ತುಮಕೂರು ನಗರ ಕುಣಿಗಲ್ ರಸ್ತೆಗೆ ಲಗತ್ತಾಗಿರುವ ಮರಳುರಿನ ಸುಹೇಲ್ ಟೈಲರ್ ಮಾಲೀಕರಾದ ಅಜ್ಗರ ಅಹಮದ್ ಮತ್ತು ಮರಳೂರಿನ ಮುಖಂಡರು ಮತ್ತು ಜಯ ಕರುನಾಡು ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಎಲ್ಲರೂ ಸೇರಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು

ತುಮಕೂರು ನಗರ ಕುಣಿಗಲ್ ರಸ್ತೆಗೆ ಲಗತ್ತಾಗಿರುವ ಮರಳುರಿನ ಸುಹೇಲ್ ಟೈಲರ್ ಮಾಲೀಕರಾದ ಅಜ್ಗರ ಅಹಮದ್ ಮತ್ತು ಮರಳೂರಿನ ಮುಖಂಡರು ಮತ್ತು ಜಯ ಕರುನಾಡು ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಎಲ್ಲರೂ ಸೇರಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು . ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕವನ್ನು ಪೆನ್ನು ಪೆನ್ಸಿಲ್ ಗಳನ್ನು ವಿತರಿಸಲಾಯಿತು . ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಕೌಸರ್ ಪಾಷಾ ಹಾಗೂ ಮಸೀದಿಯ ಮೌಲಾನಾ ಅಬ್ದುಲ್ ವಾಜಿದ್ ರವರು ಸ್ಥಳೀಯರಾದ ಇಬ್ರಾಹಿಂ ಸಾಬ್ ಆಟೋ ಹುಸೇನ್ ರವರು ಚಾಲಕರಾದ ಅನ್ವರ್ ಖಾನ್ ರವರು ಜಯ ಕರುನಾಡು ರಕ್ಷಣಾ ವೇದಿಕೆ ಅಧ್ಯಕ್ಷರಾದ ಜಬಿವುಲ್ಲಾ ( ಬಾಬು) ಸೈಯದ್ ಅಲ್ತಾಫ್ ಆದಿಲ್ ಭಾಷಾ ಮತ್ತು ಮುಖಂಡರಾದ ಅಮ್ಜದ್ ಅತಿಕ್ ಶಂಶೀರ್ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಮಿಕರ ವಿಭಾಗದ ಜಿಲ್ಲಾಧ್ಯಕ್ಷರಾದ ವಿ ಎಸ್ ಸೈಯದ್ ದಾದಾಪೀರ್ ರವರು ಮತ್ತಿತರರು ಭಾಗವಹಿಸಿದ್ದರು ಈ ಕಾರ್ಯಕ್ರಮಕ್ಕೆ. ಸೈಯದ್ ಮಸೂದ್ ರವರು ತಿಂಡಿ ವ್ಯವಸ್ಥೆ ಕಲ್ಪಿಸಿದರು ವರದಿ ಸಲ್ಮಾನ್ ಪಾಷಾ ಕಲ್ಪತರು ನ್ಯೂಸ್ ತುಮಕೂರು

ತುಮಕೂರು:ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ಬೀದಿ ವ್ಯಾಪಾರಿಗಳ ವಿರುದ್ಧ ನಡೆಸುತ್ತಿರುವ ಎತ್ತಂಗಡಿ ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಬೇಕು.ಆ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಪಾಲಿಕೆ 80ನೇ ಸ್ವಾತಂತ್ರೋತ್ಸವ ಶುಭಾಶಯ ಕೋರುವಂತೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಜಿಲ್ಲಾಧ್ಯಕ್ಷ ತಾಜುದ್ದೀನ್ ಶರೀಫ್ ಆಗ್ರಹಿಸಿದ್ದಾರೆ

ತುಮಕೂರು:ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ಬೀದಿ ವ್ಯಾಪಾರಿಗಳ ವಿರುದ್ಧ ನಡೆಸುತ್ತಿರುವ ಎತ್ತಂಗಡಿ ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಬೇಕು.ಆ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಪಾಲಿಕೆ 80ನೇ ಸ್ವಾತಂತ್ರೋತ್ಸವ ಶುಭಾಶಯ ಕೋರುವಂತೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಜಿಲ್ಲಾಧ್ಯಕ್ಷ ತಾಜುದ್ದೀನ್ ಶರೀಫ್ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಬೀದಿ ವ್ಯಾಪಾರಿಗಳ ಎತ್ತಂಗಡಿ ಕಾರ್ಯಾಚರಣೆ ಸಂಪೂರ್ಣವಾಗಿ ಕಾನೂನು ಬಾಹಿರವಾಗಿದ್ದು, ಬಡವರ ಘನತೆಗೆ ಧಕ್ಕೆ ತರುವ ಸರಕಾರದ ನಡೆ ಖಂಡನೀಯ. ರಸ್ತೆಗಳಲ್ಲಿ ಪಾದಚಾರಿಗಳು ಮತ್ತು ಬೀದಿ ವ್ಯಾಪಾರಿಗಳು ಸಹಜೀವನ ನಡೆಸಲು ಸಾಧ್ಯವಿದೆ.ಇವರ ನಡುವೆ ವೈರತ್ವ ಸೃಷ್ಟಿಸುವ ಬದಲು,ಇಬ್ಬರ ಹಕ್ಕುಗಳನ್ನು ರಕ್ಷಿಸುವಂತಹ ವೈಜ್ಞಾನಿಕ ವ್ಯವಸ್ಥೆಯನ್ನು ಸರಕಾರ ರೂಪಿಸಬೇಕು ಎಂದಿದ್ದಾರೆ.ನಗರದ ಜನರಿಗೆ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತುಗಳು ಹಾಗೂ ಉತ್ತಮ ಗುಣಮಟ್ಟದ ಸರಕುಗಳನ್ನು ಒದಗಿಸುವ ಬೀದಿ ವ್ಯಾಪಾರವು ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದೆ. ಆದರೆ, ಮುಖ್ಯರಸ್ತೆಗಳು ಮತ್ತು ಪ್ರಮುಖ ಜಂಕ್ಷನ್‌ಗಳಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬ ಮೌಖಿಕ ಆದೇಶವನ್ನು ನೆಪ ಮಾಡಿಕೊಂಡು, ಯಾವುದೇ ಮುನ್ಸೂಚನೆ ನೀಡದೆ ಜೆಸಿಬಿಗಳೊಂದಿಗೆ ತೆರಳಿ ವ್ಯಾಪಾರಿಗಳ ಗಾಡಿಗಳು ಹಾಗೂ ಸರಕುಗಳನ್ನು ನಾಶಪಡಿಸುವುದು ಅಮಾನವೀಯ ಮತ್ತು ಖಂಡನೀಯ. ಅಧಿಕಾರಿಗಳು ಕಾನೂನುಬದ್ಧ ಪ್ರಕ್ರಿಯೆಯನ್ನು ಅನುಸರಿಸಬೇಕು ಎಂದು ತಾಜುದ್ದೀನ್ ಶರೀಫ್ ಹೇಳಿದರು.ಬೀದಿ ವ್ಯಾಪಾರಿಗಳ ಜೀವನೋಪಾಯದ ಹಕ್ಕಿಗೆ ಕಾನೂನು ರಕ್ಷಣೆ ಇದೆ. ಅವರ ಹಕ್ಕುಗಳ ರಕ್ಷಣೆಗೆ 2014ರಲ್ಲಿ ಬೀದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಕಾಯ್ದೆ ಜಾರಿಗೆ ಬಂದಿದೆ. ತುಮಕೂರು ನಗರದಲ್ಲಿ ಸುಮಾರು 2000 ಮಂದಿ ಬೀದಿ ವ್ಯಾಪಾರಿಗಳಿದ್ದು, ಅನೇಕ ವ್ಯಾಪಾರಿಗಳನ್ನು ಸಮೀಕ್ಷೆಯಿಂದ ಹೊರಗಿಡಲಾಗಿದೆ. ಗುರುತಿನ ಚೀಟಿ ಮತ್ತು ಪ್ರಮಾಣಪತ್ರ ನೀಡುವಲ್ಲಿ ವಿಫಲವಾಗಿರುವ ಅಧಿಕಾರಿಗಳು ಇದೀಗ ಅದೇ ಬಡವರ ಬದುಕಿನ ಮೇಲೆ ದಾಳಿ ನಡೆಸುತ್ತಿರುವುದು ವಿಪರ್ಯಾಸ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಕಾಯ್ದೆಯ ಪ್ರಕಾರ ಸಮೀಕ್ಷೆ ಪೂರ್ಣಗೊಂಡು ಅರ್ಹ ಬೀದಿ ವ್ಯಾಪಾರಿಗಳಿಗೆ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅವರನ್ನು ಮನಬಂದAತೆ ಎತ್ತಂಗಡಿ ಮಾಡಬಾರದು.ಹಾಗೆಯೇ, ‘ನೋ-ವೆಂಡಿAಗ್ ಜೋನ್’ ಘೋಷಿಸುವ ಮುನ್ನ ಟೌನ್ ವೆಂಡಿAಗ್ ಸಮಿತಿಯ ಕಾನೂನುಬದ್ಧ ಪ್ರಕ್ರಿಯೆ ಮತ್ತು ಶಿಫಾರಸುಗಳನ್ನು ಪಾಲಿಸಬೇಕು. ಪರ್ಯಾಯ ವ್ಯಾಪಾರ ಸ್ಥಳ ಕಲ್ಪಿಸದೆ ಮುಖ್ಯರಸ್ತೆಗಳನ್ನು ಏಕಾಏಕಿ ‘ನೋ-ವೆಂಡಿAಗ್ ಜೋನ್’ ಎಂದು ಘೋಷಿಸಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುವುದು ನ್ಯಾಯಸಮ್ಮತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನೊಟೀಷ್ ನೀಡದೆ ಎತ್ತಂಗಡಿ ಮಾಡಿರುವ ಬೀದಿ ವ್ಯಾಪಾರಿಗಳಿಗೆ ಅದೇ ಸ್ಥಳದಲ್ಲಿ ಅಥವಾ ಸಮೀಪದ ಸೂಕ್ತ ಸ್ಥಳದಲ್ಲಿ ಪುನಃ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು.ಪಾದಚಾರಿಗಳ ಸಂಚಾರಕ್ಕೆ ನಿಜವಾಗಿಯೂ ಅಡ್ಡಿಯಾಗುವ ಸ್ಥಳಗಳಿದ್ದರೆ, ಪರ್ಯಾಯ ರಸ್ತೆಬದಿ ವ್ಯಾಪಾರ ಸ್ಥಳಗಳನ್ನು ತಕ್ಷಣ ಗುರುತಿಸಿ ಒದಗಿಸಬೇಕು.ಬೀದಿ ವ್ಯಾಪಾರಿಗಳ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು.ನಗರದಲ್ಲಿ ಸಮಗ್ರ ಮರುಸಮೀಕ್ಷೆ ನಡೆಸಿ ಅರ್ಹ ಎಲ್ಲ ಬೀದಿ ವ್ಯಾಪಾರಿಗಳನ್ನು ಗುರುತಿಸಿ ಗುರುತಿನ ಚೀಟಿ ಮತ್ತು ಪ್ರಮಾಣಪತ್ರ ನೀಡಬೇಕು.ಟೌನ್ ವೆಂಡಿAಗ್ ಸಮಿತಿಯನ್ನು ಕಾನೂನುಬದ್ಧವಾಗಿ ರಚಿಸಿ, ಬೀದಿ ವ್ಯಾಪಾರಿಗಳ ಪ್ರತಿನಿಧಿತ್ವವನ್ನು ಖಚಿತಪಡಿಸಬೇಕು.ಪಾದಚಾರಿ ಮಾರ್ಗಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿ ಪಾದಚಾರಿಗಳು ಹಾಗೂ ಬೀದಿ ವ್ಯಾಪಾರಿಗಳಿಗೂ ಸೂಕ್ತ ಸ್ಥಳ ಕಲ್ಪಿಸಬೇಕು.ನಿಜವಾದ ಒತ್ತುವರಿದಾರರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು.ಬೀದಿ ವ್ಯಾಪಾರಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ನ್ಯಾಯಯುತವಾಗಿ ಪರಿಹರಿಸಬೇಕು .ಆ ಮೂಲಕ 80ನೇ ಸ್ವಾತಂತ್ರ ದಿನ ಶುಭಾಶಯಗಳನ್ನು ಸಲ್ಲಿಸುವಂತೆ ತಾಜುದ್ದೀನ್ ಷರೀಫ್ ಒತ್ತಾಯಿಸಿದ್ದಾರೆ.

ಇಂದು ತೀವ್ರ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳ ನಡುವೆ ಕ್ಷುಲ್ಲಕ ವಿಷಯಕ್ಕೆ ಮಾರಮಾರಿ ಘರ್ಷಣೆ ನಡೆದಿದ್ದು ಹಲವರು ಗಾಯಗೊಂಡು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ

ಇಂದು ತೀವ್ರ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳ ನಡುವೆ ಕ್ಷುಲ್ಲಕ ವಿಷಯಕ್ಕೆ ಮಾರಮಾರಿ ಘರ್ಷಣೆ ನಡೆದಿದ್ದು ಹಲವರು ಗಾಯಗೊಂಡು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.ತುಮಕೂರು ನಗರ ಠಾಣೆ ಪೊಲೀಸರು ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖಾ ಕಾರ್ಯ ಮುಂದುವರಿಸಿದ್ದಾರೆ.ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಶೋಕ್ ಕೆ ವಿ. ಆಡಿಷನಲ್ ಎಸ್ ಪಿ ಗಳಾದ ಗೋಪಾಲ್. ಪುರುಷೋತ್ತಮ್ ಮತ್ತು ಇನ್ನಿತರ ಅಧಿಕಾರಿಗಳು ಭೇಟಿ ನೀಡಿದ್ದಾರೆ.ಹುರುಳಿ ತೋಟದಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.ಪೊಲೀಸರ ತನಿಖೆಯಿಂದಷ್ಟೇ ಘಟನೆ ಬಗ್ಗೆ ಸ್ಪಷ್ಟ ಮಾಹಿತಿ ಹೊರ ಬರಬೇಕಿದೆ.

ರೈತರ 206 ಕೋಟಿ ರೂ. ರಾಗಿ ಹಣ ಬಿಡುಗಡೆಗೆ ಆಗ್ರಹಸಂಕಷ್ಟದಲ್ಲಿರುವ ರೈತರಿಗೆ ಬಾಕಿ ಹಣ ತಕ್ಷಣ ಪಾವತಿಸಲು ಬಿಜೆಪಿ ರೈತ ಮೋರ್ಚಾ ಒತ್ತಾಯತುಮಕೂರು: ಮಳೆ ಕೊರತೆ, ಬರ ಪರಿಸ್ಥಿತಿ ಹಾಗೂ ಬಿತ್ತನೆಗೆ ಅಗತ್ಯವಾದ ಹಣದ ಕೊರತೆಯಿಂದ ರೈತರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ರೈತರಿಗೆ ಕಳೆದ ವರ್ಷದಿಂದ ಬಾಕಿ ಇರುವ 206 ಕೋಟಿ ರೂ. ರಾಗಿ ಖರೀದಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ರೈತ ಮೋರ್ಚಾ ಆಗ್ರಹಿಸಿದೆ

ರೈತರ 206 ಕೋಟಿ ರೂ. ರಾಗಿ ಹಣ ಬಿಡುಗಡೆಗೆ ಆಗ್ರಹಸಂಕಷ್ಟದಲ್ಲಿರುವ ರೈತರಿಗೆ ಬಾಕಿ ಹಣ ತಕ್ಷಣ ಪಾವತಿಸಲು ಬಿಜೆಪಿ ರೈತ ಮೋರ್ಚಾ ಒತ್ತಾಯತುಮಕೂರು: ಮಳೆ ಕೊರತೆ, ಬರ ಪರಿಸ್ಥಿತಿ ಹಾಗೂ ಬಿತ್ತನೆಗೆ ಅಗತ್ಯವಾದ ಹಣದ ಕೊರತೆಯಿಂದ ರೈತರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ರೈತರಿಗೆ ಕಳೆದ ವರ್ಷದಿಂದ ಬಾಕಿ ಇರುವ 206 ಕೋಟಿ ರೂ. ರಾಗಿ ಖರೀದಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ರೈತ ಮೋರ್ಚಾ ಆಗ್ರಹಿಸಿದೆ.ಈ ಸಂಬಂಧ ಗುರುವಾರ ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ರೈತ ಮೋರ್ಚಾ ಮುಖಂಡರು, ರಾಗಿ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ರೈತರಿಗೆ ಹಣ ಪಾವತಿಯಾಗದಿರುವುದು ಖಂಡನೀಯ. ತಕ್ಷಣವೇ ಬಾಕಿ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವಂತೆ ಒತ್ತಾಯಿಸಿದರು.ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ತುಮಕೂರು ಜಿಲ್ಲೆ ರಾಜ್ಯದ ಪ್ರಮುಖ ರಾಗಿ ಉತ್ಪಾದನಾ ಜಿಲ್ಲೆಗಳಲ್ಲಿ ಒಂದಾಗಿದ್ದು, ಸಾವಿರಾರು ರೈತರು ರಾಗಿ ಬೆಳೆಯನ್ನೇ ಪ್ರಮುಖ ಆದಾಯದ ಮೂಲವನ್ನಾಗಿ ಅವಲಂಬಿಸಿದ್ದಾರೆ. ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲಾಗಿದ್ದು, ಸುಮಾರು 206 ಕೋಟಿ ರೂ. ಹಣ ಬಾಕಿ ಉಳಿದಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.ಮಳೆ ಕೊರತೆ, ನೀರಿನ ಅಭಾವ ಹಾಗೂ ಬೆಳೆ ನಷ್ಟದಿಂದ ರೈತರು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಮತ್ತೊಂದೆಡೆ ರಾಗಿ ಬಿತ್ತನೆ ಮಾಡಲು ಬೀಜ, ಗೊಬ್ಬರ ಹಾಗೂ ಕೂಲಿ ವೆಚ್ಚ ಭರಿಸಲು ಹಣದ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದಿಂದ ಬರಬೇಕಾದ ರಾಗಿ ಖರೀದಿ ಹಣ ವಿಳಂಬವಾಗುತ್ತಿರುವುದು ರೈತರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ ಎಂದು ಅವರು ತಿಳಿಸಿದರು.ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್ ಮಾತನಾಡಿ, ರಾಗಿ ಬೆಳೆಯೇ ಬದುಕಿನ ಆಧಾರವಾಗಿರುವ ರೈತರಿಗೆ ಸರ್ಕಾರ ಸಂಕಷ್ಟದ ಸಮಯದಲ್ಲಿ ನೆರವಾಗಬೇಕಿತ್ತು. ಆದರೆ ಈಗಾಗಲೇ ಮಾರಾಟ ಮಾಡಿದ ರಾಗಿಯ ಹಣವೇ ಬಾಕಿ ಉಳಿದಿರುವುದು ಅನ್ಯಾಯವಾಗಿದೆ. ಯಾವುದೇ ವಿಳಂಬವಿಲ್ಲದೆ 206 ಕೋಟಿ ರೂ. ಬಾಕಿ ಹಣವನ್ನು ಅರ್ಹ ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಬೀರನಕಲ್ಲು ಸತೀಶ್, ಖಜಾಂಚಿ ಗಿರೀಶ್, ಕಾರ್ಯದರ್ಶಿ ಸಿದ್ಧರಾಜು, ನಗರ ಅಧ್ಯಕ್ಷ ರವೀಶ್, ಪ್ರಧಾನ ಕಾರ್ಯದರ್ಶಿ ಲೋಕೇಶ್ ಸೇರಿದಂತೆ ಚಂದ್ರಣ್ಣ, ಸೋಮಶೇಖರ್, ನಾಗೇಶ್, ಹರೀಶ್, ಕೀರ್ತಿ ಮತ್ತಿತರರು ಉಪಸ್ಥಿತರಿದ್ದರು.ವರದಿ: ಉದಯ್ ಕುಮಾರ್, ಕಲ್ಪತರು ನ್ಯೂಸ್, ತುಮಕೂರು

ದಿನಾಂಕ 12.08.2026ರಂದು ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ಮುಂಭಾಗವಿರುವ ರಾಜಕುಮಾರ್ ಪಾರ್ಕ್ ನಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು, ಸಂಘ ಸಂಸ್ಥೆಗಳು ಹಾಗು ವಿದ್ಯಾರ್ಥಿ ಒಕ್ಕೂಟಗಳ ಸಹಯೋಗದೊಂದಿಗೆ ಸಭೆ ಸೇರಿ, ದಿನಾಂಕ 13-8-2026ರ ಕರ್ನಾಟಕ ಬಂದ್ ವಿಚಾರವಾಗಿ ಪೂರ್ವಭಾವಿ ಸಭೆ ಸೇರಿದ್ದು ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಸಭೆ

ದಿನಾಂಕ 12.08.2026ರಂದು ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ಮುಂಭಾಗವಿರುವ ರಾಜಕುಮಾರ್ ಪಾರ್ಕ್ ನಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು, ಸಂಘ ಸಂಸ್ಥೆಗಳು ಹಾಗು ವಿದ್ಯಾರ್ಥಿ ಒಕ್ಕೂಟಗಳ ಸಹಯೋಗದೊಂದಿಗೆ ಸಭೆ ಸೇರಿ, ದಿನಾಂಕ 13-8-2026ರ ಕರ್ನಾಟಕ ಬಂದ್ ವಿಚಾರವಾಗಿ ಪೂರ್ವಭಾವಿ ಸಭೆ ಸೇರಿದ್ದು ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಸಭೆಯ ಅಧ್ಯಕ್ಷರಾದ ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷರಾದ ಎಂ.ಮೋಹನ್ ಕುಮಾರ್ ಗೌಡ ಅವರು ನಾಳಿನ ಬಂದ್ ಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸುವ ಮೂಲಕ ರಾಜ್ಯ ಸರ್ಕಾರವು ಎಲ್ಲಾ ಕನ್ನಡ ಸಂಘ-ಸಂಸ್ಥೆಗಳನ್ನು ತಾಳ್ಮೆಯಿಂದ ಇರುವಂತೆ ಎಲ್ಲ ಜವಾಬ್ದಾರಿಯನ್ನು ರಾಜ್ಯ ಸರ್ಕಾರವೇ ತೆಗೆದುಕೊಳ್ಳುತ್ತೇವೆ ಎಂಬ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ನಾಳಿನ ಬಂದ್ ನಲ್ಲಿ ಕನ್ನಡಪರ ಸಂಘಟನೆಗಳು ಕೈಕಟ್ಟಿ, ಬಾಯಿ ಮುಚ್ಚಿ ಮೌನವಹಿಸಿ ಒಂದು ಗಂಟೆಗಳ ಕಾಲ ಆರ್.ಗೇಟ್ ವೃತ್ತದಲ್ಲಿ ಸಾಂಕೇತಿಕವಾಗಿ ನಿದ್ರಾ ವ್ಯವಸ್ಥೆಗೆ ಜಾರುವ ಮೂಲಕ ವಿನೂತನ ಪ್ರತಿಭಟನೆ ಮಾಡಿ ರಾಜ್ಯ ಸರ್ಕಾರದ ಕಾರ್ಯ ಚಟುವಟಿಕೆಗಳನ್ನ ಗಮನಿಸುವ ಮುಖೇನ ತಮ್ಮ ಆಕ್ರೋಶವನ್ನು ಹೊರಹಾಕುವ ನಿರ್ಣಯವನ್ನು ಕೈಗೊಂಡರು,ಈ ಸಭೆಯಲ್ಲಿ ಎಂ.ಮೋಹನ್ ಕುಮಾರ್ ಗೌಡ, ಟಿ.ರವಿಗೌಡ, ಮಹದೇವಸ್ವಾಮಿ, ಮಂಡಕಳ್ಳಿ ಚಾಮರಾಜು, ಬೋಗಾದಿ ಸಿದ್ದೇಗೌಡ, ಟಿ ರವೀಂದ್ರ, ಗೋವಿಂದರಾಜು, ಲಾಲಾಬೀದಿ ರವಿ, ವಕೀಲ ಡಿ.ಆರ್.ಕರಿಗೌಡ, ಅರುಣ್ ಕುಮಾರ್, ಬಿ.ಮಹದೇವ, ಮೂಗೂರು ನಂಜುಂಡಸ್ವಾಮಿ, ಎಸ್.ಸಿದ್ದಪ್ಪ, ಬಸವರಾಜು, ಜೆ.ಉಮೇಶ, ಕೆ.ಜಿ.ಕೊಪ್ಪಲ್ ಶಂಕರ್, ಮಿಲ್ಕ್ ಮಂಜು, ಸಂಜಯ್, ಮದನ್, ಮಹೇಶ್ ಕುಮಾರ್, ತೇಜಸ್ವಿ ನಾಗಲಿಂಗ ಸ್ವಾಮಿ, ವಿಷ್ಣು, ಡಿಪಿಕೆ ಪರಮೇಶ್, ಎಂ.ಹರೀಶ್, ರಾಜಶೇಖರ್.ಬಿ.ಬಿ, ಎಸ್‌ನಾಗೇಶ್ ಯಾದವ್, ಜೆ.ಮಂಜುನಾಥ್, ಮೈನಾ ಲೋಕೇಶ್, ಪಾಲಹಳ್ಳಿ ರಾಮಕೃಷ್ಣ, ಎಸ್ ಬಾಲಕೃಷ್ಣ, ಎಂ.ರಮೇಶ, ಕೆ.ಮುಕುಂದ್, ಜಿ.ಪ್ರಕಾಶ್, ಎಂ.ವಿ.ಶ್ರೀನಿವಾಸಮಿತ್ರ, ಮಂಜುನಾಥ, ದ್ಯಾವಪ್ಪ ನಾಯಕ, ಆರ್.ಶ್ರೀನಿವಾಸ್, ಪ್ಯಾಲೇಸ್ ಬಾಬು, ಎಸ್.ವಿ.ಶಿವನಾಯಕ, ಹಾಗೂ ಇನ್ನಿತರ ಮುಖಂಡರು ಭಾಗವಹಿಸಿದ್ದರು.

ಆಗಸ್ಟ್ ೧೩ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕನ್ನಡಪರ ಹಿರಿಯ ಹೋರಾಟಗಾರರ ವಾಟಾಳ್ ನಾಗರಾಜ್ ಅವರು ಕರೆದಿರುವ ಕರ್ನಾಟಕ ಬಂದ್ ವಿಚಾರದಲ್ಲಿ ಇಂದು ಬೆಳಗ್ಗೆ ಮೈಸೂರಿನ ಕೃಷ್ಣರಾಜ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕರಾದ ಶ್ರೀ ಧನರಾಜ್ ಅವರ ನೇತೃತ್ವದಲ್ಲಿ ವಿವಿಧ ಕನ್ನಡಪರ ಹೋರಾಟಗಾರರನ್ನು ಕರೆದು ಸಭೆ ನಡೆಸಲಾಯಿತು

ಆಗಸ್ಟ್ ೧೩ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕನ್ನಡಪರ ಹಿರಿಯ ಹೋರಾಟಗಾರರ ವಾಟಾಳ್ ನಾಗರಾಜ್ ಅವರು ಕರೆದಿರುವ ಕರ್ನಾಟಕ ಬಂದ್ ವಿಚಾರದಲ್ಲಿ ಇಂದು ಬೆಳಗ್ಗೆ ಮೈಸೂರಿನ ಕೃಷ್ಣರಾಜ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕರಾದ ಶ್ರೀ ಧನರಾಜ್ ಅವರ ನೇತೃತ್ವದಲ್ಲಿ ವಿವಿಧ ಕನ್ನಡಪರ ಹೋರಾಟಗಾರರನ್ನು ಕರೆದು ಸಭೆ ನಡೆಸಲಾಯಿತುಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕಾದ ಧನರಾಜ್ ಅವರು ಬಂದ್ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದರುಸಭೆಯಲ್ಲಿ ಕನ್ನಡಪರ ಹಿರಿಯ ಹೋರಾಟಗಾರರಾದ ಶಿವಶಂಕರ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷರಾದ ಬಾಲಕೃಷ್ಣ, ಕನ್ನಡ ಕ್ರಾಂತಿದಳ ಅಧ್ಯಕ್ಷರಾದ ತೇಜಸ್ವಿ ನಾಗಲಿಂಗಸ್ವಾಮಿ, ಮಾಜಿ ನಗರ ಪಾಲಿಕೆ ಸದಸ್ಯರು ಕನ್ನಡ ಹೋರಾಟಗಾರರಾದ ಪಾರ್ಥಸಾರಥಿ, ಕರ್ನಾಟಕ ವೀರ ಕೇಸರಿ ಪಡೆ ಅಧ್ಯಕ್ಷರಾದ ಮಧುವನ ಚಂದ್ರು, ಜನರಿಗಾಗಿ ಸೇವಾ ಸಮಿತಿ ಅಧ್ಯಕ್ಷ ಆಟೋ ಮಹೇಶ್ ಕುಮಾರ್, ಕನ್ನಡ ಸೇನೆ ಮೈಸೂರು ಜಿಲ್ಲಾಧ್ಯಕ್ಷಾದ ಶೈಲಜಾ, ಹೋರಾಟಗಾರರಾದ ನಾಲಬೀದಿ ರವಿ, ಮಾದಪ್ಪ ಇನ್ನಿತರರು ಉಪಸ್ಥಿತರಿದ್ದರು

ಆಗಸ್ಟ್ 13 ಸ್ಲಂ ನಿವಾಸಿಗಳ ಕುಂದು ಕೊರತೆ ಈಡೇರಿಸಲು ಆಗ್ರಹಿಸಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ* *ಪ್ರತಿಭಟನೆ* ಇಂದು ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ(ರಿ) ವತಿಯಿಂದ ತುಮಕೂರು ನಗರದ ಸ್ಲಂ ಭವನದಲ್ಲಿ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿತ್ತು

*ಆಗಸ್ಟ್ 13 ಸ್ಲಂ ನಿವಾಸಿಗಳ ಕುಂದು ಕೊರತೆ ಈಡೇರಿಸಲು* *ಆಗ್ರಹಿಸಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ* *ಪ್ರತಿಭಟನೆ* ಇಂದು ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ(ರಿ) ವತಿಯಿಂದ ತುಮಕೂರು ನಗರದ ಸ್ಲಂ ಭವನದಲ್ಲಿ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿತ್ತು.ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಜಿಲ್ಲೆಯಲ್ಲಿ ಕಳೆದ 6 ತಿಂಗಳಿನಿಂದ ಸ್ಲಂ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂಧಿಸದೆ ಎಲ್ಲಾ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಿ ಎಸ್ಐಆರ್ ಮತಪರಿಷ್ಕರಣೆ ನೆಪದಲ್ಲಿ ಸ್ಲಂ ಜನರನ್ನು ನಿರ್ಲಕ್ಷಿಸಲಾಗುತ್ತಿದೆ. ನಿವೇಶನ ರಹಿತರ ಬೇಡಿಕೆಗಳು, ಮಳೆ ಬಂದರೇ ಅತಂತ್ರ ವ್ಯವಸ್ಥೆಗೆ ಸಿಲುಕುವ ಸ್ಲಂಗಳಿಗೆ ತಡೆಗೋಡೆ ನಿರ್ಮಾಣ, ಬಾಕಿ ಉಳಿದಿರುವ 1250 ಹಕ್ಕುಪತ್ರ ಹಂಚಿಕೆ ಹಾಗೂ ಭೂಮಿ ಹಸ್ತಾಂತರವಾಗಿದಿರುವುದು, ಅಲೆಮಾರಿ ಸಮುದಾಯದ ಕುಟುಂಬಗಳಿಗೆ ಹಕ್ಕುಪತ್ರ ಮತ್ತು ಜಾತಿ ಆದಾಯ ಪ್ರಮಾಣಪತ್ರ ವಿತರಣೆ ನಿವೇಶನ ಹಂಚಿಕೆಯಲ್ಲಿ ವಿಳಂಭ ಧೋರಣೆ ಕಾಣುತ್ತಿವೆ. ಎಸ್ಐಆರ್ ಪ್ರಕ್ರಿಯೆಯಿಂದ ಆಗುತ್ತಿರುವ ಲೋಪದೋಷಗಳು ಕುರಿತು ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಸ್ಲಂ ನಿವಾಸಿಗಳ ಕುಂದು ಕೊರತೆ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಇದೇ ಆಗಸ್ಟ್ 13 ರಂದು ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ಕಾರ್ಯಕಾರಿ ಸಮಿತಿ ತೀರ್ಮಾನಿಸಲಾಗಿದೆ. ಮತ್ತು ಜಿಲ್ಲೆಯ ಜಿಲ್ಲಾ ಉಸ್ತುವಾರಿಗಳ ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ ರವರಿಗೆ ಜಿಲ್ಲೆಯ ಸ್ಲಂ ನಿವಾಸಿಗಳ ಬೇಡಿಕೆಗಳನ್ನು ಈಡೇರಿಸಲು ಜಿಲ್ಲಾ ಮಟ್ಟದಲ್ಲಿ ಕುಂದು ಕೊರತೆ ಕರೆಯಬೇಕೆಂದು ಒತ್ತಾಯಿಸಿ ಆಗಸ್ಟ್ 15 ರಂದು ಪ್ರತಿಭಟನೆ ಮೂಲಕ ಮನವಿ ಸಲ್ಲಿಸುಲಾಗುವುದು ಎಂದರು.ನಂತರ ಕಾರ್ಯದರ್ಶಿ ಅರುಣ್ ಮತ್ತು ಜಾಬಿರ್ ಖಾನ್ ಮಾತನಾಡಿ ತುಮಕೂರು ಮಹಾನಗರ ಪಾಲಿಕೆ ಸ್ಲಂ ನಿವಾಸಿಗಳ ಇ-ಸ್ವತ್ತು ಕಾರ್ಯ ವಿಳಂಭ ಮಾಡುತ್ತಿದೆ. ಸ್ಲಂ ಬೋರ್ಡ್ ನಿಂದ ಸ್ಲಂಗಳಿಗೆ ಭೇಟಿ ನೀಡಿ ನೈಜತೆಯನ್ನು ವರದಿ ಮಾಡಬೇಕು ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪೂರ್ವ ಸಿದ್ದತೆ ತೆಗೆದುಕೊಳ್ಳಬೇಕಿದೆ. ದಿಬ್ಬೂರು 1200 ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ವಿದ್ಯುತ್ ಸಮಸ್ಯೆ ಹೆಚ್ಚಗಿದ್ದು ಜನರಿಗೆ ಭದ್ರತೆಯಿಲ್ಲದಂತಾಗಿದೆ ಜಿಲ್ಲಾಡಳಿತ ಸೂಕ್ತ ಕ್ರಮವಹಿಸಿ ಜನರ ಸೇವೆಗೆ ದಾವಿಸಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನಿರಂತರ ಧರಣಿ ನಡೆಸಲು ಸ್ಲಂ ಸಮಿತಿ ಮುಂದಾಗುತ್ತದೆ ಎಂದರು.ಈ ಕಾರ್ಯಕಾರಿಣಿ ಸಭೆಯಲ್ಲಿ ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆ ಸಂಚಾಲಕರಾದ ಅನುಪಮಾ, ಸ್ಲಂ ಸಮಿತಿಯ ಪದಾಧಿಕಾರಿಗಳಾದ ಭಾರತಿ ನಗರದ ಶಾರದಮ್ಮ, ಗಂಗಾ, ಕೆಂಪಣ್ಣ,ಶಾಬುದ್ದೀನ್, ಕೋಡಿಹಳ್ಳ ಸ್ಲಂ ಶಾಖೆಯ ಮಂಜುನಾಥ್, ವೆಂಕಟೇಶ್, ಎಸ್.ಎನ್ ಪಾಳ್ಯದ ಗುಲ್ನಾಜ್, ಸಲ್ಮಾ, ಫೀರ್ಸಾಬ್, ಮರಳೂರು ದಿಣ್ಣೆ ಶಾಖೆಯ ಅಬೀಬುನ್ನಿಸಾ, ಫರ್ಜಾನ್, ಮುಬಾರಕ್, ಸಲೀಂ, ನಿವೇಶನ ಹೋರಾಟ ಸಮಿತಿಯ ಹನುಮಕ್ಕ, ಇಂದ್ರಮ್ಮ, ಶಾಂತಮ್ಮ, ಗೀತಾ, ದಿಬ್ಬೂರು ದೆ ಸ ಬಡಾವಣೆಯ ರಾಜು, ಇಮ್ತಿಯಾಜ್ ಖಾನ್, ಬಿದರುಮಳೆತೋಟದ ಉದಯ. ರಜಿಯಾ ಬಿ, ಆರೋಗ್ಯಸ್ವಾಮಿ ಇಸ್ಮಾಯಿಲ್ ನಗರದ ಗೋವಿಂದಪ್ಪ, ಎನ್.ಆರ್ ಕಾಲೋನಿ ಮೋಹನ್, ಶಾಂತಕುಮಾರ್, ಮಂಜುನಾಥ್ ಮುಂತಾದವರು ಪಾಲ್ಗೊಂಡಿದ್ದರು.

ದಿಬ್ಬೂರಿನ ಒಳಚರಂಡಿ ಸಮಸ್ಯೆ ಪರಿಹರಿಸುವಂತೆ ಮನವಿತುಮಕೂರು: ನಗರದ ದಿಬ್ಬೂರು ಪ್ರದೇಶದಲ್ಲಿರುವ 370ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಎದುರಿಸುತ್ತಿರುವ ಒಳಚರಂಡಿ ಹಾಗೂ ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ಪರಿಹರಿಸುವಂತೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆ, ತುಮಕೂರು ವತಿಯಿಂದ

ದಿಬ್ಬೂರಿನ ಒಳಚರಂಡಿ ಸಮಸ್ಯೆ ಪರಿಹರಿಸುವಂತೆ ಮನವಿತುಮಕೂರು: ನಗರದ ದಿಬ್ಬೂರು ಪ್ರದೇಶದಲ್ಲಿರುವ 370ಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಎದುರಿಸುತ್ತಿರುವ ಒಳಚರಂಡಿ ಹಾಗೂ ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ಪರಿಹರಿಸುವಂತೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆ, ತುಮಕೂರು ವತಿಯಿಂದ ನಗರಪಾಲಿಕೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಮಳೆ ಬಂದಾಗ ಚರಂಡಿಗಳು ತುಂಬಿ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದ್ದು, ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಮನೆಗಳಲ್ಲಿನ ವಸ್ತುಗಳು ಹಾನಿಯಾಗುವುದರ ಜೊತೆಗೆ ಸಾಂಕ್ರಾಮಿಕ ರೋಗಗಳ ಭೀತಿಯೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ವೇದಿಕೆ ಒತ್ತಾಯಿಸಿದೆ.

ಕೌಶಲ್ಯಾಧಾರಿತ ತರಭೇತಿಗಳಿಂದ ಮಹಿಳೆಯರು ಸ್ವಾವಲಂಭಿಗಳಾಗಬೇಕು- ಭಾನುಪ್ರತಾಪ್ ಸಿಂಹ ಎಇಇ ಇಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಸ್ಲಂ ಜನಾಂದೋಲನ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ಸ್ಲಂಗಳಲ್ಲಿ ನಿರುದ್ಯೋಗಿ ಮಹಿಳೆಯರಿಗಾಗಿ 30 ದಿನಗಳ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ತುಮಕೂರು ನಗರದ ಎನ್.ಆರ್ ಕಾಲೋನಿಯಲ್ಲಿ ಹಮ್ಮಿಕೊಂಡು

ಕೌಶಲ್ಯಾಧಾರಿತ ತರಭೇತಿಗಳಿಂದ ಮಹಿಳೆಯರು ಸ್ವಾವಲಂಭಿಗಳಾಗಬೇಕು-* *ಭಾನುಪ್ರತಾಪ್ ಸಿಂಹ ಎಇಇ* ಇಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಸ್ಲಂ ಜನಾಂದೋಲನ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ಸ್ಲಂಗಳಲ್ಲಿ ನಿರುದ್ಯೋಗಿ ಮಹಿಳೆಯರಿಗಾಗಿ 30 ದಿನಗಳ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ತುಮಕೂರು ನಗರದ ಎನ್.ಆರ್ ಕಾಲೋನಿಯಲ್ಲಿ ಹಮ್ಮಿಕೊಂಡು ಸಮಾರೋಪಗೊಳಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ಲಂ ಬೋರ್ಡ್ ಎಇಇ ಬಾನುಪ್ರತಾಪ್ಸಿಂಹ ಮಾತನಾಡಿ ಸ್ಲಂ ಜನಾಂದೋಲನ ಕರ್ನಾಟಕ ಒತ್ತಾಯದ ಮೇರೆಗೆ ತುಮಕೂರು ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ನಿರುದ್ಯೋಗಿ ಮಹಿಳೆಯರಿಗೆ 1 ತಿಂಗಳ ಟೈಲರಿಂಗ್ ತರಭೆತಿಯನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಆಯೋಜಿಸಲಾಗಿತ್ತು ಹೆಣ್ಣು ಮಕ್ಕಳಲ್ಲಿ ಸೆಲ್ಫ್ ಕಾನ್ಫಿಡೆನ್ಸ್ ಬೆಳಸಿಕೊಳ್ಳಬೇಕು, ಕೌಶಲ್ಯ ಆಧಾರಿತ ತರಭೇತಿಗಳಿಂದ ಸ್ವಾವಲಂಭಿಗಳಾಗಬೇಕು ಎಂಬ ಸದುದ್ದೇಶದಿಂದ ಕಳೆದ 30 ದಿನಗಳಿಂದ ನುರಿತ ತರಭೇತಿ ಒದಗಿಸಲಾಗಿದೆ, ಎಲ್ಲರು ತುಂಬಾ ಶ್ರದ್ದೆ, ವಿನಯತೆಯಿಂದ ತರಬೇತಿಯ ಅವಕಾಶ ಬಳಸಿಕೊಂಡ ಶಿಬಿರಾರ್ಥಿಗಳು ಭವಿಷ್ಯ ಉಜ್ವಲವಾಗಲಿ ಎಂದು ಅಭಿನಂದಿಸಿ ಪ್ರಮಾಣ ಪತ್ರ ವಿತರಿಸಿದರು.ನಂತರ ಮಾತನಾಡಿದ ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಸಂಚಾಲಕರಾದ ಅನುಪಮಾ ಸ್ಲಂಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ನಿರುದ್ಯೋಗಿ ಮಹಿಳೆಯರಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಉತ್ತಮವಾದ ಟೈಲರಿಂಗ್ ತರಬೇತಿ ನೀಡಿ ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಶ್ಲಾಘನೀಯವಾಗಿದೆ. ದುಡಿಯುವ ಶ್ರಮಜೀವಿಗಳು ಬಹುತೇಕ ಸ್ಲಂಗಳಲ್ಲಿಯೇ ಜೀವಿಸುತ್ತಿರುವುದು ನಗರದ ಅಭಿವೃದ್ಧಿಗೆ ಮತ್ತು ಸೌಂಧರ್ಯವನ್ನು ಕಾಪಾಡುವಲ್ಲಿ ಸ್ಲಂ ನಿವಾಸಿಗಳ ಶ್ರಮವೇ ಬಹುಪಾಲು, ನಮ್ಮ ಸಮುದಾಯದ ಹೆಣ್ಣು ಮಕ್ಕಳು ಕ್ಲಿಷ್ಟಕರವಾದ ಕೆಲಸ ಮಾಡಿದರು ಸ್ವಾಭಿಮಾನಿಗಳಂತೆ ಬದುಕುತ್ತಾರೆ, ಪುರುಷರಿಗಿಂತ ನಾವು ಯಾವುದರಲ್ಲು ಕಡಿಮೆಯಿಲ್ಲ ಎಂಬ ಸ್ವಾವಲಂಬಿ ಬದುಕಿಗೆ ಇಂತಹ ತರಬೇತಿಗಳು ಬಹಳ ಅವಶ್ಯಕ. ತರಬೇತಿ ಮುಂದುವರಿಸಲು ಮತ್ತು ಸ್ವಯಂ ಉದ್ಯೋಗಿಗಳಾಗಲು ಸರ್ಕಾರ ಟೈಲರಿಂಗ್ ಮಿಷನ್ ಮತ್ತು ಶಿಷ್ಯವೇತನ ದೊರಕಿಸಿಕೊಟ್ಟರೇ ಮತ್ತಷ್ಟು ಸಹಕಾರ ನೀಡಿದಂತಾಗುತ್ತದೆ. ಜೀತ ಪದ್ದತಿಯಿಂದ ಹೋರಬಂದು ಹೆಣ್ಣು ಮಕ್ಕಳ ಶೀಕ್ಷಣಕ್ಕಾಗಿ ಹೋರಾಡಿದ ಸಾವಿತ್ರಿಬಾಪುಲೆ ರವರ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದರು.ಸ್ಲಂ ಸಮಿತಿಯ ಕಾರ್ಯದರ್ಶಿ ಅರುಣ್ ಮಾತನಾಡಿ ಎನ್.ಆರ್ ಕಾಲೋನಿ ಮತ್ತು ಅಂಬೇಡ್ಕರ್ ನಗರಗಳಲ್ಲಿ ಬಹುತೇಕ ಹೆಣ್ಣು ಮಕ್ಕಳು ನಗರದ ಅಕ್ಕಪಕ್ಕದ ಶ್ರೀಮಂತರ ಮನೆಗಳಲ್ಲಿ ಮನೆಕೆಲಸಕ್ಕೆ ಮತ್ತು ಚೌಟರಿ ಇತರೆ ಅಸಂಘಟಿತ ಕೆಲಸಗಳಿಗೆ ಹೋಗುತ್ತಾರೆ ಯಾವುದೇ ಭದ್ರತೆ ಇಲ್ಲ ಸರ್ಕಾರದ ನೆರವಿಲ್ಲ, ಅವತ್ತಿಗೆ ದುಡಿದು ಮಕ್ಕಳನ್ನು ಸಾಕುವ ಜೊತೆಗೆ ಮನೆಯ ಒಳಗಡೆ ದುಡಿಯುವವರೆ ಹೆಚ್ಚು, ಕೇವಲ ಮನೆಯ ಕೆಲಸಗಳಿಗೆ ಸೀಮಿತರಾಗದೇ ಸ್ವಯಂ ಉದ್ಯೋಗಿಗಳಾಗಬೇಕು ಎಂಬ ಉದ್ದೇಶದಿಂದ ನಿರಂತರ ಪ್ರಯತ್ನಕ್ಕೆ 100 ಮಹಿಳೆಯರಿಗೆ ಸ್ಲಂ ಬೋರ್ಡ್ ನಿಂದ ಉಚಿತ ಟೈಲರಿಂಗ್ ತರಬೇತಿ ಕೊಡಿಸಲಾಗಿದೆ. ಎನ್ ಆರ್ ಕಾಲೋನಿಯ ಅಭಿವೃದ್ಧಿಗಾಗಿ ನಿರಂತರ ಹೋರಾಟ ನಡೆಬೇಕು, ಎಲ್ಲಾ ತಾಯಂದಿರುವ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ, ತುಮಕೂರು ಮಹನಗರ ಪಾಲಿಕೆಯಿಂದ ನಿರ್ಮಾಣವಾಗಿರುವ ಸಮುದಾಯ ಭವನಗಳು ಪಾಳು ಬೀಳದೇ ನಿರಂತರ ಚಟುವಟಿಕೆಗೆ ಬಳಕೆಯಾಗಲು ಡಿಜಿಟಲ್ ಮತ್ತು ಕಂಪ್ಯೂಟರ್ ತರಬೇತಿ ನೀಡುವ ಮಾಹಿತಿ ಕೇಂದ್ರಗಳನ್ನಾಗಿ ಮಾಡುಲು ಸ್ಥಳೀಯ ಜಿಲ್ಲಾಡಳಿತ ಹಾಗೂ ಸರ್ಕಾರ ಮುಂದಾಗಲಿ ಎಂದರು.ಕಾರ್ಯಕ್ರಮದ ಸಮಾರೋನುಡಿಗಳನ್ನಾಡಿದ ತುಮಕೂರಿನ ನಂಬರ್ 1 ಟೈಲರಿಂಗ್ ಅಕಾಡೆಮಿಯ ಗೀತಾ ಶಿಬಿರಾರ್ಥಿಗಳಿಗೆ ಶುಭಕೊರಿದರು ಮತ್ತು ಅವರ ಟೈಲರಿಂಗ್ ಅಕಾಡೆಮಿಯಲ್ಲಿ ಮತ್ತಷ್ಟು ಕಲಿಕೆ ಮತ್ತು ಆರ್ಥಿಕ ಆಯಮಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಉಚಿತವಾಗಿ ತರಬೇತಿಗಳನ್ನು ನೀಡುವುದಾಗಿ ಅಶ್ವಾಸನೆ ನೀಡಿದರು.ಕಾರ್ಯಕ್ರಮದಲ್ಲಿ ತುಮಕೂರು ಸ್ಲಂ ಬೋರ್ಡ್ ಅಸಿಸ್ಟೆಂಟ್ ಇಂಜಿನಿಯರ್ ರಕ್ಷಿತ್, ತರಬೇತುದಾರರಾದ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಅಂಡ್ ಕಮ್ಯೂನಿಕೇಷನ್ ಅಡ್ವೈಸ್ಮೆಂಟ್ಸ ಸಂಸ್ಥೆಯ ರಾಘವೇಂದ್ರ, ಚೈತ್ರಾ, ಹಾಗೂ ಗೀತಾ ಅಕಾಡೆಮಿಯ ತರಬೇತುದಾರರಾದ ನೇತ್ರಾವತಿ. ಶಿಲ್ಪಾ. ರಕ್ಷಿತಾ ಉಪಸ್ಥಿತರಿದ್ದರು.

ಆರ್ ಟಿ ಐ ಕಾರ್ಯಕರ್ತ ಸ್ಟೀಫನ್ ಸುಜೀತ್ ರಿಗೆ ಸೂಕ್ತ ಭದ್ರತೆ ನೀಡಲು ತೇಜಸ್ವಿ ಮನವಿಆರ್ ಟಿ ಐ ಕಾರ್ಯಕರ್ತ ಸ್ಟೀಫನ್ ಸುಜೀತ್ ರಿಗೆ ಸೂಕ್ತ ಭದ್ರತೆ ನೀಡಲು ತೇಜಸ್ವಿ ಮನವಿಮೈಸೂರಿನ ಆರ್ ಟಿ ಐ ಕಾರ್ಯಕರ್ತ ಸ್ಟೀಫನ್ ಸುಜೀತ್ ಅವರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಪೊಲೀಸ್ ಅಧಿಕಾರಿಗಳಲ್ಲಿ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದ್ದಾರೆ.ಮೈಸೂರು ಮಹಾನಗರ ಪಾಲಿಕೆಯ ವಾರ್ಡ್‌ ಸಂಖ್ಯೆ 45ರ ವ್ಯಾಪ್ತಿಯ ಶಾರದಾದೇವಿನಗರ

ಆರ್ ಟಿ ಐ ಕಾರ್ಯಕರ್ತ ಸ್ಟೀಫನ್ ಸುಜೀತ್ ರಿಗೆ ಸೂಕ್ತ ಭದ್ರತೆ ನೀಡಲು ತೇಜಸ್ವಿ ಮನವಿಆರ್ ಟಿ ಐ ಕಾರ್ಯಕರ್ತ ಸ್ಟೀಫನ್ ಸುಜೀತ್ ರಿಗೆ ಸೂಕ್ತ ಭದ್ರತೆ ನೀಡಲು ತೇಜಸ್ವಿ ಮನವಿಮೈಸೂರಿನ ಆರ್ ಟಿ ಐ ಕಾರ್ಯಕರ್ತ ಸ್ಟೀಫನ್ ಸುಜೀತ್ ಅವರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಪೊಲೀಸ್ ಅಧಿಕಾರಿಗಳಲ್ಲಿ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದ್ದಾರೆ.ಮೈಸೂರು ಮಹಾನಗರ ಪಾಲಿಕೆಯ ವಾರ್ಡ್‌ ಸಂಖ್ಯೆ 45ರ ವ್ಯಾಪ್ತಿಯ ಶಾರದಾದೇವಿನಗರ 2ನೇ ಮುಖ್ಯರಸ್ತೆ ಕೊನೆಯಲ್ಲಿ ಹಂಚಿಕೆಯಾಗದೆ ಉಳಿದಿರುವ ಕಾರ್ನರ್ ಸೈಟ್ ಹಾಗೂ ಅದರೊಳಗೆ ನಿರ್ಮಿಸಲಾಗಿರುವ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಅಧಿಕೃತ ಮಾಹಿತಿ ಕೋರಿ ಜೈ ಸ್ಟೀಫನ್ ಸುಜಿತ್ ಅವರು ಮಾಹಿತಿ ಹಕ್ಕು ಅಧಿನಿಯಮ ಅಡಿ ಮೈಸೂರು ನಗರ ಪಾಲಿಕೆ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದಾರೆ,ಆದರೆ ಇದರ ಬೆನ್ನಲ್ಲೇ ಅವರ ಮೇಲೆ ಬಿ ಜೆ ಪಿ ಮುಖಂಡ ಬಿ ಎಂ ರಘು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ದೂರಿದ್ದಾರೆ.ಆರ್.ಟಿ.ಐ. ಕಾರ್ಯಕರ್ತ ಸ್ಟೀಫನ್‌ ಸುಜಿತ್‌ ಈ ಸಂಬಂಧ ಕೆಲ ದಿನಗಳ ಹಿಂದೆ ಮಾಧ್ಯಮಗಳ ಜತೆ ಮಾತನಾಡಿ, ಬಿಜೆಪಿ ಕಾರ್ಯಕರ್ತ ಬಿ.ಎಂ.ರಘು ಎಂಬಾತ ಈ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಿಸುತ್ತಿದ್ದಾರೆಂದು ಆರೋಪಿಸಿದ್ದರು.ನಗರ ಪಾಲಿಕೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟುತ್ತಿರುವ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ದೂರು ಸಹ ನೀಡಿದ್ದರು.ಈ ಹಿನ್ನೆಲೆಯಲ್ಲಿ ಸ್ಟೀಫನ್‌ ಸುಜಿತ್‌ ಅವರ ಮೇಲೆ ಬಿಜೆಪಿ ಕಾರ್ಯಕರ್ತ ರಘು ಹಾಗೂ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.ಘಟನೆಯಿಂದ ಸ್ಟೀಫನ್‌ ಅವರ ಮೂಗಿನ ಮೂಳೆ ಮುರಿದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ನಗರ ಪೋಲಿಸ್ ಇಲಾಖೆಯು ಆರ್ ಟಿ ಐ ಕಾರ್ಯಕರ್ತರಿಗೆ ಸೂಕ್ತ ಭದ್ರತೆ ನೀಡಬೇಕು ಮತ್ತು ಸ್ಟೀಫನ್ ಸುಜೀತ್ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ತೇಜಸ್ವಿ ಕೋರಿದ್ದಾರೆ.ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿ ಮುಖಂಡರಾದ ರಘು ತೊಂದರೆ ನೀಡುತ್ತಿದ್ದಾರೆ ಎಂದು ಸುಜೀತ್ ತಿಳಿಸಿದ್ದರೂ ಕೂಡ ಸ್ಥಳೀಯ ಪೋಲಿಸರು ಕ್ರಮ ಕೈಗೊಳ್ಳಲಿಲ್ಲ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.ಕೂಡಲೇ ಪೋಲಿಸ್ ಇಲಾಖೆ ಬಿ.ಎಂ.ರಘು ಅವರನ್ನು ಬಂಧಿಸಬೇಕು ಮತ್ತು ನಗರ ಬಿಜೆಪಿ ಅಧ್ಯಕ್ಷರು ಬಿ ಎಂ ರಘು ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ತೇಜಸ್ವಿ ಆಗ್ರಹಿಸಿದ್ದಾರೆ.ಈ ಕುರಿತು ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ,ವೈ, ವಿಜಯೇಂದ್ರ ಅವರಿಗೆ ಪತ್ರ ಬರೆಯುವುದಾಗಿ ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.ಸ್ಥಳೀಯ ಕಾಂಗ್ರೆಸ್‌ ಮುಖಂಡ ಹಾಗೂ ಆರ್.ಟಿ.ಐ. ಕಾರ್ಯಕರ್ತ ಸ್ಟೀಫನ್‌ ಸುಜಿತ್‌, ಶಾರದಾ ಅಪಾರ್ಟ್‌ಮೆಂಟ್ ಎದುರು ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಸಂಸ್ಥೆಯ ಟ್ರಾನ್ಸ್‌ಫಾರ್ಮರ್ ಪಕ್ಕದಲ್ಲಿರುವ ಕಾರ್ನರ್ ಸೈಟ್ ಯಾವ ಉದ್ದೇಶಕ್ಕಾಗಿ ಮೀಸಲಾಗಿತ್ತು ಎಂಬುದರ ಕುರಿತು ಅಧಿಕೃತ ಮಾಹಿತಿಯನ್ನು ನೀಡುವಂತೆ ಆರ್.ಟಿ.ಐ ಮೂಲಕ ಮಾಹಿತಿ ಕೋರಿದ್ದರು.ಜತೆಗೆ ಆ ಸೈಟ್‌ಗೆ ಸಂಬಂಧಿಸಿದ ಅನುಮೋದಿತ ಲೇಔಟ್ ಪ್ಲಾನ್, ಸೈಟ್‌ನ ನಿಖರ ಅಳತೆ, ಒಟ್ಟು ವಿಸ್ತೀರ್ಣ, ಸೈಟ್ ಸಂಖ್ಯೆ ಹಾಗೂ ಸರ್ಕಾರಿ ದಾಖಲೆಗಳಲ್ಲಿ ಇರುವ ವಿವರಗಳನ್ನು ಒದಗಿಸುವಂತೆ ಮನವಿ ಮಾಡಿದ್ದರು.ಸೈಟ್‌ನ ಪ್ರಸ್ತುತ ಮಾಲೀಕತ್ವ ಯಾರ ಬಳಿಯಿದೆ? ಅದು ಮೈಸೂರು ನಗರ ಪಾಲಿಕೆಯ ವಶದಲ್ಲಿದೆಯೇ ಅಥವಾ ಬೇರೆ ಯಾವುದೇ ಸರ್ಕಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ನಗರ ಪಾಲಿಕೆ ಆಯುಕ್ತರಾದ ಸವಿತಾ ಅವರಿಗೆ ಸಲ್ಲಿಸಿದ ಅರ್ಜಿಯಲ್ಲಿ ಮಾಹಿತಿ ಕೇಳಿದ್ದರು.ಯಾವುದೇ ವ್ಯಕ್ತಿ, ಸಂಘಟನೆ ಅಥವಾ ರಾಜಕೀಯ ಪಕ್ಷಕ್ಕೆ ಈ ಸೈಟ್ ಅನ್ನು ಹಂಚಿಕೆ ಮಾಡಲಾಗಿದೆಯೇ ಎಂಬ ಮಾಹಿತಿಯೊಂದಿಗೆ, ಹಂಚಿಕೆ ಮಾಡಿದ್ದರೆ ಸಂಬಂಧಿತ ಆದೇಶಗಳ ಪ್ರತಿಗಳನ್ನು ನೀಡುವಂತೆಯೂ ಮನವಿ ಮಾಡಿದ್ದರು ಎಂದು ತೇಜಸ್ವಿ ಮಾಹಿತಿ ನೀಡಿದ್ದಾರೆ.

Call Us Now
WhatsApp