ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರ ಸಾಧನೆ: SSLC ಪರೀಕ್ಷೆಯಲ್ಲಿ ಶಕುಂತಲಾ ಪ್ರಥಮ ಲಿಂಗಸಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದರೋಡಲಬಂಡ

ರೋಡಲಬಂಡ( ತವಗ)ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರ ಸಾಧನೆ: SSLC ಪರೀಕ್ಷೆಯಲ್ಲಿ ಶಕುಂತಲಾ ಪ್ರಥಮ**ಲಿಂಗಸಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದರೋಡಲಬಂಡ (ತವಗ) 2025-26ನೇ ಸಾಲಿನ SSLC ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆ ರೋಡಲಬಂಡ (ತವಗ)ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆ ಮಾಡಿ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.ಶಾಲೆಯ ವಿದ್ಯಾರ್ಥಿನಿ *ಶಕುಂತಲಾ ತಂದೆ ಶಿವಪುತ್ರಪ್ಪ* 625ಕ್ಕೆ *559 ಅಂಕ (89.44%)* ಪಡೆದು ಶಾಲೆಗೆ *ಪ್ರಥಮ ಸ್ಥಾನ* ಪಡೆದಿದ್ದಾಳೆ. *ಗೀತಾ ತಂದೆ ಬಸವರಾಜ* *556 ಅಂಕ (88.96%)* ಪಡೆದು *ದ್ವಿತೀಯ ಸ್ಥಾನ*, *ಮೌನಮ್ಮ ತಂದೆ ಚನ್ನಬಸವ* *518 ಅಂಕ (82.88%)* ಪಡೆದು

ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರ ಸಾಧನೆ: SSLC ಪರೀಕ್ಷೆಯಲ್ಲಿ ಶಕುಂತಲಾ ಪ್ರಥಮ ಲಿಂಗಸಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದರೋಡಲಬಂಡ

ತೃತೀಯ ಸ್ಥಾನ* ಗಳಿಸಿದ್ದಾರೆ.ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು ಈ ರೀತಿ ಉತ್ತಮ ಸಾಧನೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿದ್ಯಾರ್ಥಿನಿಯರ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕ ವೃಂದ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.ರೋಡಲಬಂಡ (ತವಗ) ಗ್ರಾಮದ ಹಿರಿಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಪೋಷಕರು ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು.ಈ ವಿದ್ಯಾರ್ಥಿನಿಯರ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಮಾದರಿ ಹಾಗೂ ಸ್ಫೂರ್ತಿಯಾಗಿದೆ ಎಂದು ಗ್ರಾಮಸ್ಥರು ಶ್ಲಾಘಿಸಿದ್ದಾರೆ.

ಕರ್ನಾಟಕ ಪರಿಶಿಷ್ಟ ಜಾತಿ ಸಮುದಾಯದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ ಕಾಂಗ್ರೆಸ್ :ತಿಪ್ಪೇಸ್ವಾಮಿ (ತಿಪ್ಪಸರ್ ನಾಯ್ಕ್) ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಮುಖ್ಯಮಂತ್ರಿ ಸಿದ್ದರಾಮ ಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಐತಿಹಾಸಿಕ ಮೋಸ ಮತ್ತು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ ಎಂದು ಕರ್ನಾಟಕ ಬಂಜಾರ ಜಾಗೃತಿ ದಳ(ರಿ) ಸಂಸ್ಥಾಪಕ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ(ತಿಪ್ಪಸರ್ ನಾಯ್ಕ್) ಆರೋಪಿಸಿದ್ದಾರೆ
ಕರ್ನಾಟಕ ಪರಿಶಿಷ್ಟ ಜಾತಿ ಸಮುದಾಯದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ ಕಾಂಗ್ರೆಸ್ :ತಿಪ್ಪೇಸ್ವಾಮಿ (ತಿಪ್ಪಸರ್ ನಾಯ್ಕ್) ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಮುಖ್ಯಮಂತ್ರಿ ಸಿದ್ದರಾಮ ಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಐತಿಹಾಸಿಕ ಮೋಸ ಮತ್ತು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ ಎಂದು ಕರ್ನಾಟಕ ಬಂಜಾರ ಜಾಗೃತಿ ದಳ(ರಿ) ಸಂಸ್ಥಾಪಕ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ(ತಿಪ್ಪಸರ್ ನಾಯ್ಕ್) ಆರೋಪಿಸಿದ್ದಾರೆ

ಪತ್ರಿಕಾ ಪ್ರಕಟಣೆ ಕೃಪೆಗಾಗಿ:ತುಮಕೂರು ಕರ್ನಾಟಕ ಪರಿಶಿಷ್ಟ ಜಾತಿ ಸಮುದಾಯದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ ಕಾಂಗ್ರೆಸ್ :ತಿಪ್ಪೇಸ್ವಾಮಿ (ತಿಪ್ಪಸರ್ ನಾಯ್ಕ್) ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಮುಖ್ಯಮಂತ್ರಿ ಸಿದ್ದರಾಮ ಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಐತಿಹಾಸಿಕ ಮೋಸ ಮತ್ತು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ ಎಂದು ಕರ್ನಾಟಕ ಬಂಜಾರ ಜಾಗೃತಿ ದಳ(ರಿ) ಸಂಸ್ಥಾಪಕ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ(ತಿಪ್ಪಸರ್ ನಾಯ್ಕ್) ಆರೋಪಿಸಿದ್ದಾರೆ. ಸುಪ್ರಿಂಕೋರ್ಟ್ ಆದೇಶದ ಅನುಸಾರ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಹಂಚಿಕೆ ಮಾಡಲು ಸರಿಸುಮಾರು ಎರಡೂವರೆ ವರ್ಷಗಳವರೆಗೆ ಕಾಲಹರಣ ಮಾಡಿ ಅಂತಿಮವಾಗಿ ಸಚಿವ ಸಂಪುಟ ಸಭೆಯಲ್ಲಿ ಎ, ಬಿ, ಮತ್ತು ಸಿ ವರ್ಗಗಳಾ ಗಿ ವಿಂಗಡಿಸಿದೆ. ಹಿಂದಿನ ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ಶೇ.15 ರಿಂದ ಶೇ.17ಕ್ಕೆ ಮೀಸಲಾತಿಯನ್ನು ಹೆಚ್ಚಿಸಿತ್ತು. ಆದರೆ ಇಂದಿನ ಸಚಿವಸಂಪುಟ ಸಭೆಯಲ್ಲಿ ‘ಎ’ ವರ್ಗಕ್ಕೆ ಬಿಜೆಪಿ ಸರ್ಕಾರವು ನೀಡಿದ್ದ ಶೇ.6ರ ಪ್ರಮಾಣ ವನ್ನುತಗ್ಗಿಸಿ ಶೇ. 5.25ಕ್ಕೆ ಹಾಗೂ ‘ಬಿ’ ವರ್ಗಕ್ಕೆ ನೀಡಲಾಗಿದ್ದ ಶೇ.5.5 ಪ್ರಮಾಣವನ್ನು ತಗ್ಗಿಸಿ ಶೇ. 5.25ಕ್ಕೆ ಇಳಿಸುವ ಮೂಲಕ ಎಡ ಮತ್ತು ಬಲ ಸಮುದಾಯಗಳಿಗೆ ಘೋರ ಅನ್ಯಾಯವನ್ನು ಎಸಗಿದೆ. ಅದೇ ರೀತಿ ಬಂಜಾರ, ಭೋವಿ, ಕೊರಚ ಹಾಗೂ ಕೊರಮ ಸಮುದಾಯಗಳಿಗೆ ನೀಡಲಾಗಿದ್ದ ಶೇ. 4.5ರ ಪ್ರಮಾಣವನ್ನು ಹಾಗೂ ಪ್ರತ್ಯೇಕವಾಗಿ ಅಲೆಮಾರಿ ಸಮುದಾಯ ಗಳಿಗೆ ನೀಡಲಾಗಿದ್ದ ಶೇ.1 ಪ್ರಮಾಣವನ್ನು ರದ್ದುಗೊಳಿಸಿ ಇವೆರಡೂ ಸಮುದಾಯವನ್ನು ಒಟ್ಟುಗೂಡಿಸಿ ‘ಸಿ’ ವರ್ಗವನ್ನಾಗಿಸಿ ನ್ಯಾಯಯುತವಾಗಿ ಬರಬೇಕಾಗಿದ್ದ ಶೇ. 5.5ರ ಪ್ರಮಾಣವನ್ನು ತಗ್ಗಿಸಿ ಶೇ. 4.5ಕ್ಕೆ ಇಳಿಸಿದೆ. ಆ ಮೂಲಕ ಈ ಸಮುದಾಯಗಳ ಬೆನ್ನಿಗೂ ಚೂರಿಯನ್ನು ಹಾಕಿದೆ. ಇನ್ನೇನು ತನ್ನ ಅಧಿಕಾರವಧಿ ಕೇವಲ 2 ವರ್ಷ ಉಳಿದಿರುವಾಗ ಪರಿಶಿಷ್ಟ ಸಮುದಾಯಗಳೂ ಸೇರಿದಂತೆ ಇಡೀ ರಾಜ್ಯದ ಜನರ ಕಣ್ಣಿಗೆ ಮಣ್ಣೆರಚುವ ರೀತಿಯಲ್ಲಿ ನೇಮಕಾತಿಗೆ ಚಾಲನೆ ಕೊಡುವುದಾಗಿ ಸಮಜಾಯಿಷಿ ನೀಡಿದೆ. ಕರ್ನಾಟಕದ ಪರಿಶಿಷ್ಟ ಸಮುದಾಯಗಳಿಗೆ ಮಾಡಿರುವ ಅನ್ಯಾಯಕ್ಕೆ ಭವಿಷ್ಯದಲ್ಲಿ ಬೆಲೆ ತೆತ್ತಲೇ ಬೇಕಾಗುತ್ತದೆ ಎಂಬುದನ್ನು ಮರೆಯಬಾರದು. ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಹಾಲಪ್ಪ ಮಾತನಾಡುತ್ತ ಬಂದಿರುವ ಪ್ರೇಕ್ಷಕರರಲ್ಲಿ ಹೆಚ್ಚಿನವರು ಪೋಷಕರು ಇಂತಹ ಬೇಸಿಗೆ ಶಿಬಿರಗಳ ಅವಕಾಶ ಬಳಸಿಕೊಂಡು ಮಕ್ಕಳಲ್ಲಿ ಇಂತಹ ಹವ್ಯಾಸಗಳ ರುಚಿ ಹತ್ತಿಸಬೇಕು ಎಂದು ಹೇಳುತ್ತಲೇ ಮಕ್ಕಳ ನಾಟಕವು ಕೇವಲ ಒಂದೆರಡು ಪ್ರದೇಶಗಳಲ್ಲಿ ಸೀಮಿತವಾಗದೆ ನಗರದ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚೆಚ್ಚು ಜನರ ತಲುಪಬೇಕೆಂಬ ಇಚ್ಚೆ ವ್ಯಕ್ತಪಡಿಸಿದರು

ಹಾಲಪ್ಪ ಮಾತನಾಡುತ್ತ ಬಂದಿರುವ ಪ್ರೇಕ್ಷಕರರಲ್ಲಿ ಹೆಚ್ಚಿನವರು ಪೋಷಕರು ಇಂತಹ ಬೇಸಿಗೆ ಶಿಬಿರಗಳ ಅವಕಾಶ ಬಳಸಿಕೊಂಡು ಮಕ್ಕಳಲ್ಲಿ ಇಂತಹ ಹವ್ಯಾಸಗಳ ರುಚಿ ಹತ್ತಿಸಬೇಕು ಎಂದು ಹೇಳುತ್ತಲೇ ಮಕ್ಕಳ ನಾಟಕವು ಕೇವಲ ಒಂದೆರಡು ಪ್ರದೇಶಗಳಲ್ಲಿ ಸೀಮಿತವಾಗದೆ ನಗರದ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚೆಚ್ಚು ಜನರ ತಲುಪಬೇಕೆಂಬ ಇಚ್ಚೆ ವ್ಯಕ್ತಪಡಿಸಿದರು. ನಿಕೇತ್ ಅವರು ಮಾತನಾಡುತ್ತ ವೃತ್ತಿಧರ್ಮಕ್ಕಿಂತ ಪ್ರವೃತಿಯ ಬಗ್ಗೆ ಹೆಚ್ಚು ಒತ್ತುಕೊಡುತ್ತ ತಾನು ಅತಿಥಿಯಾಗಿ ಹೆಚ್ಚಾಗಿ ಒಬ್ಬ ಪೋಷಕನಾಗಿ ಬಂದಿರುವೆ.. ತನ್ನ ಇಬ್ಬರು ಪುಟ್ಟ ಮಕ್ಕಳು ಇಲ್ಲಿನ ಶಿಬಿರಾರ್ಥಿಗಳಾಗಿದ್ದಾರೆ‌ ಎಂದು ಸಂತೋಷ ವ್ಯಕ್ತಪಡಿಸಿದರು.. ಮುರುಳಿ ಧರ್ ಹಾಲಪ್ಪನಿಖಿತ್ ಮೌರ್ಯಅಧ್ಯಕ್ಷರಾದ ರಮಾದೇವಿರಾಜು ಕೆ ಎಸ್, ಭಾನುಪ್ರಕಾಶ್ವಿಶೇಷವಾಗಿ ಆಯ್ಕೆಯಾದ ಶಿಭಿರಾರ್ಥಿಯ ಪೋಷಕರು..ಭಾನುಪ್ರಕಾಶ್ ಸರ್ ಮಾತನಾಡುತ್ತ ಅಚಲ ಕಲಾ ಕೇಂದ್ರ ಕಟ್ಟಲು ಕಾರಣ ಕೌಟುಂಬಿಕ ಹಿನ್ನಲೆ, ತಂದೆ ಶಿಕ್ಷಕರಾಗಿ ನಾಟಕಗಳನ್ನು ಬರೆದು ರಂಗಭೂಮಿಯಲ್ಲಿ ಒಳಗೊಂಡ ಕಾರಣ ಅಚಲಪ್ಪ ಎಂಬುದು ಅವರ ತಂದೆಯ ಹೆಸರು ಆಗಿದ್ದಿರಿಂದ ಅಚಲ ಕಲಾ ಕೇಂದ್ರ ಹುಟ್ಟುಹಾಕಲು ಪ್ರೇರಣೆಯಾಯಿತು.ಮಕ್ಕಳ ರಂಗಭೂಮಿ ಏಕೆ ಎಂದರೆ ಮಕ್ಕಳಲ್ಲಿ‌ ಹೊರಜಗತ್ತಿನ ಪರಿವಿಲ್ಲ.. ಬರಿ ಮೊಬೈಲ್ ಗೀಳು ಹೆಚ್ಚಾಗಿದೆ.‌. ಅವರಿಗೆ ಲಲಿತಾಕಲೆಗಳಿಗೆ ಪರಿಚಯಿಸಿ ಮಕ್ಕಳನ್ನು ಜೀವಂತವಾಗಿಡಲು ಇರುವ ಸೇತುವೆ ಈ ಬೇಸಿಗೆ ಶಿಬಿರ ಎಂದು ಹೇಳಿದ್ದಾರೆ..ರಂಗಪ್ರಯೋಗಕ್ಕೆ ಮಕ್ಕಳ ಏಕೆ ಎಂದರೆ ಮಕ್ಕಳ ಜೊತೆ ಕೆಲಸ ಮಾಡುವಾಗ ಕಲಿಕೆಗೆ ಹೆಚ್ಚು ಅವಕಾಶವಿರುತ್ತದೆ.. ಮಕ್ಕಳ ಮುಕ್ತ ಚಿಂತನೆಯ ಬಗ್ಗೆ ಉಲ್ಲೇಖಿಸುತ್ತ ಕುವೆಂಪು ಅವರ ವಿಶ್ವಮಾನವ ಸಂದೇಶದ ಬಗ್ಗೆ ಮಾತನಾಡಿದರು..ಮಕ್ಕಳಲ್ಲಿ ಬಿತ್ತುವ ಒಂದಷ್ಟು ಧನಾತ್ಮಕ ವಿಷಯಗಳನ್ನು ಬಿತ್ತಿದರೆ ಮುಂದೆ ಹೆಮ್ಮೆರವಾಗಿ ಸಮಾಜಕ್ಕೆ ಮಾದರಿ ಆಗುತ್ತದೆ ಎಂದರು

ಐಎಎಸ್ ಅಧಿಕಾರಿ ಪ್ರಭುಗೆ ಒಕ್ಕಲಿಗ ಸಂಘಟನೆಗಳ ಅಭಿನಂದನೆ ತುಮಕೂರು ಸರ್ಕಾರಿ ಅಧಿಕಾರಿಯಾದವರು ಸಮಾಜಕ್ಕೆ, ಸರ್ಕಾರಕ್ಕೆ ಋಣಿಯಾಗಿ ಕೆಲಸ ಮಾಡಬೇಕು ಅಧಿಕಾರಿ ವರ್ಗವಾಗಿ ಹೋದರೂ ಅವರು ಮಾಡಿರುವ ಕೆಲಸಗಳ ಮೂಲಕ ಜನರು ಅಧಿಕಾರಿಯನ್ನು ಸ್ಮರಿಸುವಂತೆ ಕೆಲಸ ಮಾಡಬೇಕು
ಐಎಎಸ್ ಅಧಿಕಾರಿ ಪ್ರಭುಗೆ ಒಕ್ಕಲಿಗ ಸಂಘಟನೆಗಳ ಅಭಿನಂದನೆ ತುಮಕೂರು ಸರ್ಕಾರಿ ಅಧಿಕಾರಿಯಾದವರು ಸಮಾಜಕ್ಕೆ, ಸರ್ಕಾರಕ್ಕೆ ಋಣಿಯಾಗಿ ಕೆಲಸ ಮಾಡಬೇಕು ಅಧಿಕಾರಿ ವರ್ಗವಾಗಿ ಹೋದರೂ ಅವರು ಮಾಡಿರುವ ಕೆಲಸಗಳ ಮೂಲಕ ಜನರು ಅಧಿಕಾರಿಯನ್ನು ಸ್ಮರಿಸುವಂತೆ ಕೆಲಸ ಮಾಡಬೇಕು
Oplus_16908288

‘ಸರ್ಕಾರಿ ಅಧಿಕಾರಿಯು ಜನ ಸ್ಮರಿಸುವ ಕೆಲಸ ಮಾಡಬೇಕು’ಐಎಎಸ್ ಅಧಿಕಾರಿ ಪ್ರಭುಗೆ ಒಕ್ಕಲಿಗ ಸಂಘಟನೆಗಳ ಅಭಿನಂದನೆತುಮಕೂರು: ಸರ್ಕಾರಿ ಅಧಿಕಾರಿಯಾದವರು ಸಮಾಜಕ್ಕೆ, ಸರ್ಕಾರಕ್ಕೆ ಋಣಿಯಾಗಿ ಕೆಲಸ ಮಾಡಬೇಕು. ಅಧಿಕಾರಿ ವರ್ಗವಾಗಿ ಹೋದರೂ ಅವರು ಮಾಡಿರುವ ಕೆಲಸಗಳ ಮೂಲಕ ಜನರು ಅಧಿಕಾರಿಯನ್ನು ಸ್ಮರಿಸುವಂತೆ ಕೆಲಸ ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.ಶನಿವಾರ ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಒಕ್ಕಲಿಗರ ಒಕ್ಕೂಟ, ಜಿಲ್ಲಾ ಒಕ್ಕಲಿಗರ ಸಂಘಸAಸ್ಥೆಗಳು, ಚಿಂತಾದ್ರಿ ಮಹಿಳಾ ಪ್ರತಿಷ್ಠಾನ ಹಾಗೂ ನಾಗರೀಕ ವೇದಿಕೆ ಆಶ್ರಯದಲ್ಲಿ ತುಮಕೂರು ಜಿ.ಪ. ಸಿಇಓ ಆಗಿ ಸೇವೆ ಸಲ್ಲಿಸಿ ಈಗ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿರುವ ಪ್ರಭು ಜಿ. ಅವರ ಅಭಿನಂದನಾ ಸಮಾರಂಭದ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಸ್ವಾಮೀಜಿ, ಅಧಿಕಾರ ಸೇವೆ ಮಾಡಲು ಸಿಕ್ಕ ಅವಕಾಶ ಎಂದುಕೊಳ್ಳಬೇಕು, ಸಮಾಜಮುಖಿ ಹಂಬಲದಿAದ ಕೆಲಸ ಮಾಡಬೇಕು ಎಂದರು.ಅಧಿಕಾರ ನೆತ್ತಿಗೇರಿದರೆ ಅಧಿಕಾರಿಯು ತಾನೂ ನಾಶವಾಗಿ, ಸಮಾಜವನ್ನೂ ನಾಶ ಮಾಡುವುದಲ್ಲದೆ ತನ್ನ ಸ್ಥಾನವನ್ನೂ ಅಗೌರವಗೊಳಿಸಿಬಿಡುತ್ತಾನೆ. ಅಧಿಕಾರವನ್ನು ಹೃದಯಕ್ಕೆ ಹಾಕಿಕೊಂಡು, ಹೃದಯಸ್ಪರ್ಶಿ ಕೆಲಸ ಮಾಡಿದರೆ ಸಮಾಜ ಗುರುತಿಸಿ ಗೌರವಿಸುತ್ತದೆ. ಜಿ. ಪ್ರಭು ಅವರು ಅಂತಹ ಉತ್ತಮ ಅಧಿಕಾರಿ ಎಂದರು.ತಾವು ಪೂರ್ವಾಶ್ರಮದಲ್ಲಿ ತಹಶೀಲ್ದಾರ್ ಆಗಿದ್ದಾಗ ಪ್ರಭು ಉಪವಿಭಾಗಾಧಿಯಾಗಿದ್ದರು. ಕೆಲಸದಲ್ಲಿ ಇವರಿಗಿರುವ ಬದ್ಧತೆ, ಚಿಂತನೆ, ಶ್ರಮವನ್ನು ಹತ್ತಿರದಿಂದ ಗಮನಿಸಿದ್ದೇವೆ. ಕೆಲಸ ಮಾಡಿದ ಎಲ್ಲಾ ಕಡೆ ತಮ್ಮ ಸಾಧನೆಯ ಗುರುತು ಬಿಟ್ಟಿದ್ದಾರೆ. ಒಳ್ಳೆಯ ಅಧಿಕಾರಿಯಾಗಲು ಉನ್ನತವಾದ ಚಿಂತನೆ, ಒಳ್ಳೆಯ ಆತ್ಮ, ಒಳ್ಳೆಯ ಮನಸ್ಸು, ಮಿಡಿಯುವ ಹೃದಯ ಹೊಂದಿರಬೇಕು. ಪ್ರಭು ಅವರಿಗೆ ಈ ಎಲ್ಲಾ ಗುಣಗಳಿವೆ ಎಂದು ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪ್ರಭು ಜಿ. ಅವರು, ತುಮಕೂರಿಗೆ ಬಂದರೆ ತಮಗೆ ತವರು ಮನೆಗೆ ಬಂದಷ್ಟೇ ಆನಂದವಾಗುತ್ತದೆ. ತಾವು ಇಲ್ಲಿನ ಜಿಲ್ಲಾ ಪಂಚಾಯ್ತಿ ಸಿಇಓ ಆಗಿದ್ದಾಗ ನಿರ್ವಹಿಸಿದ ಅನೇಕ ಕಾರ್ಯಗಳು ರಾಷ್ಟಿçÃಯ ಯೋಜನೆಗಳಾಗಿವೆ. ನರೇಗಾ ಯೋಜನೆಯ ನಿರ್ವಹಣೆಗೆ ತುಮಕೂರು ಜಿಲ್ಲಾ ಪಂಚಾಯ್ತಿಗೆ ರಾಷ್ಟç, ರಾಜ್ಯಮಟ್ಟದ ಪ್ರಶಸ್ತಿ ದೊರಕಿರುವುದು ಎಲ್ಲರ ಸಹಕಾರದಿಂದ ಎಂದು ಸ್ಮರಿಸಿದರು.ಅಧಿಕಾರವನ್ನು ಸೇವೆಯ ಜವಾಬ್ದಾರಿ ಎಂದುಕೊಳ್ಳಬೇಕು. ಸಮಾಜದಲ್ಲಿ ಎಲ್ಲರಿಗೂ ಜವಾಬ್ದಾರಿ ಇರುತ್ತದೆ. ಹಾಗಾಗಿ ಎಲ್ಲರನ್ನೂ ಗೌರವದಿಂದಲೇ ಕಾಣಬೇಕು. ನಾವು ಮಾಡುವ ಕೆಲಸ ನಮಗೆ ಎಷ್ಟು ಉತ್ತರದಾಯಕವಾಗಿರುವುದೊ ಅಷ್ಟು ಸಮಾಜ ಸದೃಢವಾಗುತ್ತದೆ. ನÀಮ್ಮ ಕೆಲಸದಲ್ಲಿ ಪರಿಶ್ರಮ, ಬದ್ಧತೆ, ಉತ್ತಮ ಆಲೋಚನೆಗಳನ್ನು ಹೊಂದಿದ್ದರೆ ವಿಶ್ವವೇ ನಮ್ಮನ್ನು ಜಯಶಾಲಿಯನ್ನಾಗಿ ಮಾಡುತ್ತದೆ. ಯಾವ ದೇಶದಲ್ಲಿ ಮಾನವಸಂಪನ್ಮೂಲವನ್ನು ಶಕ್ತಿಯುತವಾಗಿ ಬೆಳೆಸುವುದೋ ಆ ದೇಶ ಸದೃಢವಾಗಿರುತ್ತದೆ. ಸಮಾಜದಲ್ಲಿ ಅನೇಕ ಸಾಧಕ ವ್ಯಕ್ತಿಗಳು ಈಗ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಮಾಡಿದ ಕೆಲಸ, ಸಾಧನೆಗಳು ನಮ್ಮೊಂದಿಗಿವೆ. ಆ ಕೆಲಸಗಳ ಮೂಲಕ ವ್ಯಕ್ತಿ ಸದಾ ಜನಮಾನಸದಲ್ಲಿ ಉಳಿಯುತ್ತಾರೆ ಎಂದು ಜಿ. ಪ್ರಭು ಹೇಳಿದರು.ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳಿಧರ ಹಾಲಪ್ಪ ಮಾತನಾಡಿ, ಪ್ರಭು ಅವರಂತಹ ಮಾದರಿ ಅಧಿಕಾರಿಗಳು ಯುವಪೀಳಿಗೆಗೆ ಪ್ರೇರಣೆ ಆಗಬೇಕು. ಇವರು ಜಿ.ಪಂ. ಸಿಇಒ ಆಗಿದ್ದಾಗ ಜಿಲ್ಲೆಯ ೧೭೨ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿದ್ದರು. ವಿಶೇಷವಾಗಿ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯ ನಿರ್ಮಾಣ ಮಾಡಿದರು. ಸರ್ಕಾರದ ಹಾಸ್ಟೆಲ್‌ಗಳಿಗೆ ಅಗತ್ಯ ಸೌಕರ್ಯ ಒದಗಿಸಿ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಅನೇಕ ಹೆಣ್ಣುಮಕ್ಕಳ ಯೋಜನೆಗಳನ್ನು ಆದ್ಯತೆ ಕೊಟ್ಟು ಅನುಷ್ಠಾನಗೊಳಿಸಿದರು ಎಂದು ಶ್ಲಾಘಿಸಿದರು.ತುಮಕೂರು ದಸರಾ ಉತ್ಸವ ಸಾಂಸ್ಕೃತಿಕವಾಗಿ, ಅದ್ದೂರಿಯಾಗಿ ನೆರವೇರಲು ಪ್ರಭು ಅವರ ಕೊಡುಗೆ, ಆಸಕ್ತಿ ಬಹಳಷ್ಟಿಗೆ. ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಇವರು ವಿಶೇಷ ಆಸಕ್ತಿವಹಿಸಿದ್ದರು. ಇವರು ತುಮಕೂರು ಜಿಲ್ಲಾಧಿಕಾರಿಯಾಗಿ ಬಂದು ಮತ್ತಷ್ಟು ಜನಪರ ಕೆಲಸಗಳನ್ನು ಮಾಡಲಿ ಎಂದು ಆಶಿಸಿದರು.ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಆರ್. ಕಾಮರಾಜ್ ಮಾತನಾಡಿ, ಕೆಲವರು ಅಧಿಕಾರ ಸಿಕ್ಕ ನಂತರ ದರ್ಪದಿಂದ ನಡೆದುಕೊಳ್ಳುತ್ತಾರೆ. ಆದರೆ ಪ್ರಭು ಅವರು ಯಾವತ್ತೂ ದರ್ಪ ಮಾಡದೆ, ಬಡವರ, ರೈತರ ಕಲ್ಯಾಣಕ್ಕೆ ಮಾಡಬೇಕಾಗಿರುವ ಕೆಲಸಗಳ ಬಗ್ಗೆ ಚಿಂತನೆ ಮಾಡುತ್ತಾ ಅವುಗಳನ್ನು ಅನುಷ್ಠಾನಗೊಳಿಸುವತ್ತ ಗಮನಹರಿಸಿದರು. ಗ್ರಾಮ ಪಂಚಾಯ್ತಿಗಳ ಮೂಲಕ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ದೇಶದ ಗಮನ ಸೆಳೆದ ಬದ್ಧತೆಯ ಅಧಿಕಾರಿ ಪ್ರಭು ಅವರು. ಇಂತಹ ಮಾದರಿ ಅಧಿಕಾರಿ ಯುವಜನರಿಗೆ ಸ್ಫೂರ್ತಿ ಆಗಬೇಕು ಎಂದು ಹೇಳಿದರು.ಈ ವೇಳೆ ಐಎಎಸ್ ಅಧಿಕಾರಿ ಜಿ. ಪ್ರಭು ಅವರ ಪತ್ನಿ ರಜನಿ ಪ್ರಭು ಅವರು ನಗರದ ಜೀವಾ ಡಯೋಗ್ನಿಸ್ಟಿಕ್‌ನ ಸ್ತನ ಕ್ಯಾನ್ಸರ್ ಉಚಿತ ತಪಾಸಣೆಯ ಅಲ್ಟಾçಸೌಂಡ್ ಸ್ಕಾö್ಯನಿಂಗ್ ಸೇವೆಗೆ ಚಾಲನೆ ನೀಡಿದರು.ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನಿರ್ದೇಶಕ ಹನುಮಂತರಾಯಪ್ಪ, ಮಾಜಿ ನಿರ್ದೇಶಕ ಯಲಚವಾಡಿ ನಾಗರಾಜು, ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಡಾ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಬೋರೇಗೌಡ, ಭೈರವ ಗಿರೀಶ್, ಅಮೋಘ ಟಿವಿ ಸಂಪಾದಕ ರಾಕ್‌ಲೈನ್ ರವಿಕುಮಾರ್, ಮುಖಂಡರಾದ ಬೆಳ್ಳಿ ಲೋಕೇಶ್, ಉಪ್ಪಾರಹಳ್ಳಿ ಕುಮಾರ್, ಕೃಷ್ಣಯ್ಯ, ಲಕ್ಕೇಗೌಡ, ನಿರ್ಮಿತಿ ರಾಜಶೇಖರ್, ಕೇಶವಮೂರ್ತಿ, ಅಶ್ವತ್ಥ್ ಕಾರ್ಮೊಬೈಲ್, ರಂಗಪ್ಪ, ಯಶೋಧ ವೀರಪ್ಪ, ಸುಜಾತ ನಂಜೇಗೌಡ, ಮಂಜುಳಕ್ಕ, ರಂಗಮಣಿ ಕಾಮೇಶ್, ಮಮತಾ, ಲೀಲಾವತಿ ಸೇರಿದಂತೆ ಸಮಾಜದ ಹಲವು ಮುಖಂಡರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿ ಪ್ರೋತ್ಸಾಹಿಸಲಾಯಿತು.

ಮೈಸೂರಿನಲ್ಲಿ ಬೇಸಿಗೆಯ ಬಿಸಿಲು ಅಧಿಕವಾಗಿ, ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ ಹಾಗಾಗಿಕಲಬುರ್ಗಿ ಮಾದರಿಯಲ್ಲಿ ಮೈಸೂರಿನ ಟ್ರಾಫಿಕ್ ಪೊಲೀಸರಿಗೆ ಎ ಸಿ ಹೆಲ್ಮೆಟ್ ನೀಡುವಂತೆ ನಗರ ಪೋಲಿಸ್ ಆಯುಕ್ತರಿಗೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದ್ದಾರೆ

ಟ್ರಾಫಿಕ್ ಪೊಲೀಸರಿಗೆ ಎ ಸಿ ಹೆಲ್ಮೆಟ್ ನೀಡಲು ತೇಜಸ್ವಿ ಮನವಿ ಮೈಸೂರು :- ಮೈಸೂರಿನಲ್ಲಿ ಬೇಸಿಗೆಯ ಬಿಸಿಲು ಅಧಿಕವಾಗಿ, ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ ಹಾಗಾಗಿಕಲಬುರ್ಗಿ ಮಾದರಿಯಲ್ಲಿ ಮೈಸೂರಿನ ಟ್ರಾಫಿಕ್ ಪೊಲೀಸರಿಗೆ ಎ ಸಿ ಹೆಲ್ಮೆಟ್ ನೀಡುವಂತೆ ನಗರ ಪೋಲಿಸ್ ಆಯುಕ್ತರಿಗೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದ್ದಾರೆ.ಮೈಸೂರು ನಗರ ಭಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರುವುದು ತಿಳಿದಿರುವ ವಿಷಯ. ಪ್ರಸ್ತುತ ದಿನಗಳಲ್ಲಿ ಬೇಸಿಗೆಯ ಕಾರಣ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಈ ಬೇಸಿಗೆಯ ಬಿರು ಬಿಸಿಲಿನ ಬೇಗೆಯಲ್ಲಿ ಕೂಡ ಸುಗಮ ಸಂಚಾರಕ್ಕಾಗಿ ಮೈಸೂರು ಪೋಲಿಸರು ದಿನನಿತ್ಯ ರಸ್ತೆಯಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿರುವುದನ್ನು ಕಾಣುತ್ತೇವೆ ಅವರ ಪಾಡು ಕೇಳುವವರೇ ಇಲ್ಲ ಎಂದು ತೇಜಸ್ವಿ ಬೇಸರ ಪಟ್ಟಿದ್ದಾರೆ.ಟ್ರಾಫಿಕ್ ಪೊಲೀಸರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಮಾನವೀಯ ದೃಷ್ಟಿಯಿಂದ ನಗರ ಪೋಲಿಸ್ ಆಯುಕ್ತರು ಬೇಸಿಗೆ ಮುಗಿಯುವವರೆಗೂ ಕಲಬುರ್ಗಿ ಪೊಲೀಸರ ಮಾದರಿಯಲ್ಲಿ ಮೈಸೂರಿನ ಟ್ರಾಫಿಕ್ ಪೊಲೀಸರಿಗೆ ಎ ಸಿ ಹೆಲ್ಮೆಟ್ ಗಳನ್ನು ನೀಡುವಂತೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಕೋರಿದ್ದಾರೆ.

ದಿನಾಂಕ: 24-04-2026, ಸ್ಥಳ: ಬಿ.ಎಸ್.ಎನ್.ಎಲ್ ಕಚೇರಿ ಮುಂಭಾಗ, [ನಗರದ ಹೆಸರು]ಸಂವಿಧಾನ ವಿರೋಧಿ ಎಸ್.ಐ.ಆರ್. ಅನ್ನು ತಿರಸ್ಕರಿಸಿ ಸಿಪಿಎಂನ ಜನಜಾಗೃತಿ ಪ್ರತಿಭಟನೆ ಸಂವಿಧಾನ ವಿರೋಧಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್.) ವಿರುದ್ಧ ಭಾರತ ಕಮ್ಯೂನಿಸ್ಟ್ ಪಾರ್ಟಿ
ದಿನಾಂಕ: 24-04-2026, ಸ್ಥಳ: ಬಿ.ಎಸ್.ಎನ್.ಎಲ್ ಕಚೇರಿ ಮುಂಭಾಗ, [ನಗರದ ಹೆಸರು]ಸಂವಿಧಾನ ವಿರೋಧಿ ಎಸ್.ಐ.ಆರ್. ಅನ್ನು ತಿರಸ್ಕರಿಸಿ ಸಿಪಿಎಂನ ಜನಜಾಗೃತಿ ಪ್ರತಿಭಟನೆ ಸಂವಿಧಾನ ವಿರೋಧಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್.) ವಿರುದ್ಧ ಭಾರತ ಕಮ್ಯೂನಿಸ್ಟ್ ಪಾರ್ಟಿ
Oplus_16908288

ದಿನಾಂಕ: 24-04-2026, ಸ್ಥಳ: ಬಿ.ಎಸ್.ಎನ್.ಎಲ್ ಕಚೇರಿ ಮುಂಭಾಗ, [ನಗರದ ಹೆಸರು]ಸಂವಿಧಾನ ವಿರೋಧಿ ಎಸ್.ಐ.ಆರ್. ಅನ್ನು ತಿರಸ್ಕರಿಸಿ ಸಿಪಿಎಂನ ಜನಜಾಗೃತಿ ಪ್ರತಿಭಟನೆ ಸಂವಿಧಾನ ವಿರೋಧಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್.) ವಿರುದ್ಧ ಭಾರತ ಕಮ್ಯೂನಿಸ್ಟ್ ಪಾರ್ಟಿ (ಸಿಪಿಎಂ) ಜಿಲ್ಲಾ ಸಮಿತಿಯು ಇಂದು ನಗರದ ಬಿ.ಎಸ್.ಎನ್.ಎಲ್ ಕಚೇರಿ ಮುಂಭಾಗದಲ್ಲಿ ಜನಜಾಗೃತಿ ಪ್ರತಿಭಟನಾ ಕಾರ್ಯಕ್ರಮವನ್ನು ಆಯೋಜಿಸಿತ್ತು.ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ಸೈಯದ್ ಮುಜೀಬ್ ಅವರು, ಚುನಾವಣಾ ಆಯೋಗ ಕೈಗೊಂಡಿರುವ ಎಸ್.ಐ.ಆರ್. ಪ್ರಕ್ರಿಯೆಯು ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಹೆಸರಿನಲ್ಲಿ ಮನೆಮನೆಗೆ ಸಮೀಕ್ಷೆ ನಡೆಸಿ, ಸತ್ತವರು, ಸ್ಥಳಾಂತರಗೊಂಡವರು ಹಾಗೂ ಡುಪ್ಲಿಕೇಟ್ ಹೆಸರುಗಳನ್ನು ತೆಗೆದುಹಾಕುವುದಾಗಿ ಹೇಳಿಕೊಂಡರೂ, ಪ್ರಸ್ತುತ ನಡೆಯುತ್ತಿರುವ ಪರಿಷ್ಕರಣೆ ಗುಣಾತ್ಮಕವಾಗಿಲ್ಲ ಮತ್ತು ಅಪಾಯಕಾರಿ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.”ಎಸ್.ಐ.ಆರ್. ಪ್ರಕ್ರಿಯೆಯ ಮೂಲ ಉದ್ದೇಶ ಅರ್ಹ ಮತದಾರರನ್ನು ಸೇರಿಸುವುದು ಮತ್ತು ಅನರ್ಹರನ್ನು ತೆಗೆದುಹಾಕುವುದಾಗಿದೆ. ಆದರೆ ಪ್ರಸ್ತುತದ ಕ್ರಮಗಳು ಜನವಿರೋಧಿಯಾಗಿದ್ದು, ಇದರ ಹಿಂದೆ ಎನ್.ಆರ್.ಸಿ. ರೀತಿಯ ದುರುದ್ದೇಶಗಳು ಅಡಗಿವೆ” ಎಂದು ಅವರು ಆರೋಪಿಸಿದರು.ವಿಶೇಷವಾಗಿ ದಲಿತರು, ಆದಿವಾಸಿಗಳು, ಮಹಿಳೆಯರು ಹಾಗೂ ವಲಸೆ ಕಾರ್ಮಿಕರು ಈ ಪ್ರಕ್ರಿಯೆಯಿಂದ ಹೆಚ್ಚು ಬಾಧಿತರಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ ಅವರು, “ದಾಖಲೆಗಳ ಕೊರತೆ, ಮಾಹಿತಿ ಅಭಾವ ಮತ್ತು ಸ್ಥಳಾಂತರದ ಸಮಸ್ಯೆಗಳಿಂದಾಗಿ ಈ ವರ್ಗದ ಜನರನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಹೊರಗಿಡುವ ಅಪಾಯವಿದೆ” ಎಂದು ಹೇಳಿದರು.ಇತ್ತೀಚಿನ ವರದಿಗಳ ಪ್ರಕಾರ ಕೆಲವು ರಾಜ್ಯಗಳಲ್ಲಿ ಲಕ್ಷಾಂತರ ಜನರ ಹೆಸರುಗಳನ್ನು ಮತದಾರ ಪಟ್ಟಿಯಿಂದ ತೆಗೆದುಹಾಕಲಾಗಿರುವುದರಿಂದ, ಅವರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಆತಂಕ ಸೃಷ್ಟಿಯಾಗಿದೆ. ಇದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳಿಗೇ ಧಕ್ಕೆ ತರುವ ಕೃತ್ಯವಾಗಿದೆ ಎಂದು ಅವರು ನುಡಿದರು.ಇದನ್ನು ಹಿಂದುತ್ವ ಹಾಗೂ ಕಾರ್ಪೊರೇಟ್ ನಿರಂಕುಶಾಧಿಕಾರದ ಭಾಗವಾಗಿ ಕರೆದ ಅವರು, ದೇಶವನ್ನು ನವ-ಫ್ಯಾಸಿಸ್ಟ್ ದಿಕ್ಕಿನಲ್ಲಿ ಕೊಂಡೊಯ್ಯುವ ಪ್ರಯತ್ನ ಎಂದು ಖಂಡಿಸಿದರು.ಮುಂದುವರಿದು ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಬಿ. ಉಮೇಶ್ ಅವರು, “ಕರ್ನಾಟಕದಲ್ಲಿ ಈ ಪ್ರಕ್ರಿಯೆಯಿಂದಾಗಿ 1 ಕೋಟಿ 20 ಲಕ್ಷ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂಬ ವರದಿಗಳು ಬಂದಿವೆ. ಆದ್ದರಿಂದ ಸಂಘಟಿತವಾಗಿ ಎಸ್.ಐ.ಆರ್. ಅನ್ನು ಪ್ರಶ್ನಿಸಬೇಕು. ಇದೊಂದು ಅಘೋಷಿತ ಎನ್.ಆರ್.ಸಿ. ಪ್ರಜಾಪ್ರಭುತ್ವವನ್ನು ಉಳಿಸಲು ನಾವೆಲ್ಲರೂ ಧ್ವನಿ ಎತ್ತಬೇಕು. ಮತದಾರರು, ದೇಶಪ್ರೇಮಿಗಳು ಮತ್ತು ಸಂವಿಧಾನವನ್ನು ಕಾಪಾಡುವ ಪ್ರತಿಯೊಬ್ಬರೂ ಈ ಕ್ರಮದ ವಿರುದ್ಧ ಒಂದಾಗಿ ಹೋರಾಡಬೇಕು” ಎಂದು ಕರೆ ನೀಡಿದರು.ನಗರ ಕಾರ್ಯದರ್ಶಿ ಎ. ಲೋಕೇಶ್ ಅವರು ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ಪರಿಶೀಲಿಸಿಕೊಂಡು, ಬಿಎಲ್ಒ (ಬ್ಲಾಕ್ ಲೆವಲ್ ಅಧಿಕಾರಿ) ಅವರೊಂದಿಗೆ ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಮನವಿ ಮಾಡಿದರು.ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಇನ್ಸಾಪ್ ರಫೀಕ್, ಸುಬ್ರಮಣ್ಯ, ಶಿವಕುಮಾರಸ್ವಾಮಿ, ರಂಗನಾಥ್, ಖಲೀಲ್, ಇಂತಿಯಾ, ಮಧುಸೂದನ್, ಕಲ್ಪನಾ, ಮಾರುತಿ, ಲಕ್ಷ್ಮೀಕಾಂತ್ ಮುಂತಾದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಡಾ. ಅಂಬೇಡ್ಕರ್ ಸಂಭ್ರಮಿಸುವ ಭೀಮೋತ್ಸವ ಆಚರಣೆಮೇ ೧-೨ರಂದು ನಗರದಲ್ಲಿ ಸಂವಿಧಾನಶಿಲ್ಪಿಯ ಸಾಂಸ್ಕೃತಿಕ ಸ್ಮರಣೆತುಮಕೂರು: ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸಂಭ್ರಮಿಸುವ, ಅವರ ೧೩೫ನೇ ಜನ್ಮದಿನದ ಅಂಗವಾಗಿ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಮೇ ೧ ಮತ್ತು ೨ರಂದು ಕಲ್ಪತರು ಸಾಂಸ್ಕೃತಿಕ ವೇದಿಕೆಯಿಂದ

ಡಾ. ಅಂಬೇಡ್ಕರ್ ಸಂಭ್ರಮಿಸುವ ಭೀಮೋತ್ಸವ ಆಚರಣೆಮೇ ೧-೨ರಂದು ನಗರದಲ್ಲಿ ಸಂವಿಧಾನಶಿಲ್ಪಿಯ ಸಾಂಸ್ಕೃತಿಕ ಸ್ಮರಣೆತುಮಕೂರು: ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸಂಭ್ರಮಿಸುವ, ಅವರ ೧೩೫ನೇ ಜನ್ಮದಿನದ ಅಂಗವಾಗಿ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಮೇ ೧ ಮತ್ತು ೨ರಂದು ಕಲ್ಪತರು ಸಾಂಸ್ಕೃತಿಕ ವೇದಿಕೆಯಿಂದ ವೈಭವದ ‘ಕರ್ನಾಟಕ ಭೀಮೋತ್ಸವ’ ಹಮ್ಮಿಕೊಳ್ಳಲಾಗಿದೆ.ವೇದಿಕೆಯ ಅಧ್ಯಕ್ಷ ಸೋಮಶೇಖರ್ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭೀಮೋತ್ಸವ ಕಾರ್ಯಕ್ರಮದ ವಿವರ ನೀಡಿ, ಡಾ. ಅಂಬೇಡ್ಕರ್ ಅವರನ್ನು ಸಂಗೀತ, ಸಾಂಸ್ಕೃತಿಕವಾಗಿ ಆರಾಧಿಸುವ, ಸಂಭ್ರಮಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಇದರ ಅಂಗವಾಗಿ ಮೇ ೧ರಂದು ಸಂಜೆ ಜನಪ್ರಿಯ ಗಾಯಕರಾದ ಕಂಬದರAಗಯ್ಯ, ನವೀನ್ ಸಜ್ಜು, ಸವಿತಕ್ಕ, ಶಿವಾನಿ ತಂಡದಿAದ ಜಾನಪದ ಸಂಭ್ರಮ ಏರ್ಪಾಟಾಗಿದೆ. ನಂತರ ಅರುಣ್‌ಕುಮಾರ್ ಮತ್ತು ತಂಡದಿAದ ಅಂಬೇಡ್ಕರ್ ಕುರಿತ ಗೀತಗಾಯನ ನಡೆಯಲಿದೆ. ಮೇ ೨ರಂದು ಖ್ಯಾತ ಹಿನ್ನಲೆ ಗಾಯಕ ರಾಜೇಶ್‌ಕೃಷ್ಣನ್, ಖ್ಯಾತ ಗಾಯಕಿ ಮಂಗ್ಲಿ ಹಾಗೂ ಬ್ಯಂದವಿಹಾರಿ ತಂಡದಿAದ ಗೀತಗಾಯವ ವೈಭವ ನಡೆಯಲಿದೆ. ಚಲನಚಿತ್ರ ನಟ ಗಣೇಶ್, ಫಿಲಂ ಫೇರ್ ಪ್ರಶಸ್ತಿ ವಿಜೇತ ಹಿಶವರ ಅಬ್ದುಲ್ ವಹಾಬ್ ಮುಂತಾದವರು ‘ಕಲ್ಪತರು ಸಂಗೀತ ಸಂಭ್ರಮ’ ನಡೆಸಿಕೊಡುವರು. ಇದರಲ್ಲಿ ಅಂಬೇಡ್ಕರ್ ಅವರ ಮರಿ ಮೊಮ್ಮಗ ರಾಜರತ್ನ ಅಶೋಕ ಅಂಬೇಡ್ಕರ್ ಪಾಲ್ಗೊಳ್ಳಲಿದ್ದಾರೆ. ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಪಾಲನಹಳ್ಳಿ ಮಠದ ಸಿದ್ದರಾಜು ಸ್ವಾಮೀಜಿ, ಎಲೆರಾಂಪುರ ಮಠದ ಡಾ. ಹನುಮಂತನಾಥ ಸ್ವಾಮೀಜಿಗಳು ಉದ್ಘಾಟನಾ ಸಮಾರಂಭದ ದಿವ್ಯಸಾನಿಧ್ಯ ವಹಿಸುವರು. ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ ಪರಮೇಶ್ವರ್, ಶಾಸಕ ಜಿ.ಬಿ. ಜ್ಯೋತಿಗಣೇಶ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸುವರು ಎಂದು ಸೋಮಶೇಖರ್ ತಿಳಿಸಿದರು.ರಾಜ್ಯದ ವಿವಿಧೆಡೆಗಳಿಂದ ಡಾ. ಅಂಬೇಡ್ಕರ್ ಅನುಯಾಯಿಗಳು, ದಲಿತ ಸಂಘರ್ಷ ಸಮಿತಿ ಹೋರಾಟಗಾರರು, ವಿವಿಧ ಸಂಘಸAಸ್ಥೆಗಳ ಪ್ರಮುಖರು, ವಿದ್ಯಾರ್ಥಿಗಳು ಭಾಗವಹಿಸುವರು. ಎರಡು ಈ ದಿನಗಳ ಕಾರ್ಯಕ್ರಮದಲ್ಲಿ ಸುಮಾರು ೧ ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.ಕರ್ನಾಟಕ ಭೀಮೋತ್ಸವ ಕಾರ್ಯಕ್ರಮವನ್ನು ರಾಜ್ಯದ ಪ್ರತಿಷ್ಠಿತ ಇವೆಂಟ್ ಮ್ಯಾನೆಂಜ್‌ಮೆAಟ್ ರಾಜ್ ಇವೆಂಟ್ಸ್ನವರು ನಡೆಸಿಕೊಡಲಿದ್ದಾರೆ. ಇದರ ವ್ಯವಸ್ಥಾಪಕ ಸಿದ್ಧರಾಜು ಭಾಗವಹಿಸುವರು. ಜಿಲ್ಲೆಯ ಇತಿಹಾಸದಲ್ಲಿ ಬಾಬಾ ಸಾಹೇಬರ ಅಂಬೇಡ್ಕರ್ ಅವರ ಜಯಂತಿಯನ್ನು ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ಉತ್ಸವವಾಗಿ ಹಬ್ಬದ ರೀತಿ ಆಚರಿಸಿ, ಸಂವಿಧಾನಶಿಲ್ಪಿಯನ್ನು ಸಾಂಸ್ಕೃತಿಕವಾಗಿ ಸ್ಮರಣೆ ಮಾಡುವ ಕಾರ್ಯಕ್ರಮ ಇದಾಗಿದೆ ಎಂದು ಸೋಮಶೇಖರ್ ಹೇಳಿದರು. ವಿದ್ಯಾವಾಹಿನಿ ಸಂಸ್ಥೆ ಕಾರ್ಯದರ್ಶಿ ಎನ್.ಬಿ. ಪ್ರದೀಪ್‌ಕುಮಾರ್, ವಿವಿಧ ಸಂಘಟನೆಗಳ ಮುಖಂಡರಾದ ಡಾ.ಧನಿಯಾಕುಮಾರ್, ಡಾ. ನೇತಾಜಿ ಶ್ರೀಧರ್, ನವಚೇತನ್, ಡಾ.ಕೊಟ್ಟ ಶಂಕರ್, ಅರವಿಂದ್, ಡ್ಯಾಗೇರಹಳ್ಳಿ ವಿರೂಪಾಕ್ಷ, ಅಖಿಲೇಶ್, ಪಿ.ಎನ್. ರಾಮಯ್ಯ, ರವಿಕುಮಾರ್, ಓಂಕಾರ್, ನರಸಿಂಹಮೂರ್ತಿ, ಚಂದನ್ ಪಟೇಲ್, ವಿಠಲ್, ಗುರುರಾಘವೇಂದ್ರ ಮೊದಲಾದವರು ಪತ್ರಿಕಾಗೋಷ್ಠೀಯಲ್ಲಿ ಹಾಜರಿದ್ದರು.ಇದಕ್ಕೂ ಮೊದಲು ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮದ ಪೆಂಡಾಲ್‌ಗೆ ಭೂಮಿ ಪೂಜೆ ನೆರವೇರಿಸಲಾಯಿತು. ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರೊಂದಿಗೆ ವಿವಿಧ ಸಂಘಟನೆಗಳು ಮುಖಂಡರು ಭಾಗವಹಿಸಿದ್ದರು.

ತುಮಕೂರು:ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಭಗವಾನ್.ಬಿ.ಸಿ. ಅವರ ಅಧ್ಯಕ್ಷತೆಯಲ್ಲಿ,ರಾಜೀವಗಾಂಧಿ ಆರೋಗ್ಯ ವಿವಿಯ ವ್ಯಾಪ್ತಿಗೆ ಒಳಪಡುವ ಕಾಲೇಜುಗಳ ಸಹಯೋಗದಲ್ಲಿ ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್
ತುಮಕೂರು:ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಭಗವಾನ್.ಬಿ.ಸಿ. ಅವರ ಅಧ್ಯಕ್ಷತೆಯಲ್ಲಿ,ರಾಜೀವಗಾಂಧಿ ಆರೋಗ್ಯ ವಿವಿಯ ವ್ಯಾಪ್ತಿಗೆ ಒಳಪಡುವ ಕಾಲೇಜುಗಳ ಸಹಯೋಗದಲ್ಲಿ ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್
Oplus_16908288

ತುಮಕೂರು:ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಭಗವಾನ್.ಬಿ.ಸಿ. ಅವರ ಅಧ್ಯಕ್ಷತೆಯಲ್ಲಿ,ರಾಜೀವಗಾಂಧಿ ಆರೋಗ್ಯ ವಿವಿಯ ವ್ಯಾಪ್ತಿಗೆ ಒಳಪಡುವ ಕಾಲೇಜುಗಳ ಸಹಯೋಗದಲ್ಲಿ ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್, ಅಂಗಾAಗ ಧಾನ ಅಭಿಯಾನ ಮತ್ತು ಜಾಥಾವನ್ನು ಸಹಯೋಗದಲ್ಲಿ ಏಪ್ರಿಲ್ ೨೫ ರಂದು ಆಯೋಜಿಸಲಾಗಿದೆ ಎಂದು ಐಎಂಎ ರಾಜ್ಯ ಅಧ್ಯಕ್ಷರಾದ ಡಾ.ವೀರಭದ್ರಯ್ಯ ತಿಳಿಸಿದ್ದಾರೆ.ಐಎಂಎ ಸಭಾಂಗಣದಲ್ಲಿAದು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ಗಳಲ್ಲಿ ಬಹಳ ಸರಾಗವಾಗಿ ನಶೆ ಎರಿಸುವ ಅಮುಲು ಪದಾರ್ಥಗಳು ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಹದಿಹರೆಯದ ಮಕ್ಕಳು ಬಹುಬೇಗ ನಶೆಗೆ ಕದಂಬ ಬಾಹುಗಳಿಗೆ ಬಲಿಯಾಗುತಿದ್ದು,ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಾಕಥಾನ್ ಹಮ್ಮಿಕೊಳ್ಳಲಾಗಿದೆ.ಇದುವರೆಗೂ ೧೪ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಏಪ್ರಿಲ್ ೨೫ ರಂದು ೧೫ನೇ ಕಾರ್ಯಕ್ರಮವನ್ನು ತುಮಕೂರು ಜಿಲ್ಲೆಯಲ್ಲಿ ಕೈಗೊಳ್ಳಲಾಗಿದೆ ಎಂದರು.ರಾಜೀವ್‌ಗಾAಧಿ ವಿಶ್ವವಿದ್ಯಾಲಯದದ ಕುಲಪತಿಗಳು ವಿಶ್ವವಿದ್ಯಾಲಯ ಕ್ಯಾಂಪಸ್‌ಗಳನ್ನು ಕೇವಲ ಶಿಕ್ಷಣ ನೀಡಲಷ್ಟೇ ಬಳಕೆ ಮಾಡದೆ,ಇಂತಹ ಸಾಮಾಜಿಕ ಕಳಕಳಿಯ ಕೆಲಸಗಳಿಗೂ ಉತ್ತೇಜನ ನೀಡುತ್ತಾ ಬಂದಿದೆ.ಏಪ್ರಿಲ್ ೨೫ರಂದು ಬೆಳಗ್ಗೆ ೬:೩೦ ಗಂಟೆಗೆ ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಳ್ಳುವ ವಿದ್ಯಾರ್ಥಿಗಳು, ಯುವಜನರು, ಜನಸಾಮಾನ್ಯರು ಸರಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಹೊರಟು, ಶಿವಕುಮಾರಸ್ವಾಮಿ ಸರ್ಕಲ್‌ನಿಂದ ಕೋತಿ ತೋಪು ಮೂಲಕ ಅಮಾನಿಕೆರೆಯಲ್ಲಿರುವ ಗಾಜಿನಮನೆಯಲ್ಲಿ ಮುಕ್ತಾಯಗೊಳ್ಳಲಿದೆ.೮-೧೦ ಸಾವಿರಕ್ಕೂ ಹೆಚ್ಚು ಯುವಜನರು ಜನರು ಪಾಲ್ಗೊಳ್ಳುತ್ತಿದ್ದಾರೆ ಎಂದು ಡಾ.ವೀರಭದ್ರಯ್ಯ ತಿಳಿಸಿದರು.ಸಮಾಜ ಸೇವಕ ಸ್ಪೂರ್ತಿ ಚಿದಾನಂದ ಮಾತನಾಡಿ,ಡ್ರಗ್ ಇಂದು ಮಕ್ಕಳಿಗೆ ಪಿಡುಗಾಗಿ ಪರಿಣಮಿಸಿದೆ.ಇದುವರೆಗೂ ನಗರದ ಪ್ರತಿಷ್ಠಿತ ಶಾಲಾ, ಕಾಲೇಜುಗಳಿಗೆ ಮಾತ್ರ ಸಿಮೀತವಾಗಿದ್ದ ಡ್ರಗ್ಸ್ ಮಾಫೀಯ ಇಂದು ಗ್ರಾಮೀಣ ಭಾಗವನ್ನು ತಲುಪಿವೆ. ಅತಿ ಹೆಚ್ಚು ಬಲಿಯಾಗುತ್ತಿರುವುದು ಮೆಡಿಕಲ್ ಮತ್ತು ಇಂಜಿನಿಯರಿAಗ್ ಓದುತ್ತಿರುವ ಯುವಜನರು. ಹಾಗಾಗಿ ಇದನ್ನು ವ್ಯವಸ್ಥಿತ ರೀತಿಯಲ್ಲಿ ತಡೆಗಟ್ಟುವ ನಿಟ್ಟಿನಲ್ಲಿ ಶಾಲಾ,ಕಾಲೇಜುಗಳಲ್ಲಿಯೂ ಮಕ್ಕಳನ್ನು ರಕ್ತ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.ಡ್ರಗ್ಸ್ ಸೇವನೆಯ ಜೊತೆಗೆ,ಸಮಾಜಕ್ಕೆ ಕಂಟಕ ಪ್ರಾಯರಾದ ಡ್ರಗ್ ಪೆಡ್ಲರ್‌ಗಳನ್ನು ಪತ್ತೆ ಹಚ್ಚಿ,ವ್ಯವಸ್ಥಿತ ಜಾಲವನ್ನು ಬೇಧಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ನಶೆ ಮುಕ್ತ ಕ್ಯಾಂಪಸ್ ಅಭಿಯಾನವನ್ನು ಆಯೋಜಿಸಿದ್ದು, ೨೦೨೮ರ ವೇಳೆ ಕರ್ನಾಟಕವನ್ನು ನಶಮುಕ್ತ ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ.ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಸರಕಾರ ಮುಂದಾಗಿದೆ.ದಿಶಾ ಬೋಯಿ ಪೌಂಢೇಷನ್ ಸಹಯೋಗದಲ್ಲಿ ೧೫೦೦ ಉಪನ್ಯಾಸಕರಿಗೆ ತರಬೇತಿ ನೀಡಿ, ಅವರ ಮೂಲಕ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ನಶೆ ಮುಕ್ತ ಭಾರತ ನಿರ್ಮಾಣಕ್ಕೆ ಕೆಲಸ ಮಾಡಲಿದ್ದಾರೆ ಎಂದರು.ಭಾರತ ಇಂದು ಶೇ೪೪ರಷ್ಟು ಯುವಜನತೆಯನ್ನು ಹೊಂದಿದೆ.ಹೆಚ್ಚು ಯುವಜನರೇ ಇಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಡ್ರಗ್ಸ್ ಕಪಿಮುಷ್ಠಿಯಿಂದ ಯುವಜನರನ್ನು ಹೊರ ತರುವ ನಿಟ್ಟಿನಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು, ಅಧಿಕಾರಿಗಳು, ಮಾಧ್ಯಮಗಳು ಕೈಜೊಡಿಸಿ ಕೆಲಸ ಮಾಡಬೇಕಿದೆ. ಅ ಮೂಲಕ ೨೦೨೮ರೊಳಗೆ ದೇಶವನ್ನು ನಶೆ ಮುಕ್ತಗೊಳಿಸಲು ಕೇಂದ್ರ ಸರಕಾರ ಪಣ ತೊಟ್ಟಿದೆ.ಇಲ್ಲಿ ಪೋಷಕರ ಪಾತ್ರ ಮಹತ್ವ ಪಡೆಯಲಿದೆ.ಹಾಗಾಗಿ ಎಲ್ಲರೂ ಒಗ್ಗೂಡಿ ಡ್ರಗ್ಸ್ ಎಂಬ ಸಾಮಾಜಿಕ ಪಿಡುಗನ್ನು ಎದುರಿಸೋಣ ಎಂದು ಎಸ್.ಪಿ.ಚಿದಾನಂದ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಸಂಚಾಲಕರಾದ ಡಾ.ಎಂ.ಆರ್.ಹುಲಿನಾಯ್ಕರ್, ಐಎಂಎ ಪದಾಧಿಕಾರಿಗಳಾದ ಡಾ.ರಾಘವೆಂದ್ರ,ಡಾ.ಕೃಷ್ಣಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಿಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆತುಮಕೂರು : ಬೇಸಿಗೆ ಪ್ರಾರಂಭವಾಗಿದ್ದು ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀಡಿಗೆ ಸಮಸ್ಯೆಯಾದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಶ್ವಿಜಾ ಬಿ.ವಿರವರು ತಿಳಿಸಿದರು

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಿಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆತುಮಕೂರು : ಬೇಸಿಗೆ ಪ್ರಾರಂಭವಾಗಿದ್ದು ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀಡಿಗೆ ಸಮಸ್ಯೆಯಾದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಶ್ವಿಜಾ ಬಿ.ವಿರವರು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಗ್ರಾಮೀಣ ಭಾದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ದೂರುಗಳು ಬರಲು ಪ್ರಾರಂಭವಾಗಿವೆ. ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದರು.ಗ್ರಾಮ ಪಂಚಾಯಿತಿ ಒಡೆತನದಲ್ಲಿರುವ ಸರ್ಕಾರಿ ಬೋರ್ ವೆಲ್/ಕೊಳವೆ ಬಾವಿಗಳಲ್ಲಿ ನೀರಿನ ಸಮಸ್ಯೆಯಾದಲ್ಲಿ ಖಾಸಗಿ ಬೋರ್ ವೆಲ್ ಗಳ ಮೂಲಕ ನೀಡಿ ಒಗಗಿಸಲು ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರು.ಗ್ರಾಮೀಣ ಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸದೇ ನಿಷ್ಕ್ರಿಯಗೊಂಡಿದ್ದರೆ ಅವುಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಯಾವುದೇ ಕಾರಣಕ್ಕು ಯಾವ ಗ್ರಾಮದಲ್ಲಿಯೂ ನೀಡು ಮಲಿನವಾಗದಂತೆ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಅಧಿಕಾರಿಗಳಿಗೆ ತಿಳಿಸಿದರು.ತೆರಿಗೆ ಸಂಗ್ರಹದ ಬಗ್ಗೆ ಪರಿಶೀಲನೆ ಮಾಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕಳೆದ ಸಾಲಿನಲ್ಲಿ ಶೇ‌ 100 ಕ್ಕಿಂತ ಹೆಚ್ಚು ತೆರಿಗೆ ಸಂಗ್ರಹ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ಅಭಿನಂದನೆ ತಿಳಿಸಿದರು. ತೆರಿಗೆ ಸಂಗ್ರಹ ಅಭಿಯಾನದವನ್ನು ಕೈಗೊಂಡು ಕರ ವಸೂಲಿಗಾರರು, ವಾಟರ್ ಮೆನ್, ಕೃಷಿ ಸಖಿ, ಪಶು ಸಖಿ, ಸ್ವ ಸಹಾಯ ಸಂಘದ ಮಹಿಳೆಯರು ಗ್ರಾಮಗಳಲ್ಲಿ ತೆರಿಗೆ ಸಂಗ್ರಹ ಕುರಿತಂತೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು. ಮುಂಬರುವ ಡಿಸೆಂಬಂರ್ ತಿಂಗಳೊಳಗಾಗಿ ತೆರಿಗೆ ಸಂಗ್ರಹದ ಗುರಿಯನ್ನು ತಲುಪಲು ಕಟ್ಟನಿಟ್ಟಿನ ಸೂಚನೆ ನೀಡಲಾಯಿತು. ಮುಂದುವರೆದು ಇ-ಸ್ವತ್ತು ಬಗ್ಗೆ ಮಾತನಾಡಿದ ಅಶ್ವಿಜಾ ಬಿ.ವಿ, ಜನರ ಆಸ್ತಿಗಳಿಗೆ ಇ-ಸ್ವತ್ತು ಮಾಡಿಕೊಡಲು ವಿಳಂಬವಾಗದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು. ನಂತರ ಮಾತನಾಡಿದ ಅವರ ಜಿಲ್ಲೆಯಲ್ಲಿ ಸ್ವಚ್ಛ ಶನಿವಾರ ಅಭಿಯಾನವನ್ನು ಯಶಸ್ವಿಯಾಗಿ ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳಗಳಾದ ಬಸ್ ಸ್ಟಾಂಡ್, ಆಸ್ಪತ್ರೆ, ಶಾಲೆ, ಸಂತೆ ಬೀದಿ ಹಾಗೂ ವಿವಿಧ ಪ್ರದೇಶಗಳಲ್ಲಿ ಕಸ ಇಲ್ಲದಂತೆ ಕಸ ಸಂಗ್ರಹ ಮಾಡಿ ಸ್ವಚ್ಛ ಗ್ರಾಮಗಳನ್ನಾಗಿಸಬೇಕು ಎಂದರು.ಸಭೆಯಲ್ಲಿ ನರೇಗಾ ಯೋಜನೆ, ಜಲ ಜೀವನ್ ಮಿಷನ್, ಸ್ವಚ್ಛಭಾರತ್ ಮಿಷನ್ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಉಪಕಾರ್ಯದರ್ಶಿ (ಅಭಿವೃದ್ಧಿ), ಉಪಕಾರ್ಯದರ್ಶಿ (ಆಡಳಿತ), ಮುಖ್ಯ ಯೋಜನಾಧಿಕಾರಿಗಳು, ಮುಖ್ಯ ಲೆಕ್ಕಾಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.

ನಗರಪಾಲಿಕೆ ತೆರಿಗೆ ಪರಿಷ್ಕರಣೆಯಿಂದ ಜನರಿಗೆ ದುಬಾರಿ ಹೊರೆಕಾನೂನು ವಿರೋಧಿ ತೆರಿಗೆ ಹೆಚ್ಚಳ ರದ್ದುಪಡಿಸಲು ಆಗ್ರಹತುಮಕೂರು: ತುಮಕೂರು ನಗರಪಾಲಿಕೆಯು ೨೦೨೬-೨೭ನೇ ಸಾಲಿನ ಆಸ್ತಿ ತೆರಿಗೆ ಹಾಗೂ ಮುದ್ರಾಂಕ ಶುಲ್ಕವನ್ನು ಕಾನೂನುಬಾಹಿರವಾಗಿ ದುಪ್ಪಟ್ಟು ಹೆಚ್ಚಳ ಮಾಡಿದೆ. ಹೆಚ್ಚಿಸಿರುವ ತೆರಿಗೆಯನ್ನು ರದ್ದು ಮಾಡಬೇಕು
ನಗರಪಾಲಿಕೆ ತೆರಿಗೆ ಪರಿಷ್ಕರಣೆಯಿಂದ ಜನರಿಗೆ ದುಬಾರಿ ಹೊರೆಕಾನೂನು ವಿರೋಧಿ ತೆರಿಗೆ ಹೆಚ್ಚಳ ರದ್ದುಪಡಿಸಲು ಆಗ್ರಹತುಮಕೂರು: ತುಮಕೂರು ನಗರಪಾಲಿಕೆಯು ೨೦೨೬-೨೭ನೇ ಸಾಲಿನ ಆಸ್ತಿ ತೆರಿಗೆ ಹಾಗೂ ಮುದ್ರಾಂಕ ಶುಲ್ಕವನ್ನು ಕಾನೂನುಬಾಹಿರವಾಗಿ ದುಪ್ಪಟ್ಟು ಹೆಚ್ಚಳ ಮಾಡಿದೆ. ಹೆಚ್ಚಿಸಿರುವ ತೆರಿಗೆಯನ್ನು ರದ್ದು ಮಾಡಬೇಕು
Oplus_16908288

ನಗರಪಾಲಿಕೆ ತೆರಿಗೆ ಪರಿಷ್ಕರಣೆಯಿಂದ ಜನರಿಗೆ ದುಬಾರಿ ಹೊರೆಕಾನೂನು ವಿರೋಧಿ ತೆರಿಗೆ ಹೆಚ್ಚಳ ರದ್ದುಪಡಿಸಲು ಆಗ್ರಹತುಮಕೂರು: ತುಮಕೂರು ನಗರಪಾಲಿಕೆಯು ೨೦೨೬-೨೭ನೇ ಸಾಲಿನ ಆಸ್ತಿ ತೆರಿಗೆ ಹಾಗೂ ಮುದ್ರಾಂಕ ಶುಲ್ಕವನ್ನು ಕಾನೂನುಬಾಹಿರವಾಗಿ ದುಪ್ಪಟ್ಟು ಹೆಚ್ಚಳ ಮಾಡಿದೆ. ಹೆಚ್ಚಿಸಿರುವ ತೆರಿಗೆಯನ್ನು ರದ್ದು ಮಾಡಬೇಕು, ಇಲ್ಲವಾದಲ್ಲಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿಸಲ್ಲಿಸುವುದಾಗಿ ರಾಷ್ಟಿçÃಯ ಮಾನವ-ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್. ಬಸವರಾಜು ಹೇಳಿದರು.ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ತಿ ತೆರೆಗೆ ಹಾಗೂ ಮುದ್ರಾಂಕ ಶುಲ್ಕವನ್ನು ಕ್ರಯದ ಒಟ್ಟು ಮೊಬಲಗು ಮೊತ್ತದ ಶೇಕಡ ೦.೨ರಷ್ಟು ಪಾವತಿಸಿಕೊಳ್ಳುವುದು ಅಂತ ಪರಿಷ್ಕರಿಸಲಾಗಿದ್ದು. ಇದರಿಂದ ಸುಮಾರು ಶೇಕಡ ೫೦ರಷ್ಟು ತೆರಿಗೆ ಹೊರೆ ಜನರ ಮೇಲೆ ಬೀಳಲಿದೆ. ಈ ಮೂಲಕ ನಗರಪಾಲಿಗೆ ಹಗಲು ದರೋಡೆಗಿಳಿದಿದೆ ಎಂದು ಟೀಕಿಸಿದರು.ಮಹಾನಗರ ಪಾಲಿಕೆಯ ಆಯುಕ್ತರ ಕಛೇರಿ ಆದೇಶ ಸಂಖ್ಯೆ: ಆಸ್ತಿ ತೆರಿಗೆ ಪರಿಷ್ಕರಣೆಗೆ ೫೦/೪-೧೯೫/೨೦೨೫-೨೬, ೨:೨೩-೦೩-೨೦೨೬೦೦೩ ಸಂಬAಧಿಸಿದAತೆ ಆದೇಶ ಹೊರಡಿಸಿದ್ದು, ಸದರಿ ಆದೇಶದಲ್ಲಿ ೨೦೨೫-೨೬ನೇ ಸಾಲಿಗೆ ಪಾವತಿಸಿಕೊಳ್ಳುತ್ತಿರುವ ಆಸ್ತಿ ತೆರಿಗೆಯನ್ನು, ನೊಂದಣಿ ಮತ್ತು ಮುದ್ರಾಂಕ ಶುಲ್ಕದ ಶೇ ೨ರಷ್ಟು ಇದ್ದು, ೨೦೨೬-೨೭ನೇ ಸಾಲಿನ ಶುಲ್ಕವನ್ನು ಕ್ರಯದ ಒಟ್ಟು ಮೊಬಲಗು ಮೊತ್ತದ ಶೇ ೦.೨ರಷ್ಟು ಪಾವತಿಸಿಕೊಳ್ಳುವುದು ಅಂತ ಪರಿಷ್ಕರಿಸಲಾಗಿದ್ದು, ಉಲ್ಲೇಖ (೧) ಮತ್ತು (೨)ರ ಪ್ರಕಾರ ಅಂತ ನಮೂದಿಸಿರುತ್ತಾರೆ. ಈ ಪರಿಷ್ಕರಣೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇಕಡ ೫೦ರಷ್ಟು ಜಾಸ್ತಿ ಆಗುವುದು ಎಂದು ಹೇಳಿದರು.೨೦೨೬-೨೭ನೇ ಸಾಲಿಗೆ ಪರಿಷ್ಕರಣೆ ಶುಲ್ಕ ಕ್ರಯದ ಒಟ್ಟು ಮೊಬಲಗು ಮೊತ್ತದ ಶೇಕಡ ೦.೨ರಷ್ಟು ಪಾವತಿಸಿಕೊಳ್ಳಲು ಸದರಿ ಅಧಿನಿಯಮದಲ್ಲಿ ಯಾವ ಅವಕಾಶವೂ ಇಲ್ಲ. ಸದರಿ ಅಧಿನಿಯಮವು ಇದುವರೆವಿಗೂ ತಿದ್ದುಪಡಿಯೂ ಕೂಡ ಆಗಿರುವುದಿಲ್ಲ. ಆದ್ದರಿಂದ ಸದರಿ ಪರಿಷ್ಕರಣೆ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ ೧೯೭೬ ಹಾಗೂ ಕರ್ನಾಟಕ ಸ್ಟಾಂಪ್‌ಗಳ ಅಧಿನಿಯಮ ೧೯೫೭ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ಸದರಿ ತೆರಿಗೆ ಪರಿಷ್ಕರಣೆಯು ಕಾನೂನುಬಾಹಿರ ಕೃತ್ಯವಾಗಿರುತ್ತದೆ. ಈ ರೀತಿ ಪರಿಷ್ಕರಣೆಗೆ ಆದೇಶವಿಲ್ಲದಿದ್ದಲ್ಲಿ ಸದರಿ ಪರಿಷ್ಕರಣೆಯನ್ನು ಕೂಡಲೇ ತಡೆಹಿಡಿಯಬೇಕೆಂದು ಜಿ.ಎಸ್. ಬಸವರಾಜು ಒತ್ತಾಯಿಸಿದರು.೨೦೨೫-೨೬ನೇ ಸಾಲಿನ ನೀರಿನ ತೆರಿಗೆ ರೂ. ೨೪೦೦ ಇದ್ದು, ೨೦೨೬-೨೭ನೇ ಸಾಲಿಗೆ ರೂ. ೩೬೦೦ ಎಂದು ಪರಿಷ್ಕರಣೆ ಆಗಿರುತ್ತದೆ. ಅಂದರೆ ಕಳೆದ ವರ್ಷಕ್ಕಿಂತ ಶೇ ೫೦ರಷ್ಟು ಜಾಸ್ತಿಯಾಗಿರುತ್ತದೆ. ಸದರಿ ತೆರಿಗೆ ಕಳೆದ ವರ್ಷಕ್ಕಿಂತ ಶೇ ೨೦೦ರಷ್ಟು ಹೆಚ್ಚಳವಾಗಿದ್ದು, ಈ ರೀತಿ ಅವೈಜ್ಞಾನಿಕವಾಗಿ ತೆರಿಗೆ ಹೆಚ್ಚಿಸಲು ಸರ್ಕಾರದ ಆದೇಶ ಅಥವಾ ನಿರ್ದೇಶನ ಇಲ್ಲದಿದ್ದಲ್ಲಿ ಈ ಕೂಡಲೇ ತೆರಿಗೆ ಪರಿಷ್ಕರಣೆಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಹಿಂಪಡೆಯಬೇಕು ಎಂದರು.ಜನ ಸಂಪರ್ಕ ಸದರಿ ಪರಿಷ್ಕರಣೆಗೆ ಸಂಬAಧಿಸಿದAತೆ, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ದೂರು ನೀಡಿದಾಗ, ಆಯುಕ್ತರ ಸಮಕ್ಷಮದಲ್ಲೇ ಸಚಿವರು ತೆರಿಗೆ ಪರಿಷ್ಕರಣೆಗೆ ಅಸಮಾಧಾನ ವ್ಯಕ್ತಪಡಿಸಿ, ತೆರಿಗೆ ಪರಿಷ್ಕರಣೆ ಹಿಂಪಡೆಯುವAತೆ ಆಯುಕ್ತರಿಗೆ ಮೌಖಿಕ ಆದೇಶ ನೀಡಿದರು. ತೆರಿಗೆ ಹೆಚ್ಚಳ ರದ್ದುಪಡಿಸದಿದ್ದರೆ ಸಂಬAಧಿಸಿದವರ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಜಿ.ಎಸ್. ಬಸವರಾಜು ಎಚ್ಚರಿಕೆ ನೀಡಿದರು.ರಾಮಮಂದಿರ ವ್ಯವಸ್ಥಾಪನಾ ಸಮಿತಿ ರಚನೆಜಿಲ್ಲಾಧಿಕಾರಿಗಳ ಆದೇಶ ಕಾನೂನುಬಾಹಿರನಗರದ ಕೆ.ಆರ್. ಬಡಾವಣೆಯ ಪುರಾತನ ರಾಮಮಂದಿರ ಧಾರ್ಮಿಕ ದತ್ತಿ ಇಲಾಖೆ ವ್ಯಾಪಿಯಲ್ಲಿದ್ದು, ಈ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ರಚನೆಗೆ ಜಿಲ್ಲಾಧಿಕಾರಿಗಳು ಕಾನೂನುಬಾಹಿರವಾಗಿ ಸೂಚನೆ ನೀಡಿದ್ದಾರೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆ ಬಗ್ಗೆ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ತೀರ್ಮಾನ ಆಗಬೇಕು. ಆದರೆ ಸಭೆಯ ತೀರ್ಮಾನವೇ ಇಲ್ಲದೆ ಜಿಲ್ಲಾಧಿಕಾರಿಗಳು ವ್ಯವಸ್ಥಾಪನಾ ಸಮಿತಿ ರಚನೆಗೆ ಸೂಚನೆ ನೀಡಿದ್ದಾರೆ ಎಂದು ಜಿ.ಎಸ್. ಬಸವರಾಜು ಟೀಕಿಸಿದರು.ವ್ಯವಸ್ಥಾಪನಾ ಸಮಿತಿ ರಚಿಸಲು ಆ ದೇವಸ್ಥಾನದ ವಾರ್ಷಿಕ ಆದಾಯ ಒಂದು ಲಕ್ಷ ರೂ. ಮೀರಿರಬೇಕು. ಆದರೆ ರಾಮಮಂದಿರದಲ್ಲಿ ಆ ಪ್ರಮಾಣದ ಆದಾಯವಿಲ್ಲ, ಈ ದೇವಸ್ಥಾನದ ಬಗ್ಗೆ ಇಲಾಖೆಯಲ್ಲಿ ದಾಖಲೆಗಳೇ ಇಲ್ಲ. ವೈಯಕ್ತಿಕ ಹಿತಾಸಕ್ತಿಯಿಂದ, ಕಾನೂನಿಗೆ ವಿರುದ್ಧವಾಗಿ ಜಿಲ್ಲಾಧಿಕಾರಿಗಳು ರಾಮಮಂದಿರ ವ್ಯವಸ್ಥಾಪನಾ ಸಮಿತಿ ರಚನೆಗೆ ಮಾಡಿರುವ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.ರಾಷ್ಟಿçÃಯ ಮಾನವ-ಪರಿಸರ ಸಂರಕ್ಷಣಾ ಪಡೆ ಉಪಾಧ್ಯಕ್ಷ ಜಿ.ಕೆ. ಶ್ರೀನಿವಾಸ್, ವಿಜಯಕುಮಾರ್ ಹಾಜರಿದ್ದರು.

Call Us Now
WhatsApp