಕೆಂಬುದನ್ನು ಸಂಸ್ಥಾಪನ ಅಧ್ಯಕ್ಷರಾದ ಕುಮಾರ್‌ ಮಾದರ್‌ ಕಳೆದ 10 ವರ್ಷಗಳ ಹಿಂದೆಯೇ ಪ್ರಸ್ತಾಪಿಸಿ ಅದರ ಅನುಷ್ಟಾನಕ್ಕೆ ಸಹಕರಿಸಿದ್ದರೆಂದು ನೆನದರು. ತುಮಕೂರು ಜಿಲ್ಲಾ ಸಫಾಯಿ ಕರ್ಮಚಾರಿಗಳ ಕಾವಲು ಸಮಿತಿಯ ಸಿದ್ದಲಿಂಗಯ್ಯ ಅವರು ಮಾತನಾಡಿ ಅಟ್ರಾಸಿಟಿ ಆದ ಸಂದರ್ಭದಲ್ಲಿ ಬಹುಮುಖ್ಯವಾಗಿ ನಮ್ಮ ಜನರು FIR ಅನ್ನು ಪರಿಣಾಮಕಾರಿಯಾಗಿ ದಾಖಲು ಮಾಡುವಂತೆ ತರಬೇತಿ ನೀಡಬೇಕಿದೆ ಎಂದು ಅಭಿಪ್ರಾಯಿಸಿದರು. ಯುವ ಮುಖಂಡರಾದ ಶರಣ್‌ ಅಟ್ರಾಸಿಟಿ ಕಾಯಿದೆಯ ವ್ಯಾಪಕ ಪ್ರಚಾರ ಸೇರಿದಂತೆ ತುಮಕೂರು ವಿ.ವಿಯ ಬಾಬು ಜಗಜೀವನ ರಾಮ್‌ ಅದ್ಯಯನ ಕೇಂದ್ರದಿಂದ ಜಿಲ್ಲೆಯ ಮಾದಿಗ ಜನಾಂಗದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಅದ್ಯಯನ ನಡೆಸಲು ಮುಂದಾಗುವಂತೆ ಮಾಡಬೇಕಿದೆ ಎಂದರು. ರಾಷ್ಟ್ರೀಯ ಮಾದಿಗ ಪ್ರಚಾರಾಂದೋಲನದ ಕಾರ್ಯದರ್ಶಿಗಳಾದ ತೇಜಸ್‌ ಕುಮಾರ್‌ ಪ್ರಾಸ್ತಾವಿಕನ್ನಾಡಿದರು ಮತ್ತು ಸಂಯೋಜನೆಯನ್ನು ಸಂಘಟನಾ ಕಾರ್ಯದರ್ಶಿಯಾದ ಮನೋಜ್‌ ಕುಮಾರ್ ವಹಿಸಿಕೊಂಡಿದ್ದರು.ಈ ಸಂದರ್ಭದಲ್ಲಿ ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆಯ ಅನುಪಮ, ಯುವಜನರಾದ ಕಿಶೋರ್‌, ನಿಖಿಲ್ ಮೋಹನ್‌, ಕೆಂಪರಾಜು, ಆಕಾಶ್‌ ಮತ್ತು ಚಿಕ್ಕಓಬಳಯ್ಯ ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತುಮಕೂರು ತುಮಕೂರು ಜಿಲ್ಲಾ ರಂಗಭೂಮಿ ಕಲಾವಿದರ ಸಂಘ ಮತ್ತು ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು ಬೆಂಗಳೂರು ಇವರ ಆಶಯದಲ್ಲಿ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತುಮಕೂರು ತುಮಕೂರು ಜಿಲ್ಲಾ ರಂಗಭೂಮಿ ಕಲಾವಿದರ ಸಂಘ ಮತ್ತು ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು ಬೆಂಗಳೂರು ಇವರ ಆಶಯದಲ್ಲಿ ಕನ್ನಡ ರಂಗಭೂಮಿ ವೃತ್ತಿ ಮತ್ತು ಹವ್ಯಸಿ ಈ ಎರಡು ಕ್ಷೇತ್ರದಲ್ಲಿ ಅಸೀಮ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಾದ ಕಲಾಶ್ರೀ ಡಾ. ಲಕ್ಷ್ಮಣ್ ದಾಸ್ ರವರ ಅನುಪಮಾ ಸಾದನೆಗಾಗಿ ದಿನಾಂಕ 29/03/2026 ನೇ ಭಾನುವಾರ ನಡೆಯಲಿರುವ ಅಭಿನಂದ ಸಮಾರಂಭ ಯಶಸ್ವಿ ಆಗಲಿ ಎಂದು ಎಲ್ಲಾ ಕಲಾವಿದರು ಹಾಗೂ ರಂಗಭೂಮಿ ಕಲಾವಿದರು ಹಾಗೂ ಎಲ್ಲಾ ನಾಗರಿಕರು ಸಂಘ ಸಂಸ್ಥೆಗಳು ಶುಭ ಹಾರೈಸೋಣ ಕಾರ್ಯಕ್ರಮ ಯಶಸ್ವಿಗೊಳಿಸೋಣ ಸಮಯ ಬೆಳಿಗ್ಗೆ 10.30 ಗಂಟೆಯಿಂದ ಸಂಜೆ 5:30ರ ವರೆಗೆಸರ್ವರಿಗೂ ಆದರದ ಸುಸ್ವಾಗತ ಗುಬ್ಬಿ ವೀರಣ್ಣ ಕಲಾಕ್ಷೇತ್ರ ತುಮಕೂರು

೨೯ರಂದು ಕಲಾಶ್ರೀ ಡಾ.ಲಕ್ಷö್ಮಣದಾಸ್ ಅಭಿನಂದನಾ ಸಮಾರಂಭದಿನವಿಡೀ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿಗೆ ಗೌರವ ಸಮರ್ಪಣೆತುಮಕೂರು: ಹಿರಿಯ ರಂಗಕಲಾವಿದರಾದ ಕಲಾಶ್ರೀ ಡಾ. ಲಕ್ಷö್ಮಣದಾಸ್ ಅವರ ಅಭಿನಂದನಾ ಸಮಾರಂಭ
೨೯ರಂದು ಕಲಾಶ್ರೀ ಡಾ.ಲಕ್ಷö್ಮಣದಾಸ್ ಅಭಿನಂದನಾ ಸಮಾರಂಭದಿನವಿಡೀ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿಗೆ ಗೌರವ ಸಮರ್ಪಣೆತುಮಕೂರು: ಹಿರಿಯ ರಂಗಕಲಾವಿದರಾದ ಕಲಾಶ್ರೀ ಡಾ. ಲಕ್ಷö್ಮಣದಾಸ್ ಅವರ ಅಭಿನಂದನಾ ಸಮಾರಂಭ
೨೯ರಂದು ಕಲಾಶ್ರೀ ಡಾ.ಲಕ್ಷö್ಮಣದಾಸ್ ಅಭಿನಂದನಾ ಸಮಾರಂಭದಿನವಿಡೀ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿಗೆ ಗೌರವ ಸಮರ್ಪಣೆತುಮಕೂರು: ಹಿರಿಯ ರಂಗಕಲಾವಿದರಾದ ಕಲಾಶ್ರೀ ಡಾ. ಲಕ್ಷö್ಮಣದಾಸ್ ಅವರ ಅಭಿನಂದನಾ ಸಮಾರಂಭ ಈ ತಿಂಗಳ ೨೯ರಂದು ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಏರ್ಪಾಟಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ರಂಗಭೂಮಿ ಕಲಾವಿದರ ಸಂಘ, ಅಖಿಲ ಕರ್ನಾಟಕ ಕೀರ್ತನಾ ಕಲಾ ಪರಿಷತ್ ಹಾಗೂ ವಿವಿಧ ಸಂಘಸAಸ್ಥೆಗಳ ಸಹಯೋಗದಲ್ಲಿ ದಿನವಿಡೀ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಇದರ ಅಂಗವಾಗಿ ಗುರುವಾರ ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರ ಪೂರ್ವಭಾವಿ ಸಭೆ ನಡೆಯಿತು.ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕಸಾಪ ಅದ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ರಂಗಭೂಮಿ, ಕೀರ್ತನಾ ಕಲೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ. ಲಕ್ಷö್ಮಣದಾಸ್ ಅವರನ್ನು ಅಭಿನಂದಿಸುವ ಮೂಲಕ ಈ ಮೂರೂ ಕ್ಷೇತ್ರಗಳನ್ನೂ ಅಭಿನಂದಿಸಿ ಗೌರವಿಸುವ ಕಾರ್ಯಕ್ರಮವಾಗಿದೆ ಎಂದರು.೨೯ರAದು ಬೆಳಿಗ್ಗೆ ೧೦ ಗಂಟೆಗೆ ಕಲಾಶ್ರಿ ಡಾ. ಲಕ್ಷö್ಮಣದಾಸ್ ಅಭಿನಂದನಾ ಸಮಾರಂಭವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಉದ್ಘಾಟಿಸುವರು. ಶಾಸಕ ಜಿ.ಬಿ. ಜ್ಯೋತಿಗಣೇಶ್ ಅಧ್ಯಕ್ಷತೆಯಲ್ಲಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ದಿಕ್ಸೂಚಿ ಭಾಷಣ ಮಾಡುವರು. ಮಧ್ಯಾಹ್ನ ೧೧.೩೦ಕ್ಕೆ ಕಲಾಶ್ರೀ ಡಾ.ಲಕ್ಷö್ಮಣದಾಸ್ ಅವರ ಜೀವನ ಮತ್ತು ಸಾಧನೆ ಕುರಿತ ಗೋಷ್ಠಿಯಲ್ಲಿ ಸಾಹಿತಿ ಡಾ.ರಾಜಪ್ಪ ದಳವಾಯಿ ಅಧ್ಯಕ್ಷತೆ ವಹಿಸುವರು. ವಿವಿಧ ಗಣ್ಯರು ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡುವರು ಎಂದರು.ಮಧ್ಯಾಹ್ನ ೨ ಗಂಟೆಗೆ ಕಲಾಶ್ರೀ ಜಿ. ಶೀಲಾನಾಯ್ಡು ಅವರ ಅಧ್ಯಕ್ಷತೆಯಲ್ಲಿ ರಂಗಗೀತೆ ಗಾಯನ, ನಂತರ ಕಲಾಶ್ರೀ ಸೋಮಶೇಖರ ದಾಸ್ ಅಧ್ಯಕ್ಷತೆಯಲ್ಲಿ ಕಥಾಕೀರ್ತನೆ, ಸಂಜೆ ೪ ಗಂಟೆಗೆ ಡಾ. ಲಕ್ಷö್ಮಣದಾಸ್ ಅವರೊಂದಿಗೆ ಸಂವಾದ ಏರ್ಪಡಿಸಲಾಗಿದೆ. ಸಂಜೆ ೫ ಗಂಟೆಗೆ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಕೆ.ಎನ್. ರಾಜಣ್ಣ ಅವರು ಡಾ. ಲಕ್ಷö್ಮಣದಾಸ್ ಅವರನ್ನು ಸನ್ಮಾನಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮನೆ ಸಮಾರೋಪ ಭಾಷಣ ಮಾಡುವರು ಎಂದು ಕೆ.ಎಸ್. ಸಿದ್ಧಲಿಂಗಪ್ಪ ಹೇಳಿದರು.ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ರಂಗಭೂಮಿ, ಕಲಾಕೀರ್ತನೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ. ಲಕ್ಷö್ಮಣದಾಸ್ ಅವರು ತುಮಕೂರಿಗೆ ಕೀರ್ತಿ ತಂದಿದ್ದಾರೆ. ಇವರನ್ನು ಜಿಲ್ಲೆಯ ಎಲ್ಲರೂ ಗೌರವಿಸಿ ಅಭಿನಂದಿಸುವುದು ಕರ್ತವ್ಯ. ಡಾ.ಲಕ್ಷö್ಮಣದಾಸ್ ಅವರು ರಂಗಭೂಮಿ ಹಾಗೂ ಕೀರ್ತನಾ ಕಲೆಯನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇವರಿಂದ ಪ್ರೇರಿತರಾಗಿ ಅನೇಕ ಹೊಸ ಕಲಾವಿದರು ಕಲಾ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಲಕ್ಷö್ಮಣದಾಸ್ ಅವರ ಕಲಾ ಕೊಡುಗೆ ಅಪಾರ ಎಂದು ಹೇಳಿದರು.ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎನ್. ಶಿವಣ್ಣ, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ, ಹಿರಿಯ ಕಲಾವಿದರಾದ ಎಂ.ವಿ. ನಾಗಣ್ಣ, ವಸಂತಕುಮಾರ್, ಯೋಗಾನಂದಕುಮಾರ್, ವಿವಿಧ ಸಂಘಟನೆಗಳ ಮುಖಂಡರಾದ ನಟರಾಜಶೆಟ್ಟಿ, ಶಬ್ಬೀರ್ ಅಹ್ಮದ್, ಬೆಸ್ಟೆಕ್ಸ್ ರಾಮರಾಜು ಮೊದಲಾದವರು ಡಾ. ಲಕ್ಷö್ಮಣದಾಸ್ ಅವರನ್ನು ಅಭಿನಂದಿಸಿ ಮಾತನಾಡಿದರು.ಕನ್ನಡ ಸೇನೆ ಗೌರವಾಧ್ಯಕ್ಷ ಆರ್.ಎನ್. ವೆಂಕಟಾಚಲ, ಗುರುರಾಘವೇಂದ್ರ, ವಿಠಲ್, ಕನ್ನಡ ಮತ್ತು ಸಂಸ್ಕೃತಿ ವೇದಿಕೆಯ ಕನ್ನಡ ಪ್ರಕಾಶ್, ಕಲಾವಿದರ ಒಕ್ಕೂಟದ ಅಧ್ಯಕ್ಷ ವೀರೇಶ್ ಗುಬ್ಬಿ, ಮುಖಂಡರಾದ ರಾಮಚಂದ್ರರಾವ್, ನಾಗರಾಜು, ಬಸವರಾಜು, ತೇಜಸ್, ಇಮ್ರಾನ್ ಅಹ್ಮದ್, ಷಫಿ ಅಹ್ಮದ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.ನಂತರ ಜಿಲ್ಲಾ ಕಸಾಪ ಅದ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಕಲಾಶ್ರೀ ಡಾ. ಲಕ್ಷö್ಮಣದಾಸ್ ಅವರಿಗೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದರು.
ಪಾವಗಡ: ತಾಲೂಕಿನ ನಿಡಗಲ್ ಹೋಬಳಿಯ ವ್ಯಾಪ್ತಿಗೆ ಬರುವ ಸಿ.ಕೆ.ಪುರ ಗ್ರಾಮದಲ್ಲಿ ದಿನಾಂಕ 24 /3/2026 ರಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ನೇತೃತ್ವದಲ್ಲಿ ಬಹಳ ಅದ್ದೂರಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಪಾವಗಡ: ತಾಲೂಕಿನ ನಿಡಗಲ್ ಹೋಬಳಿಯ ವ್ಯಾಪ್ತಿಗೆ ಬರುವ ಸಿ.ಕೆ.ಪುರ ಗ್ರಾಮದಲ್ಲಿ ದಿನಾಂಕ 24 /3/2026 ರಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ನೇತೃತ್ವದಲ್ಲಿ ಬಹಳ ಅದ್ದೂರಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಜಿಲ್ಲಾಧಿಕಾರಿಗಳ ‘ಜನಸಂಪರ್ಕ ಸಭೆ’ಯು ಸಾರ್ವಜನಿಕರ ಅಹವಾಲುಗಳನ್ನು ಸಲ್ಲಿಸಲು ಯಶಸ್ವಿಯಾಯಿತು, ಜನರು ತಮ್ಮ ದೈನಂದಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿಗಳ ಮುಂದೆ ಸಾರ್ವಜನಿಕರು ಅವರವರ ಸಮಸ್ಯೆಗಳನ್ನು ಬಹಿರಂಗಪಡಿಸಿದರು, ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪನವರು ಜಿಲ್ಲಾ ಅಧಿಕಾರಿ ಶುಭಕಲ್ಯಾಣ ಮೇಡಂ ರವರಿಗೆ ದೂರಿನ ಪತ್ರ ಸಲ್ಲಿಸಲಾಯಿತು, ಮಾಜಿ ತಿಮ್ಮರಾಯಪ್ಪ ನವರ ಇವರ ಬೇಡಿಕೆಗಳು ಹೀಗಿತ್ತು ಪಾವಗಡ ತಾಲ್ಲೂಕಿನ ಈ ಕೆಳಕಂಡ ಕೆಲವು ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ.1. ಮರೂರು ಗ್ರಾಮದ ಪರಿಶಿಷ್ಠರಿಗೆ 1997-98ನೇ ಸಾಲಿನಲ್ಲಿ ಸರ್ಕಾರಿ ಗೋಮಾಳ ಸ.ನಂ.8. ಕಾಮತ್ತುಷ್ ಗಳಲ್ಲಿ ಜಮೀನು ಮಂಜೂರು ಮಾಡಿದ್ದು ಖಾತೆ ಪಹಣಿ ಆಗಿರುವುದು ಸರಿಯಷ್ಟೆ ಇದುವರೆಗೂ ಅವರವರ ಜಮೀನುಗಳನ್ನು ದುರಸ್ತಿ ಮಾಡಿಕೊಟ್ಟಿಲ್ಲ. ಸಣ್ಣ ಪುಟ್ಟ ಕಾರಣಗಳನ್ನು ಮುಂದೊಡ್ಡಿ ದುರಸ್ತಿಗಾಗಿ ಪರಿಶಿಷ್ಟ ಜಾತಿ ಬಡ ಕುಟುಂಬಗಳು ನಿರಂತರ ಹೋರಾಟ ಮಾಡಿಕೊಂಡು ಕಂದಾಯ ಇಲಾಖೆಗೆ ಅಲೆದಾಡುತ್ತಿದ್ದಾರೆ, ಶೀಘ್ರವಾಗಿ ಬಗೆಹರಿಸಿ ಕೊಡುವುದು.2. ನ್ಯಾಯದಗುಂಟೆ ಗ್ರಾಮದ ವ್ಯಾಪ್ತಿಯಲ್ಲಿ MSIL ಅಂಗಡಿಯನ್ನು ತೆರೆಯಬಾರದೆಂದು ಗ್ರಾಮ ಪಂಚಾಯಿತಿಯಲ್ಲಿ ಠರಾವು ಮಾಡಿದ್ದರು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಬಂದ ಕೂಡಲೇ ಜನರಲ್ ಲೈಸೆನ್ಸ್ ಕೊಡಲು ಮುಂದಾಗಿದ್ದಾರೆ, ಸಾರ್ವಜನಿಕರು ದೂರು ನೀಡಿದರು ಸಹ ಸಂಬಂದ ಪಟ್ಟ ಅಧಿಕಾರಿಗಳು MSIL ಅಂಗಡಿ ತೆರೆಯಲು ಮುಂದಾಗಿರುತ್ತಾರೆ ಕೂಡಲೇ ಜನ ಪ್ರತಿನಿಧಿಗಳು ತೆಗೆದು ಕೊಂಡಿರುವ ನಿರ್ದಾರಕ್ಕೆ ಮಾನ್ಯತೆ ನೀಡಿ MSIL ಅಂಗಡಿ ತೆರೆಯದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡುವುದು.3. ಪಾವಗಡ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಅಭಾವ ಜಾಸ್ತಿಯಾಗಿದ್ದು ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರುಸುತ್ತಿದ್ದಾರೆ. ಹಾಗೆ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿವೆ ಅವುಗಳ ದುರಸ್ಥಿ ಕಾರ್ಯ ಮಾಡದೆ ಸಾರ್ವಜನಿಕರಿಗೆ ತೊಂದರೆಯಾಗಿದೆ ಈ ಸಮಸ್ಯೆ ಬಗೆಹರಿಸುವುದು.4. ತುಂಗ ಭದ್ರ ನೀರು ಸರಬರಾಜು ಉದ್ಘಾಟನೆಗೊಂಡು 8 ತಿಂಗಳಾಗಿದ್ದು ನೀರಿನ ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ, ಇದರ ಉಸ್ತುವಾರಿ ಹೊತ್ತಿರುವ ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಇಂಜಿನಿಯರ್ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಅಧಿಕಾರಿಗಳು ನಿರ್ಲಷ್ಯದಿಂದ ಜನರಿಗೆ ಕುಡಿಯುವ ನೀರು ಸಿಗುತ್ತಲ್ಲ ನೀರು ಸರಬರಾಜು ಬಗ್ಗೆ ನೈಜ ಚಿತ್ರಣ ಸಾರ್ವಜನಿಕರಿಗೆ ಗೊತ್ತಾಗಿಲ್ಲ. ಕೆಲವು ಗ್ರಾಮಗಳಿಗೆ ನೀರು ಬರುತ್ತಿಲ್ಲ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ತಾವೇ ಕರೆದು ಸೂಕ್ತ ಸಲಹೆ ಮಾರ್ಗದರ್ಶನ ಮಾಡಿ ಕುಡಿಯುವ ನೀರಿನ ಸಮಸ್ಯೆ ಹೊಗಲಾಡಿಸುವುದು.5. ಕಂದಾಯ ಇಲಾಖೆಯಲ್ಲಿ ಪವತಿ ವಾರಸುದಾರಿಗೆ ತ್ವರಿತವಾಗಿ ಖಾತೆ ಪಹಣಿ ವಗೈರೆ ಮಾಡಿಕೊಡಲು ಆದೇಶಿಸುವುದು, ಅದರಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು.ಸಿ .ಕೆ.ಪುರದಲ್ಲಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನಸಂಪರ್ಕ ಸಭೆ: ಸಾಲಿನಲ್ಲಿ ನಿಂತು ಜಿಲ್ಲಾಧಿಕಾರಿಗಳಿಗೆ ಅಹವಾಲು ಸಲ್ಲಿಸಿದ ಸಾರ್ವಜನಿಕರುಈಸಭೆಯಲ್ಲಿ ಸಾರ್ವಜನಿಕರು ಯಾವುದೇ ಗೊಂದಲವಿಲ್ಲದೆ ಶಿಸ್ತುಬದ್ಧವಾಗಿ ಸಾಲಿನಲ್ಲಿ ನಿಂತು ಜಿಲ್ಲಾಧಿಕಾರಿಗಳಿಗೆ ದೂರುಗಳನ್ನು ಸಲ್ಲಿಸಿದ್ದು ವಿಶೇಷವಾಗಿತ್ತು. ಹಿರಿಯ ನಾಗರಿಕರು, ಮಹಿಳೆಯರು ಮತ್ತು ರೈತರು ತಮ್ಮ ಸಾಲಿನಲ್ಲಿ ಕಾಯುತ್ತಾ, ವ್ಯವಸ್ಥಿತವಾಗಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ಆಡಳಿತ ಯಂತ್ರದ ಮೇಲಿರುವ ನಂಬಿಕೆಯನ್ನು ಪ್ರದರ್ಶಿಸಿದರು. ಪಾವಗಡ ತಾಲೂಕಿನ ರೈತರ ಜಮೀನು ದಾಖಲೆಗಳು, ಪಹಣಿ ತಿದ್ದುಪಡಿ ಹಾಗೂ ಭೂ ಒತ್ತುವರಿ ಸಮಸ್ಯೆಗಳು, ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲರ ಮಾಸಾಶನ ವಿಳಂಬದ ಬಗ್ಗೆ ದೂರುಗಳು ಹೊಸ ಪಡಿತರ ಚೀಟಿ ವಿತರಣೆ ಮತ್ತು ಹಾಲಿ ಕಾರ್ಡ್‌ಗಳಲ್ಲಿನ ತಿದ್ದುಪಡಿ ಪ್ರಕ್ರಿಯೆಯಲ್ಲಿನ ವಿಳಂಬದ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು, “ಸರ್ಕಾರದ ಸೌಲಭ್ಯಗಳು ನೇರವಾಗಿ ಜನರ ಮನೆ ಬಾಗಿಲಿಗೆ ತಲುಪಬೇಕು. ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ವಿಳಂಬವಿಲ್ಲದೆ ಸೌಲಭ್ಯ ಒದಗಿಸುವುದು ನಮ್ಮ ಆದ್ಯತೆ. ಇಲ್ಲಿ ಸ್ವೀಕರಿಸಲಾದ ಪ್ರತಿಯೊಂದು ದೂರನ್ನು ಕಾಲಮಿತಿಯೊಳಗೆ ಬಗೆಹರಿಸಲಾಗುವುದು,” ಎಂದು ತಿಳಿಸಿದರು.ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಬಾಕಿ ಇರುವ ಕಡತಗಳನ್ನು ಕೂಡಲೇ ವಿಲೇವಾರಿ ಮಾಡಲು ಮತ್ತು ಸಾರ್ವಜನಿಕರಿಗೆ ಅನಗತ್ಯ ಅಲೆದಾಟ ತಪ್ಪಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು, ನಿಡುಗಲ್ ಹೋಬಳಿಯ ಕಂದಾಯ ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆಯನ್ನೇ ಸುರಿಸಿದರು. ಅರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ಮಾಸಾಶನ ತಲುಪುತ್ತಿಲ್ಲ, ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ನಿಡುಗಲ್ಲು ಹೋಬಳಿಯ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಕಾರ್ಯವೈಖರಿಗೆ ಸ್ಥಳದಲ್ಲೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಸರ್ಕಾರ ಬರುವ ಬಡವರಿಗಾಗಿ ನೀಡುವ ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತು ಅಂಗವಿಕಲರ ಮಾಸಾಶನದಂತಹ ಯೋಜನೆಗಳನ್ನು ತಲುಪಿಸುವಲ್ಲಿ ವಿಳಂಬ ಮಾಡುವುದು ಅಕ್ಷಮ್ಯ ಅಪರಾಧ. ಜನರ ಕೆಲಸ ಮಾಡಲು ನಿಮಗೆ ಸಂಬಳ ನೀಡಲಾಗುತ್ತಿದೆ, ಅವರನ್ನು ಕಚೇರಿಗಳಿಗೆ ಅಲೆದಾಡಿಸಲು ಅಲ್ಲ,” ಎಂದು ಜಿಲ್ಲಾಧಿಕಾರಿಗಳು ವೇದಿಕೆಯಲ್ಲೇ ಅಧಿಕಾರಿಗಳಿಗೆ ‘ಗರಂ’ ಆದರು.ಈ ಸಂದರ್ಭದಲ್ಲಿ ಮಧುಗಿರಿ ವಿಭಾಗದ ಉಪ ವಿಭಾಗಾಧಿಕಾರಿಗಳಾದ ಗುಟುರು ಶಿವಪ್ಪ, ತಹಶೀಲ್ದಾರ್ ವೈ. ರವಿ, ಕಾರ್ಯನಿರ್ವಹಣಾಧಿಕಾರಿಗಳಾದ ಮಧುಸೂದನ್ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

Call Us Now
WhatsApp