ತುಮಕೂರು ಜಿಲ್ಲೆ ಪರಿಶಿಷ್ಟ ಜಾತಿ ಪಂಗಡಗಳ ಸಂಶೋಧನೆ ಬಿಡುಗಡೆ ಮತ್ತು ಸಮಾಲೋಚನೆ. ಇಂದು ಸ್ಲಂ ಜನಾಂದೋಲನ ಕರ್ನಾಟಕ ಪರ್ಯಾಯ ಕಾನೂನು ವೇದಿಕೆ

ತುಮಕೂರು ಜಿಲ್ಲೆ ಪರಿಶಿಷ್ಟ ಜಾತಿ ಪಂಗಡಗಳ ಸಂಶೋಧನೆ ಬಿಡುಗಡೆ ಮತ್ತು ಸಮಾಲೋಚನೆ. ಇಂದು ಸ್ಲಂ ಜನಾಂದೋಲನ ಕರ್ನಾಟಕ ಪರ್ಯಾಯ ಕಾನೂನು ವೇದಿಕೆ ವತಿಯಿಂದ ವಿಶ್ವಗುರು ಬಸವಣ್ಣನವರ 895ನೇ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ 135ನೇ ಹಾಗೂ ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ 119ನೇ ಜನುಮದಿನಾಚರಣೆಯ ಅಂಗವಾಗಿ ತುಮಕೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಪಂಗಡ ಸಮುದಾಯಕ್ಕೆ ಸೇರಿದ ಕಾನೂನುಗಳ ಅನುಷ್ಠಾನ ಕುರಿತ ಸಂಶೋಧನಾ ವರದಿ ಬಿಡುಗಡೆ ಮತ್ತು ಸಮಾಲೋಚನಾ ಸಭೆಯನ್ನು ನಗರದ ಸಮೃದ್ಧಿ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ತುಮಕೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ತಿಪ್ಪೇಸ್ವಾಮಿ ತುಮಕೂರು ಜಿಲ್ಲೆಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪರ್ಯಾಯ ಕಾನೂನು ವೇದಿಕೆ ವತಿಯಿಂದ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ 1989 ಕರ್ನಾಟಕ ಭೂ ಕಂದಾಯ ಕಾಯ್ದೆ ಮತ್ತು ಸುಧಾರಣಾ ಕಾಯ್ದೆ 1964 ಹಾಗೂ ಮ್ಯಾ ನ್ಯೂ ವೆಲ್ ಸ್ಕ್ಯಾವೆಂಜರ್ಸ್ ಗಳ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013ರ ಅನುಷ್ಠಾನ ಕುರಿತು ಕೈಗೊಂಡ ಸಮೀಕ್ಷೆ ಜಿಲ್ಲೆ ಮತ್ತು ರಾಜ್ಯದ ಇತರೆ ಜಿಲ್ಲೆಗಳಲ್ಲಿರುವ ಪರಿಶಿಷ್ಟ ಜಾತಿಯ ಮತ್ತು ಪಂಗಡಗಳ ಕಲ್ಯಾಣಕ್ಕೆ ಸಂಬಂಧಿಸಿದ ಕಾನೂನುಗಳ ಅನುಷ್ಠಾನ ಕುರಿತು ಅವಲೋಕಿಸುವುದು ಪ್ರಜ್ಞಾವಂತರನ್ನು ಎಚ್ಚರಿಸಿದೆ ಎಸ್ಸಿ ಎಸ್ಟಿ ಜನರು ಭೂ ಮಂಜೂರಾತಿ ಅಥವಾ ಸುಧಾರಣೆಯಲ್ಲಿ ಭೂಮಿ ಪಡೆಯಬೇಕಾದರೆ ದಾಖಲಾತಿಗಳ ಕೊರತೆ ಎದ್ದು ಕಾಣುತ್ತಿದೆ ಮೇಲಂತದಲ್ಲಿ ನಮ್ಮಿಂದ ದೊರೆಯುವ ಸ್ಪಂದನೆ ಕೆಳಹಂತದಲ್ಲಿ ದೊರೆಯುವುದಿಲ್ಲ ಇದರಿಂದ ಜನರಿಗೆ ಸೋಲಾಗುತ್ತಿದೆ ಜಿಲ್ಲಾಡಳಿತದಿಂದ ಸಭೆ ಕರೆದು ಕಾನೂನುಗಳ ಅನುಷ್ಠಾನಕ್ಕೆ ಕ್ರಮ ವಹಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಕಳೆದ 2024 25 ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಸಂಶೋಧನೆ ಕೈಗೊಂಡ ಮುಖ್ಯಾಂಶಗಳ ಬಗ್ಗೆ ಸಂಶೋಧಕರಾದ ಸಿದ್ದಾರ್ಥ್ ಜೋಶಿ ರವರು ವಿಶ್ಲೇಷಿತ ವರದಿಯನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಚಿಂತಕರಾದ ಕೆ ದೊರೆರಾಜ್ ರವರು ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಸಫಾಯಿ ಕರ್ಮಚಾರಿಗಳ ಸಮೀಕ್ಷೆಯಲ್ಲಿ ಸಂಘಟನೆಯ ನಾಯಕರು ಶಿಸ್ತನ್ನು ರೂಪಿಸಿಕೊಳ್ಳಬೇಕು ಆಡಳಿತಾತ್ಮಕವಾಗಿ ವ್ಯವಸ್ಥೆಯಲ್ಲಿ ನಾವು ಯಾವ ರೀತಿ ಟ್ಯಾಕಲ್ ಮಾಡಬೇಕು ಎಂಬುದನ್ನ ಮೈಗೂಡಿಸಿಕೊಳ್ಳಬೇಕು ಅಂದರೆ ಒಂದು ಸಂಘಟನೆಯ ಕಚೇರಿಯ ವ್ಯವಸ್ಥೆಯನ್ನೇ ಅಳವಡಿಸಿಕೊಳ್ಳಬೇಕು ಮೊದಲು ಸೂಕ್ಷ್ಮ ಸಂವೇದಿ ಆಡಳಿತ ವ್ಯವಸ್ಥೆ ಇತ್ತು ಈಗ ಅಂತಹ ಆಡಳಿತ ವ್ಯವಸ್ಥೆ ಇಲ್ಲ ವಾಸ್ತವವಾಗಿ ಜಿಲ್ಲೆಯಲ್ಲಿ ಕೈಗೊಂಡ ಈ ಸಮೀಕ್ಷಾ ತಂಡಕ್ಕೆ ಅಭಿನಂದನೆಗಳು ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬಾಬು ಜಗಜೀವನ್ ರಾಮ್ ಪ್ರಶಸ್ತಿ ಪುರಸ್ಕೃತರಾದ ನರಸಿಯಪ್ಪನವರು ದಲಿತ ಸಂಘರ್ಷ ಸಮಿತಿಯ ಬೆಲ್ಲದಮಡು ಕೃಷ್ಣಪ್ಪನವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಧುಗಿರಿ ಉಪ ವಿಭಾಗಾಧಿಕಾರಿಗಳಾದ ಗೋಟೂರು ಶಿವಪ್ಪ ಸಮೀಕ್ಷಾ ವರದಿಗೆ ಪ್ರತಿಕ್ರಿಯಿಸಿ ದರು ಈ ಸಂದರ್ಭದಲ್ಲಿ ಸ್ಲಂಜ ನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ ನರಸಿಂಹಮೂರ್ತಿ ರವರು ಕೊಟಶಂಕರ್ ರವರು ಅನುಪಮಾ ರವರು ದೀಪಿಕಾ ರವರು ಶಿವನಂಜಪ್ಪ ರವರು ಭರತ್ ರವರು ರೆಡ್ಸ್ ರಂಗಯ್ಯರವರು ಮೇಲುಸ್ತುವಾರಿ ಸಮಿತಿಯ ರಂಜನ್ ರವರು ಸ್ಲಂ ಸಮಿತಿಯ ಅರುಣ್ ತಿರುಮಲ ಯ ಕೃಷ್ಣಮೂರ್ತಿ ಶಂಕ್ರಯ್ಯ ದಲಿತ ಸಂಘರ್ಷ ಸಮಿತಿಯ ಪಿಎನ್ ರಾಮಯ್ಯ ಹಾಗೂ ಹಲವು ಪ್ರಕರಣಗಳ ಸಂತ್ರಸ್ತರು ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ವಕೀಲರಾದ ಎಸ್ ಶಿವಣ್ಣ ಸ್ವಾಗತವನ್ನು ಹೈ ಕೋರ್ಟ್ ವಕೀಲರಾದ ವಿನಯ್ ಶ್ರೀನಿವಾಸ್ ರವರು ವಂದನಾರ್ಪಣೆಯನ್ನು ಮನೋಜ್ ಕುಮಾರ್ ನೆರವೇರಿಸಿದರು ವಕೀಲರಾದ ಚೈತ್ರ ಈ ಸಮಾಲೋಚನ ಸಭೆಯಲ್ಲಿ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಬಾದಿತರು ಸಂತ್ರಸ್ತರು ಪಿಟಿಸಿಎಲ್ ಕಾಯ್ದೆ ಸಂತ್ರಸ್ತರು ಡಿಎಸ್ಎಸ್ ಸಂಘಟನೆಯ ಮುಖಂಡರುಗಳು ಸಾವಿತ್ರಿ ಬಾಪುಲೆ ಮತ್ತು ಸ್ಲಂ ಸಮಿತಿಯ ಮುಖಂಡರುಗಳು ಪಾಲ್ಗೊಂಡಿದ್ದರು. ವರದಿ ಉದಯಕುಮಾರ್ ಕಲ್ಪತರು ನ್ಯೂಸ್











