ಒಳಮೀಸಲಾತಿ ಸಮಸ್ಯೆ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ ಷೆಡ್ಯೂಲ್ ೯ ಕ್ಕೆ ಸೇರ್ಪಡಿಸಲು ಸಿಪಿಐ(ಎಂ) ಒತ್ತಾಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕರ್ನಾಟಕದ ತೀರ್ಮಾನಕ್ಕೆ ಕೇಂದ್ರದ ಬಿಜೆಪಿ-ಎನ್.ಡಿ.ಎ ಸರ್ಕಾರ ಕೂಡಲೇ ಅನುಮೋದನೆ ನೀಡಬೇಕು

ಒಳಮೀಸಲಾತಿ ಸಮಸ್ಯೆ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ ಷೆಡ್ಯೂಲ್ ೯ ಕ್ಕೆ ಸೇರ್ಪಡಿಸಲು ಸಿಪಿಐ(ಎಂ) ಒತ್ತಾಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕರ್ನಾಟಕದ ತೀರ್ಮಾನಕ್ಕೆ ಕೇಂದ್ರದ ಬಿಜೆಪಿ-ಎನ್.ಡಿ.ಎ ಸರ್ಕಾರ ಕೂಡಲೇ ಅನುಮೋದನೆ ನೀಡಬೇಕು. ಇದನ್ನು ಸಂವಿಧಾನದ ಶೆಡ್ಯೂಲ್ ೯ ರಲ್ಲಿ ಸೇರಿಸಿ ಕೇಂದ್ರದಲ್ಲಿ ಇರುವಂತೆ ಶೇ.೧೭ ಮತ್ತು ಶೇ ೭ ರ ಜಾರಿಗೆ ಅನುವು ಮಾಡಿಕೊಡಬೇಕು. ಇದಕ್ಕಾಗಿ ರಾಜ್ಯದ ಸಂಸದರು ವಿಶೇಷ ಒತ್ತಡದ ಪ್ರಯತ್ನಗಳನ್ನು ನಡೆಸಬೇಕು. ಷೆಡ್ಯೂಲ್ ೯ ಕ್ಕೆ ಸೇರ್ಪಡೆ ಮಾಡದಿರುವುದು ಇಂದಿನ ಒಟ್ಟು ಸಮಸ್ಯೆಯ ಒಂದು ಪ್ರಧಾನ ಅಂಶವಾಗಿದ್ದು ಈ ಸಮಸ್ಯೆಯ ಇತ್ಯಾರ್ಥಕ್ಕೆ ಕೇಂದ್ರದ ಮೇಲೆ ರಾಜ್ಯದ ಸಂಸದರುಗಳು ಒತ್ತಡ ತರಲು ಸಂಸತ್ತಿನಲ್ಲಿ ಧ್ವನಿ ಎತ್ತಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ ಸಿಪಿಐ(ಎಂ) ಆಗ್ರಹಿಸಿದೆ. ಒಳ ಮೀಸಲಾತಿ ಜಾರಿಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರಲು ಸಂಸದರುಗಳು ಧ್ವನಿ ಎತ್ತಬೇಕು ಎಂದು ಆಗ್ರಹಿಸಿ ಏಪ್ರಿಲ್ ೧೩ ರಂದು ರಾಜ್ಯದ ಎಲ್ಲಾ ಸಂಸದರ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದರ ಭಾಗವಾಗಿ ಸೋಮವಾರ ಕೇಂದ್ರ ಸಚಿವ ವಿ. ಸೋಮಣ್ಣನವರ ಕಛೇರಿ ಎದುರು ಭಾರತ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್ವಾದಿ ಸಿಪಿಐಎಂ ತುಮಕೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಲಾಯಿತು. ಇಂದಿನ ನಿರುದ್ಯೋಗ ಸಮಸ್ಯೆಯ ಗಂಭೀರತೆಯನ್ನ ಅರ್ಥ ಮಾಡಿಕೊಂಡು ಭಾರತದ ಒಕ್ಕೂಟದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಮತ್ತು ಬ್ಯಾಕ್ ಲಾಗ್ ಹುದ್ದೆಗಳನ್ನು ಯಾವುದೇ ಸಂದರ್ಭದಲ್ಲಿ ಸಾಮಾನ್ಯ ಗುಂಪಿಗೆ ವರ್ಗಾಯಿಸಬಾರದು. ಹಾಗೆಯೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಸುಮಾರು ೩ ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡಲು ಒತ್ತಾಯಿಸಿದೆ. ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳು ಮತ್ತು ಸಂಸ್ಥೆಗಳಲ್ಲಿ ಖಾಯಂ ನೇಮಕಾತಿಯೇ ಸ್ಥಗಿತಗೊಂಡAತಾಗಿದೆ ಅಥವಾ ಇಲ್ಲದಂತಾಗಿದೆ. ಇದರಿಂದ ವಾಸ್ತವವಾಗಿ ಮೀಸಲಾತಿಯೇ ಇಲ್ಲದಂತಾಗಿದೆ. ಆದ್ದರಿಂದ ಎಲ್ಲಾ ಸಾರ್ವಜನಿಕ ರಂಗಗಳಲ್ಲೂ ಖಾಯಂ ಉದ್ಯೋಗಗಳನ್ನು ತುಂಬಬೇಕು ಮತ್ತು ಮೀಸಲಾತಿಯನ್ನು ರಕ್ಷಿಸಬೇಕು. ಉದಾರೀಕರಣ ಮತ್ತು ಖಾಸಗೀಕರಣದಿಂದ ಪ್ರಧಾನವಾಗಿ ಉದ್ಯೋಗಗಳ ಸೃಷ್ಟಿಯು ಖಾಸಗಿ ರಂಗದಲ್ಲೇ ಹೆಚ್ಚಾಗಿ ಇರುವುದು. ಆದರೆ ಇಲ್ಲಿ ಮೀಸಲಾತಿ ನೀತಿಯೇ ಇಲ್ಲವಾಗಿದೆ. ಆದ್ದರಿಂದ ಖಾಸಗೀ ರಂಗದಲ್ಲಿಯೂ ಮೀಸಲಾತಿ ನೀತಿಯನ್ನು ಜಾರಿಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಮೀಸಲಾತಿ ನೀತಿಯು ಅತ್ಯಂತ ಸೀಮಿತಗೊಂಡ ಅವಕಾಶವಾಗಿ ಬಿಡುತ್ತದೆ. ಭವಿಷ್ಯದಲ್ಲಿ ಶಿಕ್ಷಣ ಮತ್ತು ಉದ್ಯೋಗದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಬದಲಾಗುತ್ತಿರುವ ಸನ್ನಿವೇಶದಲ್ಲಿ ಖಾಸಗಿ ರಂಗದಲ್ಲಿ ನಮ್ಮ ಭಾರತದ ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯದ ಸಾಧನೆಯಲ್ಲಿ ಖಾಸಗೀ ಕ್ಷೇತ್ರದಲ್ಲಿ ಮೀಸಲಾತಿ ನೀತಿ ಜಾರಿಗೊಳಿಸಲು ಎಲ್ಲಾ ಒತ್ತಡ ಹಾಕಬೇಕಾಗಿ ಆಗ್ರಹಿಸುತ್ತೇವೆ. ಒಟ್ಟಾರೆ ಮೀಸಲಾತಿ ಪ್ರಮಾಣ ಶೇ.೫೦ ದಾಟಬಾರದು ಎನ್ನುವುದಕ್ಕೆ ಇಂದ್ರಾ ಸಹಾನಿ ಕೇಸನ್ನು ಉದಾಹರಿಸಿ ಮಾತನಾಡಲಾಗುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ನೀಡಬೇಕು ಎನ್ನುವ ನೀತಿಗೆ ಅಡ್ಡಿಯಾಗುತ್ತಿದೆ. ಇದೇ ಇಂದ್ರಾ ಸಹಾನಿ ಕೇಸಿನ ತೀರ್ಪಿನಲ್ಲಿಯೇ ವಿಶೇಷ ಸಂದರ್ಭಗಳಲ್ಲಿ ಈ ಮಿತಿಯನ್ನು ದಾಟಲು ಅವಕಾಶ ಇರುವುದನ್ನು ಗಮನಿಸಬೇಕು. ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗಗಳಿಗೆ ಇWS ಕೋಟಾದಲ್ಲಿ ಶೇ.೧೦ ಮೀಸಲಾತಿಯನ್ನು ಒದಗಿಸಿ ಕೇಂದ್ರ ಸರ್ಕಾರವೇ ಒದಗಿಸಿರುವ ಉದಾಹರಣೆ ಇದೆ. ಅದೂ ಕೇವಲ ೪೮ ಗಂಟೆಗಳಲ್ಲಿಯೇ ಜಾರಿಗೆ ಬರುವಂತೆ ನೋಡಿಕೊಳ್ಳಲಾಗಿದೆ. ಶೇ.೫೦ ರ ಮಿತಿಯನ್ನು ದಾಟಿದ ಹಲವು ರಾಜ್ಯಗಳೂ ಇಂತಹ ಅವಕಾಶ ಪಡೆದುಕೊಂಡಿವೆ. ಕರ್ನಾಟಕ ರಾಜ್ಯ ಸರ್ಕಾರವು ತನ್ನ ಕೋರಿಕೆಯನ್ನು ೨೦೨೨ ರಲ್ಲಿಯೇ ಮಂಡಿಸಿದೆ. ಆದ್ದರಿಂದ ರಾಜ್ಯದ ಕೋರಿಕೆಗೆ ಭಾರತ ಸರ್ಕಾರ ಕೂಡಲೇ ಅಂಗೀಕಾರ ನೀಡಬೇಕು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುವಂತೆ, ಅದು ಜಾರಿಯಾಗುವಂತೆ ಸಹ ತಾವೂ ಕ್ರಮ ವಹಿಸಬೇಕು.  ಈ ಸಮುದಾಯಗಳ ಪ್ರಗತಿಗೆ ಕೇಂದ್ರದ ಒಟ್ಟು ಬಜೆಟ್ ನಲ್ಲಿ ಹಾಗೂ ಅಭಿವೃದ್ದಿಗೆ ಸಹಾಯಕವಾಗಿರುವ ಉಪಯೋಜನೆಗಳಿಗೆ ಬಜೆಟ್ ನಲ್ಲಿ ಭಾರತ ಸರ್ಕಾರ ನೀಡುತ್ತಿರುವ ಮೊತ್ತ ಕಡಿಮೆಯಾಗುತ್ತಿದೆ. ಮಾತ್ರವಲ್ಲ, ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಹಣ ಮೀಸಲಿಡಬೇಕು ಎನ್ನುವ ಹಿಂದಿನ ಯೋಜನಾ ಆಯೋಗದ ನಿರ್ದೇಶನ ಇಲ್ಲವಾಗಿದೆ. ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಹಣ ಮೀಸಲಿಡುವುದು ಈ ಸಮುದಾಯಗಳ ಪ್ರಗತಿಗೆ ಅತ್ಯಂತ ಅಗತ್ಯವಾದುದು. ಈ ಮೊತ್ತವನ್ನು ಬೇರೆ ಕಾರ್ಯಕ್ರಮಗಳಿಗೆ ವರ್ಗಾಯಿಸಕೂಡದು. ಈ ದಿಸೆಯಲ್ಲಿ ಜನಸಂಖ್ಯೆ ಅನುಗಣವಾಗಿ ಉಪ ಯೋಜನೆಗಳಿಗೆ ಹಣ ಹಂಚಿಕೆ ಮಾಡುವಂತೆ ಕ್ರಮ ವಹಿಸಬೇಕು. ಎಸ್.ಸಿ.ಎಸ್.ಪಿ. ಮತ್ತು ಟಿ.ಎಸ್.ಪಿ. ಉಪ ಯೋಜನೆಗಳಿಗಾಗಿ ಭಾರತ ಸರ್ಕಾರ ಕಾಯ್ದೆಯೊಂದನ್ನು ರೂಪಿಸಬೇಕು. ನೇಮಕಾತಿ ಪ್ರಕ್ರಿಯೆಯ ರೋಸ್ಟರ್ ನಿಯಮದಲ್ಲಿ ಎಡ, ಬಲ, ಸ್ಪೃಶ್ಯ, ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗದ ರೀತಿಯಲ್ಲಿ ರಾಜ್ಯ ಸರ್ಕಾರ ಖಾತ್ರಿಗೊಳಿಸುವಂತೆ ತಾವು ಕ್ರಿಯಾಶೀಲ ಪಾತ್ರವಹಿಸಬೇಕು. ಕರ್ನಾಟಕ ಸರ್ಕಾರವು ಅಲೆಮಾರಿ, ಆದಿವಾಸಿ ಮತ್ತು ಅಂಚಿನ ಜಾತಿಗಳಿಗೆ ಒಳ-ಮೀಸಲಾತಿ ಪ್ರವರ್ಗವನ್ನು ರೂಪಿಸಲು ರಾಜ್ಯ ಸರ್ಕಾರದೊಂದಿಗೆ ತಾವು ಮುತುವರ್ಜಿ ವಹಿಸಬೇಕು. ಸಂವಿಧಾನದ ಶೆಡ್ಯೂಲ್ ೯ ಕ್ಕೆ ಸೇರ್ಪಡೆ ಮಾಡುವಲ್ಲಿ ಪ್ರಯತ್ನಗಳನ್ನು ತೀವ್ರಗೊಳಿಸುತ್ತಲೇ, ಕರ್ನಾಟಕ ಸರ್ಕಾರವು ಪ.ಜಾತಿ, ಪಂಗಡಗಳಿಗೆ ಇರುವ ಹಿಂದಿನ ಶೇ.೧೫ ಮೀಸಲಾತಿ ಪ್ರಮಾಣದೊಳಗೆ ಒಳ-ಮೀಸಲಾತಿಯನ್ನು ಜಾರಿಗೊಳಿಸಿ, ೫೬,೪೩೨ ಉದ್ಯೋಗಗಳನ್ನು ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೆ ನೇಮಕಾತಿ ಪ್ರಕ್ರಿಯೆ ನಿಲ್ಲಬಾರದು, ವಿಳಂಬ ಆಗಬಾರದು. ಒಳ ಮೀಸಲಾತಿ ನೀತಿ ಅಳವಡಿಸಬೇಕು ಎಂಬುದನ್ನು ತಾವು ಒತ್ತಾಯಿಸಬೇಕು. ಉದ್ಯೋಗ ನೇಮಕಾತಿ ಮಾಡುವಾಗ ಒಳ ಮೀಸಲಾತಿಯ ಎಲ್ಲಾ ಪ್ರವರ್ಗಗಳಿಗೂ ನ್ಯಾಯಸಮ್ಮತವಾದ ರೀತಿಯಲ್ಲಿ ರೋಸ್ಟರ್ ಬಿಂದು ಅಳವಡಿಸಬೇಕು.ಇದಕ್ಕಾಗಿ ಕಾನೂನು ತಜ್ಞರು, ಚಳುವಳಿ ಸಂಘಟನೆಗಳ ಪ್ರತಿನಿಧಿಗಳು, ಅಧಿಕಾರಿಗಳನ್ನೊಳಗೊಂಡು ಸಮಾಲೋಚನಾ ಸಭೆಗಳನ್ನು ನಡೆಸಿ ತೀರ್ಮಾನ ಮಾಡಬೇಕು. ತಾವು ಪರಿಸ್ಥಿತಿಯ ಗಂಭೀರತೆ ಹಾಗೂ ಸೂಕ್ಷö್ಮತೆಗಳನ್ನು ಗಮನದಲ್ಲಿರಿಸಿ ಭಾರತದ ಒಕ್ಕೂಟ ಸರ್ಕಾರ ತುರ್ತು ಕ್ರಮ ವಹಿಸುವಂತೆ ಸೂಕ್ತ ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಿದೆ ಪ್ರತಿಭಟನೆಯಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್‌ಮುಜೀಬ್, ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ. ಉಮೇಶ್, ಕಮಲ, ಎಸ್.ಡಿ.ಪಾರ್ವತಮ್ಮ ದಲಿತ ಹಕ್ಕುಗಳ ಸಮಿತಿಯ ರಾಜು ವೆಂಕಟಪ್ಪ, ಕಲ್ಪನ, ಖಲೀಲ್, ಶಂಕರಪ್ಪ, ರಂಗಧಾAಯ್ಯ, ರಾಘವೇಂದ್ರ ಎಸ್, ಸಂತೋಷ್, ಗೋವಿಂದರಾಜು, ಹನುಮೇಶ್, ಅಶ್ವತ್ಥಪ್ಪ, ಕೃಷ್ಣಪ್ಪ, ಇನ್ನು ಮುಂತಾದವರು ಉಪಸ್ಥಿತರಿದ್ದರು

ಒಳಮೀಸಲಾತಿ ಸಮಸ್ಯೆ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ ಷೆಡ್ಯೂಲ್ ೯ ಕ್ಕೆ ಸೇರ್ಪಡಿಸಲು ಸಿಪಿಐ(ಎಂ) ಒತ್ತಾಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕರ್ನಾಟಕದ ತೀರ್ಮಾನಕ್ಕೆ ಕೇಂದ್ರದ ಬಿಜೆಪಿ-ಎನ್.ಡಿ.ಎ ಸರ್ಕಾರ ಕೂಡಲೇ ಅನುಮೋದನೆ ನೀಡಬೇಕು
ಸಂವಿಧಾನ ವಿರೋಧಿ ಟ್ರಾನ್ಸ್ಜೆಂಡರ್ ತಿದ್ದುಪಡಿ ೨೦೨೬ ಮಸೂದೆ ಖಂಡಿಸಿ ಪ್ರತಿಭಟನೆ ಕೇಂದ್ರದ ಜನವಿರೋಧಿ ಕಾಯ್ದೆಯ ಪ್ರತಿ ಸುಟ್ಟು ಲಿಂಗತ್ವ ಅಲ್ಪಸಂಖ್ಯಾತರಿAದ ಸಾಂಸ್ಕೃತಿಕ ಪ್ರತಿರೋಧ ಇಂದು ಸಹಬಾಳ್ವೆ ಸಂಘ ಮತ್ತು ರಾಷ್ಟಿçÃಯ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ. ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪ್ರಗತಿಪರ ಸಂಘಟನೆ
ಸಂವಿಧಾನ ವಿರೋಧಿ ಟ್ರಾನ್ಸ್ಜೆಂಡರ್ ತಿದ್ದುಪಡಿ ೨೦೨೬ ಮಸೂದೆ ಖಂಡಿಸಿ ಪ್ರತಿಭಟನೆ ಕೇಂದ್ರದ ಜನವಿರೋಧಿ ಕಾಯ್ದೆಯ ಪ್ರತಿ ಸುಟ್ಟು ಲಿಂಗತ್ವ ಅಲ್ಪಸಂಖ್ಯಾತರಿAದ ಸಾಂಸ್ಕೃತಿಕ ಪ್ರತಿರೋಧ ಇಂದು ಸಹಬಾಳ್ವೆ ಸಂಘ ಮತ್ತು ರಾಷ್ಟಿçÃಯ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ. ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪ್ರಗತಿಪರ ಸಂಘಟನೆ
Oplus_16908288

ಸಂವಿಧಾನ ವಿರೋಧಿ ಟ್ರಾನ್ಸ್ಜೆಂಡರ್ ತಿದ್ದುಪಡಿ ೨೦೨೬ ಮಸೂದೆ ಖಂಡಿಸಿ ಪ್ರತಿಭಟನೆ ಕೇಂದ್ರದ ಜನವಿರೋಧಿ ಕಾಯ್ದೆಯ ಪ್ರತಿ ಸುಟ್ಟು ಲಿಂಗತ್ವ ಅಲ್ಪಸಂಖ್ಯಾತರಿAದ ಸಾಂಸ್ಕೃತಿಕ ಪ್ರತಿರೋಧ ಇಂದು ಸಹಬಾಳ್ವೆ ಸಂಘ ಮತ್ತು ರಾಷ್ಟಿçÃಯ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ. ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕೇಂದ್ರದ ಜನವಿರೋಧಿ ಟ್ರಾನ್ಸ್ಜೆಂಡರ್ ತಿದ್ದುಪಡಿ ಮಸೂದೆ ೨೦೨೬ರ ಪ್ರತಿ ಸುಟ್ಟು ಲಿಂಗತ್ವ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕಿನ ರಕ್ಷಣೆಗಾಗಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಸಾಂಸ್ಕೃತಿಕ ಪ್ರತಿರೋಧ ವ್ಯಕ್ತಪಡಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ ಟ್ರಾನ್ಸ್ಜೆಂಡರ್ ಸಮುದಾಯದ ಮುಖಂಡರಾದ ದೀಪಿಕಾ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಟ್ರಾನ್ಸ್ಜೆಂಡರ್ ತಿದ್ದುಪಡಿ ಕಾಯ್ದೆ ೨೦೨೬ನ್ನು ಜಾರಿಗೆ ತಂದು ಟ್ರಾನ್ಸ್ಜೆಂಡರ್ ಸಮುದಾಯದ ಸಾಂವಿಧಾನಿಕ ಹಕ್ಕಿನ ಮೇಲೆ ದಮನಕಾರಿ ನೀತಿಯನ್ನು ಹೇರುತ್ತಿರುವುದು ಜನವಿರೋಧಿ ನಡೆಯಾಗಿದೆ. ಈ ತಿದ್ದುಪಡಿ ಗೌಪ್ಯತೆ , ದೇಹದ ಸ್ವಾಯತ್ತತೆ ಮತ್ತು ಸ್ವ-ಗುರುತಿನ ಮೂಲಭೂತ ಹಕ್ಕಿಗೆ ಬೆದರಿಕೆ ಉಂಟುಮಾಡುತ್ತದೆ. ಈಗಾಗಲೇ ಅಳಿವಿನಂಚಿಲ್ಲಿರುವ ಸಮುದಾಯಗಳ ಮೇಲೆ ನಿಗಾವಳಿ ಮತ್ತು ನಿಯಂತ್ರಣ ಹೆಚ್ಚಿಸಿ, ಆನೇಕ ಜನರನ್ನು ಅಜ್ಞಾತತೆ ಮತ್ತು ಹೊರತಳ್ಳುವಿಕೆಯ ಅಪಾಯವಿದೆ. ಇದು ಸಮುದಾಯದ ಜನರ ಜೀವನದ ಮೇಲೆ ಪರಿಣಾಮ ಬೀರಲಿದ್ದು ಇದು ನಮ್ಮ ಹಕ್ಕುಗಳ ಮೇಲೆ ನಿಯಂತ್ರಣದ ಕಡೆಗೆ, ಸ್ವಗುರುತಿನಿಂದ ರಾಜ್ಯ ಪ್ರಮಾಣೀಕರಣದ ಕಡೆಗೆ ಸಾಗುವ ಆಪಾಯಕಾರಿ ಬದಲಾವಣೆಯನ್ನು ಸೂಚಿಸುತ್ತದೆ ಈ ರೀತಿಯ ಕ್ರಮವು ಸಾಂವಿಧಾನಿಕ ನ್ಯಾಯಕ್ಕೆ ನೇರ ವಿರೋಧವಾಗಿದೆ. ಆದರಿಂದ ಈ ಕಾಯಿದೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಬಾರದೆAದು ರಾಜ್ಯದ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತಿದ್ದೇವೆ ಎಂದರು. ನಂತರ ರಾಷ್ಟಿçÃಯ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟದ ಪ್ರತಿನಿಧಿ ವೈಶಾಲಿ ಪ್ರತಿಭಟನೆಯನ್ನು ಉದ್ದೇಶಿ ಮಾತನಾಡಿ ಕೇಂದ್ರದ ಮನುವಾದಿ ಸರ್ಕಾರವು ಮಾರ್ಚ್ ೧೩-೨೦೨೬ ರಂದು ಪಾರ್ಲಿಮೆಂಟಿನಲ್ಲಿ ಕೇಂದ್ರ ಸಚಿವರಾದ ವಿರೇಂದ್ರಕುಮಾರ್ ರವರು ಟ್ರಾನ್ಸ್ಜೆಂಡರ್ ಮಸೂದೆಯನ್ನು ಜಾರಿಗೆ ತಂದು ಕಾಯಿದೆಯ ಬಗ್ಗೆ ಜನಾಭಿಪ್ರಾಯವಾಗಲಿ ಸಮುದಾಯದ ಜನರಲ್ಲಿ ಜಾಗೃತಿಯಾಗಲಿ ನೀಡದೇ ರಾಷ್ಟçಪತಿ ದ್ರೌಪದಿ ಮುರ್ಮು ರವರಿಂದ ಮಸೂದೆಯನ್ನು ಕಾನೂನು ಆಗಿ ಜಾರಿಗೆ ತಂದಿದ್ದಾರೆ. ಕಾಯಿದೆಯಲ್ಲಿ ಜೋಗತ. ನಪುಸಕ, ಹರ್ವಾನಿ, ಕಿನ್ನರಿ ಈ ೪ ವೈವಿಧ್ಯತೆಗಳನ್ನು ನಮೂದಿಸಲಾಗಿದೆ ಇನ್ನೂ ಸಾವಿರಾರು ವಿವಿಧ ವೈವಿಧ್ಯತೆಗಳ ಸಮುದಾಯಗಳ ಮುಖಂಡರಲ್ಲಿ ಸಮಾಲೋಚನೆ ನಡೆಸದೇ ಹಕ್ಕುಗಳ ಹಗರಣವಾಗುತ್ತಿದೆ. ಹಕ್ಕುಗಳಲ್ಲಿ ಜೀತ ಪದ್ದತಿ ಮಾಡಬಾರದು, ಸಂಘ/ಸAಸ್ಥೆಗಳ ಸಹಾಕಾರ ನೀಡಬಾರದು, ವಿಶೇಷ ವೈದ್ಯರಿಂದಲೇ ಲಿಂಗತ್ವ ಪರೀಕ್ಷೆಗೆ ಒಳಪಡಿಸುವುದೆಂಬ ಕ್ರಮ ಸರಿಯಲ್ಲ. ನಮ್ಮ ನೈಜಪರಿಸ್ಥಿತಿ ಮತ್ತು ವಾಸ್ತವಿಕ ಅಂಶಗಳೇನಿದವೆ, ಸಮಸ್ಯೆಗಳೇನಿದವೆ ಯಾವುದನ್ನು ವಿಚಾರ ಮಾಡದೇ ಮಸೂದೆಯನ್ನು ಏಕಾಏಕಿ ಕಾನೂನಾಗಿ ಜಾರಿಗೆ ತಂದಿರುವುದು ಜನವಿರೋಧಿಯಾಗಿದೆ. ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಂಕಿ ಅಂಶಗಳನ್ನು ಕಡೆಗಣಿಸಿ ನಮ್ಮ ಸಮುದಾಯವನ್ನು ಟಾರ್ಗೇಟ್ ಮಾಡಲಾಗುತ್ತಿದೆ, ನಮ್ಮ ಮತವನ್ನು ಪಡೆದು ಅಧಿಕಾರ ಹಿಡಿದ ಎಂಪಿ. ಎಂಎಲ್‌ಎಗಳು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಹೊರಗಿಡುವ ಹುನ್ನಾರವನ್ನು ಪ್ರಶ್ನಿಸಲು ಮುಂದಾಗಬೇಕಿದೆ “ನನ್ನ ದೇಹ ನನ್ನ ಹಕ್ಕು” ನಮ್ಮ ಸಮುದಾಯದ ಘನತೆಯ ಬದುಕಿಗಾಗಿ ೨೦೨೬ರ ಟ್ರಾನ್ಸ್ಜೆಂಡರ್ ಮಸೂದೆಯನ್ನು ಸುಟ್ಟು ರಾಜ್ಯವ್ಯಾಪಿ ಪ್ರತಿರೋಧಿಸುತ್ತೇದ್ದೇವೆ ಎಂದರು. ಪ್ರತಿಭಟನೆಯನ್ನು ಬೆಂಬಲಿಸಿ ಸ್ಲಂ ಜನಾಂದೋಲ ಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸೈಯದ್ ಮುಜೀಬ್ ಮಾತನಾಡಿದರು. ಮಂಗಳಮುಖಿ ಸಮುದಾಯದ ಮುಖಂಡರಾದ ದೀಪಿಕಾ, ಲಿಲ್ಲಿ, ದಿವ್ಯ, ಸುಮಾ, ಮಾನ್ಯ, ಡಯಾನ, ಗಗನ, ಹಾಗೂ ಸಾವಿತ್ರಿಬಾಪುಲೆ ಮಹಿಳಾ ಸಂಘಟನೆಯ ಅನುಪಮಾ, ಶಾರದಮ್ಮ, ಪೂರ್ಣಿಮಾ, ಶಂಕ್ರಯ್ಯ, ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್. ತಿರುಮಲಯ್ಯ, ರಂಗನಾಥ್, ಸಂಧ್ಯಾ, ವಸಂತಮ್ಮ, ಮಂಗಳಮ್ಮ ಮುಂತಾದವರು ಪಾಲ್ಗೊಂಡಿದ್ದರು.

ಕೆ. ಎನ್. ರಾಜಣ್ಣನವರ ೭೬ನೇ ಹುಟ್ಟುಹಬ್ಬ ಆಚರಣೆಅಭಿಮಾನಿ ಬಳಗದಿಂದ ಅನ್ನಸಂತರ್ಪಣೆ, ಸಿಹಿ ವಿತರಣೆ ತುಮಕೂರು: ಮಾಜಿ ಸಚಿವ, ಮಧುಗಿರಿ ಶಾಸಕ, ಹಿರಿಯ ಸಹಕಾರಿ ಕೆ.ಎನ್. ರಾಜಣ್ಣ

ಕೆ. ಎನ್. ರಾಜಣ್ಣನವರ ೭೬ನೇ ಹುಟ್ಟುಹಬ್ಬ ಆಚರಣೆಅಭಿಮಾನಿ ಬಳಗದಿಂದ ಅನ್ನಸಂತರ್ಪಣೆ, ಸಿಹಿ ವಿತರಣೆ ತುಮಕೂರು: ಮಾಜಿ ಸಚಿವ, ಮಧುಗಿರಿ ಶಾಸಕ, ಹಿರಿಯ ಸಹಕಾರಿ ಕೆ.ಎನ್. ರಾಜಣ್ಣನವರ ೭೬ನೇ ಜನ್ಮದಿನವನ್ನು ಸೋಮವಾರ ಕೆ.ಎನ್.ಆರ್. ಅಭಿಮಾನಿ ಬಳಗದವರು ಸಂಭ್ರಮದಿAದ ಆಚರಿಸಿದರು.ನಗರದ ಗುಂಚಿವೃತ್ತದ ಟಿಎಪಿಸಿಎಂಎಸ್ ಕಟ್ಟಡ ಬಳಿ ನಡೆದ ಸಮಾರಂಭದಲ್ಲಿ ಕೆ.ಎನ್. ರಾಜಣ್ಣನವರ ಪುತ್ರಿ ಆರ್.ರಶ್ಮಿ ಗಿರೀಶ್ ಅವರು ಅನ್ನಸಂತರ್ಪಣೆಗೆ ಚಾಲನೆ ನೀಡಿದರು. ನಂತರ ರಶ್ಮಿಯವರು ಪೌರಕಾರ್ಮಿಕರೊಂದಿಗೆ ಬೃಹತ್ ಕೇಕ್ ಕತ್ತರಿಸಿ ಸಿಹಿ ತಿನ್ನಿಸಿ ತಮ್ಮ ತಂದೆಯ ಹುಟ್ಟುಹಬ್ಬ ಆಚರಣೆಯನ್ನು ಸಂಭ್ರಮಿಸಿದರು.ಇದರ ಅಂಗವಾಗಿ ಪೌರಕಾರ್ಮಿಕರನ್ನು ಸನ್ಮಾನಿಸಿ ಅವರ ಸೇವೆಯನ್ನು ಗೌರವಿಸಲಾಯಿತು. ಈ ಸಾಲಿನ ದ್ವಿತೀಯ ಪಿಯೂಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿ ಪ್ರೋತ್ಸಾಹಿಸಲಾಯಿತು. ಈ ಬಾರಿಯ ಬಾಬು ಜಗಜೀವನರಾಮ್ ಪ್ರಶಸ್ತಿ ಪುರಸ್ಕೃತರಾದ ನಗರಸಭೆ ಮಾಜಿ ಸದಸ್ಯ ನರಸಿಯಪ್ಪ ಅವರನ್ನು ಈ ವೇಳೆ ಗೌರವಿಸಿ ಅಭಿನಂದಿಸಲಾಯಿತು.ಕಳೆದ ೫೦ ವರ್ಷಗಳ ಕೆ.ಎನ್. ರಾಜಣ್ಣನವರ ಸಾರ್ವಜನಿಕ ಬದುಕಿನ ಪ್ರಮುಖ ಘಟನಾವಳಿಗಳ ಫೋಟೊ ಹಾಗೂ ವಿಡಿಯೋ ದೃಶ್ಯಾವಳಿಗಳನ್ನು ಎಲ್‌ಇಡಿಯ ದೊಡ್ಡ ಪರದೆ ಮೇಲೆ ಪ್ರದರ್ಶಿಸಲಾಗಿತ್ತು.ಹಿರಿಯ ರಂಗನಿರ್ದೇಶಕ ಡಾ. ಲಕ್ಷö್ಮಣದಾಸ್, ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಡಾ.ಎಸ್.ನಾಗಣ್ಣ, ಕೆ.ಎನ್.ಆರ್ ಅಭಿಮಾನಿ ಬಳಗದ ಮುಖಂಡರಾದ ನಗರಸಭೆ ಮಾಜಿ ಅಧ್ಯಕ್ಷ ಟಿ.ಪಿ.ಮಂಜುನಾಥ್, ವಕೀಲ ಪಿ.ಆರ್.ನಾರಾಯಣಗೌಡ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಲಕ್ಷಿö್ಮÃನಾರಾಯಣ, ಟಿಎಪಿಸಿಎಂಎಸ್ ನಿರ್ದೇಶಕರಾದ ಕುಂಕುಮನಹಳ್ಳಿ ನವರತ್ನಕುಮಾರ್, ಜಿಯಾವುಲ್ಲಾ, ಕಾರ್ಯದರ್ಶಿ ರವಿಕುಮಾರ್, ನೀಲಕಂಠೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಹೆಚ್. ಶಿವಾನಂದ್, ಮುಖಂಡರಾದ ನಿಸಾರ್ ಅಹ್ಮದ್, ಕುಂದೂರು ಮುರಳಿ, ಮಂಜೇಶ್ ಒಲಂಪಿಕ್, ರಮಣರೆಡ್ಡಿ, ಎಂ.ಹೆಚ್.ನಾಗರಾಜು, ಪಿ.ಎನ್. ರಾಮಯ್ಯ, ಎಂ.ಜೆ. ಶಿವಣ್ಣ, ನಟರಾಜಶೆಟ್ಟಿ, ನಂಜೇಗೌಡ, ರಂಗರಾಜು, ನರಸಿಯಪ್ಪ, ಕೈದಾಳ ರಮೇಶ್ ಸೇರಿದಂತೆ ವಿವಿಧ ಸಹಕಾರ ಸಂಸ್ಥೆ, ಸಂಘಸAಸ್ಥೆಗಳು ಪ್ರಮುಖರು ಭಾಗವಹಿಸಿದ್ದರು.

ಚಿನ್ನ ತೆಗೆಯೊ ಕೈಯಿಂದ ಜೀವ ಉಳಿಸುವ ರಕ್ತದಾನಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಗಣಿಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರ ಸಂಘದ ವತಿಯಿಂದ ಹಟ್ಟಿ ಚಿನ್ನದ ಗಣಿ ಕಂಪನಿಯ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ
ಚಿನ್ನ ತೆಗೆಯೊ ಕೈಯಿಂದ ಜೀವ ಉಳಿಸುವ ರಕ್ತದಾನಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಗಣಿಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರ ಸಂಘದ ವತಿಯಿಂದ ಹಟ್ಟಿ ಚಿನ್ನದ ಗಣಿ ಕಂಪನಿಯ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ

ಚಿನ್ನ ತೆಗೆಯೊ ಕೈಯಿಂದ ಜೀವ ಉಳಿಸುವ ರಕ್ತದಾನಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಗಣಿಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರ ಸಂಘದ ವತಿಯಿಂದ ಹಟ್ಟಿ ಚಿನ್ನದ ಗಣಿ ಕಂಪನಿಯ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಡಾ. ಜಗಜೀವನ್ ರಾಮ್ ಮತ್ತು ಡಾ. ಬಿಆರ್ ಅಂಬೇಡ್ಕರ್ ಜಯಂತೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಆಯೋಜನೆ ಮಾಡಿದರುಈ ಸಂದರ್ಭದಲ್ಲಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿಯಾದ ಎಸ್ ಎಂ ಶಫಿ ಮತ್ತು ವಶಿಷ್ಠ ಜಾತಿ ವಶಿಷ್ಟ ಪಂಗಡದ ನೌಕರ ಅಧ್ಯಕ್ಷರಾದ ಜಮದಗ್ಮಿ ಕೋಠಾ, ಶರಣಗೌಡ ಗುರಿಕಾರ್, ಹಾಗೂ ಕಾರ್ಮಿಕ ಸಂಘದ ಮಹಿಳಾ ಪ್ರತಿನಿಧಿ ಪೆಂಚಲಮ್ಮ, ಕಾರ್ಮಿಕ ಮುಖಂಡರಾದ ಕುಪ್ಪಣ್ಣ ಹಾಗೂ ಇತರರು ಕಾರ್ಮಿಕರು ಉಪಸ್ಥಿತರಿದ್ದರು

ಪಾವಗಡ : ಪಟ್ಟಣದ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ನಿರ್ಮಿಸಲಾದ ಪಾವಗಡ ಆಸ್ಪತ್ರೆ ನೂತನವಾಗಿ ಆಸ್ಪತ್ರೆಯನ್ನು ಮಾಜಿ ಸಚಿವರು ವೆಂಕಟರಮಣಪ್ಪ ಇಂದು ಅದ್ಧೂರಿಯಾಗಿ ಉದ್ಘಾಟಿಸಿ ಶುಭಾಶಯಗಳು ಕೋರಿದರು,ಪಾವಗಡ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ

ಮಾಜಿ ಸಚಿವರು ವೆಂಕಟರಮಣಪ್ಪ ಪಾವಗಡದಲ್ಲಿ ನೂತನವಾಗಿ ಪಾವಗಡ ಆಸ್ಪತ್ರೆ ಉದ್ಘಾಟಿಸಿದರು ಪಾವಗಡ : ಪಟ್ಟಣದ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ನಿರ್ಮಿಸಲಾದ ಪಾವಗಡ ಆಸ್ಪತ್ರೆ ನೂತನವಾಗಿ ಆಸ್ಪತ್ರೆಯನ್ನು ಮಾಜಿ ಸಚಿವರು ವೆಂಕಟರಮಣಪ್ಪ ಇಂದು ಅದ್ಧೂರಿಯಾಗಿ ಉದ್ಘಾಟಿಸಿ ಶುಭಾಶಯಗಳು ಕೋರಿದರು,ಪಾವಗಡ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ *”ಆರೋಗ್ಯವೇ ಭಾಗ್ಯ ಎಂಬಂತೆ,* ತಾಲ್ಲೂಕಿನ ಜನರಿಗೆ ತುರ್ತು ಸಂದರ್ಭದಲ್ಲಿ ಉತ್ತಮ ಚಿಕಿತ್ಸೆ ಸ್ಥಳೀಯವಾಗಿ ಸಿಗುವಂತಾಗಬೇಕು. ಈ ನೂತನ ಆಸ್ಪತ್ರೆಯು ಬಡವರು ಮತ್ತು ಸಾಮಾನ್ಯ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡಲಿ,” ಎಂದು ಆಶಿಸಿದರು. *ಕಾರ್ಯಕ್ರಮದ ಮುಖ್ಯಾಂಶಗಳು* : ಮಾಜಿ ಸಚಿವರು ಟೇಪ್ ಕತ್ತರಿಸುವ ಮೂಲಕ ಆಸ್ಪತ್ರೆಯ ವಿವಿಧ ಘಟಕಗಳನ್ನು ವೀಕ್ಷಿಸಿದರು. ಆಸ್ಪತ್ರೆಯಲ್ಲಿ ಲಭ್ಯವಿರುವ ಆಧುನಿಕ ವೈದ್ಯಕೀಯ ಉಪಕರಣಗಳು ಮತ್ತು ತಜ್ಞ ವೈದ್ಯರ ಲಭ್ಯತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. *ಈ ಸಂದರ್ಭದಲ್ಲಿ* ಮಲ್ಲೇಶ್ ಬಿ ಎಂ, ಹನುಮಂತರೆಡ್ಡಿ ಜರ್ಸಿ, ನಾಗಭೂಷಣ ರೆಡ್ಡಿ ಶ್ರೀರಾಮ ಮೆಡಿಕಲ್, ತಾಲ್ಲೂಕು ರೈತ ಸಂಘ ಅಧ್ಯಕ್ಷರು ನರಸಿಂಹ ರೆಡ್ಡಿ, ಕೃಷ್ಣಮೂರ್ತಿ ಕೆ ಎ, ಪೂಜಾರಪ್ಪ ರೈತ ಸಂಘದ ಜಿಲ್ಲಾಧ್ಯಕ್ಷರು, ಗುರ್ರಪ್ಪ ಮಾಜಿ ಪುರಸಭೆ ಅಧ್ಯಕ್ಷರು, ವೆಂಕಟೇಶ ಪರಿಟಲ, ನಾಗರಾಜು, ನಾನಿ, ಮಂಜು ಬೋರ್ ವೆಲ್, ತೆಂಗಿನಕಾಯಿರೆಡ್ಡಿ, ಗುಟ್ಟಹಳ್ಳಿ ಅಂಜಿನಪ್ಪ, ನಾಗರಾಜು ನಲಿಗಾನಹಳ್ಳಿ, ಸುಬ್ರಹ್ಮಣ್ಯ, ಇನ್ನು ಅನೇಕ ತಾಲ್ಲೂಕಿನ ಜನತೆ ಭಾಗವಹಿಸಿದ್ದರು,ವರದಿ ರಾಮಪ್ಪ ಸಿ ಕೆ ಪುರಕಲ್ಪತರು ನ್ಯೂಸ್ ಪಾವಗಡ

ಅಧಿಕಾರಿಗಳ ಮೇಲಿನ ಆರೋಪಕ್ಕೆ ಎಳೆ ಎಳೆಯಾಗಿ ಬಿಚ್ಚಿಟ್ಟ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಬೇಗೂರೂ ಮೂರ್ತಿ
ಅಧಿಕಾರಿಗಳ ಮೇಲಿನ ಆರೋಪಕ್ಕೆ ಎಳೆ ಎಳೆಯಾಗಿ ಬಿಚ್ಚಿಟ್ಟ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಬೇಗೂರೂ ಮೂರ್ತಿ

ಅಧಿಕಾರಿಗಳ ಪಾರ್ಟಿ ಆರೋಪಕ್ಕೆ ಟ್ವಿಸ್ಟ್ ಅಧಿಕಾರಿಗಳ ಮೇಲಿನ ಆರೋಪಕ್ಕೆ ಎಳೆ ಎಳೆಯಾಗಿ ಬಿಚ್ಚಿಟ್ಟ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಬೇಗೂರೂ ಮೂರ್ತಿ ಕುಣಿಗಲ್ ತಾಲೂಕಿನ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಬೇಗೂರು ಮೂರ್ತಿ ರವರ ಮಗಳು ರಾಜ್ಯಕ್ಕೆ 5ನೇ ಸ್ಥಾನ ಗಳಿಸಿರುವ ಸಂತೋಷಕ್ಕೆ ಬೇಗೂರು ಮೂರ್ತಿರವರು ಔತಣ ಕೂಟ ಏರ್ಪಡಿಸಿದ್ದರು ಈ ಔತಣ ಕೂಟಕ್ಕೆ ಎ ಆರ್ ರಾಮ್ ಪ್ರಸಾದ್ ಅವರು ಹಾಗೂ ಸಿ ಡಿ ಓ ಸುನಿಲ್ ರವರು ಅದೇ ಮಾರ್ಗವಾಗಿ ಚಲಿಸುತ್ತಿದ್ದ ಕಾರಣ ಅವರನ್ನು ಸಹ ಔತಣಕೂಟಕ್ಕೆ ಕರೆದಿದ್ದು ಈ ವಿಡಿಯೋ ಮಾಡಿರುವ ವಿಚಾರವಾಗಿ ಹೋಟೆಲ್ ಮಾಲೀಕರನ್ನು ವಿಚಾರಿಸಿದ ಸಂದರ್ಭದಲ್ಲಿ ಅವರು ಸಹ ನಮ್ಮ ಕೆಲಸಗಾರ ಮಾಡಿರಬಹುದು ಎಂದು ತಪ್ಪು ಒಪ್ಪಿಕೊಂಡಿದ್ದಾರೆ ಈ ಸಂತೋಷದ ವಿಚಾರವನ್ನು ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದರು ನಾನು ಯಾರಿಗೂ ಇರುವರೆಗೂ ಮದ್ಯಪಾನ ಕೊಡಿಸಿಲ್ಲ ಇದು ರಾಜಕೀಯ ಉದ್ದೇಶದಿಂದ ಮಾಡಿದ್ದಾರೆ ಹಾಗೂ ಅಲ್ಲಿ ಬಂದಂತ ಎ ಆರ್ ಹಾಗೂ ಸಿ ಡಿ ಓ ರವರು ಯಾವ ಮದ್ಯಪಾನವನ್ನು ಸೇವಿಸಿಲ್ಲ ಇದು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎಂದು ಹಾಲು ಉತ್ಪಾದಕರ ನಿರ್ದೇಶಕರಾದ ಬೇಗೂರು ಮೂರ್ತಿ ತಿಳಿಸಿದರು

ತುಮಕೂರು: ಜೆಸಿಐ ತುಮಕೂರು ಮೆಟ್ರೋ ಘಟಕಕ್ಕೆ ನ್ಯಾಷನಲ್ ವೈಸ್ ಪ್ರೆಸಿಡೆಂಟ್ ಜೇಸಿ ಜಿತೇಶ್ ಅಡ್ವಾನಿ ರವರು ಭೇಟಿ ನೀಡಿ ಘಟಕದ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಉತ್ತೇಜನ ನೀಡಿದರು.ಈ ಸಂದರ್ಭದಲ್ಲಿ ಜೇಸಿಐ ಭಾರತದ ಫ್ಲಾಗ್‌ಶಿಪ್ ಕಾರ್ಯಕ್ರಮ

ತುಮಕೂರು: ಜೆಸಿಐ ತುಮಕೂರು ಮೆಟ್ರೋ ಘಟಕಕ್ಕೆ ನ್ಯಾಷನಲ್ ವೈಸ್ ಪ್ರೆಸಿಡೆಂಟ್ ಜೇಸಿ ಜಿತೇಶ್ ಅಡ್ವಾನಿ ರವರು ಭೇಟಿ ನೀಡಿ ಘಟಕದ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಉತ್ತೇಜನ ನೀಡಿದರು.ಈ ಸಂದರ್ಭದಲ್ಲಿ ಜೇಸಿಐ ಭಾರತದ ಫ್ಲಾಗ್‌ಶಿಪ್ ಕಾರ್ಯಕ್ರಮವಾದ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನದ ಅಂಗವಾಗಿ ನಗರದ ಬಿಜಿಎಸ್ ವೃತ್ತದಲ್ಲಿ ಆಟೋ ಚಾಲಕರು ಹಾಗೂ ಸಾರ್ವಜನಿಕರಿಗೆ ಸ್ಟೀಲ್ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಘಟಕದ ಅಧ್ಯಕ್ಷರಾದ ಜೇಸಿ ಮಮತ ರಾಜ್ ಹಾಗೂ ಕಾರ್ಯದರ್ಶಿ ಜೇಸಿ ಸುನಿತ್ ರಾಜ್ ಅವರ ನೇತೃತ್ವದಲ್ಲಿ ನಡೆಸಲಾಯಿತು.ಈ ವೇಳೆ ಮಾತನಾಡಿದ ನ್ಯಾಷನಲ್ ವೈಸ್ ಪ್ರೆಸಿಡೆಂಟ್ ಜಿತೇಶ್ ಅಡ್ವಾನಿ ಅವರು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಸ್ಟೀಲ್ ಬಾಟಲ್‌ಗಳನ್ನು ದಿನನಿತ್ಯ ಬಳಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣಕ್ಕೆ ಸಹಕರಿಸುವಂತೆ ಮನವಿ ಮಾಡಿದರು.ಜೇಸಿಐ ವಲಯ 14ರ ಅಧ್ಯಕ್ಷ ಜೇಸಿ ಪ್ರಜ್ವಲ್ ಎಸ್. ಜೈನ್ ಅವರು ಮಾತನಾಡಿ, ಮನುಷ್ಯರು ಅರಿವಿಲ್ಲದೆ ದಿನನಿತ್ಯ ಮೈಕ್ರೋ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದು, ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಯುವಜನರಲ್ಲಿ ಜಾಗೃತಿ ಮೂಡಿಸಲು ಜೆಸಿಐ ಈ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದರು.ಘಟಕದ ಅಧ್ಯಕ್ಷರಾದ ಜೇಸಿ ಮಮತ ರಾಜ್ ಅವರು ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.ಇದರ ಜೊತೆಗೆ ಬೆಳ್ಳಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೆಚ್‌.ಐ.ವಿ ಪೀಡಿತರಿಗೆ ಪೌಷ್ಟಿಕ ಆಹಾರ ವಿತರಿಸಲಾಯಿತು. ಹಾಗೆಯೇ ರಕ್ತದಾನ ಹಾಗೂ ರಕ್ತ ವಿತರಣೆ ಕಾರ್ಯಕ್ರಮವೂ ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮದಲ್ಲಿ ಜೆಸಿಐ ತುಮಕೂರು ಮೆಟ್ರೋ ಪೂರ್ವಅಧ್ಯಕ್ಷರಾದ ಬೆಳ್ಳಿ ಲೋಕೇಶ್, ನ್ಯಾಷನಲ್ ವೈಸ್ ಪ್ರೆಸಿಡೆಂಟ್ ಜೆಸಿ ಯಶಸ್ವಿನಿ ಜೋನಲ್ ತರಬೇತಿ ವಿಭಾಗದ ಚೇರ್ಮನ್ ಉಮಾಮಹೇಶ್, ಜೆಕಾಂ ಜೋನ್ ಚೇರ್ಮನ್ ಶ್ರೀನಿವಾಸಮೂರ್ತಿ ಹಾಗೂ ಪದಾಧಿಕಾರಿಗಳಾದ ಸಂಜಯ್, ಅನು, ನಾಗೇಂದ್ರನಾಥ್, ನಾಗಭೂಷಣ್, ವೇಣುಗೋಪಾಲ್, ನಾಗರಾಜ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

2025-26ನೇ ಸಾಲಿನ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ *571/600 ಅಂಕ (ಶೇ.95.17)* ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸಿ ಅಭಿನಂದನೆ
2025-26ನೇ ಸಾಲಿನ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ *571/600 ಅಂಕ (ಶೇ.95.17)* ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸಿ ಅಭಿನಂದನೆ

ಹಟ್ಟಿ ವಿನಾಯಕ ಕಾಲೇಜಿನ ಭಾರತಿಗೆ ವಾಣಿಜ್ಯ ವಿಭಾಗದಲ್ಲಿ ಶೇ.95.17, ಕಾಲೇಜಿಗೆ ಪ್ರಥಮ 571/600 ಅಂಕ ಗಳಿಸಿದ ರೋಡಲಬಂಡ(ತ) ವಿದ್ಯಾರ್ಥಿನಿಗೆ ಅಭಿನಂದನೆಗಳ ಮಹಾಪೂರಲಿಂಗಸುಗೂರು ತಾಲೂಕಿನ ಹಟ್ಟಿ, ಏ.10:* ಶ್ರೀ ವಿನಾಯಕ ವಿದ್ಯಾ ಸಂಸ್ಥೆಯ ಶ್ರೀ ವಿನಾಯಕ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಹಟ್ಟಿಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ *ಭಾರತಿ ತಂದೆ ರಾಮಪ್ಪ ಮುಷ್ಟುರು( ಭೋವಿ)ಸಾಕಿನ ರೋಡಲಬಂಡ,(ತ) 2025-26ನೇ ಸಾಲಿನ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ *571/600 ಅಂಕ (ಶೇ.95.17)* ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಗ್ರಾಮಸ್ಥರು “ನಮ್ಮೂರ ಹುಡುಗಿ ಭಾರತಿ” ಎಂದು ಹೆಮ್ಮೆಯಿಂದ ಹಂಚಿಕೊಳ್ಳುತ್ತಿದ್ದಾರೆ.

ತುಮಕೂರು: ಗ್ರಾಮೀಣ ಪ್ರದೇಶದ ಪ್ರತಿಭಾವಂತ ಯುವಜನರು ಹಾಗೂ ಮಹಿಳೆಯರು ಉದ್ಯೋಗಕ್ಕಾಗಿ ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ಗ್ರಾಮೀಣ ಪ್ರದೇಶದಲ್ಲಿ ದುಡಿಮೆಗೆ ಅವಕಾಶ ಕಲ್ಪಿಸಲು ಗ್ರಾಮ-ನೆಟ್ ಭಾರತ

ಗ್ರಾಮೀಣ ಜನರಿಗೆ ಗ್ರಾಮ-ನೆಟ್ ಭಾರತ ಯೋಜನೆ ವರದಾನ
ವಲಸೆ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪರಿಹಾರ: ಸಂಪಿಗೆ ಜಗದೀಶ್

ತುಮಕೂರು: ಗ್ರಾಮೀಣ ಪ್ರದೇಶದ ಪ್ರತಿಭಾವಂತ ಯುವಜನರು ಹಾಗೂ ಮಹಿಳೆಯರು ಉದ್ಯೋಗಕ್ಕಾಗಿ ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ಗ್ರಾಮೀಣ ಪ್ರದೇಶದಲ್ಲಿ ದುಡಿಮೆಗೆ ಅವಕಾಶ ಕಲ್ಪಿಸಲು ಗ್ರಾಮ-ನೆಟ್ ಭಾರತ ೨೦೩೦ ರೂಪುಗೊಂಡಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಯೋಜನೆಗೆ ಮೇ ತಿಂಗಳ ಮೊದಲ ವಾರದಲ್ಲಿ ತುರುವೇಕೆರೆ ತಾಲ್ಲೂಕು ಸಂಪಿಗೆ ಗ್ರಾಮದಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಲೋಕಸೇವಾ ಫೌಂಡೇಷನ್ ಅಧ್ಯಕ್ಷ ಸಂಪಿಗೆ ಜಗದೀಶ್ ಹೇಳಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆ ಸಂಪಿಗೆ ಗ್ರಾಮದಲ್ಲಿ ಉದ್ಘಾಟನೆಯಾದ ನಂತರ ರಾಜ್ಯದ ವಿವಿಧೆಡೆ ವಿಸ್ತರಿಸಲಾಗುವುದು. ಕೇಂದ್ರ ಸಚಿವರಾದ ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದ ಡಾ. ಮಂಜುನಾಥ್ ಹಾಗೂ ವಿವಿಧ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಪ್ರತಿಭೆ ಇರುವ ಯುವಜನರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ, ಅವರಿಗೆ ಸೂಕ್ತ ಉದ್ಯೋಗಾವಕಾಶಗಳು ಲಭ್ಯವಾಗುತ್ತಿಲ್ಲ. ಅದರ ಪರಿಣಾಮವಾಗಿ ನಗರಗಳಿಗೆ ವಲಸೆ ಹೆಚ್ಚುತ್ತಿದೆ. ನಿರುದ್ಯೋಗ ಸಮಸ್ಯೆ, ವಲಸೆಯಿಂದ ಗ್ರಾಮೀಣ ಆರ್ಥಿಕತೆ ದುರ್ಬಲವಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಗ್ರಾಮ-ನೆಟ್ ಭಾರತ ೨೦೩೦ ರೂಪುಗೊಂಡಿದೆ. ಉದ್ಯೋಗವನ್ನು ನಗರಗಳಿಂದ ಗ್ರಾಮಗಳಿಗೆ ತರುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.

ಗ್ರಾಮೀಣ ಯುವಕರಿಗೆ ಉದ್ಯೋಗ ಸೃಷ್ಟಿ, ಖಚಿತ ಆದಾಯದ ವ್ಯವಸ್ಥೆ, ಮಹಿಳೆಯರಿಗೆ ಮನೆಯಲ್ಲೇ ಉದ್ಯೋಗ, ಡಿಜಿಟಲ್ ಕೌಶಲ್ಯ ಅಭಿವೃದ್ಧಿ, ಸ್ವಾವಲಂಬಿ ಗ್ರಾಮ ನಿರ್ಮಾಣ ಈ ಯೋಜನೆಯ ಗುರಿಯಾಗಿದೆ. ಈ ಯೋಜನೆಯನ್ನು ಲೋಕಸೇವಾ ಫೌಂಡೇಷನ್, ಆರ್ಕೆಲೋಸ್ ಇಂಟೆಲೈನ್ಸ್ ಟೆಕ್ನಾಲಜೀಸ್ ಸಹಯೋಗದಲ್ಲಿ ಜಾರಿಗೊಳಿಸಲಾಗುತ್ತಿದೆ. ಲೋಕಸೇವಾ ಫೌಂಡೇಶನ್ ಗ್ರಾಮ ಮಟ್ಟದಲ್ಲಿ ಜನರನ್ನು ಸಂಪರ್ಕಿಸುವುದು, ನೋಂದಣಿ ಮತ್ತು ಜಾಗೃತಿ ಮೂಡಿಸುವುದು. ಆರ್ಕೆಲೋಸ್ ಇಂಟೆಲೈನ್ಸ್ ಟೆಕ್ನಾಲಜೀಸ್ ಡಿಜಿಟಲ್ ಪ್ಲಾಟ್‌ಫಾರ್ಮ್ ಒದಗಿಸುವುದು ಎಂದು ಸಂಪಿಗೆ ಜಗದೀಶ್ ಹೇಳಿದರು.
ಮಾಜಿ ಸಚಿವ, ಲೋಕಸೇವಾ ಫೌಂಡೇಶನ್ ಗೌರವಾಧ್ಯಕ್ಷ ಸೊಗಡು ಶಿವಣ್ಣ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಜನರು, ಮಹಿಳೆಯರಿಗೆ ಈ ಯೋಜನೆ ವರದಾನವಾಗಿದೆ. ಮನೆಯಿಂದಲೇ ಆದಾಯ ಗಳಿಸಬಹುದಾಗಿದೆ. ಈ ಕಾರ್ಯಕ್ರಮ ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ನಿರುದ್ಯೋಗ ಸಮಸ್ಯೆ ನಿಯಂತ್ರಣವಾಗಿ ಗ್ರಾಮೀಣ ಜನರಲ್ಲಿ ಆರ್ಥಿಕ ಸ್ವಾವಲಂಬನೆ ಹೆಚ್ಚುತ್ತದೆ ಎಂದರು.

ಅರ್ಕ್ಯಾಲೋಸ್ ಇಂಟೇನ್ಸ್ ಟೆಕ್ನಾಲಜೀಸ್‌ನ ಸಿಇಒ ಎಸ್.ಜೆ. ವಿಶ್ವನಾಥ್ ಮಾತನಾಡಿ, ೧೮ ವರ್ಷ ಮೇಲ್ಪಟ್ಟಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಥವಾ ಸ್ಥಳೀಯ ಕೇಂದ್ರಗಳಲ್ಲಿ ನೋಂದಣಿ ಮಾಡುಬೇಕು. ಅವರಿಗೆ ಸರಳ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ: ಇದು ಕೇವಲ ಯೋಜನೆ ಅಲ್ಲ, ಒಂದು ವ್ಯವಸ್ಥಿತ ಉದ್ಯೋಗ ಮಾದರಿ. ಯೋಜನೆಯಿಂದ ಜನರಿಗೆ ಹಲವು ರೀತಿಯ ಲಾಭಗಳಿವೆ. ಮನೆಯಲ್ಲೇ ಉದ್ಯೋಗ, ಮಹಿಳೆಯರಿಗೆ ಹೆಚ್ಚು ಅವಕಾಶ, ಯುವಕರಿಗೆ ಡಿಜಿಟಲ್ ಕೌಶಲ್ಯ, ಸ್ಥಿರ ಆದಾಯದ ಸಾಧ್ಯತೆ, ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆ ಸಾಧ್ಯವಾಗುತ್ತದೆ ಎಂದರು.
ಲೋಕಸೇವಾ ಫೌಂಡೇಶನ್ ಟ್ರಸ್ಟಿಗಳಾದ ರಾಮಕೃಷ್ಣ, ಡಾ.ಆರ್. ಮಂಜುನಾಥ್, ಎಸ್.ಆರ್. ಲೀಲಾವತಿ, ಅಪೂರ್ವ ಅರುಣ್‌ಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ. ಮಹೇಶ್ ಮೊದಲಾದವರು ಹಾಜರಿದ್ದರು.

ನಗರಪಾಲಿಕೆಯ ತೆರಿಗೆ ಹೆಚ್ಚಳ ಕ್ರಮಕ್ಕೆ ಆಕ್ರೋಶಪಾಲಿಕೆ ಕಚೇರಿ ಬಳಿ ಬಿಜೆಪಿ ಮುಖಂಡರ ಪ್ರತಿಭಟನೆತುಮಕೂರು: ತುಮಕೂರು ನಗರಪಾಲಿಕೆ ವಿವಿಧ ತೆರಿಗೆ ಹೆಚ್ಚಳ ಮಾಡಿರುವುದನ್ನು ಖಂಡಿಸಿ, ಪಾಲಿಕೆಯಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರ
ನಗರಪಾಲಿಕೆಯ ತೆರಿಗೆ ಹೆಚ್ಚಳ ಕ್ರಮಕ್ಕೆ ಆಕ್ರೋಶಪಾಲಿಕೆ ಕಚೇರಿ ಬಳಿ ಬಿಜೆಪಿ ಮುಖಂಡರ ಪ್ರತಿಭಟನೆತುಮಕೂರು: ತುಮಕೂರು ನಗರಪಾಲಿಕೆ ವಿವಿಧ ತೆರಿಗೆ ಹೆಚ್ಚಳ ಮಾಡಿರುವುದನ್ನು ಖಂಡಿಸಿ, ಪಾಲಿಕೆಯಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರ
ನಗರಪಾಲಿಕೆಯ ತೆರಿಗೆ ಹೆಚ್ಚಳ ಕ್ರಮಕ್ಕೆ ಆಕ್ರೋಶ
ಪಾಲಿಕೆ ಕಚೇರಿ ಬಳಿ ಬಿಜೆಪಿ ಮುಖಂಡರ ಪ್ರತಿಭಟನೆ
ತುಮಕೂರು: ತುಮಕೂರು ನಗರಪಾಲಿಕೆ ವಿವಿಧ ತೆರಿಗೆ ಹೆಚ್ಚಳ ಮಾಡಿರುವುದನ್ನು ಖಂಡಿಸಿ, ಪಾಲಿಕೆಯಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರ ವಿರೋಧಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಗುರುವಾರ ಪಾಲಿಕೆ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಏರಿಸಿರುವ ತೆರಿಗೆ ಹಿಂಪಡೆಯಲು ಒತ್ತಾಯಿಸಿ ನಗರಪಾಲಿಕೆ ಆಯುಕ್ತೆ ಶುಭಾ ಅವರಿಗೆ ಮನವಿಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಬೇಗೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ತುಮಕೂರು ನಗರಪಾಲಿಕೆ ತೆರಿಗೆ ಹೆಚ್ಚಳ ಮಾಡಿ ಮತ್ತಷ್ಟು ಹೊರೆ ಮಾಡಿದೆ. ಪಾಲಿಕೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಲಂಚವಿಲ್ಲದೆ ಯಾವುದೇ ಕೆಲಸಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಈಗ ಪಾಲಿಕೆ ನೀರಿನ ಕಂದಾಯವನ್ನು ಶೇಕಡ ೨೦೦ರಷ್ಟು ಹೆಚ್ಚಿಸಿದೆ. ಯುಜಿಡಿ ಕಂದಾಯ ಶೇಕಡ ೫೦ರಷ್ಟು ಏರಿಕೆ ಮಾಡಿದೆ. ಇದಲ್ಲದೆ, ಅನೇಕ ತೆರಿಗೆಗಳನ್ನೂ ಹೆಚ್ಚಿಸಿ ಜನವಿರೋಧಿ ನೀತಿ ಅನುಸರಿಸಿದೆ. ಕೂಡಲೇ ಏರಿಕೆ ಮಾಡಿದರುವ ಕಂದಾಯವನ್ನು ಇಳಿಸಬೇಕು, ಇಲ್ಲವಾದಲ್ಲಿ ನಗರಪಾಲಿಕೆ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ನಿಡಿದರು.
ಇ-ಸ್ವತ್ತು ಮಾಡಿಕೊಡಲು ನಗರಪಾಲಿಕೆ ಅಧಿಕಾರಿಗಳು ಇಲ್ಲದ ಸಬೂಬು ಹೇಳುತ್ತಾ ವಿಳಂಬ ಮಾಡುತ್ತಾರೆ. ಆದರೆ ಲಂಚ ಕೊಟ್ಟರೆ ಕೆಲಸ ಆಗುತ್ತದೆ. ಇ-ಸ್ವತು ಮಾಡಿಸಿಕೊಳ್ಳಲು ಸ್ವತ್ತಿನ ಮಾಲೀಕರು ನೀಡಿರುವ ಅರ್ಜಿಗಳನ್ನೇ ವಿಲೇವಾರಿ ಮಾಡದೆ ತಿಂಗಳುಗಟ್ಟಲೆಯಿAದ ಬಾಕಿ ಉಳಿಸಿಕೊಂಡಿರುವ ಪಾಲಿಕೆಯವರು ಈಗ ಮನೆ ಬಾಗಿಲಿಗೆ ಬಂದು ಇ-ಖಾತೆ ಮಾಡಿಕೊಡುತ್ತೇವೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಮೊದಲು ಪಾಲಿಕೆಗೆ ಬಂದಿರುವ ಅರ್ಜಿಗಳನ್ನು ಇತ್ಯರ್ಥಗೊಳಿಸಿ, ಭ್ರಷ್ಟಾಚಾರ ಗೊನೆಗೊಳಿಸಿ ಎಂದು ರವಿಶಂಕರ್ ಹೆಬ್ಬಾಕ ಒತ್ತಾಯಿಸಿದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ನಿಕಟಪೂರ್ವ ನಗರ ಅಧ್ಯಕ್ಷ ಟಿ.ಹೆಚ್. ಹನುಮಂತರಾಜು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಜಿಲ್ಲಾ ವಕ್ತಾರ ಟಿ.ಆರ್. ಸದಾಶಿವಯ್ಯ, ನಗರಪಾಲಿಕೆ ಮಾಜಿ ಸದಸ್ಯರಾದ ವಿಷ್ಣುವರ್ಧನ್, ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ಇಂದ್ರಕುಮಾರ್, ಮುಖಂಡರಾದ ಮನೋಹರಗೌಡ, ಮಹೇಶ್‌ಬಾಬು, ಜ್ಯೋತಿ ತಿಪ್ಪೇಸ್ವಾಮಿ, ಬಂಬೂ ಮೋಹನ್, ಜೆ.ಜಗದೀಶ್, ಹನುಮಂತರಾಜು, ನಿಸರ್ಗ ರಮೇಶ್, ಅಂಜನ್‌ಮೂರ್ತಿ, ವಸಂತಮ್ಮ, ಗಂಗಾಧರ್, ಪ್ರೀತಂ ಜೈನ್, ಕೊಪ್ಪಲ್ ನಾಗರಾಜು, ರೇಖಾ ಶಿವಕುಮಾರ್, ಲತಾಬಾಬು, ಮರಿತಿಮ್ಮಯ್ಯ, ವೆಂಕಟೇಶಾಚಾರ್, ಆಟೋ ಯಡಿಯೂರಪ್ಪ, ಪ್ರಸನ್ನಕುಮಾರ್, ಹರಿಪ್ರಸಾದ್, ದೇವರಾಜು ಮೊದಲಾದವರು ಭಾಗವಹಿಸಿದ್ದರು.
Call Us Now
WhatsApp