ತುಮಕೂರು ಜಿಲ್ಲೆ ಪರಿಶಿಷ್ಟ ಜಾತಿ ಪಂಗಡಗಳ ಸಂಶೋಧನೆ ಬಿಡುಗಡೆ ಮತ್ತು ಸಮಾಲೋಚನೆ. ಇಂದು ಸ್ಲಂ ಜನಾಂದೋಲನ ಕರ್ನಾಟಕ ಪರ್ಯಾಯ ಕಾನೂನು ವೇದಿಕೆ

ತುಮಕೂರು ಜಿಲ್ಲೆ ಪರಿಶಿಷ್ಟ ಜಾತಿ ಪಂಗಡಗಳ ಸಂಶೋಧನೆ ಬಿಡುಗಡೆ ಮತ್ತು ಸಮಾಲೋಚನೆ. ಇಂದು ಸ್ಲಂ ಜನಾಂದೋಲನ ಕರ್ನಾಟಕ ಪರ್ಯಾಯ ಕಾನೂನು ವೇದಿಕೆ ವತಿಯಿಂದ ವಿಶ್ವಗುರು ಬಸವಣ್ಣನವರ 895ನೇ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ 135ನೇ ಹಾಗೂ ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ 119ನೇ ಜನುಮದಿನಾಚರಣೆಯ ಅಂಗವಾಗಿ ತುಮಕೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಪಂಗಡ ಸಮುದಾಯಕ್ಕೆ ಸೇರಿದ ಕಾನೂನುಗಳ ಅನುಷ್ಠಾನ ಕುರಿತ ಸಂಶೋಧನಾ ವರದಿ ಬಿಡುಗಡೆ ಮತ್ತು ಸಮಾಲೋಚನಾ ಸಭೆಯನ್ನು ನಗರದ ಸಮೃದ್ಧಿ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ತುಮಕೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ತಿಪ್ಪೇಸ್ವಾಮಿ ತುಮಕೂರು ಜಿಲ್ಲೆಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪರ್ಯಾಯ ಕಾನೂನು ವೇದಿಕೆ ವತಿಯಿಂದ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ 1989 ಕರ್ನಾಟಕ ಭೂ ಕಂದಾಯ ಕಾಯ್ದೆ ಮತ್ತು ಸುಧಾರಣಾ ಕಾಯ್ದೆ 1964 ಹಾಗೂ ಮ್ಯಾ ನ್ಯೂ ವೆಲ್ ಸ್ಕ್ಯಾವೆಂಜರ್ಸ್ ಗಳ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013ರ ಅನುಷ್ಠಾನ ಕುರಿತು ಕೈಗೊಂಡ ಸಮೀಕ್ಷೆ ಜಿಲ್ಲೆ ಮತ್ತು ರಾಜ್ಯದ ಇತರೆ ಜಿಲ್ಲೆಗಳಲ್ಲಿರುವ ಪರಿಶಿಷ್ಟ ಜಾತಿಯ ಮತ್ತು ಪಂಗಡಗಳ ಕಲ್ಯಾಣಕ್ಕೆ ಸಂಬಂಧಿಸಿದ ಕಾನೂನುಗಳ ಅನುಷ್ಠಾನ ಕುರಿತು ಅವಲೋಕಿಸುವುದು ಪ್ರಜ್ಞಾವಂತರನ್ನು ಎಚ್ಚರಿಸಿದೆ ಎಸ್ಸಿ ಎಸ್ಟಿ ಜನರು ಭೂ ಮಂಜೂರಾತಿ ಅಥವಾ ಸುಧಾರಣೆಯಲ್ಲಿ ಭೂಮಿ ಪಡೆಯಬೇಕಾದರೆ ದಾಖಲಾತಿಗಳ ಕೊರತೆ ಎದ್ದು ಕಾಣುತ್ತಿದೆ ಮೇಲಂತದಲ್ಲಿ ನಮ್ಮಿಂದ ದೊರೆಯುವ ಸ್ಪಂದನೆ ಕೆಳಹಂತದಲ್ಲಿ ದೊರೆಯುವುದಿಲ್ಲ ಇದರಿಂದ ಜನರಿಗೆ ಸೋಲಾಗುತ್ತಿದೆ ಜಿಲ್ಲಾಡಳಿತದಿಂದ ಸಭೆ ಕರೆದು ಕಾನೂನುಗಳ ಅನುಷ್ಠಾನಕ್ಕೆ ಕ್ರಮ ವಹಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಕಳೆದ 2024 25 ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಸಂಶೋಧನೆ ಕೈಗೊಂಡ ಮುಖ್ಯಾಂಶಗಳ ಬಗ್ಗೆ ಸಂಶೋಧಕರಾದ ಸಿದ್ದಾರ್ಥ್ ಜೋಶಿ ರವರು ವಿಶ್ಲೇಷಿತ ವರದಿಯನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಚಿಂತಕರಾದ ಕೆ ದೊರೆರಾಜ್ ರವರು ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಸಫಾಯಿ ಕರ್ಮಚಾರಿಗಳ ಸಮೀಕ್ಷೆಯಲ್ಲಿ ಸಂಘಟನೆಯ ನಾಯಕರು ಶಿಸ್ತನ್ನು ರೂಪಿಸಿಕೊಳ್ಳಬೇಕು ಆಡಳಿತಾತ್ಮಕವಾಗಿ ವ್ಯವಸ್ಥೆಯಲ್ಲಿ ನಾವು ಯಾವ ರೀತಿ ಟ್ಯಾಕಲ್ ಮಾಡಬೇಕು ಎಂಬುದನ್ನ ಮೈಗೂಡಿಸಿಕೊಳ್ಳಬೇಕು ಅಂದರೆ ಒಂದು ಸಂಘಟನೆಯ ಕಚೇರಿಯ ವ್ಯವಸ್ಥೆಯನ್ನೇ ಅಳವಡಿಸಿಕೊಳ್ಳಬೇಕು ಮೊದಲು ಸೂಕ್ಷ್ಮ ಸಂವೇದಿ ಆಡಳಿತ ವ್ಯವಸ್ಥೆ ಇತ್ತು ಈಗ ಅಂತಹ ಆಡಳಿತ ವ್ಯವಸ್ಥೆ ಇಲ್ಲ ವಾಸ್ತವವಾಗಿ ಜಿಲ್ಲೆಯಲ್ಲಿ ಕೈಗೊಂಡ ಈ ಸಮೀಕ್ಷಾ ತಂಡಕ್ಕೆ ಅಭಿನಂದನೆಗಳು ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬಾಬು ಜಗಜೀವನ್ ರಾಮ್ ಪ್ರಶಸ್ತಿ ಪುರಸ್ಕೃತರಾದ ನರಸಿಯಪ್ಪನವರು ದಲಿತ ಸಂಘರ್ಷ ಸಮಿತಿಯ ಬೆಲ್ಲದಮಡು ಕೃಷ್ಣಪ್ಪನವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಧುಗಿರಿ ಉಪ ವಿಭಾಗಾಧಿಕಾರಿಗಳಾದ ಗೋಟೂರು ಶಿವಪ್ಪ ಸಮೀಕ್ಷಾ ವರದಿಗೆ ಪ್ರತಿಕ್ರಿಯಿಸಿ ದರು ಈ ಸಂದರ್ಭದಲ್ಲಿ ಸ್ಲಂಜ ನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ ನರಸಿಂಹಮೂರ್ತಿ ರವರು ಕೊಟಶಂಕರ್ ರವರು ಅನುಪಮಾ ರವರು ದೀಪಿಕಾ ರವರು ಶಿವನಂಜಪ್ಪ ರವರು ಭರತ್ ರವರು ರೆಡ್ಸ್ ರಂಗಯ್ಯರವರು ಮೇಲುಸ್ತುವಾರಿ ಸಮಿತಿಯ ರಂಜನ್ ರವರು ಸ್ಲಂ ಸಮಿತಿಯ ಅರುಣ್ ತಿರುಮಲ ಯ ಕೃಷ್ಣಮೂರ್ತಿ ಶಂಕ್ರಯ್ಯ ದಲಿತ ಸಂಘರ್ಷ ಸಮಿತಿಯ ಪಿಎನ್ ರಾಮಯ್ಯ ಹಾಗೂ ಹಲವು ಪ್ರಕರಣಗಳ ಸಂತ್ರಸ್ತರು ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ವಕೀಲರಾದ ಎಸ್ ಶಿವಣ್ಣ ಸ್ವಾಗತವನ್ನು ಹೈ ಕೋರ್ಟ್ ವಕೀಲರಾದ ವಿನಯ್ ಶ್ರೀನಿವಾಸ್ ರವರು ವಂದನಾರ್ಪಣೆಯನ್ನು ಮನೋಜ್ ಕುಮಾರ್ ನೆರವೇರಿಸಿದರು ವಕೀಲರಾದ ಚೈತ್ರ ಈ ಸಮಾಲೋಚನ ಸಭೆಯಲ್ಲಿ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಬಾದಿತರು ಸಂತ್ರಸ್ತರು ಪಿಟಿಸಿಎಲ್ ಕಾಯ್ದೆ ಸಂತ್ರಸ್ತರು ಡಿಎಸ್ಎಸ್ ಸಂಘಟನೆಯ ಮುಖಂಡರುಗಳು ಸಾವಿತ್ರಿ ಬಾಪುಲೆ ಮತ್ತು ಸ್ಲಂ ಸಮಿತಿಯ ಮುಖಂಡರುಗಳು ಪಾಲ್ಗೊಂಡಿದ್ದರು. ವರದಿ ಉದಯಕುಮಾರ್ ಕಲ್ಪತರು ನ್ಯೂಸ್

ತುಮಕೂರಿನಲ್ಲಿ ದಿನಾಂಕ: 24-04-2026 ರಿಂದ 26-04-2026 ರವರೆಗೆ ಮೂರು ದಿನಗಳ ಕಾಲ 20 ವರ್ಷದೊಳಗಿನ ಪುರುಷ ಹಾಗೂ ಮಹಿಳಾ ಯುವಕರಿಗಾಗಿ 24ನೇ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ
ತುಮಕೂರಿನಲ್ಲಿ ದಿನಾಂಕ: 24-04-2026 ರಿಂದ 26-04-2026 ರವರೆಗೆ ಮೂರು ದಿನಗಳ ಕಾಲ 20 ವರ್ಷದೊಳಗಿನ ಪುರುಷ ಹಾಗೂ ಮಹಿಳಾ ಯುವಕರಿಗಾಗಿ 24ನೇ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ

ತುಮಕೂರಿನಲ್ಲಿ ದಿನಾಂಕ: 24-04-2026 ರಿಂದ 26-04-2026 ರವರೆಗೆ ಮೂರು ದಿನಗಳ ಕಾಲ 20 ವರ್ಷದೊಳಗಿನ ಪುರುಷ ಹಾಗೂ ಮಹಿಳಾ ಯುವಕರಿಗಾಗಿ 24ನೇ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ.

ಯುವ ಕ್ರೀಡಾಪಟುಗಳ ಪ್ರತಿಭೆಯನ್ನು ಉತ್ತೇಜಿಸುವ ಉದ್ದೇಶದಿಂದ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಓಟ, ಜಿಗಿತ, ಎಸೆತ ಸೇರಿದಂತೆ ಸುಮಾರು 40–42 ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳು ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಸುಮಾರು 1500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಇವರಲ್ಲಿ ತುಮಕೂರಿನ 10 ಕ್ರೀಡಾಪಟುಗಳು ಸಹ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ DR. G Parameshwara ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಮಾನ್ಯ ಸಚಿವರು ಕ್ರೀಡಾಕೂಟದ ಸಿದ್ಧತೆಗಳ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಕ್ರೀಡಾಂಗಣ ಹಾಗೂ ಸಂಬಂಧಿತ ಸೌಲಭ್ಯಗಳ ವ್ಯವಸ್ಥೆಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳು, ಒಲಂಪಿಕ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಕ್ರೀಡಾಪಟುಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು, ವಸತಿ ವ್ಯವಸ್ಥೆ, ಭದ್ರತೆ ಹಾಗೂ ಸ್ಪರ್ಧೆಗಳ ಸುಸೂತ್ರ ನಿರ್ವಹಣೆಗೆ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಜೊತೆಗೆ, ಈ ಕ್ರೀಡಾಕೂಟದಲ್ಲಿ ವಿಜೇತರಾಗುವ 50–60 ಕ್ರೀಡಾಪಟುಗಳು ಅಮೇರಿಕಾದಲ್ಲಿ ನಡೆಯುವ ವಿಶ್ವ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲಿದ್ದಾರೆ ಎಂದು ಸಚಿವರು ತಿಳಿಸಿದರು.

ಮಾನ್ಯ ಸಚಿವರು ತುಮಕೂರು ಜಿಲ್ಲೆ ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಸರ್ಕಾರದಿಂದ ನೀಡಲಾಗಿದ್ದ ಹೊಸ ವಾಹನ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾಧಿಕಾರಿ ಪೊಲೀಸ್ ವರಿಷ್ಠಾಧಿಕಾರಿಗಳಾದ SP Tumakuru, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ Zilla Panchayath Tumkur, ಮಹಾನಗರ ಪಾಲಿಕೆ ಆಯುಕ್ತರಾದ ಶುಭ ಹಾಗೂ ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಯಾದ ರೋಹಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪಾವಗಡ ತಾಲೂಕಿನ ಹರಿಹರಪುರ ಗ್ರಾಮದಲ್ಲಿ ಭೀಮ ಬಾಯ್ಸ್ ಯುವಕರು ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಮತ್ತು ಸಂವಿಧಾನದ ಆಶಯಗಳನ್ನು ಗೌರವಿಸಲು ವಿಶೇಷ ಕಾರ್ಯಕ್ರಮ

ಪಾವಗಡ ತಾಲೂಕಿನ ಹರಿಹರಪುರ ಗ್ರಾಮದಲ್ಲಿ ಭೀಮ ಬಾಯ್ಸ್ ಯುವಕರು ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಮತ್ತು ಸಂವಿಧಾನದ ಆಶಯಗಳನ್ನು ಗೌರವಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.ಈ ಗ್ರಾಮದಲ್ಲಿ ಕುಂಭಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಡಾ” ಬಿ.ಆರ್. ಅಂಬೇಡ್ಕರ್ ಹಾಗೂ ಡಾ” ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ರವರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆಯನ್ನು ಭೀಮ ಬಾಯ್ಸ್ ಯುವಕರು ನೀಲಿ ಬಾವುಟಗಳನ್ನು ಹಿಡಿದು ‘ಜೈ ಭೀಮ್’ ಘೋಷಣೆಗಳೊಂದಿಗೆ ತಮಟೆ ಸದ್ದಿಗೆ ಹೆಜ್ಜೆ ಹಾಕಿ ಮುಂದೆ ಸಾಗಿದರು,ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಉದ್ದೇಶದಿಂದ ಜಯಂತಿಗಳನ್ನು ಆಚರಣೆ ಮಾಡುತ್ತೇವೆ ಎಂದು *ಎಚ್ ಡಿ ಈರಣ್ಣನವರು* ತಿಳಿಸಿದರು,ಈ ಗ್ರಾಮದಲ್ಲಿ ಕುಂಭಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ *ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ರವರ* ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆಯನ್ನು ಯುವಕರು ನೀಲಿ ಬಾವುಟಗಳನ್ನು ಹಿಡಿದು ‘ಜೈ ಭೀಮ್’ ಘೋಷಣೆಗಳೊಂದಿಗೆ ತಮಟೆ ಸದ್ದಿಗೆ ಹೆಜ್ಜೆ ಹಾಕಿ ಮುಂದೆ ಸಾಗಿದರು,ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಉದ್ದೇಶದಿಂದ ಸಾರ್ವಜನಿಕವಾಗಿ ಸಂವಿಧಾನದ ವಿಷಯಗಳನ್ನು ತಿಳಿಸುವ ಉದ್ದೇಶಕ್ಕಾಗಿ ಆಚರಣೆಗಳು ಮಾಡುತ್ತೇವೆ ಎಂದರು, ಸ್ಥಳೀಯ ಯುವಕ ಸಂಘಗಳು ಬಾಬಾಸಾಹೇಬರ ಜೀವನ, ಅವರು ಕಂಡ ಸಮಾನತೆಯ ಕನಸು ಮತ್ತು ಶಿಕ್ಷಣದ ಮಹತ್ವದ ಬಗ್ಗೆ ಭಾಷಣ ಹಾಗೂ ವೈಚಾರಿಕ ಚರ್ಚೆಗಳನ್ನು ಆಯೋಜಿಸುತ್ತವೆ, ಈ ಆಚರಣೆಯ ಮೂಲಕ ಹರಿಹರಪುರ ಗ್ರಾಮದ ಯುವಕರು ” *ಶಿಕ್ಷಣ ಪಡೆಯಿರಿ* , *ಸಂಘಟಿತರಾಗಿ* , *ಹೋರಾಡಿ”* ಎಂಬ ಅಂಬೇಡ್ಕರ್ ಅವರ ಮೂಲ ಮಂತ್ರವನ್ನು ಜನರಿಗೆ ತಲುಪಿಸಲು ಜಯಂತಿ ಆಚರಣೆಯ ಮಾಡಬೇಕು ಎಂದರು,ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿರುತ್ತದೆ,ವರದಿ ರಾಮಪ್ಪ ಸಿ ಕೆ ಪುರಕಲ್ಪತರು ನ್ಯೂಸ್ ಪಾವಗಡ

ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯು ಮೂರನೇ ಸ್ಥಾನ ಪಡೆದಿದ್ದು ವಿದ್ಯಾರ್ಥಿಗಳ ಈ ಅಭೂತ ಪೂರ್ವ ಸಾಧನೆಗೆ ಜಿಲ್ಲಾಧ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜಿಲ್ಲೆಯ ಅನೇಕ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಪಡೆದು ಸಾಧನೆಗೈದಿದ್ದಾರೆ. ಅದರ ಜೊತೆಗೆ ಸಿದ್ದಾಪುರದ
ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯು ಮೂರನೇ ಸ್ಥಾನ ಪಡೆದಿದ್ದು ವಿದ್ಯಾರ್ಥಿಗಳ ಈ ಅಭೂತ ಪೂರ್ವ ಸಾಧನೆಗೆ ಜಿಲ್ಲಾಧ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜಿಲ್ಲೆಯ ಅನೇಕ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಪಡೆದು ಸಾಧನೆಗೈದಿದ್ದಾರೆ. ಅದರ ಜೊತೆಗೆ ಸಿದ್ದಾಪುರದ

ಎರಡು ಮಕ್ಕಳ ತಾಯಿಯ ಅಮೋಘ ಸಾಧನೆ
ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಶೇಕಡ 93% ಅಂಕ ಪಡೆದ ತಹಸೀನಾ

ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯು ಮೂರನೇ ಸ್ಥಾನ ಪಡೆದಿದ್ದು ವಿದ್ಯಾರ್ಥಿಗಳ ಈ ಅಭೂತ ಪೂರ್ವ ಸಾಧನೆಗೆ ಜಿಲ್ಲಾಧ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜಿಲ್ಲೆಯ ಅನೇಕ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಪಡೆದು ಸಾಧನೆಗೈದಿದ್ದಾರೆ. ಅದರ ಜೊತೆಗೆ ಸಿದ್ದಾಪುರದ VKM Tutors ನ ಸಹಕಾರದೊಂದಿಗೆ ಖಾಸಗಿಯಾಗಿ ದ್ವಿತೀಯ PUC ಪರೀಕ್ಷೆ ಬರೆದ ತಹಸೀನಾ ಎಂಬ ಗೃಹಣಿ ವಿದ್ಯಾರ್ಥಿನಿಯು 600ಕ್ಕೆ 560 ಅಂಕ ಪಡೆದು ಶೇಕಡ 93% ರ ಫಲಿತಾಂಶದೊಂದಿಗೆ ತಮ್ಮ ಕುಟುಂಬ ಹಾಗೂ ಸಂಸ್ಥೆಗೆ ಹಿರಿಮೆ ತಂದು ಕೊಟ್ಟಿದ್ದಾರೆ. ಇಬ್ಬರು ಮಕ್ಕಳ ತಾಯಿಯ ಈ ಸಾಧನೆಯ ಹಿಂದೆ ಅವರ ಗಂಡ ಜಂಶೀರ್ ವಾಫಿ ರವರ ಪ್ರೊತ್ಸಾಹ ಹಾಗೂ ಸಹಕಾರ ಅಡಗಿದೆ.

ತನ್ನ ಮಕ್ಕಳು ಹಾಗೂ ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತ ತಹಸೀನಾ ಅತ್ಯುತ್ತಮ ಅಂಕ ಪಡೆದು ಇತರೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ತಹಸೀನಾ ಕುರಾನ್ ಕೂಡ ಕಂಠ ಪಾಠ ಮಾಡಿದ್ದು ಅವರ ಸಾಧನೆಗೆ ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಳೆದ 8 ವರ್ಷಗಳಿಂದ ಸಿದ್ದಾಪುರದಲ್ಲಿ VKM Tutors ಕಾರ್ಯಾಚರಿಸುತ್ತಿದ್ದು, 600ಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕು ಚೆಲ್ಲುವಲ್ಲಿ ಸಂಸ್ಥೆಯು ಸಹಕಾರಿಯಾಗಿದೆ.

ಈ ಹಿಂದೆ ಇಲ್ಲಿ ತರಬೇತಿ ಪಡೆದ ವಿವಾಹಿತ ಮಹಿಳೆಯರಲ್ಲಿ ಶ್ರೀಮತಿ ‌ ಸುಮ, ಶ್ರೀಮತಿ ಅಂಜಲಿ ಪಿ ಎಸ್, ಶ್ರೀಮತಿ ತನ್ಷೀರ ಪಿ ಕೆ, ಶ್ರೀಮತಿ ಸಮೀರ ಪಿ ಎಸ್, ಶ್ರೀಮತಿ ಮುಬಷಿರ ಪಿ ಎಂ, ಶ್ರೀಮತಿ ಶಿಲ್ಪ, ಶ್ರೀಮತಿ ಸೆಮೀನ, ಶ್ರೀಮತಿ ನಜುಮು ಕೆ ಎಂ ಮತ್ತು ಶ್ರೀಮತಿ ಅನುಷ ಯು ಕೂಡಾ ಉತ್ತಮ ಅಂಕಗಳೊಂದಿಗೆ ಪಾಸಾದವರ ಸಾಲಿನಲ್ಲಿದ್ದಾರೆ. ಇಸ್ಮಾಯಿಲ್ ವಿ. ಕೆ ಹಾಗೂ ಸಜೀತಾ ಕೆ. ಎಸ್ ಇವರುಗಳ ಮಾರ್ಗದರ್ಶನ ಹಾಗೂ ಪರೀಕ್ಷಾ ಪೂರ್ವ ತಯಾರಿ ಮತ್ತು ತರಬೇತಿಯಿಂದಾಗಿ ಸಾಧನೆ ಮಾಡಿರುವುದಾಗಿ ಸಾಧಕರು ಹೆಮ್ಮೆಯಿಂದ ಹೇಳಿ ಕೊಳ್ಳುತ್ತಿದ್ದಾರೆ. ಸಾಧನೆ ಮಾಡಿರುವ ತಹಸೀನಾಳಿಗೆ ಸಮಾಜದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

ಎಂ.ಎ ಆಜೀಜ್, ಸಿದ್ದಾಪುರ.

ಸಂವಿಧಾನ ವಿರೋಧಿ ಎಸ್ಐಆರ್ ತಿರಸ್ಕರಿಸಲು ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ವಿಶೇಷ ಮತ ತೀವ್ರ ಪರಿಷ್ಕರಣೆ ಎಸ್ಐಆರ್ ವಿರೋಧಿಸಿ ಎಸ್ಐಆರ್ ವಿರೋಧಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸ್ಲಂ ಜನಾಂದೋಲನ ಕರ್ನಾಟಕ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣ ಸಮಿತಿ

ಸಂವಿಧಾನ ವಿರೋಧಿ ಎಸ್ಐಆರ್ ತಿರಸ್ಕರಿಸಲು ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ವಿಶೇಷ ಮತ ತೀವ್ರ ಪರಿಷ್ಕರಣೆ ಎಸ್ಐಆರ್ ವಿರೋಧಿಸಿ ಎಸ್ಐಆರ್ ವಿರೋಧಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸ್ಲಂ ಜನಾಂದೋಲನ ಕರ್ನಾಟಕ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಟೌನ್ ಹಾಲ್ ನಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆ ಹತ್ತಿರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ ನರಸಿಂಹಮೂರ್ತಿ ರವರು ನಾವು ವಿಶೇಷ ಮತ ತೀವ್ರ ಪರಿಷ್ಕಣೆಯನ್ನು ವಿರೋಧಿಸುತ್ತೇವೆ ಏಕೆಂದರೆ ಸಂವಿಧಾನ ವಿರೋಧಿಯಾಗಿರುವ ಈ ನಡೆ ಕೇಂದ್ರ ಸರ್ಕಾರ ಭಾರತದ ಚುನಾವಣಾ ಆಯೋಗದ ಮುಖಾಂತರ ಪೌರತ್ವ ಖಾತ್ರಿಯನ್ನು ದಾಖಲಾತಿಗಳ ಮೂಲಕ ಮಾಡಲು ಹೊರಟಿರುವುದು ಅನಕ್ಷರಸ್ಥರಿಗೆ ಬಡವರಿಗೆ ಅನಕ್ಷರಸ್ಥರಿಗೆ ಮಹಿಳೆಯರಿಗೆ ದಲಿತರು ಹಾಗೂ ಅಲ್ಪಸಂಖ್ಯಾತರು ಅಲೆಮಾರಿಗಳಿಗೆ ಮತದಾನದ ಹಕ್ಕನ್ನು ಕಸಿಯುವ ಉನ್ನಾರವಾಗಿದೆ ಎಂದರು ಇದೇ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷರಾದ ಸೈಯದ್ ಮುಜೀಬ್ ರವರು ಎಸ್ಐಆರ್ ಕೇವಲ ಅಲ್ಪಸಂಖ್ಯಾತರಿಗೆ ಸಮಸ್ಯೆಯಲ್ಲ ಇಡೀ ದೇಶದ ಎಲ್ಲ ಸಮುದಾಯದ ಜನರಿಗೂ ಸಮಸ್ಯೆಯಾಗಿದೆ ಕೇಂದ್ರ ಬಿಜೆಪಿಯ ಪಕ್ಷದ ಗಾಳವಾಗಿ ಚುನಾವಣಾ ಆಯೋಗ ಎಸ್ಐಆರ್ ವಿಶೇಷ ಮತ ಪರಿಷ್ಕರಣೆ ವಿಷಯದಲ್ಲಿ ಕಾರ್ಯನಿರ್ವಹಿಸಲು ಮುಂದಾಗಿದೆ ಆಯೋಗದ ಜವಾಬ್ದಾರಿಗಳನ್ನು ಗಾಳಿಗೆ ತೂರಿ ಮತದಾರರ ಹಕ್ಕನ್ನು ಕಸಿಯಲು ಮುಂದಾಗಿದೆ ಎಸ್ಐಆರ್ ಬಿಜೆಪಿ ಘೋಷಿತ ಸಿ ಎ ಎ ಎನ್ ಆರ್ ಸಿ ಮುಖವಾಡವೆ ದೇಶದ ನಾಗರೀಕರ ಪೌರತ್ವವನ್ನು ಕಸಿವ ಹುನ್ನಾರವೇ ಆಗಿದೆ ಎಂದರು. ನಂತರ ಸಹ ಬಾಳ್ವೆ ಸಂಘದ ಅಧ್ಯಕ್ಷರಾದ ದೀಪಿಕಾ ಮಾತನಾಡಿ ಟ್ರಾನ್ಸ್ ಜೆಂಡರ್ ಸಮುದಾಯಕ್ಕೆ ಎಸ್ಐಆರ್ ಕಂಟಕವಿದೆ ಸರ್ಕಾರ ನೀಡಿರುವ ಆಧಾರ್ ಮತದಾರರ ಚೀಟಿ ರೇಷನ್ ಕಾರ್ಡ್ ಬಿಟ್ಟರೆ ಬೇರೆ ಯಾವ ದಾಖಲೆಗಳನ್ನು ಸೃಷ್ಟಿ ಮಾಡಲು ಸಾಧ್ಯ ರಾಜ್ಯದಲ್ಲಿ ರೂ.30,000ಕ್ಕೂ ಅಧಿಕ ಟ್ರಾನ್ಸ್ ಜೆಂಡರ್ ಸಮುದಾಯದವರಿದ್ದೇವೆ ಸ್ವಾತಂತ್ರ ಬಂದಾಗಿನಿಂದ ಕಿರದ ಎಸ್ಐಆರ್ ಈಗ ಯಾಕೆ ಎಂದರು ಎಪಿಸಿಸಿ ಆರ್ನ ಜಿಲ್ಲಾಧ್ಯಕ್ಷರಾದ ತಾಜುದ್ದೀನ್ ಷರೀಫ್ ಮಾತನಾಡಿ ನಮ್ಮ ದೇಶದಲ್ಲಿ ಶೇಕಡ 10% ಕೋಟ್ಯಾಧಿಪತಿಗಳು ಇದ್ದರೂ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಂದು ಹೊತ್ತು ಆಹಾರವಿಲ್ಲದೆ ಮನೆ ಇಲ್ಲದ ಜನರು ಬದುಕುತಿದ್ದಾರೆ ಹಸುವಿನಲ್ಲಿರುವ ಜನರನ್ನು ದಾಖಲೆ ಇದ್ಯಾ ಎಂಬ ಪ್ರಶ್ನೆಗಳು ಮೂಲಭೂತ ಹಕ್ಕನ್ನು ಕಸಿಯುವಂತಹ ಹುನ್ನಾರ ವನ್ನು ಬಿಜೆಪಿ ಸರ್ಕಾರ ನಡೆಸುತ್ತಿದೆ ಎಂದರು ಈ ಸಂದರ್ಭದಲ್ಲಿ ಔಷಧಿ ವ್ಯಾಪಾರಿಗಳ ಸಂಘದ ಮುಖಂಡರಾದ ಜವಾಹರ್ ಅವರು ಮಾತನಾಡಿದರು ಈ ಪ್ರತಿಭಟನೆಯಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘದ ವಾಸಿಮ್ ಜಮಾತೆ ಇಸ್ಲಾಂ ಹಿಂದ್ ನ ಎಸ್ ಸರ್ ಅಹಮದ್ ಉಮ್ರಿ ಇಮಾಮ್ ಬಾಯ್ಜ್ ಎಸ್ಸಾರ್ಖಾನ್ ಅನ್ವರ್ ಪಾಷಾ ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್ ಶಂಕ್ರಯ್ಯ ತಿರುಮಲ ಯ ಜಾಬೀರ್ ಖಾನ್ ಕೃಷ್ಣಮೂರ್ತಿ ರಾಮಕೃಷ್ಣ ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆಯ ಸಂಚಾಲಕರದ ಅನುಪಮಾ ನಿವೇಶನ ಹೋರಾಟ ಸಮಿತಿಯ ಮಂಗಳಮ್ಮ ಶಂಕರ್ ಶಾಂತಮ್ಮ ಸಂಧ್ಯಾ ಪೂರ್ಣಿಮಾ ವಸಂತಮ್ಮ ಗಂಗಮ್ಮ ಗುಲ್ನಾಸ್ ಸಲ್ಮಾ ಬಾನು ಸಾಮಾಜಿಕ ಕಾರ್ಯಕರ್ತ ಸಲೀಂ ಖಾನ್ ಯುವ ಪದಾಧಿಕಾರಿಗಳಾದ ಕೃಷ್ಣ ಮೋಹನ್ ದಲಿತ ಸಂಘರ್ಷ ಸಮಿತಿಯ ಪಿ ಎನ್ ರಾಮಯ್ಯ ಹಾಗೂ ವಿವಿಧ ಜನಪರ ಸಂಘಟನೆಗಳ ಮುಖಂಡರು ಪದಾಧಿಕಾರಿಗಳು ಭಾಗವಹಿಸಿದ್ದರು

ನಗರೀಕರಣದ ಹೆಸರಲ್ಲಿ ಬಡವರ ಮೇಲೆ ಶೋಷಣೆ ದಬ್ಬಾಳಿಕೆ ಅಂಬೇಡ್ಕರ್ ಕನಸ್ಸಲ್ಲ- ಚೇತನ ಅಹಿಂಸಾ ನಟ ಸಾಮಾಜಿಕ ಹೋರಾಟಗಾರಇಂದು ಬೆಂಗಳೂರಿನ ಯಶವಂತಪುರದ ಸುಣ್ಣದಗೂಡು ಸ್ಲಂನಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 135ನೇ ಹಾಗೂ ಬಾಬು ಜಗಜೀವನರಾಮ್ ರವರ 119ನೇ ಜಯಂತಿ ಕಾಯ್ರಕ್ರಮ
ನಗರೀಕರಣದ ಹೆಸರಲ್ಲಿ ಬಡವರ ಮೇಲೆ ಶೋಷಣೆ ದಬ್ಬಾಳಿಕೆ ಅಂಬೇಡ್ಕರ್ ಕನಸ್ಸಲ್ಲ- ಚೇತನ ಅಹಿಂಸಾ ನಟ ಸಾಮಾಜಿಕ ಹೋರಾಟಗಾರಇಂದು ಬೆಂಗಳೂರಿನ ಯಶವಂತಪುರದ ಸುಣ್ಣದಗೂಡು ಸ್ಲಂನಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 135ನೇ ಹಾಗೂ ಬಾಬು ಜಗಜೀವನರಾಮ್ ರವರ 119ನೇ ಜಯಂತಿ ಕಾಯ್ರಕ್ರಮ

ನಗರೀಕರಣದ ಹೆಸರಲ್ಲಿ ಬಡವರ ಮೇಲೆ ಶೋಷಣೆ ದಬ್ಬಾಳಿಕೆ ಅಂಬೇಡ್ಕರ್ ಕನಸ್ಸಲ್ಲ- ಚೇತನ ಅಹಿಂಸಾ ನಟ ಸಾಮಾಜಿಕ ಹೋರಾಟಗಾರಇಂದು ಬೆಂಗಳೂರಿನ ಯಶವಂತಪುರದ ಸುಣ್ಣದಗೂಡು ಸ್ಲಂನಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 135ನೇ ಹಾಗೂ ಬಾಬು ಜಗಜೀವನರಾಮ್ ರವರ 119ನೇ ಜಯಂತಿ ಕಾಯ್ರಕ್ರಮವನ್ನು ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾವಿತ್ರಿಬಾಯಿಪುಲೆ ಮಹಿಳಾ ಸಂಘಟನೆಯಿಂದ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮ್ಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಸಾಮಾಜಿಕ ಹೋರಾಟಗಾರ ಚಲನಚಿತ್ರ ನಟ ಚೇತನ ಅಹಿಂಸಾ ಮಾತನಾಡಿ ವಿಶ್ವಜ್ಞಾನಿ ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಹಸಿರುಕ್ರಾಂತಿ ಹರಿಕಾರರಾದ ಬಾಬು ಜಗಜೀವನ್ ರಾಮ್ ರವರನ್ನು ವೈಭವೀಕರಿಸದೇ ಅವರ ಆದರ್ಶಗಳನ್ನು ಅಳವಡಿಸಿಕೊಂಡು ನಿಸ್ವಾರ್ಥವಾಗಿ ಸಮ-ಸಮಾಜಕ್ಕೆ ಶ್ರಮಿಸುವ ಮಾಧರಿ ಕೆಲಸ ವನ್ನುಸ್ಲಂ ಜನಾಂದೋಲನ ಕರ್ನಾಟಕ ಮಾಡುತ್ತಿದೆ. ಸಂವಿಧಾನ ಶಿಲ್ಪಿ ಭಾರತ ರತ್ನ ಎಂದು ಹಲವರು ಹೇಳುತ್ತಾರೆ ಭಾರತ ರತ್ನ ಪ್ರಶಸ್ತಿ ನೀಡಿದರಿಂದ ಅಂಬೇಡ್ಕರ್ ರವರ ಹೆಸರಿಗೆ ಗೌರವ ಸಿಕ್ಕಿಲ್ಲ, ಅಂಬೇಡ್ಕರ್ ರವರಿಗೆ ಭಾರತ ರತ್ನ ನೀಡಿದ್ದರಿಂದ ಭಾರತರತ್ನ ಪ್ರಶಸ್ತಿಗೆ ಗೌರವ ಸಿಕ್ಕಿದೆ. ಅಂಬೇಡ್ಕರ್ ವಾದ ಅಂದರೇ ಏನೆಂದು ನಾವು ವ್ಯಾಖ್ಯಾನಿಸದಿದ್ದರೇ, ಅಸಮಾನತೆಯನ್ನು ಹುಟ್ಟುಹಾಕುವ ಶಕ್ತಿಗಳು ಬಾಬಾ ಸಾಹೇಬರನ್ನು ಬರೀ ಸಂವಿಧಾನಕ್ಕೆ ಮತ್ತು ಅವರ ಸಮುದಾಯಕ್ಕೆ, ಪ್ರತಿಮೆಗಳಿಗೆ, ಪೋಟೋ ಫ್ಲಕ್ಸ್ಗಳಿಗೆ ಕಟ್ಟಿಹಾಕುತ್ತಾರೆ. ಆದರೆ ಅಂಬೇಡ್ಕರ್ ವಾದ ಇದಲ್ಲ, ಅಂಬೇಡ್ಕರ್ ವಾದ ಅಂದರೇ ನನ್ನ ಕಣ್ಣಲ್ಲಿ ಅದು ಒಂದು ಉತ್ತಮ ಸಮಾಜದ ಕನಸ್ಸು, ನಗರೀಕರಣದ ಹೆಸರಲ್ಲಿ ದೊಡ್ಡ ದೊದ್ದ ಫ್ಲೇವರ್, ಬಿಲ್ಡಿಂಗ್ಗಳು ಇದರಿಂದ ಬಡವರ ಮೇಲಾಗುವ ಶೋಷಣೆ ದಬ್ಬಾಳಿಕೆ ಅಂಬೇಡ್ಕರ್ ಕನಸ್ಸಲ್ಲ. ಅಂಬೇಡ್ಕರ್ ಕಂಡ ಕನಸ್ಸು ಸಮ-ಸಮಾಜ ನಿರ್ಮಾಣನಾವೆಲ್ಲರು ಒಂದೆ ಸರಿಸಮಾನರು ಎಂಬುದೆ ಅಂಬೇಡ್ಕರ್ ರವರ ಕನಸ್ಸುನ್ನು ನನಸು ಮಾಡಬೇಕು, ನಾವು ಬೇರೆ ಬೇರೆ ಜಾತಿ,ಧರ್ಮ, ಲಿಂಗಳಲ್ಲಿ ಹುಟ್ಟಿದ್ದರು ಇದ್ಯಾವುದು ನಮ್ಮ ಆಯ್ಕೆ ಅಲ್ಲ. ನಾವು ಅಂಬೇಡ್ಕರ್ವಾದಿಗಳಾಗಬೇಕು ಅದೇ ಆದರ್ಶ ಸಮಾಜ. ಅದೇ ಸಮ-ಸಮಾಜ ಎಂದರು.ನಂತರ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ ನರಸಿಂಹಮೂರ್ತಿ ರವರು ಮಾತನಾಡಿ ಸಂವಿಧಾನ ಜಾರಿಯಾಗಿ 75 ವರ್ಷಗಳಾಗುತ್ತಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ರವರು 135 ವರ್ಷಗಳ ಹಿಂದೇ ಹುಟ್ಟದೇ ಹೋಗಿದ್ದರೆ ನಮ್ಮ ಬದುಕು ಹೇಗಿರುತ್ತಿತ್ತು ಈ ದೇಶದಲ್ಲಿ ದಲಿತರ ಜೀವನ ಯಾವ ರೀತಿ ಇತ್ತು ಎಂಬುದನ್ನು ಅನುಭವಿಸಿರುವಂತವರು ಇದ್ದೇವೆ. ಜಾತಿಯ ಈ ದಬ್ಬಾಳಿಕೆ ಬಹಳ ನಿಕೃಷ್ಠವಾಗಿರುಂತಹ ಜಾತಿಯನ್ನು ಬಹಳ ಪ್ರಭಲವಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ತಮ್ಮ ಜೀವಮಾನದುದ್ದಕ್ಕೂ ಸಹಾ ಪ್ರತಿಪಾದನೆ ಮಾಡುತ್ತ ಬರುತ್ತಾರೆ, ಶ್ರೇಣೀಕೃತ ಸಮಾಜದಲ್ಲಿ ಮನುಷ್ಯರನ್ನು ಮನುಷ್ಯರಾಗಿ ನೋಡಬೇಕು, ಮನುಷ್ಯರನ್ನು ತಾರತಮ್ಯದಿಂದ ನೋಡಬಾರದು ನಮಗೆ ದೇವಸ್ಥಾನ ಪ್ರವೇಶ ಕೋಡದೇ ಇದಿದ್ದರೇ ಯಾವ ರೀತಿ ಹಿಂದೂ ಸಮಾಜ ನಿರ್ಮಾಣಮಾಡಲಿಕ್ಕೆ ಸಾಧ್ಯವಾಗುತ್ತದೆ ಇದನ್ನು ವಿರೋಧಿಸಿ ಕಳರಾಮ ಮಂದಿರ ಪ್ರವೇಶ ಮಾಡುತ್ತಾರೆ, ಕುಡಿಯಲು ನೀರನ್ನು ಕೊಡದಿರುವ ಸಂದರ್ಭದಲ್ಲಿ ಮಹಾಡ್ ಕೆರೆ ನೀರನ್ನು ಮುಟ್ಟಿ ಅದನ್ನು ಕುಡಿಯುವಂತಹ ಸಂದರ್ಭದಲ್ಲಿ ಇಡೀ ದೇಶಾದ್ಯಂತ ದಲಿತ ಮೇಲೆ ಹಲ್ಲೆಯನ್ನು ಮಾಡಲಾಗುತ್ತದೆ, ಆದರೂ ಸಹಾ ಬಹಳ ದೃಢ ಸಂಕಲ್ಪ ಮಾಡಿ ನೀರನ್ನು ಮುಟ್ಟಿ, ದೇವಸ್ಥಾನ ಪ್ರವೇಶ ಮಾಡಿ ದಲಿತರಿಗೆ ಭೂಮಿ ಕೊಡಬೇಕು, ಹೆಣ್ಣು ಮಕ್ಕಳಿಗೆ ರಾಜಕೀಯ ಪ್ರಾತಿನಿಧ್ಯ ಕೊಡಬೇಕು, ಕಾರ್ಮಿಕರಿಗೆ ಕಾನೂನುಗಳನ್ನು ಜಾರಿ ಮಾಡಬೇಕು ಎಂದರು. ಅದೇ ರೀತಿ ಮಾಜಿ ಉಪಪ್ರಧಾನಮಂತ್ರಿಗಳು ಹಾಗೂ ಹಸಿರುಕ್ರಾಂತಿ ಹರಿಕಾರ ಬಾಬು ಜಗಜೀವನ್ ರಾಮ್ ರವರು ದೇಶ ಸ್ವಾವಲಂಭಿನೆಯ ಅಭಿವೃದ್ಧಿಗಾಗಿ ಶ್ರಮಿಸಿದದವರಲ್ಲಿ ಒಬ್ಬರು ಅವರ ತತ್ವ ಆದರ್ಶಗಳು ಈಗಿನ ರಾಜಕಾರಣಗಳಿಗೆ ಯುವಜನರಿಗೆ ಮಾಧರಿಯಾಗಲಿ ಎಂದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬಾಬು ಜಗಜೀವನರಾಂ ರವರ ಪ್ರಶಸ್ತಿ ಪುರಸ್ಕೃತರಾದ ಚಂದ್ರಮ್ಮ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಸಂಚಾಲಕರಾದ ಅನುಪಮಾ, ಎಸ್ಸಿ/ಎಸ್ಪಿ ಟಿಎಸ್ಪಿ ಜಾಗೃತ ವೇದಿಕೆಯ ವೆಂಕಟೇಶ್, ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಮಕೃಷ್ಣ, ತೇಜಸ್, ಹನುಮಂತಕಟ್ಟಿಮನಿ, ವಿಶಾಲಾಕ್ಷಮ್ಮ, ಕಲಾವತಿ, ಮತ್ತು ಅರುಣಾ. ರಾಜಶೇಖರ್. ಕಾರ್ತಿಕ್. ಜಯಂತ್ ಮುಖಂಡರಾದ ಅರಸನ್, ರಾಜು, ತಿರುಪಾಲಮ್ಮ, ರೇಷ್ಮಾ, ಬಿಬಿಎಂಪಿ ಪೌರಕಾರ್ಮಿಕರಾದ ಲಕ್ಷ್ಮಮ್ಮ. ನಿರೂಪಣೆಯನ್ನು ಶ್ರೀಮತಿ ಜ್ಯೋತಿ, ವಂದನಾರ್ಪಣೆಯನ್ನು ಶೋಭಾರಾಣಿ, ಸ್ವಾಗತವನ್ನು ಮಂಜುಬಾಯಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಹೋರಾಟದ ಹಾಡುಗಳನ್ನು ತುಮಕೂರು ಸ್ಲಂ ಸಮಿತಿಯ ಅರುಣ್,ತಿರುಮಲಯ್ಯ, ಕೃಷ್ಣಮೂರ್ತಿ ಸಂಘಡಿಗರು ಹಾಡಿದರು. ಸುಣ್ಣದ ಗೂಡು ಅಂಬೇಡ್ಕರ್ ನಗರ ಶರೀಫ್ ನಗರ ಅಕ್ಕಿ ಯಪ್ಪಾ ಗಾರ್ಡನ್ ಬಿಕೆ ನಗರ ವಿನಾಯಕಪುರ ಮತ್ತು ಕರಿ ಮಂಡಿ ಸ್ಲಂ ಗಳಿಂದ ಅನೇಕ ಜನರು ಭಾಗವಹಿಸಿದ್ದರು.

ಪಾವಗಡ ತಾಲ್ಲೂಕಿನ ಅಂಗನವಾಡಿ ನೌಕರರ ಸಂಘ ಮತ್ತು ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪಟ್ಟಣದ SSK ರಂಗಮಂದಿರದಲ್ಲಿ ಇಂದು ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ-2026

ಪಾವಗಡ ತಾಲ್ಲೂಕಿನ ಅಂಗನವಾಡಿ ನೌಕರರ ಸಂಘ ಮತ್ತು ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪಟ್ಟಣದ SSK ರಂಗಮಂದಿರದಲ್ಲಿ ಇಂದು ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ-2026 ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕ ಮಹಿಳೆಯರಿಗೆ ಸನ್ಮಾನ ಮಾಡುವ ಕಾರ್ಯಕ್ರಮದಲ್ಲಿ ಮಾನ್ಯ ಜನಪ್ರಿಯ ಶಾಸಕರಾದ ಹೆಚ್ ವಿ ವೆಂಕಟೇಶ್ ರವರು ಭಾಗಿಯಾಗಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿ ಅದ್ಬುತವಾದ ನೃತ್ಯ ಮಾಡಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡಿ ಗೌರವಿಸಿದರು.ಈ ವೇಳೆ BEO ರೇಣುಕಮ್ಮ, ಪುರಸಭಾ ಮಾಜಿ ಅಧ್ಯಕ್ಷರಾದ ಸುದೇಶ್ ಬಾಬು,ಪಿ ಹೆಚ್ ರಾಜೇಶ್,ತಾ.ಪಂ ಮಾಜಿ ಉಪಾಧ್ಯಕ್ಷರಾದ ಐ ಜಿ ನಾಗರಾಜ್, ಗುತ್ತಿಗೆದಾರರಾದ ಆರ್ ಎ ಹನುಮಂತರಾಯಪ್ಪ,ಸಿಡಿಪಿಒ ಸುನೀತಾ, ಎಸಿಡಿಪಿಒ ರಕೀಬ್, ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೇಯರಾದ ಸುಮಾ ಅನಿಲ್, ಉಷಾರಾಣಿ, ಅಂಗನವಾಡಿ ನೌಕರ ತಾಲ್ಲೂಕು ಅಧ್ಯಕ್ಷೆ ಸುಶೀಲಮ್ಮ,ಆಹಾರ ಇಲಾಖೆಯ ಶಶಿಕಲಾ, ಸರ್ಕಲ್ ಇನ್ಸ್ಪೆಕ್ಟರ್ ಸುರೇಶ್,LHV ಪ್ರಭಾಮಣಿ, ಸರಸ್ವತಮ್ಮ,ಸರೋಜಮ್ಮ,ಸಿದ್ದಗಂಗಮ್ಮ,ಡಿ ಎಂ ಮಣಿ ರವರು ಸೇರಿ ಇನ್ನೂ ಅನೇಕ ಮಹಿಳಾ ಸಾಧಕರು ಸೇರಿ ಆಯೋಜಕರು ಹಾಜರಿದ್ದರುವರದಿ ರಾಮಪ್ಪ ಸಿ ಕೆ ಪುರಕಲ್ಪತರು ನ್ಯೂಸ್ ಪಾವಗಡ

ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನಲ್ಲಿ ಬೇಸಿಗೆಯ ಬಿಸಿಲಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ

ಕೆ.ಆರ್. ನಗರ ತಾಲೂಕಿನಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ತೇಜಸ್ವಿ ನಾಗಲಿಂಗಸ್ವಾಮಿ ಮನವಿಮೈಸೂರು: ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನಲ್ಲಿ ಬೇಸಿಗೆಯ ಬಿಸಿಲಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಬೇಸರ‌ ವ್ಯಕ್ತಪಡಿಸಿದ್ದಾರೆ.ಮಳೆ ಕೊರತೆ, ಕೆಆರ್‌ಎಸ್‌ ಜಲಾಶಯದ ನೀರು ತಗ್ಗಿದ ಕಾರಣ ಪಟ್ಟಣ ಮತ್ತು ಗ್ರಾಮೀಣ ಭಾಗಗಳು ಸೇರಿದಂತೆ ಹಲವೆಡೆ ನೀರಿನ ಅಭಾವ ತಲೆದೋರಿ ಜನಜೀವನ ಅಸ್ತವ್ಯಸ್ತ ಆಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.ಸ್ಥಳಿಯ ಶಾಸಕರಾದ ಡಿ. ರವಿಶಂಕರ್ ಅವರು ಕೂಡಲೇ ಅಧಿಕಾರಿಗಳಿಗೆ ಆದೇಶ ನೀಡಿ ಪರ್ಯಾಯ ವ್ಯವಸ್ಥೆಗಳನ್ನು ಮಾಡುವಂತೆ ತೇಜಸ್ವಿ ನಾಗಲಿಂಗಸ್ವಾಮಿ ಒತ್ತಾಯಿಸಿದ್ದಾರೆ.ಬೇಸಿಗೆ ಹೆಚ್ಚಾದಂತೆ ಕುಡಿಯುವ ನೀರಿನ ಸಮಸ್ಯೆ ಸಹಜವಾಗಿ ಹೆಚ್ಚಾಗುತ್ತದೆ ಈಗಾಗಲೇ ಪಟ್ಟಣ ಮಟ್ಟದಲ್ಲಿ ನಾಲ್ಜೈದು ದಿನಗಳಿಗೊಮ್ಮೆ ನೀರು ಬಿಡುತ್ತಿದ್ದು ಕೆಲವೊಮ್ಮೆ ಒಂದು ವಾರಕಳೆದರು ನೀರು ಬಿಡದ ಕಾರಣ ಜನರಿಗೆ ತೀವ್ರವಾಗಿ ತೊಂದರೆ ಉಂಟಾಗಿದೆ.ಶಾಸಕರಾದ ಡಿ, ರವಿಶಂಕರ್ ಅವರು ಈಗಾಗಲೇ ಹಳೆ ಎಡತೊರೆಯ ನೀರಿನ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.ಈ ಕುರಿತು ಶಾಸಕರು ಶೀಘ್ರ ಕ್ರಮ ಕೈಗೊಂಡು ಟ್ಯಾಂಕರ್ ಗಳ ಮೂಲಕ ಮನೆಗಳಿಗೆ ನೀರು ಪೂರೈಸುವಂತೆ ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದ್ದಾರೆ.

ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನಲ್ಲಿ ಬೇಸಿಗೆಯ ಬಿಸಿಲಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ
ಚಾಮುಂಡಿ ಬೆಟ್ಟದ ಬಳಿ ವ್ಯಕ್ತಿ ಹತ್ಯೆ:ರೌಡಿ ಚಟುವಟಿಕೆ ಮಟ್ಟಹಾಕಲು ತೇಜಸ್ವಿ ಆಗ್ರಹಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವ್ಯಕ್ತಿಯ ತಲೆಯ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಲಾಗಿದ್ದು, ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕುವಂತೆ ಪೋಲಿಸ್ ಇಲಾಖೆಗೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಮನವಿ
ಚಾಮುಂಡಿ ಬೆಟ್ಟದ ಬಳಿ ವ್ಯಕ್ತಿ ಹತ್ಯೆ:ರೌಡಿ ಚಟುವಟಿಕೆ ಮಟ್ಟಹಾಕಲು ತೇಜಸ್ವಿ ಆಗ್ರಹಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವ್ಯಕ್ತಿಯ ತಲೆಯ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಲಾಗಿದ್ದು, ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕುವಂತೆ ಪೋಲಿಸ್ ಇಲಾಖೆಗೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಮನವಿ

ಚಾಮುಂಡಿ ಬೆಟ್ಟದ ಬಳಿ ವ್ಯಕ್ತಿ ಹತ್ಯೆ:ರೌಡಿ ಚಟುವಟಿಕೆ ಮಟ್ಟಹಾಕಲು ತೇಜಸ್ವಿ ಆಗ್ರಹಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವ್ಯಕ್ತಿಯ ತಲೆಯ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಲಾಗಿದ್ದು, ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕುವಂತೆ ಪೋಲಿಸ್ ಇಲಾಖೆಗೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದ್ದಾರೆ.ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವ್ಯಕ್ತಿಯ ತಲೆಯ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯನ್ನು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.ಕೆಲವು ತಿಂಗಳುಗಳಿಂದ ಮೈಸೂರಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿತ್ತು,ಆದರೆ ಈಗ ಮತ್ತೆ ರೌಡಿ ಚಟುವಟಿಕೆ ಇಂದ ಜನರಲ್ಲಿ ಆತಂಕ ಉಂಟಾಗಿದೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಹೇಳಿದ್ದಾರೆ.ತಕ್ಷಣ ಹತ್ಯೆ ಮಾಡಿರುವವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಇಂತಹವರನ್ನು ಗಡಿಪಾರು ಮಾಡಬೇಕು ಎಂದು ನಾಗಲಿಂಗಸ್ವಾಮಿ ಒತ್ತಾಯಿಸಿದ್ದಾರೆ.

ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ರೋಡಲಬಂಡ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್ನು ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು

ರೋಡಲಬಂಡದಲ್ಲಿ ಅಂಬೇಡ್ಕರ್ ಜಯಂತಿ: ದಸಂಸ ಗ್ರಾಮ ಘಟಕ ರಚನೆ ಭಾವಚಿತ್ರದ ಅದ್ದೂರಿ ಮೆರವಣಿಗೆ, ಶಂಭುಲಿಂಗ ಎಸ್. ಅಧ್ಯಕ್ಷರಾಗಿ ಆಯ್ಕ* ಏ.14:* ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ರೋಡಲಬಂಡ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್ನು ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರದ *ಅದ್ದೂರಿ ಮೆರವಣಿಗೆ* ನಡೆಸಲಾಯಿತು. ಯುವಕರು, ಹಿರಿಯರು *”ಜೈ ಭೀಮ್”* ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ನಡೆದ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಲಾಯಿತು.*ಇದೇ ಸಂದರ್ಭದಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ (ದಸಂಸ) ರೋಡಲಬಂಡ ಗ್ರಾಮ ಘಟಕದ* ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.*ಸರ್ವಾನುಮತದಿಂದ ಆಯ್ಕೆಯಾದ ನೂತನ ಪದಾಧಿಕಾರಿಗಳು:* *ಅಧ್ಯಕ್ಷರಾಗಿ: ಶಂಭುಲಿಂಗ ಎಸ್.* *ಉಪಾಧ್ಯಕ್ಷರಾಗಿ: ವಂದ್ನೆಪ್ಪ* *ಕಾರ್ಯದರ್ಶಿಯಾಗಿ: ಕ್ಷೀರಲಿಂಗ ರಾಯ್* *ಖಜಾಂಚಿಯಾಗಿ: ದುರ್ಗಪ್ಪ* *ಕಾರ್ಯಕರ್ತರಾಗಿ: ಭೀಮೇಶ್, ರಮೇಶ್, ಪವನ್ ಕುಮಾರ್* ಅವರನ್ನು ಆಯ್ಕೆ ಮಾಡಲಾಯಿತು.ನೂತನ ಅಧ್ಯಕ್ಷ ಶಂಭುಲಿಂಗ ಎಸ್. ಮಾತನಾಡಿ, “ಪ್ರೊ. ಬಿ. ಕೃಷ್ಣಪ್ಪ ಅವರ ಆಶಯದಂತೆ ಗ್ರಾಮದಲ್ಲಿ ದಸಂಸ ಸಂಘಟನೆ ಬಲಪಡಿಸಿ, ಡಾ. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡುತ್ತೇವೆ. ಶೋಷಿತರ ಪರವಾಗಿ ದನಿ ಎತ್ತುತ್ತೇವೆ” ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Call Us Now
WhatsApp